ಚನ್ನಗಿರಿ October 14: ‘ಹಿಂಸೆಯನ್ನು ಪ್ರಚೋದಿಸುವ ಮಾನಸಿಕತೆಯನ್ನು ನಾವು ವಿರೋಧಿಸಬೇಕಿದೆ, ಅಂತಹ ಮತಗಳ ಬಗ್ಗೆ ಜಗತ್ತಿನಲ್ಲೇ ತಿರಸ್ಕಾರ ಭಾವನೆ ತಾನಾಗಿಯೇ ನಿರ್ಮಾಣವಾಗುತ್ತಿದೆ’ ಎಂದು ಆರ್‌ಎಸ್‌ಎಸ್ ಪ್ರಾಂತ ಶಾರೀರಿಕ ಪ್ರಮುಖ್ ಚಂದ್ರಶೇಖರ ಜಹಗೀರದಾರ ಅಭಿಪ್ರಾಯ ಪಟ್ಟಿದ್ದಾರೆ.

IMG-20141013-WA0025

ಇಲ್ಲಿನ ಸರ್ಕಾರಿ ಬಾಲಿಕಾ ಪ್ರೌಢಶಾಲಾ ಆವರಣದಲ್ಲಿ ಸೋಮವಾರ ನಡೆದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಾಥಮಿಕ ಶಿಕ್ಷಾ ವರ್ಗದ ಸಮಾರೋಪದಲ್ಲಿ ಅವರು ಮುಖ್ಯ ಭಾಷಣ ಮಾಡಿದರು.

‘ಇಸ್ಲಾಂ ಮತ್ತು ಕೈಸ್ತ ಮತಗಳು ಹಿಂದುತ್ವವನ್ನು ನಾಶ ಮಾಡುವ ನಿರಂತರ ಯತ್ನವನ್ನು ಭಾರತದಲ್ಲಿ ನಡೆಸಿದವು. ಆದರೆ ಆ ಧರ್ಮಗಳ ಉಗಮ ಸ್ಥಾನದಲ್ಲೇ ಅವುಗಳ ಬಗ್ಗೆ ತಿರಸ್ಕಾರ ಭಾವನೆ ಇದೀಗ ಉಂಟಾಗುತ್ತಿದೆ’ ಎಂದು ಹೇಳಿದರು. ಇದಕ್ಕೆ ಉದಾಹರಣೆಯೆಂಬಂತೆ ಯುರೋಪ್, ಇಂಗ್ಲೆಂಡ್ ಹಾಗೂ ಅಮೆರಿಕಾದಲ್ಲಿ ಚರ್ಚ್‌ಗಳು ಮಾರಾಟಕ್ಕಿವೆ . ಭಾರತೀಯರೇ ಅವುಗಳನ್ನು ಖರೀದಿಸತೊಡಗಿದ್ದಾರೆ. ಇತ್ತೀಚೆಗಷ್ಟೇ ಭಾರತೀಯ ವಿದ್ಯಾಭವನ ಈಗಾಗಲೇ ಒಂದು ಚರ್ಚ್‌ನ್ನು ಖರೀದಿಸಿ ಷಿಕ್ಷಿನ್ನ ಕಾರ್ಯಾಲಯವಾಗಿಸಿಕೊಂಡಿದೆ. ಇಸ್ಕಾನ್ ಮತ್ತೊಂದು ಚರ್ಚ್ ಖರೀದಿಸಿ ಕೃಷ್ಣ ಮಂದಿರವನ್ನಾಗಿಸಿದೆ. ಶೇ. ೩೦ ರಷ್ಟು ಅಮೆರಿಕನ್ನರಿಗೆ ಅವರ ಧರ್ಮ ಗ್ರಂಥದ ಬಗ್ಗೆಯೇ ನಂಬಿಕೆ ಇಲ್ಲ. ಹೀಗಾಗಿ ಕ್ರೈಸ್ತ ಮತದ ಸ್ಥಿತಿ ಶೋಚನೀಯವಾಗಿದೆ  ಎಂದರು. ಇನ್ನೊಂದೆಡೆ ಇಸ್ಲಾಂ ಧರ್ಮ ಕೂಡ ಅವನತಿಯತ್ತ ಸಾಗುತ್ತಿದೆ. ಪರಸ್ಪರ ಒಳ ಪಂಗಡಗಳಲ್ಲೇ ಸಹಿಸದಷ್ಟು ದ್ವೇಷ ಯುದ್ಧವಾಗಿ ಮಾರ್ಪಟ್ಟಿದೆ. ಬೇರಾವ ಧರ್ಮವನ್ನೂ ಒಪ್ಪದ ಇಸ್ಲಾಂ ಕೂಡ ವಿನಾಶದ ಅಂಚಿನಲ್ಲಿದೆ ಎಂದರು.

ಭಯೋತ್ಪಾದಕ ಕೃತ್ಯಗಳು, ಗೋ ಹತ್ಯೆ, ಮತಾಂತರ ನಿರಂತರಾವಗಿ ಭಾರತದಲ್ಲಿ ನಡೆಯುತ್ತಿದ್ದರೂ ಅದನ್ನು ತಡೆಗಟ್ಟುವ ಧೈರ್ಯದ ಪ್ರಯತ್ನ ನಮ್ಮ ರಾಜಕಾರಣಿಗಳಿಂದಾಗಿಲ್ಲ. ಭಾರತದಲ್ಲಿಂದು ಧರ್ಮದ ರಕ್ಷಣೆಯಾಗಬೇಕಿದೆ. ಭಾರತ ಮಾತೆ ಶಕ್ತಿ ಸ್ವರೂಪಿಣಿಯಾಗಬೇಕಿದೆ ಎಂದರು.

ಗೋ ಹತ್ಯೆ ಮಾಡಬಾರದೆಂದು ಇಸ್ಲಾಂನಲ್ಲೇ ಹೇಳಲಾಗಿದೆ. ಆದರೂ ಹತ್ಯೆ ನಿರಂತರವಾಗಿ ನಡೆಯುತ್ತದೆ ಎಂದರೆ ಏನರ್ಥ? ಇಂತಹ ಹಿಂಸೆಯನ್ನು ಪ್ರಚೋದಿಸುವ ಮಾನಸಿಕತೆಯನ್ನು ನಾವು ವಿರೋಧಿಸಬೇಕಿದೆ. ನಮ್ಮ ಪೊಲೀಸ್ ಹಾಗೂ ಸೇನೆಗೆ ನೈತಿಕ ಸ್ಥೈರ್ಯವನ್ನು ತುಂಬುವ ಕೆಲಸ ಮಾಡಬೇಕಿದೆ. ಈ ಕೆಲಸವಾದರೆ ಸಮಾಜ ವಿರೋಧಿ ಶಕ್ತಿಗಳನ್ನು ಕೆಲವು ಗಂಟೆಗಳಲ್ಲೇ  ನಿಯಂತ್ರಿಸುವ ತಾಖತ್ತು ನಮ್ಮ ಸೈನ್ಯ ಹಾಗೂ ಪೊಲೀಸರಿಗೆ ಬರುತ್ತದೆ ಎಂದರು.

ಭಾರತ ಯಾರನ್ನೂ ನಾಶ ಮಾಡಿಲ್ಲ. ಯಾರ ಮೇಲೆಯೂ ನಮ್ಮಿಂದ ಆಕ್ರಮಣವಾಗಿಲ್ಲ. ಒಂದೇ ಒಂದು ಪೂಜಾ ಸ್ಥಾನವನ್ನೂ ಹಿಂದುಗಳು ನಾಶ ಮಾಡಿಲ್ಲ. ಎಲ್ಲರೂ ಸುಖವಾಗಿರಲಿ ಎಂದೆವೇ ಹೊರತು, ಹಿಂದು ಭವಂತು ಸುಖಿನಹಃ, ಹಿಂದುಗಳಲ್ಲದವರು ಪಾಪಿಗಳು ಎಂದು ಸಂಕುಚಿತವಾಗಿ ಹಿಂದು ಧರ್ಮ ಎಂದಿಗೂ ಹೇಳಿಲ್ಲ.

ಹೀಗೆ ಎಲ್ಲರ ಸುಖ ಬಯಸಿದ ಭಾರತಕ್ಕೆ ಜಗತ್ತು ಕೊಟ್ಟಿzನು? ಸಾವಿರಾರು ವರ್ಷಗಳ ಆಕ್ರಮಣ ಮಾತ್ರ. ಜೊತೆಗೆ ನಮ್ಮ ಮಂದಿರಗಳ ನಾಶ, ಮಾತಾ ಭಗಿನಿಯರ ಮೇಲೆ ಮಾನಭಂಗ ನಡೆಯಿತು. ಈ ಎಲ್ಲಾ ಶಿಕ್ಷೆ ಯಾವ ಕಾರಣಕ್ಕಾಗಿ? ಎಂದು ಪ್ರಶ್ನಿಸಿದ ಅವರು,  ಇಂತಹ ಸವಾಲುಗಳನ್ನು ನಾವು ಮೆಟ್ಟಿನಿಲ್ಲಬೇಕಿದೆ. ಹೀಗಾಗಿ ಹಿಂದು ಸಂಘಟನೆಗಳ ಪಾತ್ರ ಇಂದು ಅತ್ಯಂತ ಜರೂರಾಗಿದೆ ಎಂದು ಪ್ರತಿಪಾದಿಸಿದರು.

ಆರ್‌ಎಸ್‌ಎಸ್ ಕಳೆದ ೮೯ ವರ್ಷಗಳಿಂದ ಸಮಾಜದ ವಿವಿಧ ಕ್ಷೇತ್ರಗಖಳಲ್ಲಿ ಕಾರ್ಯ ಪ್ರವೃತ್ತವಾಗಿದೆ. ಹಿಂದು ಸಂಘಟನೆಯನ್ನು ಕೇಂದ್ರವಾಗಿಸಿರಿಕೊಂಡು ರೈತ, ಕಾರ್ಮಿಕ, ವಿದ್ಯಾರ್ಥಿ ಹೀಗೆ ಹಲವು ಕ್ಷೇತ್ರಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದೆ. ದೇಶಾದ್ಯಂತ ಸಂಘದ ಕಡೆಯಿಂದ ಸುಮಾರು ೨ ಲಕ್ಷಕ್ಕೂ ಅಧಿಕ ಸೇವಾ ಚಟುವಟಿಕೆಗಳು ನಡೆಯುತ್ತಿವೆ. ಇತ್ತೀಚೆಗಷ್ಟೇ ನಡೆದ ಜಮ್ಮು ಕಾಶ್ಮೀರ ಜಲ ಪ್ರಳಯದ ಸಂದರ್ಭದಲ್ಲೂ ಸಂತ್ರಸ್ಥರ ನೆರವಿಗೆ ಆರ್‌ಎಸ್‌ಎಸ್ ಧಾವಿಸಿದೆ ಎಂದರು.

ಸಾವಯವ ಕೃಷಿಕ ಕೆಂಪನಹಳ್ಳಿ ರಾಮಚಂದ್ರಪ್ಪ ಅಧ್ಯಕ್ಷತೆ ವಹಿಸಿದ್ದರು. ಶಿಬಿರಾಧಿಕಾರಿ ನಾಗರಾಜ ನಾಡಿಗ್ ವೇದಿಕೆಯಲ್ಲಿದ್ದರು. ಕಾರ್ಯಕ್ರಮಕ್ಕೂ ಮುನ್ನ ಗಣವೇಷಧಾರಿ ಸ್ವಯಂ ಸೇವಕರಿಂದ ಆಕರ್ಷಕ ಪಥ ಸಂಚಲನ ನಡೆಯಿತು. ಸಭಾ ಕಾರ್ಯಕ್ರಮಕ್ಕೂ ಮುನ್ನ ಸ್ವಯಂ ಸೇವಕರು ಕವಾಯತು ಪ್ರದರ್ಶಿಸಿದರು. ಚನ್ನಗಿರಿಯ ತರಳಬಾಳು ಸೆಂಟ್ರಲ್ ಶಾಲೆಯಲ್ಲಿ ಕಳೆದ ಒಂದು ವಾರದಿಂದ ಶಿಬಿರಾರ್ಥಿಗಳಿಗೆ ಇದಕ್ಕಾಗಿ ತರಬೇತಿ ನೀಡಲಾಗಿತ್ತು.

 

Leave a Reply

Your email address will not be published.

This site uses Akismet to reduce spam. Learn how your comment data is processed.