ಭೋಪಾಲ್ನಲ್ಲಿ ಪ್ರಜ್ಞಾ ಪ್ರವಾಹದ ಅಖಿಲ ಭಾರತ ಚಿಂತನ ಸಭೆಯು ಭಾನುವಾರ (ಏಪ್ರಿಲ್ 17) ದಂದು ನಡೆಯಿತು. ಸರಸಂಘಚಾಲಕರಾದ ಡಾ.ಮೋಹನ್ ಭಾಗವತ್ , ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ, ಪ್ರಜ್ಞಾ ಪ್ರವಾಹದ ಅಖಿಲ ಭಾರತ ಸಂಯೋಜಕರಾದ ಜೆ.ನಂದಕುಮಾರ್ ಮತ್ತು ಅನೇಕ ಬೌದ್ಧಿಕ ಮತ್ತು ವಿಚಾರವಾದಿ ಸಂಘಟನೆಗಳ ಹಿರಿಯ ಪ್ರತಿನಿಧಿಗಳು ಎರಡು ದಿನಗಳ ಚಿಂತನಾ ಸಭೆಯಲ್ಲಿ ಭಾಗವಹಿಸಿದ್ದರು. ಚಿಂತಕರು, ವಿಚಾರವಾದಿಗಳು, ಲೇಖಕರು, ಇತಿಹಾಸಕಾರರು, ವಿವಿಧ ವಿಶ್ವವಿದ್ಯಾನಿಲಯಗಳ ಉಪಕುಲಪತಿಗಳು, ಅರ್ಥಶಾಸ್ತ್ರಜ್ಞರು ಮತ್ತು ದೇಶದಾದ್ಯಂತದ ಬುದ್ಧಿಜೀವಿಗಳು ಮತ್ತು ಶಿಕ್ಷಣ ತಜ್ಞರು ಹಿಂದುತ್ವದ ವಿವಿಧ ಆಯಾಮಗಳು ಮತ್ತು ಅದರ ಪ್ರಸ್ತುತ ಸನ್ನಿವೇಶದ ಬಗ್ಗೆ ಚಿಂತನ ಮಂಥನ ನಡೆಸಿದರು.
ಹಿಂದುತ್ವ ಮತ್ತು ರಾಜಕೀಯದ ಕುರಿತು ಚರ್ಚಿಸುವಾಗ, ಏಕಾತ್ಮ ಮಾನವ ದರ್ಶನದ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನದ ಅಧ್ಯಕ್ಷ ಮತ್ತು ಸಮಗ್ರ ಮಾನವ ದರ್ಶನದ ಹಿರಿಯ ಫೆಲೋ ಕೂಡ ಆಗಿರುವ ಶ್ರೀ ಮಹೇಶ್ ಚಂದ್ರ ಶರ್ಮಾ ಅವರು “ನಮ್ಮ ರಾಷ್ಟ್ರೀಯತೆ ಕೇವಲ ಭೌಗೋಳಿಕವಲ್ಲ, ಆದರೆ ಭೂ – ಸಾಂಸ್ಕೃತಿಕ ರಾಷ್ಟ್ರೀಯವಾದವಾಗಿದೆ. ಜಗತ್ತಿನ ರಾಜಕೀಯದಲ್ಲಿ ರಾಷ್ಟ್ರದ ಸಂರಚನೆಯ ಕುರಿತಾದ ನಿಲುವುಗಳು ಮಾನವೀಕರಣವಾಗಬೇಕಾದರೆ ಅದು ಮೊದಲು ಹಿಂದೂಕರಣವಾಗಬೇಕು. ಸಂವಿಧಾನದ ಬಹಿಷ್ಕಾರ, ಪುರಸ್ಕಾರಗಳಿಗಿಂತ ಹೆಚ್ಚಾಗಿ ಅದರ ಪರಿಷ್ಕರಣೆಯ ಅಗತ್ಯವಿದೆ. ಪ್ರಜಾಪ್ರಭುತ್ವದ ಭಾರತೀಕರಣಗೊಳಿಸುತ್ತಾ ನಾವು ಧರ್ಮರಾಜ್ಯದ ಸ್ಥಾಪನೆಯ ದಿಶೆಯೆಡೆಗೆ ಸಾಗುವ ಪ್ರಯತ್ನ ಮಾಡಬೇಕಿದೆ.ಏಕಾತ್ಮ ಮಾನವ ದರ್ಶನದಲ್ಲಿ ವ್ಯಷ್ಟಿ, ಸಮಷ್ಟಿ, ಸೃಷ್ಟಿ ಹಾಗು ಪರಮೇಷ್ಠಿಗಳು ಒಂದೇ ಮಾನವ ದೇಹದಲ್ಲಿ ಸಮಾಹಿತಗೊಂಡಿವೆ” ಎಂದು ಹೇಳುತ್ತಾರೆ.
ರಾಮ್ ಮಾಧವ್ ಅವರು ಮಾತನಾಡುತ್ತಾ ” ಹಿಂದುತ್ವ ಕೇವಲ ಒಂದು ಜೀವನ ಶೈಲಿಯಲ್ಲ,ಬದಲಾಗಿ ಜೀವನ ದೃಷ್ಟಿಯಾಗಿದೆ.” ಎನ್ನುತ್ತಾ ಮುಂದುವರೆದು ಹೇಗೆ ಹಿಂದುತ್ವ ವಿಶ್ವದ ಮೂಲೆಮೂಲೆಗೂ ತಲುಪಿದೆ,ಈಗ ವರ್ತಮಾನದಲ್ಲಿ ಅದರ ಪರಿಸ್ಥಿತಿ ಏನು ಎಂಬುದು ತಿಳಿದಿದೆ.ಅಲ್ಲದೆ ಇಂದು ವಿವಿಧ ಆಧ್ಯಾತ್ಮಿಕ ಸಂಘಟನೆಗಳು ತಮ್ಮ ಮೂಲಕ ಹಿಂದೂ ಧರ್ಮವನ್ನು ವಿಭಿನ್ನ ದೇಶಗಳಿಗೆ ತಲುಪಿಸುತ್ತಿದ್ದಾರೆ ಅಲ್ಲದೆ ಅದರ ಆಕರ್ಷಣೆ ದಿನದಿನವೂ ಹೆಚ್ಚಾಗುತ್ತಿದೆ. ಅದು ಪರಿಸರದ ಸಮಸ್ಯೆಯಾದರೂ ಸರಿ,ಆರೋಗ್ಯದ ಕ್ಷೇತ್ರವಾದರೂ ಸರಿ, ವರ್ತಮಾನದ ವೈಶ್ವಿಕ ಸಮಸ್ಯೆಗಳಿಗೆ ಸಮಗ್ರವಾದ ಸಮಾಧಾನ ನೀಡಲು ಹಿಂದೂ ಧರ್ಮ ಸಶಕ್ತವಾಗಿದೆ.” ಎಂದರು.
ಕೊನೆಯಲ್ಲಿ ಎಲ್ಲ ಜಿಜ್ಞಾಸೆಗಳಿಗೆ ಸಮಾಧಾನವನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕರಾದ ಮೋಹನ್ಭಾಗವತ್ ಅವರು ನೀಡಿದರು.ಅವರು ಮಾತನಾಡುತ್ತಾ “ಸತ್ಯ ಕರುಣೆ,ಶುಚಿತ್ವ ಮತ್ತು ಪರಿಶ್ರಮ ಎಲ್ಲ ಭಾರತೀಯ ಧರ್ಮದ ಮೂಲಭೂತ ಗುಣವಾಗಿದೆ.ನಾವು ಏಕಾಂತದಲ್ಲಿ ಸಾಧನೆ ಮತ್ತು ಲೋಕಾಂತದಲ್ಲಿ ಸೇವೆ ಮಾಡುತ್ತಿರಬೇಕು.ಧರ್ಮದ ರಕ್ಷಣೆ ಅದರ ಆಚರಣೆಯಲ್ಲಿದೆ.ನಮ್ಮ ಗುಣ ಹಾಗು ಧರ್ಮವೇ ನಮ್ಮ ಸಂಪದವಾಗಿದೆ ಮತ್ತು ಅಸ್ತ್ರ ಶಸ್ತ್ರವಾಗಿದೆ.ಸಂಘ ಯಾರದ್ದೂ ಪ್ರತಿಸ್ಪರ್ಧಿ ಅಲ್ಲ, ಬದಲಾಗಿ ಧರ್ಮ ಮತ್ತು ರಾಷ್ಟ್ರದ ಸಲುವಾಗಿ ಕಾರ್ಯಪ್ರವೃತ್ತರಾಗಿರುವ ಸಂಘಟನೆ,ಸಂಸ್ಥೆ ಮತ್ತು ವ್ಯಕ್ತಿಗಳ ಸಹಯೋಗ ಅಷ್ಟೇ.” ಎಂದರು.
21/4/2022