ಬೆಂಗಳೂರು: ಅಂತಾರಾಷ್ಟ್ರೀಯ ಯೋಗದಿನದ ಅಂಗವಾಗಿ ಯೋಗದ ಕುರಿತು ಜಾಗೃತಿ ಮೂಡಿಸಲು ರಾಷ್ಟ್ರೋತ್ಥಾನ ಪರಿಷತ್ ಇಂದು ಜೂನ್ 13 ಬೆಂಗಳೂರಿನ 4 ಕಡೆಗಳಲ್ಲಿ ವಾಕಥಾನ್ ಕಾರ್ಯಕ್ರಮವನ್ನು ಆಯೋಜಿಸಿತ್ತು. ಏಕಕಾಲದಲ್ಲಿ ಸಂಜೆ 4.30ಕ್ಕೆ ಬೆಂಗಳೂರಿನ 4 ಕಡೆಗಳಲ್ಲಿ ವಾಕಥಾನ್ ಆರಂಭಗೊಂಡಿತು . ಬಸವನಗುಡಿ ಅಂಚೆ ಕಚೇರಿಯಿಂದ ಕೇಶವಶಿಲ್ಪದವರೆಗಿನ ವಾಕಥಾನ್ ಅನ್ನು ಸಾಮಾಜಿಕ ಕಾರ್ಯಕರ್ತೆ, ಅದಮ್ಯ ಚೇತನದ ತೇಜಸ್ವಿನಿ ಅನಂತಕುಮಾರ್ ಉದ್ಘಾಟಿಸಿದರು.

ಅಂತಾರಾಷ್ಟ್ರೀಯ ಯೋಗದಿನದ ಅಂಗವಾಗಿ ಜೂನ್ 21ರಂದು ರಾಷ್ಟ್ರೋತ್ಥಾನ ಪರಿಷತ್ ಆಯೋಜಿಸಿರುವ “ಯೋಗ ಪ್ರದರ್ಶನ ಹಾಗೂ ಸಾರ್ವಜನಿಕ ಸಮಾರಂಭ”ದ ಪ್ರಯುಕ್ತ ಈ ಕಾರ್ಯಕ್ರಮ ನಡೆಯಿತು.

DSC_6374

ಸ್ಥಳೀಯ ಶಾಸಕ ರವಿಸುಬ್ರಹ್ಮಣ್ಯ, ಕಾರ್ಪೋರೇಟರ್ ಸದಾಶಿವ್ ಉಪಸ್ಥಿತರಿದ್ದರು.ಜಯನಗರ 4ನೇ ಬ್ಲಾಕ್ ನಿಂದ ಬಿಎಸ್ ಎನ್ ಎಲ್ ಹಿಂಭಾಗದಲ್ಲಿರುವ ‘ಅಜಿತಸ್ಮೃತಿ’ ವರೆಗಿನ ವಾಕಥಾನ್ ಅನ್ನು ಸ್ಥಳೀಯ ಶಾಸಕ ವಿಜಯಕುಮಾರ್, ಪರಿಷತ್ ನ ಪ್ರಧಾನ ಕಾರ್ಯದರ್ಶಿ ನಾ. ದಿನೇಶ್ ಹೆಗ್ಡೆ ಉದ್ಘಾಟಿಸಿದರು. ಖ್ಯಾತ ಹೃದ್ರೋಗ ತಜ್ಞೆ ವಿಜಯಲಕ್ಷ್ಮಿ ಬಾಳೇಕುಂದ್ರಿ ಉಪಸ್ಥಿತರಿದ್ದರು.

ಕುಂದಲಹಳ್ಳಿ ಬಿಬಿಎಂಪಿ ಕಚೇರಿಯಿಂದ ಕುಂದಲಹಳ್ಳಿಯ ರಾಷ್ಟ್ರೋತ್ಥಾನ ಯೋಗಕೇಂದ್ರದ ವರೆಗಿನ ವಾಕಥಾನ್ ಅನ್ನು ಸ್ಥಳೀಯ ಶಾಸಕ ಮಾಜಿ ಸಚಿವ ಅರವಿಂದ ಲಿಂಬಾವಳಿ ಉದ್ಘಾಟಿಸಿದರು. ಸ್ಥಳೀಯ ಕಾರ್ಪೋರೇಟರ್ ಶ್ರೀಧರ್ ರೆಡ್ಡಿ, ಮಹದೇವಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಧ್ಯಕ್ಷ ವೆಂಕಟರೆಡ್ಡಿ, ಯೋಗ ವಿಭಾಗದ ನಿರ್ದೇಶಕ ನಾಗೇಂದ್ರ ಕಾಮತ್ ಉಪಸ್ಥಿತರಿದ್ದರು.

ಕಲ್ಯಾಣನಗರದ ಜೆಜಿಆರ್ ವಿಕೆ ಶಾಲೆಯಿಂದ ಜಲವಾಯುವಿಹಾರದ ವರೆಗಿನ ವಾಕಥಾನ್ ನನ್ನು ಸಂಸದ ಪಿ.ಸಿ. ಮೋಹನ್ ಉದ್ಘಾಟಿಸಿದರು.

DSC_6367 DSC_6426

DSC_64091 IMG-20150613-WA0040

 

Leave a Reply

Your email address will not be published.

This site uses Akismet to reduce spam. Learn how your comment data is processed.