ಬೆಂಗಳೂರು: ಇತ್ತೀಚೆಗೆ ನಮ್ಮನ್ನಗಲಿದ ಮಾ|| ನ. ಕೃಷ್ಣಪ್ಪನವರು ಈಗ ನಮ್ಮ ಪಾಲಿನ ನೆನಪು ಮಾತ್ರವಾಗಿ ಉಳಿದಿದ್ದಾರೆ. 6 ದಶಕಗಳಿಗಿಂತಲೂ ದೀರ್ಘಕಾಲ ಸಂಘದ ಪ್ರಚಾರಕರಾಗಿ ಕರ್ನಾಟಕ, ಆಂಧ್ರ, ತಮಿಳುನಾಡು ಮತ್ತು ಕೇರಳ ಪ್ರಾಂತಗಳ ಅಸಂಖ್ಯ ಸ್ವಯಂಸೇವಕರಲ್ಲಿ ಕಾರ್ಯೋತ್ಸಾಹ ತುಂಬುವುದರಲ್ಲಿ ಬದುಕು ಸವೆಸಿದ ಅವರು, ತಮ್ಮ ಆತ್ಮೀಯ ವೈಯಕ್ತಿಕ ಸ್ನೇಹದ ಮೂಲಕ ಸಾವಿರಾರು ಕಾರ್ಯಕರ್ತರನ್ನು ತಿದ್ದಿ ತೀಡಿ ಬೆಳೆಸಿದಂತಹವರು. ಅಗಣಿತ ಪರಿವಾರಗಳಲ್ಲಿನ ಹಿರಿಯ-ಕಿರಿಯ ಬಂಧುಗಳು, ಮಾತಾ ಭಗಿನಿಯರಿಗೆ ಬದುಕಿನ ಮೌಲ್ಯವತ್ತಾದ ಜೀವನಾದರ್ಶನಗಳನ್ನು ತಮ್ಮ ಮಾತು, ವ್ಯವಹಾರಗಳ ಮೂಲಕ ಕಲಿಸಿದ್ದಲ್ಲದೆ, ರಾಷ್ಟ್ರಜೀವನದ ಇನ್ನೂ ಹಲವು ಆಯಾಮಗಳಲ್ಲಿ ರಾಷ್ಟ್ರೀಯತೆಯ ಕಂಪು ಸೂಸುವಂತೆ ಅವರು ಪರಿಶ್ರಮಿಸಿದುದು ಸಹ ಸರ್ವವಿಧಿತ.
ಇದೀಗ ಅವರ ಬದುಕು ಸಾಧನೆಗಳನ್ನು ಸಮಗ್ರವಾಗಿ ಪರಿಚಯಿಸುವಂತಹ ಗ್ರಂಥವೊಂದನ್ನು ಪ್ರಕಟಿಸಲು ಯೋಜಿಸಲಾಗಿದೆ. ಈ ನಿಟ್ಟಿನಲ್ಲಿ ಅವರನ್ನು ನಿಕಟವಾಗಿ ಕಂಡು ಅವರ ಸಹವಾಸ ಪಡೆದಿರುವ, ಅವರ ವಿಚಾರ ಮತ್ತು ವ್ಯವಹಾರಗಳಿಂದ ತಮ್ಮ ಮನದಲ್ಲಿ ಪ್ರೇರಣೆ ತುಂಬಿಕೊಂಡಿರುವ ಎಲ್ಲ ಬಂಧು-ಭಗಿನಿಯರು ತಮ್ಮ ಅನುಭವಗಳನ್ನು, ಅಂತಹ ಪ್ರೇರಕ ಪ್ರಸಂಗಗಳನ್ನು ಬರೆದು ಕಳುಹಿಸಿಕೊಡಬೇಕಾಗಿ ಅಪೇಕ್ಷೆ. ತಮಗೆ ಅವರು ಬರೆದಿರುವ ಪತ್ರಗಳು ತಮ್ಮಲ್ಲಿದ್ದಲ್ಲಿ ಅದರ ಜೆರಾಕ್ಸ್ ಪ್ರತಿ ಮತ್ತು ತಮ್ಮ ಬಳಿ ಅವರಿಗೆ ಸಂಬಂಧಿಸಿದಂತಹ ಭಾವಚಿತ್ರಗಳಿದ್ದಲ್ಲಿ (ಸಂದರ್ಭ ಮತ್ತು ಜೊತೆಯಲ್ಲಿರುವವರ ವಿವರಗಳ ಸಹಿತ) ಅವುಗಳನ್ನು ನವೆಂಬರ್ 30 ರ ಒಳಗೆ ಕಳುಹಿಸಬೇಕಾಗಿ ಕೋರಿಕೆ.
ವಿಳಾಸ: ಚಂದ್ರಶೇಖರ ಭಂಡಾರಿ, ’ಕೇಶವಕೃಪಾ’, ರಂಗರಾವ್ ರಸ್ತೆ, ಶಂಕರಪುರಂ, ಬೆಂಗಳೂರು – 560004
ದೂರವಾಣಿ: 9880621824
E-Mail – karnatakarss@gmail.com