ಬೆಂಗಳೂರು ಡಿ. ೨: ಬೆಂಗಳೂರಿನ ರಾಷ್ಟ್ರೋತ್ಥಾನ ಪರಿಷತ್ ಆವರಣದಲ್ಲಿ ಭಾನುವಾರ ಮುಂಜಾನೆ ಮ್ಯಾಗ್ಸೆಸ್ಸೆ ಪ್ರಶಸ್ತಿ ಪುರಸ್ಕೃತ ಡಾ. ಹರೀಶ ಹಂದೆಯವರೊಂದಿಗೆ ಸಂವಾದ ನಡೆಸಿದ ತಪಸ್ನ ವಿದ್ಯಾರ್ಥಿಗಳಿಗೆ ಅದೊಂದು ಸ್ಮರಣೀಯ ಮತ್ತು ಪ್ರೇರಣಾದಾಯಿ ದಿನವಾಯಿತು.
ಶಿಕ್ಷಣ ಕ್ಷೇತ್ರದಲ್ಲಿ ರಾಷ್ಟ್ರೋತ್ಥಾನ ಪರಿಷತ್ತು ಆರಂಭಿಸಿದ ಒಂದು ಪ್ರಕಲ್ಪ ’ತಪಸ್’, ಸಮಾಜದ ಬಡವರ್ಗದ ಪ್ರತಿಭಾವಂತ ವಿದ್ಯಾರ್ಥಿಗಳ ಉನ್ನತ ವಿದ್ಯಾಭ್ಯಾಸವನ್ನು ಸಾಧ್ಯಗೊಳಿಸುವುದರ ಜೊತೆಗೆ ಅವರನ್ನು ಅಭಿವೃದ್ಧಿಯ ಚಾಲಕರಾಗಲು ಸಮರ್ಥರನ್ನಾಗಿಸುವ ಹಿರಿದಾದ ಗುರಿಯೊಂದಿಗೆ ಕಾರ್ಯನಿರ್ವಹಿಸುತ್ತಿದೆ.
ಹತ್ತನೆಯ ತರಗತಿಯಲ್ಲಿ ಓದುತ್ತಿರುವ ೩೦-೪೦ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ಅವರಿಗೆ ಉಚಿತವಾಗಿ ಪಿಯುಸಿ ಶಿಕ್ಷಣ ಮತ್ತು IIಖಿ-ಎಇಇ ತರಬೇತಿ ನೀಡಲಾಗುವುದು. ವಿದ್ಯಾರ್ಥಿಗಳು ಅಧ್ಯಯನದಲ್ಲಿ ಸಂಪೂರ್ಣ ಸಾಮರ್ಥ್ಯದಿಂದ ತೊಡಗಿಸಿಕೊಳ್ಳಲಿ ಎಂಬ ಉದ್ಧೇಶದಿಂದ ಅವರಿಗೆ ಸುರಕ್ಷಿತ ಮತ್ತು ಆರಾಮದಾಯಕ ವಸತಿನಿಲಯದ ವ್ಯವಸ್ಥೆಯನ್ನು ಮತ್ತು ಸಸ್ಯಾಹಾರಿ ಆಹಾರವನ್ನು ಉಚಿತವಾಗಿ ನೀಡಲಾಗುವುದು. ವಿದ್ಯಾರ್ಥಿಗಳಲ್ಲಿ ಕಠಿಣ ಶ್ರಮ ಮತ್ತು ಉತ್ಕೃಷ್ಟತೆಯನ್ನು ಪ್ರೇರೇಪಿಸುವುದಕ್ಕೆ ಪೂರಕವಾಗುವ ನಿಟ್ಟಿನಲ್ಲಿ ಅಗತ್ಯವಿರುವ ಪ್ರಯೋಗಾಲಯ ಮತ್ತು ಗ್ರಂಥಾಲಯದ ವ್ಯವಸ್ಥೆ ಮಾಡಲಾಗಿದೆ. ಜೊತೆಗಿರುವ ಆಟಪಾಟಗಳ ಸೌಲಭ್ಯಗಳು ಉತ್ತಮ ಶಾರೀರಿಕ ಆರೋಗ್ಯವನ್ನು ನೀಡುತ್ತವೆ.
ಆಯ್ಕೆಯಾದ ವಿದ್ಯಾರ್ಥಿಗಳು ಬೆಂಗಳೂರಿನ ಥಣಿಸಂದ್ರದಲ್ಲಿರುವ ರಾಷ್ಟ್ರೋತ್ಥಾನ ಪದವಿಪೂರ್ವ ಕಾಲೇಜಿನಲ್ಲಿ ಓದುತ್ತಿದ್ದು, ಕಾಲೇಜಿನ ಮತ್ತು ಹೆಸರಾಂತ ಟ್ಯೂಶನ್ ಸಂಸ್ಥೆಯಾದ ಬೇಸ್ನ ನುರಿತ ಶಿಕ್ಷಕರಿಂದ ತರಬೇತಿ ಪಡೆಯುತ್ತಿದ್ದಾರೆ.
ತಪಸ್ ಕುರಿತ ಹೆಚ್ಚಿನ ಮಾಹಿತಿಗಾಗಿ: http://www.tapasedu.org/home