ಆದಿ ಚುಂಚನಗಿರಿ ಮಠದ ಮೇಲೆ ಕೇಂದ್ರ ಆದಾಯ ತೆರಿಗೆ ಇಲಾಖೆ ನಡೆಸಿರುವ ಧಾಳಿಯನ್ನು ಕರ್ನಾಟಕ ‘ಹಿಂದು ಜಾಗರಣ ವೇದಿಕೆ’ ಪ್ರತಿಭಟನೆ ನಡೆಸುವ ಮೂಲಕ ಅತ್ಯುಗ್ರವಾಗಿ ಖಂಡಿಸಿದೆ.
“ಹಿಂದು ಮಠಗಳನ್ನು ಗುರಿಯಾಗಿಸಿಕೊಂಡು, ಹಿಂದು ನಂಬಿಕೆಗಳ ಜೊತೆ ಚೆಲ್ಲಾಟ ಆಡುತ್ತಿರುವ, ಹಿಂದು ಧಾರ್ಮಿಕ ಕೇಂದ್ರಗಳ ತೇಜೋವಧೆಗೆ ಪ್ರಯತ್ನಿಸುತ್ತಿರುವ ಶ್ರೀಮತಿ ಸೋನಿಯಾ ಗಾಂಧಿ ನೇತೃತ್ವದ ಕೇಂದ್ರ ಸರ್ಕಾರದ ಕ್ರಮ ದುರುದ್ದೇಶದಿಂದ ಕೂಡಿದೆ.
ವಿದೇಶಗಳಿಂದ ಚರ್ಚ್ಗಳಿಗೆ ಹರಿದು ಬರುತ್ತಿರುವ ಕೋಟ್ಯಾಂತರ ಡಾಲರ್ಗಳ ಬಗ್ಗೆ ಚಕಾರ ಎತ್ತದ, ಗಲ್ಫ್ ದೇಶಗಳಿಂದ ಪೆಟ್ರೋ ಡಾಲರ್ಸ್ಗಳ ಮುಖಾಂತರ ದೇಶದಲ್ಲಿ ಇಸ್ಲಾಂ ಭಯೋತ್ಪಾದನೆ ಚಟುವಟಿಕೆಗೆ ಹರಿದು ಬರುತ್ತಿರುವ ಹಣದ ಬಗ್ಗೆ ಮಾತನಾಡದ ಕೇಂದ್ರ ಸರ್ಕಾರ, ಆ ಚರ್ಚ್ ಮತ್ತು ಮಸೀದಿಗಳ ಮೇಲೆ ಎಂದೂ ಧಾಳಿ ನಡೆಸದ ತೆರಿಗೆ ಇಲಾಖೆ ಏಕಾಏಕಿ ಹಿಂದು ಧಾರ್ಮಿಕ ಕೇಂದ್ರಗಳ ಮೇಲೆ ವಕ್ರ ದೃಷ್ಟಿಯನ್ನು ಬೀರಿರುವ ಕೇಂದ್ರ ಸರ್ಕಾರದ ಕ್ರಮ ದ್ವೇಷದ ರಾಜಕೀಯ ಕ್ರಮವಾಗಿದೆ.” ಎಂದು ವೇದಿಕೆ ಸಂಚಾಲಕ ಉಲ್ಲಾಸ್ ಹೇಳಿದರು.
ಆದಿ ಚುಂಚನಗಿರಿ ಮಠದ ಮೇಲೆ ನಡೆದಿರುವ ಧಾಳಿಯ ಬಗ್ಗೆ , ಪ್ರಧಾನ ಮಂತ್ರಿ ಶ್ರೀ ಮನಮೋಹನಸಿಂಹ ಹಾಗೂ ಶ್ರೀಮತಿ ಸೋನಿಯಾ ಗಾಂಧಿ ಕ್ಷಮೆಯಾಚಿಸಬೇಕು. ಕರ್ನಾಟಕ ರಾಜ್ಯದ ಎಲ್ಲಾ ಶಾಸಕರು ಹಾಗೂ ಸಂಸದರು ತಮ್ಮ ರಾಜೀನಾಮೆಯನ್ನು ನೀಡಿ ಈ ಧಾಳಿಯನ್ನು ಖಂಡಿಸಬೇಕೆಂದು ಒತ್ತಾಯಿಸುತ್ತೇವೆ. ಇದೇ ರೀತಿ ಹಿಂದು ವಿರೋಧಿ ನೀತಿಯನ್ನು ಮುಂದುವರಿಸಿದ್ದಲ್ಲಿ ಹಿಂದುಗಳು ಬೀದಿಗಿಳಿದು ರಾಜ್ಯದ ಉದ್ದಗಲ ಹೋರಾಟವನ್ನು ಮಾಡಬೇಕಾಗುತ್ತದೆ ಎಂದು ಕೇಂದ್ರ ಹಾಗೂ ರಾಜ್ಯ ಸರ್ಕಾರವನ್ನು ಎಚ್ಚರಿಸುತ್ತೇವೆ ಎಂದು ವೇದಿಕೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.