27 ಮಾರ್ಚ್ 2018, ಮಂಗಳೂರು: ಶಿಕ್ಷಣವು ಇಂದು ವ್ಯಾಪಾರೀಕರಣಗೊಂಡಿದೆ. ಇದರ ಪರಿಣಾಮವಾಗಿಯೇ ಮನುಷ್ಯತ್ವ ಎಂಬುದು ನಶಿಸಿ ಹೋಗುತ್ತಿದೆ ಎಂದು ಆರ್ಎಸ್ಎಸ್ ಸರಸಂಘಚಾಲಕರಾದ ಡಾ. ಮೋಹನ್ ಭಾಗವತ್ ಹೇಳಿದರು. ಅವರು ಮಂಗಳವಾರ ವಿಟ್ಲದ ಮೈತ್ರೇಯಿ ಗುರುಕುಲದ ಅರ್ಧ ಮಂಡಲೋತ್ಸವದ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡುತ್ತಿದ್ದರು. ಹಿಂದೂ ಸೇವಾ ಪ್ರತಿಷ್ಠಾನದ ಅಜೇಯ ಟ್ರಸ್ಟ್ ಮೂರ್ಕಾಜೆ, ವಿಟ್ಲದಲ್ಲಿ ನಡೆಸುತ್ತಿರುವ ಮೈತ್ರೇಯಿಗುರುಕುಲ 24 ವರ್ಷಗಳ ಪೂರೈಸುತ್ತಿರುವ ಸಂದರ್ಭದಲ್ಲಿ ಅರ್ಧಮಂಡಲೋತ್ಸವ ಕಾರ್ಯಕ್ರಮ ಆಯೋಜಿಸಲಾಗಿತ್ತು.
Read more here on Maithreyee Gurukula
’ವಿಶ್ವವಿದ್ಯಾನಿಲಯಗಳಲ್ಲಿ ಸ್ಮಗ್ಲಿಂಗ್ಗಳನ್ನು ಕಲಿಸೋದಿಲ್ಲ, ಆದರೂ ಸ್ಮಗ್ಲಿಂಗ್ಗಳು ಹೆಚ್ಚಾಗಿವೆ. ಶ್ರೇಷ್ಠ ವ್ಯಕ್ತಿಗಳನ್ನು ಸೃಷ್ಟಿಸುವ ವಿಶ್ವವಿದ್ಯಾಲಯಗಳ ಸಂಖ್ಯೆ ಕಡಿಮೆಯಾಗಿವೆ. ಶಿಕ್ಷಣದ ವ್ಯಾಪಾರೀಕಣದಿಂದ ಮಾನವೀಯತೆ ನಾಶವಾಗಿದೆ. ಅಲ್ಲದೇ, ಮನುಷ್ಯತ್ವ ಕಲಿಸುವುದು ಶಿಕ್ಷಣವಾಗಬೇಕೇ ಹೊರತು ಜೀವನ ನಡೆಸುವುದಕಷ್ಟೇ ಶಿಕ್ಷಣ ಇರಬಾರದು. ಶ್ರೇಷ್ಠ ವ್ಯಕ್ತಿಗಳನ್ನು ಸೃಷ್ಟಿಸುವುದೇ ವಿಶ್ವವಿದ್ಯಾಲಯಗಳ ಗುರಿಯಾಗಬೇಕು’ ಎಂದರು.
ಬ್ರಿಟಿಷರು ತಮ್ಮ ಲಾಭಕ್ಕಾಗಿ ಅವರಿಗೆ ಬೇಕಾದ ಶಿಕ್ಷಣವನ್ನು ಇಲ್ಲಿ ಜಾರಿಗೊಳಿಸಿದರು, ಅದರಿಂದ ಲಾಭವನ್ನೂ ಪಡೆದರೂ. ಆದರೂ ಇಂದಿಗೂ ಅದೇ ಪದ್ಧತಿ ಜಾರಿಯಲ್ಲಿದೆ ಎಂದ ಅವರು, ಪ್ರಸ್ತುತ ಶಿಕ್ಷಣ ಪದ್ಧತಿಯನ್ನು ಪುನಾರಚಿಸುವ ಅಗತ್ಯವಿದೆ ಎಂದು ಹೇಳಿದರು. ದೇಶದಲ್ಲಿ ವಿದೇಶಿ ಶಿಕ್ಷಣ ಪದ್ಧತಿ ಇದ್ದಾಗಲೂ ಸಹ ಸ್ವಾಮಿ ವಿವೇಕಾನಂದ, ಮಹಾತ್ಮ ಗಾಂಧೀಜಿಯಂತಹ ಶ್ರೇಷ್ಠರು ಸೃಷ್ಟಿಯಾಗಲು ಭಾರತೀಯ ಸಂಸ್ಕಾರವೇ ಕಾರಣ ಎಂದು ತಮ್ಮ ಭಾಷಣದಲ್ಲಿ ನುಡಿದರು.
ಆರ್ಟ್ ಆಫ್ ಲಿವಿಂಗ್ನ ಸಂಸ್ಥಾಪಕ ಶ್ರೀ ಶ್ರೀ ರವಿಶಂಕರ್ ಗುರೂಜಿ, ಆದಿಚುಂಚನಗಿರಿಯ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಮತ್ತಿತರರು ಉಪಸ್ಥಿತರಿದ್ದರು.
ಕೃಪೆ : news13.in