ಹಿಂದು ಸ್ವಯಂಸೇವಕ ಸಂಘದ ಸಹ ಸಂಯೋಜಕರಾದ ಶ್ರೀ ರವಿಕುಮಾರ ಅವರು ಬರೆದಿರುವ ’ಇಂಡಿಯನ್ ಹೀರೋಯಿಸಮ್ ಇನ್ ಇಸ್ರೇಲ್’ ಪುಸ್ತಕವು ಇನ್ನು ಕನ್ನಡದಲ್ಲಿ ಓದುಗರಿಗೆ ದೊರಕಲಿದೆ.

ರಾಷ್ಟ್ರ‍ೀಯ ಸ್ವಯಂಸೇವಕ ಸಂಘದ ಕರ್ನಾಟಕ ದಕ್ಷಿಣ ಪ್ರಾಂತದ ಸಹಪ್ರಚಾರ ಪ್ರಮುಖರಾದ ಶ್ರೀ ಪ್ರದೀಪ ಮೈಸೂರು ಕನ್ನಡ ಅವತರಣಿಕೆಯ ಲೇಖಕರು. ೨೫ ನವೆಂಬರ್‌ನಂದು ಬೆಂಗಳೂರಿನ  ಮಿಥಿಕ್ ಸೊಸೈಟಿಯಲ್ಲಿ ಪುಸ್ತಕವು ಬಿಡುಗಡೆಗೊಳ್ಳಲಿದೆ. ಪುಸ್ತಕದ ಮೂಲ ಲೇಖಕರಾದ ಶ್ರೀ ರವಿಕುಮಾರ್, ಉಪಸ್ಥಿತರಿರುತ್ತಾರೆ. ರಂಗಕರ್ಮಿ ಪ್ರಕಾಶ್ ಬೆಳವಾಡಿ ಪುಸ್ತಕವನ್ನು ಬಿಡುಗಡೆಗೊಳಿಸಲಿದ್ದಾರೆ. ಶ್ರೀ ಸಿಬಂತಿ ಪದ್ಮನಾಭ, ತುಮಕೂರು ವಿಶ್ವವಿದ್ಯಾಲಯದ ಪತ್ರಿಕೋದ್ಯಮ ವಿಭಾಗದ ಪ್ರಾಧ್ಯಾಪಕರು ಪುಸ್ತಕದ ಕುರಿತಾಗಿ ಮಾತನಾಡುತ್ತಾರೆ. ಮಿಥಿಕ್ ಸೊಸೈಟಿಯ ಗೌರವ ಕಾರ್ಯದರ್ಶಿಗಳು, ರಾ.ಸ್ವ.ಸಂ ದ ಕ್ಷೇತ್ರೀಯ ಸಂಘಚಾಲಕರಾದ ವಿ ನಾಗರಾಜ ಉಪಸ್ಥಿತರಿರುತ್ತಾರೆ.

ಅದೇ ದಿನ ಮೈಸೂರಿನಲ್ಲಿ ಸಂಜೆ 5:30ಕ್ಕೆ, ಮಾಧವ ಕೃಪಾ ದಲ್ಲಿ ಮಹಾರಾಜ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಉಪಸ್ಥಿತಿಯಲ್ಲಿ ಪುಸ್ತಕವು ಲೋಕಾರ್ಪಣೆಗೊಳ್ಳಲಿದೆ.

23 ಸೆಪ್ಟೆಂಬರ್ 1918 ಇಸ್ರೇಲಿಗರಿಗೆ ಐತಿಹಾಸಿಕ ದಿನ. ಇಸ್ರೇಲ್ ದೇಶದ ಇತಿಹಾಸದ ಜೊತೆಗೆ, ಒಟ್ಟೊಮನ್ ತುರ್ಕರ ಆಳ್ವಿಕೆಯಿಂದ ಹೈಫ಼ಾ ಬಂದರನ್ನು ಸ್ವತಂತ್ರಗೊಳಿಸುವಲ್ಲಿ 900 ಭಾರತೀಯ ಸೈನಿಕರ ಬಲಿದಾನ ಅಡಗಿದೆ. ಪ್ರತಿ ವರ್ಷವೂ ಇಸ್ರೇಲ್, ಸೆಪ್ಟೆಂಬರ್ 23ರಂದು ರಾಷ್ಟ್ರ‍ೀಯ ದಿನವನ್ನಾಗಿ ಆಚರಿಸುತ್ತದೆ. ಬಲಿದಾನ ಹೊಂದಿದ ಭಾರತೀಯ ಸೇನಾನಿಗಳನ್ನು ಸ್ಮರಿಸುತ್ತದೆ.

Sri Ravikumar, Joint Organizing Secretary of the Hindu Swayamsevak Sangh has written a book – ‘ Indian Heroism In Israel’ which accounts the martyrdom of over 900 Indian soldiers in liberating the Haifa port from the rule of Ottoman Turks on 23rd Sept 1918. This book is translated to Kannada by Sri Pradeep Mysuru, Pracharak and Karnataka Dakshina Pranth’s SahPrachar Pramukh. On 25th Nov 2017, the book will be released in Mythic Society. Theatre artist Prakash Belavadi, Mythic Society’s Hon. Secretary V Nagaraj, Sibanthi Padmanabha – Dept of Journalism, Tumakuru University will be present in the book release ceremony.

On the same day the book will be released in Mysuru by Maharaja Sri Yaduveera KrishnaDatta Wodeyar.

 

  

 

Leave a Reply

Your email address will not be published.

This site uses Akismet to reduce spam. Learn how your comment data is processed.