ಬೆಂಗಳೂರು, ಜನವರಿ 05, 2018 : ಯುವಜನರಲ್ಲಿ ಸಾಮಾಜಿಕ ಸೇವಾ ಪ್ರಜ್ಞೆಯನ್ನು ಪೋಷಿಸುವ `ಉತ್ತಮನಾಗು-ಉಪಕಾರಿಯಾಗು’ ಎಂಬ ಸ್ವಾಮಿ ವಿವೇಕಾನಂದರ ಜೀವನ ಸಂದೇಶವನ್ನು ಸಾರುವ ಬೃಹತ್ ಯುವ ಅಭಿಯಾನ `ವಿವೇಕ್ ಬ್ಯಾಂಡ್-2018′ ಇದೇ ಬರುವ ಜನವರಿ 12 ರಿಂದ 26ರವರೆಗೆ ರಾಜ್ಯಾದ್ಯಂತ ನಡೆಯಲಿದೆ.
ಜನವರಿ 12, 2018 ರಂದು ಸ್ವಾಮಿ ವಿವೇಕಾನಂದರ 155ನೇ ಜಯಂತಿ ಮತ್ತು ರಾಷ್ಟೀಯ ಯುವ ದಿನದ ಅಂಗವಾಗಿ ರಾಜ್ಯದಾದ್ಯಂತ ವಿವೇಕ್ ಬ್ಯಾಂಡ್ ಅಭಿಯಾನಕ್ಕೆ ಚಾಲನೆ ದೊರೆಯಲಿದೆ. ಯುವಕ- ಯುವತಿಯರು ತಮ್ಮ ಬಲಗೈಗೆ ವಿವೇಕ್ಬ್ಯಾಂಡ್ನ್ನು ಧರಿಸಲಿದ್ದು, ವಿವೇಕಾನಂದರು ಯುವಜನರಿಗೆ ನೀಡಿದ `ಉತ್ತಮನಾಗು-ಉಪಕಾರಿಯಾಗು’ (BE GOOD DO GOOD) ಎಂಬ ಸಂದೇಶವನ್ನು ತಾವು ಪಾಲನೆ ಮಾಡುವ ಸಂಕಲ್ಪ ತೊಡಲಿದ್ದಾರೆ. ವಿವೇಕ್ ಬ್ಯಾಂಡ್ ಕೈಯಲ್ಲಿ ಧರಿಸುವುದರೊಂದಿಗೆ ಜನವರಿ 12, 2018 ರಿಂದ 26 ಜನವರಿ 2018 ರ ವರೆಗೆ 2 ವಾರ ನಡೆಯಲಿರುವ ಈ ಬೃಹತ್ ಯುವ ಅಭಿಯಾನದಲ್ಲಿ ಸುಮಾರು 12 ಲಕ್ಷ ಯುವಕ- ಯುವತಿಯರು ಭಾಗವಹಿಸಲಿದ್ದಾರೆ.
ಬೆಂಗಳೂರಿನ ಸಾಮಾಜಿಕ ಸಂಸ್ಥೆ ‘ಸಮರ್ಥ ಭಾರತ’ ಈ ಯುವ ಅಭಿಯಾನವನ್ನು ಆಯೋಜಿಸಿದೆ.
ಕಾಲೇಜು ವಿದ್ಯಾರ್ಥಿಗಳು, ಯುವ ಉದ್ಯೋಗಿಗಳು ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಯುವಜನರು ತಮ್ಮ ವೈಯಕ್ತಿಕ ಜೀವನದಲ್ಲಿ ಉತ್ತಮ ಗುಣಸ್ವಭಾವಗಳನ್ನು ಮೈಗೂಡಿಸುವುದರ ಜತೆಗೆ ಸಾಮಾಜಿಕವಾಗಿ ಉಪಯೋಗವಾಗುವ ಸೇವಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತೆ ಪ್ರೇರೇಪಿಸುವುದು ಈ ಅಭಿಯಾನದ ಉದ್ದೇಶ . ಹೆಚ್ಚಿನ ಯುವ ಜನತೆಯನ್ನು ಸ್ಪೂರ್ತಿದಾಯಕ ಕಾರ್ಯಗಳಿಗೆ ಪ್ರೇರೇಪಿಸಿ ಈ ಮೂಲಕ ಅನೇಕ ಇತರರಿಗೆ ಆದರ್ಶ ವ್ಯಕ್ತಿಗಳಾಗುವ ಮೂಲಕ “ಉತ್ತಮನಾಗು-ಉಪಕಾರಿಯಾಗು” ಎಂಬ ಪರಂಪರೆಯನ್ನು ನಿರ್ಮಿಸುವ ಆಶಯವನ್ನು ಈ ಅಭಿಯಾನ ಹೊಂದಿದೆ. ಈ ಸಂದೇಶವು ಹೆಚ್ಚಿನ ಯುವ ಜನತೆಗೆ ತಲುಪಲು ತಂತ್ರಜ್ಞಾನಾಧಾರಿತ ವೇದಿಕೆಗಳಾದ ಸಮರ್ಥ ಭಾರತ ವೆಬ್ಸೈಟ್, ಸಾಮಾಜಿಕ ಜಾಲತಾಣಗಳು , ವಾಟ್ಸಪ್, ಮತ್ತು ಎಸ್ಎಮ್ಎಸ್ ಗಳನ್ನು ಬಳಸುವ ಮೂಲಕ “ವಿವೇಕ್ ಬ್ಯಾಂಡ್”#VivekBand ಅಭಿಯಾನದ ಪ್ರಚಾರ ನಡೆಸಲಾಗುತ್ತಿದೆ. ಇದಲ್ಲದೇ ಈ ವೇದಿಕೆಗಳು ವಿವೇಕ್ ಬ್ಯಾಂಡ್ ಧರಿಸುವವರಿಗೆ ಸ್ಪೂರ್ತಿದಾಯಕ ಅನುಭವಗಳನ್ನು ಹಂಚಿಕೊಳ್ಳಲೂ ಲಭ್ಯವಿರುತ್ತದೆ.
ಈ ವರ್ಷ ವಿವೇಕ್ ಬ್ಯಾಂಡ್ ಅಭಿಯಾನವು
- ಖಾದಿ ಧರಿಸಿ.
- ಗಿಡವೊಂದನ್ನು ಪೋಷಿಸಿ.
- ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಿ
ಕುರಿತು ಜಾಗೃತಿಯನ್ನು ಮೂಡಿಸಿ, ಯುವಜನರು ಸಾಮಾಜಿಕವಾಗಿ ಉಪಯೋಗವಾಗುವ ಸೇವಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದೆ.
ಅನೇಕ ಸಂಘ ಸಂಸ್ಥೆಗಳು, ವಿದ್ಯಾ ಸಂಸ್ಥೆಗಳು, ಸಾಂಸ್ಕೃತಿಕ ಸಂಘಗಳು,ಸಮಾಜದ ಅನೇಕ ಕ್ಷೇತ್ರಗಳಲ್ಲಿ ಹೆಸರಾಂತ ಗಣ್ಯರು ಈ ಅಭಿಯಾನಕ್ಕೆ ದನಿಗೂಡಿಸಿದ್ದಾರೆ .
ಸ್ಮೃತಿ ಇರಾನಿ, ಕೇಂದ್ರ ಸಚಿವರು, ಭಾರತ ಸರಕಾರ
ಡಾ|| ಡಿ.ವೀರೇಂದ್ರ ಹೆಗ್ಗಡೆ, ಧರ್ಮಾಧಿಕಾರಿಗಳು ಧರ್ಮಸ್ಥಳ ದೇವಸ್ಥಾನ
ಪೂಜ್ಯ ಶ್ರೀ ನಿರ್ಮಲನಂದನಾಥ ಸ್ವಾಮೀಜಿ, ಆದಿಚುಂಚನಗಿರಿ ಮಠ
ಶ್ರೀ ಶ್ರೀ ರವಿಶಂಕರ್ ಗುರೂಜಿ, ಆರ್ಟ್ ಆಫ್ ಲಿವಿಂಗ್
ಲಕ್ಷ್ಮಿ ಗೋಪಾಲಸ್ವಾಮಿ, ನಟಿ
ಮೇಜರ್ ಭಾವನಾ ಚಿರಂಜಯ್
ಅನಿರುದ್ಧ್, ನಟ
ಡಾ ಬಿ ಎನ್ ಗಂಗಾಧರ್, ನಿಮ್ಹಾನ್ಸ್ ನಿರ್ದೇಶಕರು
ಅಶ್ವಿನ್ ಅಂಗಡಿ
ಶರತ್ ಗಾಯಕ್ವಾಡ್
ಡಾ ರಾಜಶೇಖರ್, ಸ್ಥಾಪಕರು ಶೇಖರ್ ಆಸ್ಪತ್ರೆಗಳು
ಡಾ|| ಅಣ್ಣಾದೊರೈ, ಇಸ್ರೋ ವಿಜ್ಞಾನಿಗಳು ಮತ್ತು ಮಂಗಳಯಾನ ಕಾರ್ಯಕ್ರಮದ ಮುಖ್ಯಸ್ಥರು
ನ್ಯಾ.ಮೂ. (ನಿವೃತ್ತ ) ಶಿವರಾಜ ಪಾಟೀಲ್, ಹೆಸರಾಂತ ಕಾನೂನು ತಜ್ಞರು
ಪದ್ಮಭೂಷಣ ಡಾ|| ದೇವಿ ಶೆಟ್ಟಿ, ಹೃದಯ ತಜ್ಞರು ಮತ್ತು ಮುಖ್ಯಸ್ಥರು ನಾರಾಯಣ ಹೃದಯಾಲಯ ಸಂಸ್ಥೆ
ಶ್ರೀನಗರ ಕಿಟ್ಟಿ , ಕನ್ನಡ ಸಿನೆಮಾ ನಟರು
ಬಿ.ಸಿ. ಪಾಟೀಲ್, ಕನ್ನಡ ಸಿನೆಮಾ ನಟರು
ಮಮತಾ ಪೂಜಾರಿ, ಭಾರತೀಯ ಮಹಿಳಾ ಕಬ್ಬಡ್ಡಿ ತಂಡದ ನಾಯಕರು
ಪೂಜ್ಯ ಶ್ರೀ ಪ್ರಕಾಶಾನಂದ ಸ್ವಾಮೀಜಿ, ರಾಮಕೃಷ್ಣಾಶ್ರಮ
ಡಾ|| ಶರಣ್ ಪಾಟೀಲ್, ಮೂಳೆ ತಜ್ಞರು ಮತ್ತು ಮುಖ್ಯಸ್ಥರು ಸ್ಪರ್ಷ ಆಸ್ಪತ್ರೆಗಳ ಸಮೂಹ
ಚಕ್ರವರ್ತಿ ಸೂಲಿಬೆಲೆ, ಸಾಮಾಜಿಕ ಕಾರ್ಯಕರ್ತರು, ಅಂಕಣಕಾರ-ಭಾಷಣಕಾರರು
ಮಿಥುನ್ ಅಭಿಮನ್ಯು, ಕ್ರಿಕೆಟ್ ಆಟಗಾರರು
ಗುರುಕಿರಣ್, ಸಂಗೀತ ನಿದರ್ೇಶಕರು
ಡಾ|| ಸಿ.ಎಸ್. ರಾವ್, ಅಧ್ಯಕ್ಷರು ರಿಲಾಯನ್ಸ ಕಮ್ಮ್ಯುನಿಕೇಶನ್
ಅಜರ್ುನ್ ದೇವಯ್ಯ, ಏಶಿಯನ್ ಗೇಮ್ಸ ಸ್ವರ್ಣ ಪದಕ ವಿಜೇತರು
ರೂಪಿಕಾ, ಕನ್ನಡ ಅಭಿನೇತ್ರಿ
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : 9980000993, 8861201060, 9591810302
www.samarthabharata.org , www.vivekband.com reachout.sb@gmail.com