ಸ್ವಾತಂತ್ರ್ಯ ಸಂಗ್ರಾಮ
- ಹಲವಾರು ಜಾತಿ ಸಮುದಾಯಗಳಿಗೆ ಸೇರಿದ, ವಿವಿಧ ಪ್ರದೇಶಗಳಿಗೆ ಸೇರಿದ ಸ್ವಾತಂತ್ರ್ಯ ಹೋರಾಟಗಾರರು ಸ್ವಾತಂತ್ರ್ಯಕ್ಕಾಗಿ ಅನೇಕ ತ್ಯಾಗಗಳನ್ನು ಮಾಡಿದ್ದಾರೆ.
- ಇರುಳು ಕಳೆದು ಹಗಲು ಆಗುವುದರೊಳಗಾಗಿ ನಮಗೆ ಸ್ವಾತಂತ್ರ್ಯ್ರ ಸಿಗಲಿಲ್ಲ. ಶಾಂತಿಯುತ ಧರಣಿಗಳಿಂದ ಹಿಡಿದು ಸಶಸ್ತ್ರ ಹೋರಾಟಗಳವರೆಗೆ ಎಲ್ಲಾ ವಿಧಾನಗಳು ಅಂತಿಮವಾಗಿ ಸ್ವಾತಂತ್ರ್ಯದ ಗುರಿ ಸಾಧಿಸುವಲ್ಲಿ ಪರ್ಯವಸನಗೊಂಡವು.
- ಪ್ರತಿಯೊಬ್ಬ ಭಾರತೀಯನ ಹೃದಯದಲ್ಲಿ ದೇಶ ವಿಭಜನೆಯ ಗಾಯದ ಗುರುತು ಉಳಿದುಹೋಗಿದೆ. ಭಾರತದ ಏಕತೆ ಮತ್ತು ಸಮಗ್ರತೆಗಳನ್ನು ಮರುಸ್ಥಾಪಿಸುವ ಕಾರ್ಯದಲ್ಲಿ ತೊಡಗಿಕೊಳ್ಳಲು ನಮ್ಮ ಇಡೀ ಸಮಾಜ, ಮುಖ್ಯವಾಗಿ ತರುಣ ಜನಾಂಗವು, ಈ ಚರಿತ್ರೆಯನ್ನು ಗಮನಿಸಿ, ಅರ್ಥೈಸಿ ನೆನೆಪಿಟ್ಟುಕೊಳ್ಳಬೇಕಾಗಿದೆ.]
ಸಾಮಾಜಿಕ ಸಾಮರಸ್ಯ
- ಸಮಾನತೆಗೆ ಬದ್ಧವಾದ ಮತ್ತು ತಾರತಮ್ಯರಹಿತ ಸಮಾಜವು ದೇಶದ ಏಕತೆ ಮತ್ತು ಸಮಗ್ರತೆಗೆ ಒಂದು ಪೂರ್ವಭಾವೀ ಅಗತ್ಯವಾಗಿದೆ. ಸಂಘದ ಸ್ವಯಂಸೇವಕರು ಇಂಥಹ ಸಮಾಜದತ್ತ ಕಾರ್ಯತತ್ಪರರಾಗಿದ್ದಾರೆ.
- ಭಾರತದ ಐಕ್ಯತೆ ಮತ್ತು ಸಮಗ್ರತೆಯ ಮೂಲಕ ಮಾನವರೆಲ್ಲರಿಗೂ ಸ್ವಾತಂತ್ರ್ಯವನ್ನು ಒದಗಿಸುವುದೇ ಅನಾದಿಕಾಲದಿಂದಲೂ ಭಾರತೀಯ ಜೀವನದ ಮುಖ್ಯ ಅಂಶವಾಗಿದೆ. ಇಲ್ಲಿಯ ಜನರು ಈ ಗುರಿಗಾಗಿ ಅಕ್ಷರಶಃ ನೆತ್ತರನ್ನು ಬೆವರಾಗಿಸಿದ್ದಾರೆ.
- ಭಾರತದ ಪ್ರಗತಿ ಮತ್ತು ಅದಕ್ಕೆ ದಕ್ಕಬೇಕಾದ ಮಾನ್ಯತೆಗಳು ಪ್ರಪಂಚದ ಕೆಲವು ಪಟ್ಟಭದ್ರ ಹಿತಾಸಕ್ತಿಗಳಿಗೆ ಮಾರಕವಾಗಿವೆ. ಈ ಹಿತಾಸಕ್ತಿಗಳು ಹಲವಾರು ದೇಶಗಳಲ್ಲಿ ಪ್ರಭಾವಿಯಾಗಿವೆ. ಸನಾತನ ಮೌಲ್ಯಗಳು ಭಾರತದಲ್ಲಿ ಪ್ರತಿಷ್ಠಾಪಿತವಾಗುವುದರೊಂದಿಗೆ ಸ್ವಾರ್ಥೀ ಶಕ್ತಿಗಳ ದುರ್ವರ್ತನೆಗಳು ಕೊನೆಗೊಳ್ಳುತ್ತವೆ.
- ಭಾರತವು ಧಾರ್ಮಿಕ ದೃಷ್ಟಿಕೋನದಿಂದ ಸಮುದಾಯಗಳನ್ನು ಪ್ರಭಾವಿಸಲಿದ್ದು ಜಗತ್ತಿನ ಸಮತೋಲನವನ್ನು ಪುನಃ ತರುವ, ಸಹಕಾರ ಪ್ರವೃತ್ತಿಯನ್ನು ಉತ್ತೇಜಿಸುವ ಮತ್ತು ಹರ್ಷದ ವಾತಾವರಣವನ್ನು ನಿರ್ಮಾಣಮಾಡುವ ಸಾಮರ್ಥ್ಯ ಹೊಂದಿದೆ.
- ಪ್ರಪಂಚದಲ್ಲಿ ಭಾರತದ ಬಗ್ಗೆ ಗೊಂದಲ ಸೃಷ್ಟಿಸುವ ಮತ್ತು ಭಾರತೀಯರನ್ನು ಹಾದಿತಪ್ಪಿಸುವ ಪ್ರಯತ್ನಗಳನ್ನು ಅಪಪ್ರಚಾರದ ಮೂಲಕ ಮಾಡಲಾಗುತ್ತಿದೆ. ಬಹಿರಂಗವಾಗಿ ಮತ್ತು ಗೌಪ್ಯವಾಗಿ ಹಲವಾರು ಸಮಾಜವಿರೋಧೀ ಹಿತಾಸಕ್ತಿಗಳು ಒಳ ಒಪ್ಪಂದಗಳೊಂದಿಗೆ ಸಕ್ರಿಯವಾಗಿವೆ.
- ಕಾಲ-ಕಾಲಕ್ಕೆ ಭಾರತ ವಿರೋಧೀ ಹಿತಾಸಕ್ತಿಗಳು ಉದ್ದೇಶ ಬದಲು ಮಾಡಿಕೊಳ್ಳದೇ ಹೊಸ ತಂತ್ರಗಳನ್ನು ಅಳವಡಿಸಿಕೊಳ್ಳುತ್ತಾ ಜನ ಸಮುದಾಯಗಳನ್ನು ರುಪಯೋಗಪಡಿಸಿಕೊಳ್ಳುತ್ತಾ ಪರಿಸ್ಥಿತಿಯನ್ನು ಉದ್ರಿಕ್ತಗೊಳಿಸುತ್ತಿದ್ದಾರೆ. ಈ ರೀತಿಯ ಹಲವು ಪ್ರವೃತ್ತಿಗಳು / ಯೋಜನೆಗಳು ಇತ್ತೀಚೆಗೆ ಬಯಲಾಗಿವೆ.
- ಮೋಸದ ಮತ್ತು ಕುತಂತ್ರದ ಯೋಜನೆಗಳನ್ನು ಅರ್ಥಮಾಡಿಕೊಂಡು ಅವುಗಳಿಗೆ ಸಮಾಜವು ಬಲಿಯಾಗದಂತೆ ನೋಡಿಕೊಳ್ಳಬೇಕಾಗಿದೆ.
ಸ್ವಾತಂತ್ರ್ಯ ಹಾಗೂ ನೈತಿಕತೆ
- ಹೊಸ ತಂತ್ರಜ್ಞಾನಾಧಾರಿತ ಸರ್ಕಾರೀ ನಿಯಂತ್ರಣಕ್ಕೊಳಪಡದ ಬಿಟ್ ಕಾಯಿನ್ ರೂಪದ ಹಣವು ಜಾಗತಿಕ ಆರ್ಥಿಕತೆಯನ್ನು ಅಸ್ಥಿರಗೊಳಿಸುವ ಸಂಭವಗಳು ಕಂಡುಬರುತ್ತಿದೆ. ಸರ್ಕಾರವು ಇದರ ಬಗ್ಗೆ ಕಾನೂನು ರಚಿಸಬೇಕಾಗಿದೆ.
- ಮಾಧ್ಯಮ ಮತ್ತು ಸಿನಿಮಾ ರಂಗದಲ್ಲಿ ಓ.ಟಿ.ಟಿ (ಓವರ್ ದಿ ಏರ್ – ಅಥವಾ ಅಂತರ್ಜಾಲ ಪ್ರಸರಣ ) ವೇದಿಕೆಗಳು ಬಂದಿದ್ದು ವಿವೇಚನಾರಹಿತ ವೀಕ್ಷಣೆ ಸಾಧ್ಯವಾಗಿದೆ. ಸರ್ಕಾರವು ಇದರ ಬಗ್ಗೆ ಕಾನೂನು ರಚಿಸಬೇಕಾಗಿದೆ.
- ಕರೋನಾ ಸಾಂಕ್ರಾಮಿಕ ಜ್ವರದ ಹಿನ್ನೆಲೆಯಲ್ಲಿ ಶಿಕ್ಷಣವು ಅಂತರ್ಜಾಲದ ಮೂಲಕ ನಡೆಸಲಾಗುತ್ತಿದೆ. ಶಾಲಾ ವಿದ್ಯಾರ್ಥಿಗಳು ಮೊಬೈಲ್ ಉಪಕರಣಗಳನ್ನು ಉಪಯೋಗಿಸುತ್ತಿದ್ದು ಈ ವಿಚಾರದಲ್ಲಿ ವ್ಯಾವಹಾರಿಕ ವಿವೇಚನೆ ಬೇಕಾಗಿದೆ. ಸರ್ಕಾರವು ಈ ವಿಚಾರಗಳ ಬಗ್ಗೆ ಕಾನೂನು ಮತ್ತು ಮಾರ್ಗದರ್ಶೀ ಸೂತ್ರಗಳನ್ನು ರಚಿಸಬೇಕಾಗಿದೆ.
- ನಮಗೆ ಯಾವುದೇ ಭಾಷೆಯ ಬಗ್ಗೆಯೂ ದ್ವೇಷವಿಲ್ಲ. ಆದರೆ, ಸಾಧ್ಯವಾದಷ್ಟರ ಮಟ್ಟಿಗೆ ಮಾತೃಭಾಷೆ ಬಳಕೆಯನ್ನು ಪ್ರಯತ್ನಿಸಬಹುದೇ? ಹಸ್ತಾಕ್ಷರವನ್ನು ಮಾತೃಭಾಷೆಯಲ್ಲಿ ಮಾಡುವ ಪ್ರಯತ್ನ ಮಾಡಬಹುದೇ? ಸ್ವ ಭಾಷಾ,ಸ್ವ ಭೂಷ,ಸ್ವ ಭಜನ್,ಸ್ವ ಭೋಜನ, ನಮ್ಮ ಪರಂಪರೆಯನ್ನು ಅರ್ಥ ಮಾಡಿಕೊಳ್ಳುವ ಕೆಲಸ ಮಾಡಬೇಕಿದೆ
ಕುಟುಂಬ ಪ್ರಬೋಧನ್
- ಸರಿ-ತಪ್ಪುಗಳನ್ನೂ, ನೀತಿ-ಅನೀತಿಗಳನ್ನೂ ನಿಖರವಾಗಿ ಗುರುತಿಸುವ ವಾತಾವರಣವನ್ನು ನಮ್ಮ ಮನೆಗಳಲ್ಲಿ ನಿರ್ಮಿಸಬೇಕಾಗಿದೆ. ಸಾಮಾಜಿಕವಾಗಿ ಹಲವಾರು ಧಾರ್ಮಿಕ/ಸಾಮಾಜಿಕ ನೇತಾರರು ಸಮಾಜಕ್ಕೆ ಮಾರ್ಗದರ್ಶನ ಮಾಡುತ್ತಿದ್ದಾರೆ. ಕುಟುಂಬಗಳಲ್ಲಿ ಸಹ ಈ ಚರ್ಚೆಯನ್ನು ಗಮನಿಸಿ ಸರಿ-ತಪ್ಪುಗಳ ಬಗ್ಗೆ ಕುಟುಂಬದ ಸದಸ್ಯರೆಲ್ಲರಲ್ಲಿ ಒಮ್ಮತ ಮೂಡುವ ಅಗತ್ಯ ಇದೆ.
ಕೋರೋನ ವಿರುದ್ಧ ಸಮರ
- ಕರೋನಾದ ಎರಡನೇ ಅಲೆ ಅನಾಹುತಕಾರಿಯಾಗಿತ್ತು. ಆದರೆ, ಸಮಾಜ ಅದನ್ನು ಯಶಸ್ವಿಯಾಗಿ ಎದುರಿಸಿತು. ಈಗ ನಾವು ಬರಬಹುದಾದ ಮೂರನೇ ಅಲೆಯನ್ನು ನಿರ್ವಹಿಸಲು ಸಜ್ಜಾಗುತ್ತಿದ್ದೇವೆ.
- ಸಂಘದ ಸ್ವಯಂಸೇವಕರು ಮತ್ತು ಇತರ ಸ್ವಯಂಸೇವ ಸಂಸ್ಠೆಗಳು ಕರೋನಾ ವಿರುದ್ಧದ ದೇಶದ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದಾರೆ
ಸರ್ಕಾರ ಮತ್ತು ಸಮಾಜದ ಪ್ರಯತ್ನಗಳಿಂದ ಕರೋನಾ ಅಲೆಗಳಿಂದ ಉಂಟಾದ ನಷ್ಟವನ್ನು ತುಂಬಿಕೊಳ್ಳುವ ಹಾದಿಯಲ್ಲಿ ಭಾರತ ಇದೆ.
- ಕೋವಿಡ್ ಸಾಂಕ್ರಾಮಿಕವು ನಮ್ಮ ಸ್ವ ಅಥವಾ ಸ್ವಾವಲಂಬನೆಯನ್ನು ಪುನಃ ಪಡೆಯಲು ಒಂದು ಅವಕಾಶವನ್ನೂ ಒದಗಿಸಿ ಕೊಟ್ಟಿದೆ.
- ಆಯುರ್ವೇದದಂಥ ದೇಶೀಯ ವೈದ್ಯಕೀಯ ಪದ್ದತಿಗಳ ಮಹತ್ವವನ್ನು ಗಮನಿಸಿ, ಆರೋಗ್ಯ ವ್ಯವಸ್ಥೆಯನ್ನು ಪುನರ್ನಿಮಾಣ ಮಾಡುವ ಅಗತ್ಯ ಕೋವಿಡ್ ನಂತರದಲ್ಲಿ ನಮ್ಮ ಮುಂದೆ ಇದೆ.
ಆರೋಗ್ಯ: ಭಾರತೀಯ ದೃಷ್ಟಿಕೋನ
- ಆಹಾರದ ಸಮತೋಲನತೆ, ದೈಹಿಕ ಮತ್ತುಉಸಿರಾಟದ ವ್ಯಾಯಾಮಗಳು, ಧ್ಯಾನ ಮತ್ತು ವಿಶ್ರಾಂತಿ ಗಳು ಭಾರತೀಯ ದೃಷ್ಟಿಕೋನದಲ್ಲಿ ಸ್ವಾಸ್ಥ್ಯಕ್ಕೆ ಮೂಲ ಸೂತ್ರಗಳಾಗಿವೆ.
- ಕೋವಿಡ್ ನಂತರದ ಸಂದರ್ಭದಲ್ಲಿ ಪರಿಸರ ಸ್ನೇಹೀ, ಸಂತುಲಿತ ಆರೋಗ್ಯದ ಪರಿಕಲ್ಪನೆಯನ್ನು ನಾವು ಪ್ರೋತ್ಸಾಹಿಸಬೇಕಾಗಿದೆ.
- ಸಂಘದ ಸ್ವಯಂಸೇವಕರು ಪರಿಸರ ಸಂರಕ್ಷಣೆಯಲ್ಲಿ ತೊಡಗಿಸಿಕೊಂಡಿದ್ದು, ಜಲಸಂರಕ್ಷಣೆ, ಸಸ್ಯಗಳ ಅಭಿವೃದ್ಧಿ ಮತ್ತು ಪ್ಲಾಸ್ಟಿಕ್ ಬಳಕೆಯ ತ್ಯಜಿಸುವಿಕೆಯ ಬಗ್ಗೆ ಜನಾಭಿಪ್ರಾಯ ರೂಪಿಸುತ್ತಿದ್ದಾರೆ.
ಅರ್ಥಶಾಸ್ತ್ರ
- ಧಾರ್ಮಿಕ ನೆಲೆಯಲ್ಲಿ ಭಾರತದ ನೇತೃತ್ವವನ್ನು ಜಗತ್ತು ನಿರೀಕ್ಷಿಸುತ್ತಿದೆ.
- ಧರ್ಮ, ಸಂಪನ್ಮೂಲಗಳು ನ್ಯಾಸವೆಂದು ಪರಿಗಣನೆ, ನಿಯಂತ್ರಿತ ಉಪಯೋಗ, ಎಲ್ಲರಿಗೂ ಉದ್ಯೋಗ, ಎಲ್ಲಾ ಹಿತಾಸಕ್ತಿಗಳ ಪರಿಗಣನೆ – ಇವು ಭಾರತೀಯ ದೃಷ್ಟಿಕೋನದ ಕೇಂದ್ರ ಬಿಂದು.
- ದೇಶೀಯ ಸಾಮಾಜಿಕ-ಆರ್ಥಿಕ ಮಾದರಿಯನ್ನು ನಮ್ಮ ‘ ಸ್ವ’ದ ಅರ್ಥೈಸುವಿಕೆಯ ಮೇಲೆ ಮಾಡಬೇಕಿದೆ.
ಸಂಪನ್ಮೂಲಗಳ ಕೊರತೆಯನ್ನು ಉಂಟುಮಾಡುವ ಜನಸಂಖ್ಯೆಯ ಬೆಳವಣಿಗೆ ಮತ್ತು ಅಸಮತೋಲನವನ್ನು 2015 ರ ಅಖಿಲ ಭಾರತೀಯ ಕಾರ್ಯಕಾರೀ ಮಂಡಳಿಯ ನಿರ್ಣಯವು ಉದ್ದೇಶಿಸಿತ್ತು.
ಜನಸಂಖ್ಯೆ
- ಜನಸಂಖ್ಯಾ ಅಸಮತೋಲನವು ಸರ್ಕಾರಗಳನ್ನು ತುಷ್ಟೀಕರಣ ನೀತಿಯೆಡೆ ತಳ್ಳುತ್ತದೆ ಎಂಬುದನ್ನೂ, ಅದರಿಂದ ಕೆಲವು ಸಮುದಾಯಗಳು ತೊಂದರೆಗೆ ಒಳಗಾಗುತ್ತವೆ ಎಂಬುದನ್ನೂ ಬೆಂಗಾಲದ ಹಿಂದೂಗಳ ಉದಾಹರಣೆಯ ಮೂಲಕ ನೋಡಬಹುದಾಗಿದೆ.
ಭಯೋತ್ಪಾದನೆ
- ಇಸ್ಲಾಂ ಹೆಸರಿನಲ್ಲಿ ಅಸಹಿಷ್ಣುತೆ, ಹಿಂಸಾಚಾರ ಮತ್ತು ಭಯೋತ್ಪಾದನೆ ನಡೆಸುತ್ತಿರುವ ತಾಲೀಬಾನ್ ಗೆ ಪಾಕಿಸ್ತಾನ, ಟರ್ಕಿ ಮತ್ತು ಚೀನಾ ದೇಶಗಳು ಒಂದಾಗಿ ಬೆಂಬಲ ನೀಡುತ್ತಿದ್ದಾರೆ.
- ಜಮ್ಮು ಮತ್ತು ಕಾಶ್ಮೀರದ ನಾಗರೀಕರು ಗುರುತಿಸಿ ಕೊಲ್ಲುತ್ತಿರುವ ಭಯೋತ್ಪಾದಕರ ವಿರುದ್ಧ ಹೋರಾಡುತ್ತಿದ್ದು ಅವರಿಗೆ ಇಡೀ ದೇಶದ ಬೆಂಬಲ ಬೇಕಾಗಿದೆ.
ಹಿಂದೂ ದೇವಾಲಯಗಳು
- ಹಿಂದೂ ದೇವಾಲಯಗಳ ಈಗಿನ ಸ್ಥಿತಿ ಸಮಾಜದ ಚಿಂತೆಗೆ ಕಾರಣವಾಗಿದೆ.
- ಹಲವಾರು ದೇವಾಲಯಗಳು, ಮುಖ್ಯವಾಗಿ ದಕ್ಷಿಣ ಭಾರತದಲ್ಲಿರುವ ದೇವಾಲಯಗಳು ರಾಜ್ಯ ಸರ್ಕಾರಗಳ ನಿಯಂತ್ರಣದಲ್ಲಿ ಇದ್ದು ಅನೇಕ ರೀತಿಯ ಪಕ್ಷಪಾತಗಳಿಗೆ ಒಳಗಾಗಿವೆ.
- ದೇವಾಲಯಗಳ ಸ್ವತ್ತುಗಳು ಕಾನೂನಿಗೆ ವಿರುದ್ಧವಾಗಿ ಅತಿಕ್ರಮಣ ಆಗುತ್ತಿದ್ದು, ಧಾರ್ಮಿಕ ಶ್ರದ್ಧೆ ಇಲ್ಲದ ವ್ಯಕ್ತಿಗಳನ್ನು ದೇವಾಲಯಗಳ ಆಡಳಿತಮಂಡಳಿಗೆ ನೇಮಕಮಾಡಲಾಗುತ್ತಿದೆ. ಇವುಗಳು ನಿಲ್ಲಬೇಕು.
- ಹಿಂದೂ ದೇವಾಲಯಗಳು ಸಾಮಾಜಿಕ-ಸಾಂಸ್ಕೃತಿಕ ಕೇಂದ್ರಗಳಾಗಿ ಪುನಃ ಪರಿಗಣಿಸಲ್ಪಟ್ಟು ಅವುಗಳ ಆಡಳಿತವನ್ನು ಭಕ್ತರಿಗೆ ಒಪ್ಪಿಸಬೇಕು.
ಏಕತೆ
- ಈಗಿನ ಸವಾಲಿನ ಪರಿಸ್ಥಿತಿಯಲ್ಲಿ, ಭಾರತದ ಸನಾತನ ರಾಷ್ಟ್ರದ ಸಾರ್ವಕಾಲೀನ ಸ್ವಭಾವದ ಬಗ್ಗೆ ಅರಿವು ಬೇಕಾಗಿದೆ.
- ನಂಬಿಕೆ, ಪೂಜಾವಿಧಾನ ಮತ್ತಿತರ ವೈವಿಧ್ಯಗಳಿರುವ ಭಾರತೀಯ ಸಮಾಜವು ನಿರಂತರವಾದ ಒಂದೇ ನಾಗರೀಕತೆ, ಸಂಸ್ಕೃತಿ ಮತ್ತು ಚರಿತ್ರೆಯನ್ನು ಹೊಂದಿದೆ.
- ವಿದೇಶೀ ಆಕ್ರಮಣಕಾರರು ಹಲವು ಮತಗಳನ್ನು ಭಾರತಕ್ಕೆ ತಂದರೂ, ಭಾರತೀಯರೆಲ್ಲರ ಪೂರ್ವಜರು ಒಬ್ಬರೇ ಆಗಿದ್ದಾರೆ.
ಸಂಘಟಿತ ಹಿಂದೂ ಸಮಾಜ
- ಸಂಘಟಿತ ಹಿಂದೂ ಸಮಾಜವು ಮಾತ್ರ ಭಾರತ ವಿರೋಧೀ ಶಕ್ತಿಗಳಿಂದ ರಕ್ಷಣೆ ಒದಗಿಸಬಲ್ಲುದು
- ಜಾಗೃತ, ಒಗ್ಗೂಡಿದ, ಬಲಿಷ್ಠ ಮತ್ತು ಚಲನಶೀಲ ಸಮಾಜವೇ ನಮ್ಮ ಎಲ್ಲಾ ಸಮಸ್ಯೆಗಳಿಗೆ ಉತ್ತರವಾಗಿದೆ.
ನಮ್ಮನ್ನು ಒಂದುಮಾಡುವ ಪರಂಪರೆ, ನಮ್ಮ ಹೃದಯದಲ್ಲಿ ಪೂರ್ವಜರ ಸಾಧನೆಯಿಂದ ಉದಯಿಸುವ ಏಕತಾಭಾವ, ಮಾತೃಭೂಮಿಯ ಬಗ್ಗೆ ಶ್ರದ್ಧೆ ಇವುಗಳೇ ಹಿಂದೂ ಅಭಿವ್ಯಕ್ತಿಗೆ ಆಧಾರ.
- ಈ ಏಕತಾಭಾವವನ್ನು ಪ್ರಸರಿಸುವ ಪ್ರಕ್ರಿಯೆಯು ನಮ್ಮ ಎಲ್ಲಾ ಸಮಸ್ಯೆಗಳಿಗೆ ಪರಿಹಾರವಾಗಬಲ್ಲುದು. ಇದೇ ನಮ್ಮೆಲ್ಲರ ಗುರಿ. ಈ ಗುರಿಸಾಧನೆಗಾಗಿಯೇ, ಸಂಘವು ಕಳೆದ 96 ವರ್ಷಗಳಿಂದ ದುಡಿಯುತ್ತಿದೆ.