೬೦ ವರ್ಷದ ಸಾಧನೆಯ ಹಾದಿಯಲ್ಲಿ ಅಭಾವಿಪ
೧೯೪೮ ರಲ್ಲಿಯೇ ರಾಷ್ಟ್ರೀಯ ಸ್ವಯಂ ಸೇವಕ ಸಂಘ ದೂರಗಾಮಿ ಚಿಂತನೆಯ ಫಲವಾಗಿ ನಾಲ್ಕಾರು ಮಂದಿ ಕಾರ್ಯಕರ್ತರ ಪ್ರಯತ್ನದೊಂದಿಗೆ ತನ್ನ ಅನೌಪಚಾರಿಕ ಉಗಮವನ್ನು ಕಂಡುಕೊಂಡ ವಿದ್ಯಾರ್ಥಿ ಪರಿಷತ್ (ಂಃಗಿP) ೧೯೪೯ ಜುಲೈ ೯ ರಂದು (S-೩೮೫/೧೯೪೯-೫೦) ನೋಂದಾಯಿ ಸಲ್ಪಟ್ಟಿತು. ಆರಂಭದಲ್ಲಿ ನಾಲ್ಕಾರು ರಾಜ್ಯಗಳಲ್ಲಿ ಸಾಂಕೇತಿಕವಾಗಿ ಎಂಬಂತೆ ತನ್ನ ಅಸ್ತಿತ್ವವನ್ನು ಹೊಂದಿದ್ದ ವಿದ್ಯಾರ್ಥಿ ಪರಿಷತ್, ಸ್ಥಾಪನೆಯ ೬೦ ವರ್ಷಗಳ ಬಳಿಕ ಇಂದು ದೇಶದ ಉದ್ದಗಲಕ್ಕೂ ವ್ಯಾಪಿಸಿ ಎಲ್ಲಾ ರಾಜ್ಯಗಳ, ಎಲ್ಲಾ ಜಿಲ್ಲೆಗಳಲ್ಲೂ ತನ್ನ ಶಾಖೆಯ ಇಲ್ಲವೇ ಸಂಪರ್ಕದ ಕೊಂಡಿಯನ್ನು ಸ್ಥಾಪಿಸಿಕೊಂಡಿದೆ.
ಪರಿಷತ್ತಿನ ಪ್ರಧಾನ ತಾತ್ವಿಕ ವಿಚಾರಗಳು
೧. ಸಮಸ್ತ ಶೈಕ್ಷಣಿಕ ಸಮುದಾಯದ ಸಂಘಟನೆ, ಒಂದು ಪಾರಿವಾರಿಕ
ನೆಲೆಯಲ್ಲಿ.
೨. ರಾಷ್ಟ್ರೀಯ ಹಾಗೂ ರಚನಾತ್ಮಕ ದೃಷ್ಟಿ
ಹೊಂದಿರುವುದು.
೩. ಪಕ್ಷ ಹಾಗೂ ಅಧಿಕಾರದ ರಾಜಕಾರಣ
ದಿಂದ ಮುಕ್ತವಾಗಿರುವುದು.
೪. ’ಇಂದಿನ ವಿದ್ಯಾರ್ಥಿ – ಇಂದಿನ ಪ್ರಜೆ’
ಎಂಬ ನಂಬಿಕೆ ಹೊಂದಿರುವುದು.
ಪರಿಷತ್ತಿನ ಮೌಲ್ಯಾದರ್ಶಗಳು
ಜ್ಞಾನ, ಶೀಲ, ಏಕತೆ
ಪರಿಷತ್ತಿನ ನಿರ್ವಹಣೆ ಮಾಡುವ ಮೂರು ಬಗೆಯ ಕಾರ್ಯಗಳು
೧. ರಚನಾತ್ಮಕ ಕಾರ್ಯ.
೨. ಆಂದೋಲನಾತ್ಮಕ ಕಾರ್ಯ.
೩. ಪ್ರಾತಿನಿಧ್ಯಾತ್ಮಕ ಕಾರ್ಯ.
ಪರಿಷತ್ತಿನ ಚಟುವಟಿಕೆಗಳು
ಟ ಇಂದಿನ ವಿದ್ಯಾರ್ಥಿಗಳಲ್ಲಿ ದೇಶಭಕ್ತಿ-
ಸಾಮಾಜಿಕ ಕಳಕಳಿ ನಿರ್ಮಿಸುವ
ಕಾರ್ಯಕ್ರಮಗಳನ್ನು ಆಯೋಜಿಸುವುದು.
ಟ ವಿದ್ಯಾರ್ಥಿ-ವಿದ್ಯಾರ್ಥಿನಿಯರಲ್ಲಿ
ಧೈರ್ಯ, ವಿಶ್ವಾಸ, ಸಾಹಸ ನಾಯಕತ್ವ
ಗುಣಗಳು, ನಿರ್ಮಿಸಲು ನೂರಾರು
ರೀತಿಯ ಚಟುವಟಿಕೆಗಳನ್ನು
ಆಯೋಜಿಸುವುದು.
ಟ ಅಧ್ಯಯನ ಕೇಂದ್ರ, ವ್ಯಕ್ತಿತ್ವ ವಿಕಸನ
ಶಿಬಿರ, ರಕ್ತದಾನ ಶಿಬಿರ ಮುಂತಾದ
ನೂರಾರು ಸಾಮಾಜಿಕ ಚಟುವಟಿಕೆಗಳು
ನಡೆಯುತ್ತಿದೆ.
ವಿದ್ಯಾರ್ಥಿಗಳ ಪ್ರತಿಭೆಯನ್ನು ಗುರುತಿಸುವ ರಚನಾತ್ಮಕ ಕಾರ್ಯಕ್ರಮಗಳು
೧. ಸೃಷ್ಟಿ – ಇಂಜನೀಯರಿಂಗ್ ವಿದ್ಯಾರ್ಥಿ
ಗಳಿಗಾಗಿ ಪ್ರೊಜೆಕ್ಟ್ಗಳ ಪ್ರದರ್ಶನ.
೨. ಜಿಜ್ಞಾಸ – ಆಯುರ್ವೇದಿಕ್
ವಿದ್ಯಾರ್ಥಿಗಳಿಗಾಗಿ.
೩. ರಂಗತೋರಣ – ವಿದ್ಯಾರ್ಥಿಗಳಲ್ಲಿ
ರಂಗಭೂಮಿಯ ಆಸಕ್ತಿಯನ್ನು
ಹೆಚ್ಚಿಸಲು
೪. ಕಲಾದರ್ಪಣ – ವಿದ್ಯಾರ್ಥಿಗಳಿಗೆ
ಕಲೆಯ ಬಗ್ಗೆ ಅರಿವು, ಆಸಕ್ತಿ ಮೂಡಿಸಲು
೫. ಇನಸೈಟ್ – ಕಾನೂನು
ವಿದ್ಯಾರ್ಥಿಗಳಿಗಾಗಿ ವಿಶಿಷ್ಟ ಕಾರ್ಯಕ್ರಮ
೬. ಜ್ಞಾನ – ವೃತ್ತಿಪರ ವಿದ್ಯಾರ್ಥಿಗಳಿಗಾಗಿ
೭. ಯುವ ಭಾರತ್ – ವಿದ್ಯಾರ್ಥಿಗಳಲ್ಲಿ
ದೇಶಭಕ್ತಿ ಮೂಡಿಸಲು
೮. ಸ್ವದೇಶ್- ಹಳ್ಳಿಯ ಸಂಸ್ಕೃತಿಯನ್ನು
ವಿದ್ಯಾರ್ಥಿಗಳಿಗೆ ತಿಳಿಸಲು
ವಿವಿಧ ಸೇವಾ ಪ್ರಕಲ್ಪಗಳು
ವಿದ್ಯಾರ್ಥಿ ಶಿಕ್ಷಣ ಸೇವಾ ಕೇಂದ್ರ – ಶೈಕ್ಷಣಿಕ ಸಂಶೋಧನೆ
ವಿದ್ಯಾಪಥ : ವಿದ್ಯಾರ್ಥಿಗಳಿಗೆ ಎಲ್ಲಾ ಕಾಲೇಜುಗಳ ಮಾಹಿತಿ ಮತ್ತು ಕೌನ್ಸೆಲಿಂಗ್ಗೆ ವಿದ್ಯಾಪಥ ಎಂಬ ವೆಬ್ಸೈಟ್ ತಿತಿತಿ.viಜಥಿಚಿಠಿಚಿಣhಚಿ.ಛಿom.
’ವಿದ್ಯಾರ್ಥಿಪಥ’- ವಿದ್ಯಾರ್ಥಿ ಪರಿಷತ್ನ ಚಟುವಟಿಕೆಗಳ ಬಗ್ಗೆ ತಿಳಿಸುವ ಮಾಸಪತ್ರಿಕೆ.
ಬುಕ್ಬ್ಯಾಂಕ್ – ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗಾಗಿ ಪುಸ್ತಕ ವಿತರಣೆ.
ಶಿಕ್ಷಣ ಕ್ಷೇತ್ರದ ಸುಧಾರಣೆಯಲ್ಲಿ ಅಭಾವಿಪ ಪಾತ್ರ
ಟ ಶಿಕ್ಷಣ ಕ್ಷೇತ್ರದ ಸುಧಾರಣೆಗೆ ಪರಿಷತ್ತಿನ
ಆದ್ಯತೆಯ ಕಾರ್ಯ.
ಟ ಶೈಕ್ಷಣಿಕ ಪರಿಸರದ ಸ್ವಚ್ಛತೆಯ ಪ್ರಯತ್ನ
ಟ ಶಿಕ್ಷಣ ಕ್ಷೇತ್ರದ ಭ್ರಷ್ಟಾಚಾರದ ವಿರುದ್ಧ
ಸಮರ
ಟ ಶಿಕ್ಷಣದ ವ್ಯಾಪಾರೀಕರಣ ವಿರುದ್ಧ ಅಭಾವಿಪ ತನ್ನ ಹೋರಾಟದ
ಅಭಿಯಾನ ಮುಂದುವರೆಸಿದೆ.
ಟ ಪಠ್ಯಪುಸ್ತಕಗಳಲ್ಲಿನ ಇತಿಹಾಸದ ವಿಕೃತಿ
ಕುರಿತಾಗಿ ಪರಿಷತ್ ಕಾಲಕಾಲಕ್ಕೆ
ಪ್ರತಿಭಟನೆ ನಡೆಸಿದೆ.
ಟ ಕಾಲೇಜು ಪರಿಸರದಲ್ಲಿ ಪಾಶ್ಚಾತ್ಯ ಜೀವನ
ಶೈಲಿಯನ್ನು ಪ್ರಸಾರ ಮಾಡುತ್ತಿರುವ
ವ್ಯಾಪಾರಿ ಶಕ್ತಿಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ
ಅಭಾವಿಪ ಜಾಗೃತಿ ಮೂಡಿಸುತ್ತದೆ.
ಸಾಮಾಜಿಕ ಕ್ಷೇತ್ರದಲ್ಲಿ ಪರಿಷತ್ ಉಂಟು ಮಾಡಿರುವ ಸ್ಪಂದನೆ
ಟ ಸಾಮರಸ್ಯ ಭಂಜಕರಿಂದ ವಿದ್ಯಾರ್ಥಿ
ಗಳನ್ನು ದೂರವಿರಿಸುವಿಕೆ.
ಟ ಮೀಸಲಾತಿ ನಿರ್ಮಿಸಿದ ಕಂದಕದ
ನಿವಾರಣೆಗೆ ಮತ್ತು ಸಾಮಾಜಿಕ
ಸದ್ಭಾವನೆ ನಿರ್ಮಾಣ.
ಟ ತಣಿಸಿದ ಜಾತಿ ದ್ವೇಷದ ದಳ್ಳುರಿ.
ಟ ಉಪೇಕ್ಷಿತ ವಿದ್ಯಾರ್ಥಿ ಬಂಧುಗಳ
ಬಗೆಗಿನ ಭ್ರಾತೃಪ್ರೇಮ.
ಟ ವಿದ್ಯಾರ್ಥಿಗಳಲ್ಲಿ ಸಾಮಾಜಿಕ
ಕಾಳಜಿಯನ್ನು ಉತ್ಪನ್ನ ಮಾಡುವಲ್ಲಿ ಪರಿಷತ್ ಸಾಕಷ್ಟು ಸಫಲತೆಯನ್ನು
ಕಂಡಿದೆ.
ರಾಷ್ಟ್ರೀಯ ವಿಚಾರಗಳ ಹಾಗೂ ಸಮಸ್ಯೆಗಳ ಕುರಿತಾಗಿ ಮೂಡಿಸಿದ ಜಾಗೃತಿ
ಟ ರಾಷ್ಟ್ರೀಯ ಬೇಡಿಕೆಗಳಿಗಾಗಿ ಒತ್ತಾಯ,
(ದೇಶದ ಹೆಸರು, ಇಂಡಿಯಾದ
ಬದಲಿಗೆ ಭಾರತ, ರಾಷ್ಟ್ರಗೀತೆಯಾಗಿ
ವಂದೇಮಾತರಂ ಬಳಕೆ ಮಾಡುವಂತೆ
ಬೇಡಿಕೆ)
ಟ ಭಾರತದ ಮೇಲಾದ ಭೌಗೋಳಿಕ,
ಸಾಂಸ್ಕೃತಿಕ, ಸಾಮಾಜಿಕ ಆಕ್ರಮಣ