ಭಾರತದ ವಿದ್ಯುತ್ ಗ್ರಿಡ್ಗ ಳನ್ನು ಹಾಳುಗೆಡವಲು ಚೀನಾ ಸಂಚು ರೂಪಿಸಿತ್ತು ಎಂದು ಅಮೆರಿಕದ ಅಧ್ಯಯನ ವರದಿಯೊಂದು ತಿಳಿಸಿದೆ.
ಗಲ್ವಾನ್ ವ್ಯಾಲಿ ಗಡಿ ಬಿಕ್ಕಟ್ಟು ತೀವ್ರಗೊಂಡಿದ್ದ ಸಂದರ್ಭದಲ್ಲಿ ಚೀನಾ ಸರ್ಕಾರ ಪ್ರಾಯೋಜಿತ ರೆಡ್ಇಕೊ ಎಂಬ ಹ್ಯಾಕರ್ಗಳ ಗುಂಪು, ಭಾರತದ ಪ್ರಮುಖ ವಿದ್ಯುತ್ ಗ್ರಿಡ್ನ ಕಂಪ್ಯೂಟರ್ ವ್ಯವಸ್ಥೆಗೆ ಕುತಂತ್ರಾಂಶಗಳನ್ನು ನುಗ್ಗಿಸಿತ್ತು. ಇದನ್ನು ಕಂಪ್ಯೂಟರ್ ಜಾಲದ ಚಟುವಟಿಕೆಗಳ ಸ್ವಯಂಚಾಲಿತ ವಿಶ್ಲೇಷಣೆ ಮತ್ತು ಪ ಅಮೆರಿಕದ ರೆಕಾರ್ಡೆಡ್ ಫ್ಯೂಚರ್ ಎಂಬ ಕಂಪೆನಿ ತನ್ನ ಅಧ್ಯಯನ ವರದಿಯಲ್ಲಿ ತಿಳಿಸಿದೆ.
ಈ ಆರೋಪವನ್ನು ಚೀನಾ ಅಲ್ಲಗಳೆದಿದೆ. ಯಾವುದೇ ಆಧಾರ ಇಲ್ಲದೆ ಊಹೆ ಮಾಡಿ ಒಂದು ದೇಶದ ಮೇಲೆ ಆರೋಪ ಹೊರಿಸಬಾರದು. ಇಂತಹ ವರ್ತನೆಯನ್ನು ಚೀನಾ ಖಂಡಿಸುತ್ತದೆ’ ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ವಾಂಗ್ ವೆನ್ಬಿನ್ ಹೇಳಿದ್ದಾರೆ.
ಕಳೆದ 2020ರ ಅಕ್ಟೋಬರ್ 12ರಂದು ಮುಂಬೈಯಲ್ಲಿ ಗ್ರಿಡ್ ವೈಫಲ್ಯ ಸಂಭವಿಸಿ ಹಲವು ಗಂಟೆಗಳ ಕಾಲ ವಿದ್ಯುತ್ ಇರಲಿಲ್ಲ. ಇದರಿಂದಾಗಿ ರೈಲು ಸಂಚಾರ ಸ್ಥಗಿತ, ಮನೆಯಿಂದಲೇ ಕೆಲಸ ಮಾಡುವ ಉದ್ಯೋಗಿಗಳಿಗೆ ತೊಂದರೆ ಸೇರಿದಮಥೆ ಆರ್ಥಿಕ ಚಟು ವಟಿಕೆಗಳಿಗೆ ಬಾರೀ ಹೊಡೆತ ಬಿದ್ದಿತ್ತು. ಈ ಗ್ರಿಡ್ ಗಳನ್ನು ಸರಿಪಡಿಸಲು ತಂತ್ರಜ್ಞರಿಗೆ 2 ಗಂಟೆಗಳ ಸಮಯ ಬೇಕಾಗಿತ್ತು.
‘ಸೈಬರ್ ದಾಳಿ ಯತ್ನ ನಡೆದಿತ್ತು!
ವಿದ್ಯುತ್ ಗ್ರಿಡ್ ಮೇಲೆ ಸೈಬರ್ ದಾಳಿಯ ಯತ್ನ ನಡೆದಿರುವುದು ನಿಜ. ಶ್ಯಾಡೊ ಪ್ಯಾಡ್ ಎಂಬ ಕುತಂತ್ರಾಂಶದಿಂದ ಕಂಪ್ಯೂಟರ್ ಜಾಲಕ್ಕೆ ಬೆದರಿಕೆ ಇದೆಯೆಂಬ ಮಾಹಿತಿ ಯನ್ನು ಸಿಇಆರ್ಟಿ–ಇನ್ನಿಂದ (ಭಾರತದ ಕಂಪ್ಯೂಟರ್ ತುರ್ತು ಸ್ಪಂದನಾ ತಂಡ) 2020ರ ನವೆಂಬರ್ 19ರಂದು ತಿಳಿಸಿತ್ತು. ತತ್ ಕ್ಷಣವೇ ಈ ಬೆದರಿಕೆಯನ್ನು ನಿವಾರಿಸಲು ಬೇಕಾದ ಕ್ರಮವನ್ನು ಕೈಗೊಳ್ಳಲಾಗಿದೆ. ಇದರಿಂದಾಗಿ ಈ ಕುತಂತ್ರಾಂಶ ದಾಳಿಯಿಂದಾಗಿ ಯಾವುದೇ ಸಮಸ್ಯೆ ಆಗಿಲ್ಲ. ಯಾವುದೇ ದತ್ತಾಂಶ ಕಳವಾಗಿಲ್ಲ ಎಂದು ಭಾರತ ಹೇಳಿದೆ.
ಸುದ್ದಿ ಮೂಲ: ಪ್ರಜಾವಾಣಿ