ಸಕ್ಷಮ -ಸೂರದಾಸ ಜಯಂತಿ ಹಾಗೂ ವಿಶ್ವ ಥಲಸ್ಸೇಮಿಯಾ ದಿನಾಚರಣೆ
16 ಮೇ 2019, ಬೆಂಗಳೂರು: ಸಕ್ಷಮ ಬೆಂಗಳೂರ ಘಟಕವು ಸಂತ ಸೂರದಾಸ ಜಯಂತಿ ಹಾಗೂ ಥಲಸ್ಸೇಮಿಯಾ ದಿವಸವನ್ನು ಶಿಶು ನಿವಾಸದಲ್ಲಿ ಆಚರಿಿಸಿತು.
ಡಾ ಸುಧೀರ್ ಪೈ ರವರು ಸಕ್ಷಮದ ಕಿರುಪರಿಚಯವನ್ನು ಹಾಗೆಯೇ ಥಲಸ್ಸೇಮಿಯಾದ ಬಗ್ಗೆ ಮಾಹಿತಿ, ರಕ್ತದಾನ ಮಾಡಲು ಪ್ರೋತ್ಸಾಹ ಮತ್ತು ಶಿಶು ನಿವಾಸದ ಮಕ್ಕಳ ಶಿಸ್ತನ್ನು ಪ್ರಶಂಸಿಸುತ್ತಾ N. S. S ಜೊತೆ ಸೇರಿ ರಕ್ತದಾನದ ಬಗ್ಗೆ ಜಾಗೃತಿ ಮೂಡಿಸುವುದರ ಬಗ್ಗೆ ತಿಳಿಸಿದರು. ಕೇಂದ್ರ ಸರ್ಕಾರ ಗುರುತಿಸಿರುವ 21 ದಿವ್ಯಾಂಗಗಳನ್ನು ಸೇರಿಸಿ ಕೆಲಸ ಮಾಡುತ್ತಿರುವ ಜಗತ್ತಿನ ಏಕ ಮಾತ್ರ ಸಂಘಟನೆ ಸಕ್ಷಮ ಎಂದು ತಿಳಿಸಿದರು.
ಪ್ರಣಾದದ ಶ್ರೀ ಕಿಶೋರ್ ರವರು ಥಲಸ್ಸೇಮಿಯಾ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದ ಮುಖ್ಯ ಅತಿಥಿ ಶ್ರೀ ಕಾಶೀನಾಥ್ ಲಕ್ಕರಾಜು ರವರು ಸಂತ ಸೂರದಾಸರ ಪರಿಚಯ ಮತ್ತು ಇನ್ನಿತರ ಮಹಾನೀಯರ ಬಗ್ಗೆ ಮಾಹಿತಿ ನೀಡಿದರು,
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ಡಾll ಕಿರಣ್ ರವರು ಸಕ್ಷಮದ ಕಾರ್ಯ ಮತ್ತು ನೇತ್ರದಾನದ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮಕ್ಕೆ ಆಗಮಿಸಿದ್ದ ಗಣ್ಯರಿಂದ ಪ್ರತಿಭಾನ್ವಿತ ದಿವ್ಯಾಂಗಿ ಕುಮಾರಿ ಕವಿತಾ ರವರಿಗೆ ಸನ್ಮಾನ ಮಾಡಲಾಯಿತು.
ಹರಿಕೃಷ್ಣ ರೈ ರವರು ಕಾರ್ಯಕ್ರಮಕ್ಕೆ ಆಗಮಿಸಿದಂತಹ ಸಭಿಕರಿಗೆ ಧನ್ಯವಾದಗಳನ್ನು ಸಮರ್ಪಿಸಿದರು.
ಶಿಶು ನಿವಾಸದ ಮಕ್ಕಳ ಭಜನೆ ಮತ್ತು ಕವಿತಾ ರವರ ಸಂಗೀತದ ಮೂಲಕ, ಲಘು ಉಪಾಹಾರದೊಂದಿಗೆ ಕಾರ್ಯಕ್ರಮಕ್ಕೆ ಪೂರ್ಣ ವಿರಾಮವನ್ನು ಇಡಲಾಯಿತು.
ಕಾರ್ಯಕ್ರಮದ ನಿರ್ವಹಣೆಯನ್ನು ಬೆಂಗಳೂರು ಘಟಕದ ಕಾರ್ಯಕರ್ತರಾದ ಶ್ರೀ ರಮೇಶ್ ರವರು ವಹಿಸಿದ್ದರು. ಶಿಶು ನಿವಾಸದ ಮಕ್ಕಳಾದಂತಹ ಪವಿತ್ರ ಮತ್ತು ಸಂಗಡಿಗರ ಪ್ರಾರ್ಥನೆಯ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಸಕ್ಷಮ-ಬೆಂಗಳೂರು ಘಟಕದ ಕಾರ್ಯದರ್ಶಿಗಳಾದ ಶ್ರೀ ರವಿಕುಮಾರ್ ಸ್ವಾಗತಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾll ಕಿರಣ್ ಎಸ್ ಮೂರ್ತಿ, ಅಧ್ಯಕ್ಷರು, ಸಕ್ಷಮ-ಬೆಂಗಳೂರು ಘಟಕ, ಮುಖ್ಯ ಅತಿಥಿಗಳಾಗಿ ಶ್ರೀ ಕಾಶೀನಾಥ್ ಲಕ್ಕರಾಜು, ಸಕ್ಷಮ-ರಾಷ್ಟ್ರೀಯ ಉಪಾಧ್ಯಕ್ಷರು, ಮತ್ತು ಡಾll ಸುಧೀರ್ ಪೈ, ಅಧ್ಯಕ್ಷರು, ಸಕ್ಷಮ-ಕರ್ನಾಟಕ ಪ್ರಾಂತ ಅಧ್ಯಕ್ಷರು ಇವರು ವಹಿಸಿದ್ದರು.
ಭಾರತಾಂಬೆ ಹಾಗೂ ಸೂರದಾಸರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ ಕಾರ್ಯಕ್ರಮಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಿದರು.