17 ಆಗಸ್ಟ್ 2019, ಮಂಗಳೂರು: ಭಾರತೀಯ ಗುಪ್ತಚರ ಇಲಾಖೆಯ ನಿವೃತ್ತ ಅಧಿಕಾರಿ ಆರ್.ಎನ್ ಕುಲಕರ್ಣಿ ಅವರು ಬರೆದಿರುವ ‘ಫೆಸೆಟ್ಸ್ ಆಫ್ ಟೆರರಿಸಂ ಇನ್ ಇಂಡಿಯಾ’ ಪುಸ್ತಕವನ್ನು ನಿವೃತ್ತ ಐಪಿಎಸ್ ಎಂ.ಎನ್ ಕೃಷ್ಣಮೂರ್ತಿಯವರು ಶನಿವಾರ ಬಿಡುಗಡೆಗೊಳಿಸಿದರು.
ಮಂಗಳೂರಿನ ಎಸ್ ಡಿಎಂ ಮ್ಯಾನೇಜ್ಮೆಂಟ್ ಕಾಲೇಜಿನಲ್ಲಿ ಪುಸ್ತಕ ಬಿಡುಗಡೆ ಸಮಾರಂಭವನ್ನು ಏರ್ಪಡಿಸಲಾಗಿತ್ತು. ಮಣಿಪಾಲ್ ಇನ್ಸ್ಟಿಟ್ಯೂಟ್ ಆಫ್ ಹೈಯರ್ ಎಜುಕೇಶನ್ ಅಸೋಸಿಯೇಟ್ ಪ್ರೊಫೆಸರ್ ಡಾ.ನಂದನ್ ಪ್ರಭು ಅವರು ಪುಸ್ತಕದ ಬಗ್ಗೆ ವಿಸ್ತೃತ ಮಾಹಿತಿಯನ್ನು ನೀಡಿದರು.
ಪುಸ್ತಕ ಬಿಡುಗಡೆ ಮಾಡಿದ ನಂತರ ನಂದನ್ ಪ್ರಭು ಅವರು ಮಾತನಾಡಿ, “ಲೇಖಕರು ಈ ಪುಸ್ತಕದಲ್ಲಿ ಭಯೋತ್ಪಾದನೆಯ ಆಯಾಮಗಳನ್ನು ಮನಸ್ಸಿಗೆ ತಟ್ಟುವ ರೀತಿಯಲ್ಲಿ ವಿವರಿಸಿದ್ದಾರೆ. ಇಸ್ಲಾಮಿಕ್ ಭಯೋತ್ಪಾದನೆ, ಈಶಾನ್ಯದಲ್ಲಿನ ಭಯೋತ್ಪಾದನೆ, ಮಾದಕದ್ರವ್ಯ ಭಯೋತ್ಪಾದನೆ ಮತ್ತು ಎಡಪಂಥೀಯ ಭಯೋತ್ಪಾದನೆ ಎಂಬ ನಾಲ್ಕು ವಿಧದ ಭಯೋತ್ಪಾದನೆ ಬಗ್ಗೆ ವಿವರಿಸಿದ್ದಾರೆ.
ರಾಷ್ಟ್ರೀಯವಾದವನ್ನು ಪಾಶ್ಚಿಮಾತ್ಯ ಪಂಡಿತರು ತಿರಸ್ಕರಿಸುತ್ತಾರೆ. ಅದನ್ನೇ ಭಾರತದ ಎಡ ಪಂಡಿತರು ಎರವಲು ಪಡೆದು, ಭಾರತದಲ್ಲೂ ಎಕ ಸಂಸ್ಕೃತಿ ಇಲ್ಲ ಎಂದು ವಾದಿಸುತ್ತಾರೆ. ಎಂಬುದನ್ನು ಪುಸ್ತಕದಲ್ಲಿ ವಿವರಿಸಲಾಗಿದೆ. ಭವಿಷ್ಯದಲ್ಲಿ ಭಯೋತ್ಪಾದನೆಯ ವಿಷಯವನ್ನು ಅಧ್ಯಯ ಮಾಡುವ ಬಯಸುವವರಿಗೆ ಈ ಪುಸ್ತಕ ಉತ್ತಮ ಉಲ್ಲೇಖ ಆಗಬಲ್ಲದು ಎಂದಿದ್ದಾರೆ.
ಕೃಷ್ಣಮೂರ್ತಿ ಅವರು ಮಾತನಾಡಿ, “370ನೇ ವಿಧಿ, 35ಎ ಅನ್ನು ತೆಗೆದು ಹಾಕಬೇಕೆಂಬ ಪುಸ್ತಕದಲ್ಲಿನ ನನ್ನ ಆಶಯ ಈಗ ನಿಜವಾಗಿದೆ. ವಿಶ್ವಸಂಸ್ಥೆಯಲ್ಲಿ ಪಾಕ್ ಮತ್ತು ಚೀನಾ ಒಬ್ಬಂಟಿಯಾಗಿದೆ. ಬೇರೆ ರಾಷ್ಟ್ರಗಳು ಭಾರತಕ್ಕೆ ಬೆಂಬಲ ನೀಡಿವೆ” ಎಂದರು.
ಜಾತ್ಯಾತೀತತೆ ವೋಟ್ ಬ್ಯಾಂಕಿಗಾಗಿ ಸೃಷ್ಟಿಸಿದ ಶಬ್ದ. ಇಂದಿನ ಯುವಕರಿಗೆ ರಾಷ್ಟ್ರೀಯತೆಯ, ಭಾರತೀಯತೆ ಈಗ ಮನಸ್ಸಿಗೆ ಬಂದಿದೆ. ಯುವಕರು ತಮಿಳುನಾಡು, ಕೇರಳ ಎಂದು ನೋಡುವುದಿಲ್ಲ ಭಾರತವನ್ನು ಮಾತ್ರ ನೋಡುತ್ತಾರೆ ಎಂದರು.
ಆರ್.ಎನ್ ಕುಲಕರ್ಣಿ ಅವರು ಮಾತನಾಡಿ, “ಮನುಷ್ಯ ಸಮಸ್ಯೆ ಯಾದರೆ ಮನುಷ್ಯನೇ ಪರಿಹಾರ. ಈ ದೇಶದಲ್ಲಿ ಮುಸ್ಲಿಮರು ಸಮಸ್ಯೆಯಾದರೆ, ಪರಿಹಾರ ಕೂಡ ಅವರೇ. ಶಾಂತಿಯುತ ಸಹಬಾಳ್ವೆ ಸಮಸ್ಯೆಗಳಿಗೆ ಪರಿಹಾರವಾಗಬಲ್ಲದು.
ಭಾರತ ಎಂಬ ಶಬ್ದ ಭಗವದ್ಗೀತೆಯಿಂದ ಬಂದುದು. ಭಾ ಎಂದರೆ ಬೆಳಕು, ರತ ಎಂದರೆ ಪಸರಿಸುವಿಕೆ. ಭಾರತ ಎಂದರೆ ಬೆಳಕು ಅಂದರೆ ಜ್ಞಾನವನ್ನು ಪಸರಿಸುವುದು ಎಂದರ್ಥ. ಹೀಗಾಗಿ ಭಾರತೀಯತೆಯ ಬಗ್ಗೆ ನಾವು ಗೌರವ ಪಡಬೇಕು ಎಂದರು.