![](https://vskkarnataka.org/files/2014/07/Bangalore-South-1-1.jpg)
ABVP Protest at Bangalore South
Bangalore July 22, 2014: Akhil Bharatiya Vdyarti Parisshat (ABVP) staged massive protest today July 22nd across Karnataka at 83 places in which 1, 43, 940 students participated, demanded immediate action against all culprits indulged in any form of crime against women and girls.
![ABVP Protest at Bangalore South](http://samvada.org/files/2014/07/Bangalore-South-1-1.jpg)
ರಾಜ್ಯದಲ್ಲಿ ಸತತವಾಗಿ ಲೈಂಗಿಕ ದೌರ್ಜನ್ಯ ಪ್ರಕರಣಗಳು ನಡೆಯುತ್ತಿರುವ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಸರ್ಕಾರದ ವೈಪಲ್ಯ ವಿರೋಧಿಸಿ ಹಾಗೂ ಲೈಂಗಿಕ ದೌರ್ಜನ್ಯಗಳಿಗೆ ಕಡಿವಾಣ ಹಾಕಲು, ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ
ರಾಜ್ಯಾದ್ಯಂತ ಬೃಹತ್ ಪ್ರತಿಭಟನೆ : ರಾಜ್ಯದ ಒಟ್ಟು 83 ಸ್ಥಾನಗಳಲ್ಲಿ, 1, 43, 940 ವಿದ್ಯಾರ್ಥಿಗಳು ಭಾಗಿ
ರಾಜ್ಯದ ಇತರೆಡೆ ಪ್ರತಿದಿನ ಅತ್ಯಾಚಾರ ಪ್ರಕರಣಗಳು ನಿರಂತರವಾಗಿ ನಡೆಯುತ್ತಿವೆ. ರಾಜ್ಯ ಸರ್ಕಾರ ಕಾನೂನು ಸುವ್ಯವಸ್ಥೆಯನ್ನು ಕಾಪಾಡಿ, ಮಹಿಳೆಯರಿಗೆ ರಕ್ಷಣೆ ನೀಡಬೇಕಾಗಿ ಬೃಹತ್ ಪ್ರತಿಭಟನೆ ನಡೆದರು, ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕಾದ ಸರ್ಕಾರ ಹಾಗೂ ಗೃಹ ಸಚಿವರು ಯಾವುದೇ ರೀತಿಯಲ್ಲಿ ರಾಜ್ಯದ ಜನರ ಹೋರಾಟಕ್ಕೆ ಸ್ಪಂದಿಸದೇ ಇರುವುದು, ಪ್ರತಿಭಟನಾನಿರತರ ಮೇಲೆ ಗೂಂಡಾಗಿರಿ, ಪೋಲಿಸರ ಬಲಪ್ರಯೋಗಿಸಿ ಅತ್ಯಾಚಾರಿಗಳ ವಿರುದ್ಧ ಹೋರಾಟ ನಡೆಸುವ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿರುವುದನ್ನು ಖಂಡಿಸಿ ಇಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ರಾಜ್ಯಾದ್ಯಂತ ಬೃಹತ್ ಪ್ರತಿಭಟನೆ ಹಾಗೂ ರಸ್ತೆತಡೆ ನಡೆಸಿತು. ಒಟ್ಟು ರಾಜ್ಯದ ೮೩ ಸ್ಥಳಗಳಲ್ಲಿ ಪ್ರತಿಭಟನೆ ನಡೆಸಿತು. ಸುಮಾರು ೧,೪೩,೯೪೦ ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದ ಗುಲ್ಬರ್ಗಾ, ಔರಾದ್, ಬೀದರ್, ಯಾದಗಿರಿ, ಸುರಪುರ, ಬಳ್ಳಾರಿ, ರಾಯಚೂರು, ಇಂಡಿ, ವಿಜಾಪುರ, ಬಾಗಲಕೋಟೆ, ಬೆಳಗಾವಿ, ಧಾರವಾಡ, ಕಾರವಾರ, ಹಾವೇರಿ, ರಾಣೆಬೆನ್ನೂರು, ಮಂಗಳೂರು, ಸುಬ್ರಹ್ಮಣ್ಯ, ಪುತ್ತೂರು, ಕಲ್ಲಡ್ಕ, ಕಾರ್ಕಳ, ಮೈಸೂರು, ಮಂಡ್ಯ, ಹಾಸನ, ಶಿವಮೊಗ್ಗ, ದಾವಣಗೆರೆ, ಶೃಂಗೇರಿ, ಚಿತ್ರದುರ್ಗ, ಹೊಸದುರ್ಗ, ತುಮಕೂರು, ಕೋಲಾರ, ಬಾಗೇಪಲ್ಲಿ, ಗೌರಿಬಿದನೂರು, ರಾಮನಗರ, ಚನ್ನಪಟ್ಟಣ, ತಿಪಟೂರು, ಬೆಂಗಳೂರು ದಕ್ಷಿಣ ಜಿಲ್ಲೆ, ಹೊಸಕೋಟೆ, ದೊಡ್ಡಬಳ್ಳಾಪುರ, ಕೆ.ಆರ್.ಪುರಂ ಸೇರಿದಂತೆ ರಾಜ್ಯದ ಇತರೆಡೆ ಬೃಹತ್ ಪ್ರತಿಭಟನಾ ರ್ಯಾಲಿ, ರಸ್ತೆತಡೆ ನಡೆಸಿತು. ತಹಶೀಲ್ದಾರ್ ಹಾಗೂ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಬೇಡಿಕೆಗಳು
೧. ಅತ್ಯಾಚಾರ ಪ್ರಕರಣದ ಆರೋಪಿಗಳನ್ನು ತಕ್ಷಣವೇ ಬಂಧಿಸುವ ಕಠಿಣ ನಿಲುವನ್ನು ಗೃಹ ಇಲಾಖೆ ತೆಗೆದುಕೊಳ್ಳಬೇಕು.
೨. ಅತ್ಯಾಚಾರ ಎಸಗಿರುವವರಿಗೆ ಕಠಿಣವಾದ ಶಿಕ್ಷೆ ನೀಡಬೇಕು.
೩. ಅತ್ಯಾಚಾರ ಪ್ರಕರಣ ದಾಖಲಾದ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳು ಹಾಗೂ ಪೋಲಿಸ್ ವರಿಷ್ಠಾಧಿಕಾರಿಗಳು ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿ ಮಹಿಳೆಯರಿಗೆ ನೈತಿಕ ಸ್ಥೈರ್ಯ ತುಂಬಬೇಕು.
೪. ಅತ್ಯಾಚಾರ ಸಂಬಂಧಿಸಿದ ಪ್ರಸ್ತುತ ಇರುವ ಕಾನೂನನ್ನು ತಿದ್ದುಪಡಿ ತಂದು ಮಹಿಳೆಯರ ರಕ್ಷಣೆಗೆ ಹಾಗೂ ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆ ನೀಡಲು ಪ್ರಬಲವಾದ ಕಾನೂನನ್ನು ರೂಪಿಸಬೇಕು.
೫. ಎಲ್ಲಾ ಶಾಲಾ, ಕಾಲೇಜು ಹಾಗೂ ವಿ.ವಿ. ಕ್ಯಾಂಪಸ್ಗಳಲ್ಲಿ ಮಹಿಳಾ ಸುರಕ್ಷಾ ಸಮಿತಿಯನ್ನು ರಚಿಸಲು ಆದೇಶಿಸಬೇಕು.
ವಂದನೆಗಳೊಂದಿಗೆ,
(ಟಿ.ಎಸ್.ಸುನಿಲ್ ಪ್ರಸಾದ್)
ರಾಜ್ಯ ಕಾರ್ಯದರ್ಶಿ
ಎಬಿವಿಪಿ ಕರ್ನಾಟಕ
![ABVP Protest at BAGALAKOT](http://samvada.org/files/2014/07/Bagalkot-1-1.jpg)
![ABVP Protest at BANGALORE EAST](http://samvada.org/files/2014/07/Bangalore-East-2-jpg.jpg)
![ABVP Protest at BANGALORE RURAL](http://samvada.org/files/2014/07/Bangalore-rural-1-1.jpg)
![ABVP Protest at BANGALORE SOUTH](http://samvada.org/files/2014/07/Bangalore-South-1-11.jpg)
![ABVP Protest at BANGALORE SOUTH](http://samvada.org/files/2014/07/Bangalore-South-1-6.jpg)
![ABVP Protest at BELLARY](http://samvada.org/files/2014/07/bellary.jpeg)
![ABVP Protest at BIJAPUR](http://samvada.org/files/2014/07/Bijapur-1-2.jpg)
![ABVP Protest at BIJAPUR](http://samvada.org/files/2014/07/Bijapur-1-5.jpg)
![ABVP Protest at BIJAPUR](http://samvada.org/files/2014/07/Bijapur-1-8.jpg)
![BIPAPUR](http://samvada.org/files/2014/07/Bijapur-1-9.jpg)
![DAVANAGERE](http://samvada.org/files/2014/07/Davangere-1.jpg)
![DAVANAGERE](http://samvada.org/files/2014/07/Davangere-3.jpg)
![DHARWAD](http://samvada.org/files/2014/07/Dharwad-2-jpg.jpg)
![DHARWAD](http://samvada.org/files/2014/07/Dharwad.jpg)
![HASAN](http://samvada.org/files/2014/07/Hassan.jpg)
![HAVERI](http://samvada.org/files/2014/07/Haveri-600x800.jpg)
![INDI](http://samvada.org/files/2014/07/indi-2-Copy.jpg)
![INDI](http://samvada.org/files/2014/07/indi-protest-Copy.jpg)
![KARKALA](http://samvada.org/files/2014/07/karkal.jpg)
![MANDYA](http://samvada.org/files/2014/07/Mandya1.jpg)
![MANGALORE](http://samvada.org/files/2014/07/Mangalore-1-1.jpg)
![MANGALORE](http://samvada.org/files/2014/07/Mangalore-1-2.jpg)
![MASKI](http://samvada.org/files/2014/07/Maski.jpg)
![PUTTUR](http://samvada.org/files/2014/07/puttur-1.jpg)
![RANEBENNUR](http://samvada.org/files/2014/07/Ranebennur-1.jpg)
![SHAHAPUR](http://samvada.org/files/2014/07/Shahapur-1.jpg)
![SUBRAMANYA](http://samvada.org/files/2014/07/Subramanya-1.jpg)
![SURPUR](http://samvada.org/files/2014/07/surpur-1.jpg)
![TIPTUR](http://samvada.org/files/2014/07/Tiptur-1.jpg)