Bengaluru: RSS inspired Rashtrotthana Parishat had organised International Yoga Day celebrations at National Highschool Grounds, Basavanagudi in Bengaluru at 10.30am on June 21, 2015.
Karnataka’s Governor VR Vala, RSS Akhil Bharatiya Vyavastha Pramukh Mangesh Bhende, other several functionaries to attend this mega event in which more than 7000 participants will perform Yoga. A Yoga related souvenir ‘YOGA DEEPTI’ comprising special articles and information on yoga will be released in this programme.
RSS Inspired Rashtrotthana Parishat has organised Yoga Day celebrations in more than 250 places across Karnataka.
ರಾಷ್ಟ್ರೋತ್ಥಾನ ಪರಿಷತ್ ನಿಂದ ಜೂನ್ 21ರಂದು “ಯೋಗ ಪ್ರದರ್ಶನ ಹಾಗೂ ಸಾರ್ವಜನಿಕ ಸಮಾರಂಭ” ಕಾರ್ಯಕ್ರಮ:
ಪ್ರಥಮ ಅಂತಾರಾಷ್ಟ್ರೀಯ ಯೋಗ ದಿನ’ದ ಪ್ರಯುಕ್ತ ಜೂನ್ 21ರಂದು ರಾಷ್ಟ್ರೋತ್ಥಾನ ಪರಿಷತ್ , ಬೆಂಗಳೂರಿನ ನ್ಯಾಷನಲ್ ಕಾಲೇಜು ಮೈದಾನದಲ್ಲಿ “ಯೋಗ ಪ್ರದರ್ಶನ ಹಾಗೂ ಸಾರ್ವಜನಿಕ ಸಮಾರಂಭ” ಕಾರ್ಯಕ್ರಮವನ್ನು ಆಯೋಜಿಸಿದೆ. ಅಂದು ಬೆಂಗಳೂರಿನ ಸುಮಾರು 7000 ಮಂದಿ ಏಕಕಾಲದಲ್ಲಿ ಯೋಗಾಸನ ಪ್ರದರ್ಶನ ನೀಡಲಿದ್ದಾರೆ.
ರಾಷ್ಟ್ರೋತ್ಥಾನ ಪರಿಷತ್ ಆಯೋಜಿಸಿರುವ ಪ್ರಥಮ ಅಂತಾರಾಷ್ಟ್ರೀಯ ಯೋಗದಿನದ ತಯಾರಿಗಾಗಿ ಜೂನ್ 19 ರಂದು ಪ್ರಬಂಧಕರ ಬೈಠಕ್ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ನಾ . ದಿನೇಶ್ ಹೆಗ್ಡೆ ನೇತೃತ್ವದಲ್ಲಿ ನಡೆಯಿತು. ಪರಿಷತ್ ನ ಆಡಳಿತ ಮಂಡಳಿ ಸದಸ್ಯ ಕೆ.ಎಸ್. ನಾರಾಯಣ್, ಯೋಗ ವಿಜ್ಞಾನ ಮತ್ತು ಸಂಶೋಧನ ಸಂಸ್ಥೆಯ ನಿರ್ದೇಶಕ ನಾಗೇಂದ್ರ ಕಾಮತ್ ಉಪಸ್ಥಿತರಿದ್ದರು