ಚೀನಾದ ಮಹತ್ವಾಕಾಂಕ್ಷೆ ಹಾಗೂ ಭಾರತವನ್ನು ವ್ಯೂಹಾತ್ಮಕವಾಗಿ ಕಟ್ಟಿ ಹಾಕಲು ಉದ್ದೇಶದಿಂದ ಚಾಲನೆಗೊಂಡ ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ (CPEC) ನಿಂದ ಚೀನಾ ಹಿಂದೆ ಸರಿಯುತ್ತಿದೆ ಎನ್ನಲಾಗಿದೆ.
ಇದಕ್ಕೆ ಮುಖ್ಯ ಕಾರಣ ಸಿಪಿಇಸಿ ಯೋಜನೆಯಲ್ಲಿ ಪಾಕಿಸ್ತಾನ ಭಾರೀ ಭ್ರಷ್ಟಾಚಾರ ನಡೆಸುತ್ತಿದೆ. ಚೀನಾ ಹಣವು ಕಾಮಗಾರಿ ಪೂರ್ಣಗೊಳಿಸಲು ವ್ಯಯಿಸದೇ ಪಾಕ್ ಸೇನೆಯ ಜೇಬು ಸೇರುತ್ತಿದೆ ಎಂಬುದು ಚೀನಾದ ಆರೋಪ. ಮಾತ್ರವಲ್ಲದೇ ಚೀನಿ ಕಾರ್ಮಿಕರಿಗೆ ಭದ್ರತೆ ಒದಗಿಸಲು ಪಾಕಿಸ್ತಾನ ವಿಫಲವಾಗಿದೆ ಎನ್ನಲಾಗುತ್ತಿದೆ. ಯೋಜನೆಯ ಮೇಲೆ ನಿರಂತರ ಭಯೋತ್ಪಾದಕ ದಾಳಿಗಳು ನಡೆಯುತ್ತಿದ್ದು, ಹಲವು ಚೀನಿ ಎಂಜಿನಿಯರ್‌ಗಳು ಅಸುನೀಗಿದ್ದಾರೆ.
ಈ ಯೋಜನೆ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ನಿರ್ಮಾಣವಾಗುತ್ತಿರುವುದರಿಂದ ಭಾರತ ಯೋಜನೆಯ ಕುರಿತು ಅನುಮಾನ-ಆಕ್ಷೇಪ ವ್ಯಕ್ತಪಡಿಸುತ್ತಿರುವುದು ಗುಟ್ಟಾಗಿ ಉಳಿದಿಲ್ಲ.
ಈ ಸಿಪಿಇಸಿ ಯೋಜನೆಗೆ ಆರಂಭಿಕ ಹಂತದಲ್ಲಿ ಒಟ್ಟು 60 ಬಿಲಿಯನ್ ಅಮೆರಿಕನ್ ಡಾಲರ್ ಆರ್ಥಿಕ ಸಹಾಯ ಒದಗಿಸುವುದಾಗಿ ಚೀನಾ ವಾಗ್ದಾನ ಮಾಡಿತ್ತು. ಅದರ ಭಾಗವಾಗಿ ಚೀನಾ ಡೆವಲಪ್‌ಮೆಂಟ್ ಬ್ಯಾಂಕ್ ಮತ್ತು ಚೀನಾದ ರಫ್ತು-ಆಮದು ಬ್ಯಾಂಕ್ ಪಾಕಿಸ್ತಾನಕ್ಕೆ 2016 ರಲ್ಲಿ 75 ಬಿಲಿಯನ್ ಅಮೆರಿಕನ್ ಡಾಲರ್ ಸಾಲ ನೀಡಿತ್ತು. ಆದರೆ ಕಳೆದ ವರ್ಷ ಈ ಸಾಲದ ಮೊತ್ತವನ್ನು4 ಬಿಲಿಯನ್ ಡಾಲರ್‌ಗೆ ಇಳಿಸಿದೆ.
ಈ ಅಂಕಿ ಅಂಶಗಳಿಂದಾಗಿ ಪಾಕ್ ನಲ್ಲಿ ಸಿಪಿಇಸಿ ನಿರ್ಮಿಸಲು ಉತ್ಸುಕವಾಗಿಲ್ಲ ಎನ್ನುವುದು ಸ್ಷಷ್ಟವಾಗುತ್ತಿದೆ. ಪಾಕ್ ಗೆ ಹೊರತಾದ ಬೇರೆ ದೇಶಗಳಲ್ಲಿ ಈ ಯೋಜನೆಗೆ ವೇಗ ನೀಡಲು ಚೀನಾ ನಿರ್ಧರಿಸಿದೆ ಎನ್ನಲಾಗಿದೆ.