
ತಿಂಗಳ ಐದನೆಯ ಭಾನುವಾರ ರಾಷ್ಟ್ರೀಯ ಸ್ವಯಂಸೇವಕ ಸಂಘ ಶಾಖೆಗಳ ಸಾಂಘಿಕ್ ಸೇವಾ ಸಾಂಘಿಕ್ ಆಗಿರುತ್ತದೆ. ರಾಜ್ಯದ ಹಲವು ಕಡೆಗಳಲ್ಲಿ ಸೇವಾ ಕಾರ್ಯಕ್ರಮಗಳು ಜರುಗಿದವು. ಹೆಚ್ಚಿನ ಸಂಖ್ಯೆಯಲ್ಲಿ ಉತ್ಸಾಹಿ ಸ್ವಯಂಸೇವಕರು ಸೇವಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರು.
ಮಂಗಳೂರು ಮಹಾನಗರದ ಕಾವುಬೈಲ್ ನಗರದ ಸೇವಾ ಸಾಂಘಿಕ ಆದಿಮಾಯೆ ವಸತಿಯಲ್ಲಿ ಜಪ್ಪಿನ ಮೊಗರು ಶಾಲೆಯಲ್ಲಿ ನಡೆಯಿತು. ಸೇವಾ ಸಾಂಘಿಕ ಪ್ರಯುಕ್ತ ರಕ್ತದಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಎಲ್ಲಾ ರಕ್ತದಾನಿಗಳಿಗೆ ಸೇವಾ ಸಾಂಘಿಕ್ ನಲ್ಲಿ ಸೀಡ್ ಬಾಲ್ ವಿತರಣೆ ಮಾಡಲಾಯಿತು. ಈ ಸೇವಾ ಕಾರ್ಯದಿಂದ ಒಟ್ಟು 156 ರಕ್ತದ ಯುನಿಟ್ ಸಂಗ್ರಹಿಸಲಾಯಿತು.
ಸೇವಾ ಸಾಂಘಿಕನಲ್ಲಿ ಮಂಗಳೂರು ಮಹಾನಗರ ಸಹ ಕಾರ್ಯವಾಹ ಶ್ರೀ ಸೂರಜ್ ಮತ್ತು ಮಂಗಳೂರು ಮಹಾನಗರ ಸಂಪರ್ಕ ಪ್ರಮುಖ್ ಶ್ರೀ ಹರ್ಷವರ್ಧನ್ ಉಪಸ್ಥಿತರಿದ್ದರು.
ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ದೊಡ್ಡತೋಗೂರು ಸೇವಾ ಬಸ್ತಿಯ ಆರೋಗ್ಯ ತಪಾಸಣ ಶಿಬಿರದಲ್ಲಿ ಸುಮಾರು 200 ಜನರು ಶಿಬಿರದ ಉಪಯೋಗ ಪಡೆದುಕೊಂಡರು.
ಹುಬ್ಬಳ್ಳಿಯ ಮಯೂರಿ ಬಡಾವಣೆ ನಿವಾಸಿಗಳ ಅಭಿವೃದ್ಧಿ ಸಂಘದ ಹಾಗೂ ದೇಶಪಾಂಡೆ ಲೇಔಟ್ ನಿವಾಸಿಗಳ ಜಂಟಿ ಸಹಭಾಗಿತ್ವದಲ್ಲಿ ವಿವಿಧ ಜಾತಿಯ ಸಸಿಗಳನ್ನು ನೆಟ್ಟು ವನಮಹೋತ್ಸವ ಆಚರಿಸಲಾಯಿತು.
ಇಂದು ಹುಬ್ಬಳ್ಳಿ ಮಹಾನಗರದ ಸೇವಾ ಸಾಂಘಿಕ 10 ಬೇರೆ ಬೇರೆ ನಗರಗಳಲ್ಲಿ ನಡೆಯಿತು. ಬೀಜದುಂಡೆಗಳ ತಯಾರಿಕೆ ಕುರಿತು ಮಾಹಿತಿ ನೀಡುವುದರೊಂದಿಗೆ ಒಟ್ಟಾರೆ 10 ನಗರಗಳಲ್ಲಿ 225 ಸ್ವಯಂಸೇವಕರಿಂದ 5389 ಬೀಜದ ಉಂಡೆಗಳನ್ನ ತಯಾರಿಸಲಾಯಿತು.


ಸೇವಾ ವಿಭಾಗದ ವತಿಯಿಂದ ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನ ಚೊಕೊಂಡಹಳ್ಳಿ ಗ್ರಾಮದ ಕಸದ ತೊಟ್ಟಿಯಾಗಿದ್ದ ಪುರಾತನ ಕಲ್ಯಾಣಿಯನ್ನು 26 ಸ್ವಯಂಸೇವಕರು 4 ಗಂಟೆಗಳ ಕಾಲ ಶ್ರಮದಾನ ಮುಖೇನ ಸ್ವಚ್ಛಗೊಳಿಸಿದರು.
ಮಳೆ ಆರಂಭವಾಗುವ ಸಮಯದಲ್ಲಿ ಈ ಸ್ವಚ್ಛತಾ ಕಾರ್ಯದಿಂದ ಕಲ್ಯಾಣಿಯಲ್ಲಿ ಮಳೆಯ ನೀರು ಸಂಗ್ರಹವಾಗುವಂತೆ ಸ್ವಯಂಸೇವಕರು ಸಾಧಿಸಿದ್ದಾರೆ.
