ವಿಜಯದಶಮಿಯ ಅಂಗವಾಗಿ ರಾಷ್ಟ್ರ ಸೇವಿಕಾ ಸಮಿತಿ ಬೆಂಗಳೂರು ದಕ್ಷಿಣ ವಿಭಾಗದ ಪಥಸಂಚಲನವು ಚಂದಾಪುರದಲ್ಲಿ ನಡೆಯಿತು. ಪಥಸಂಚಲನದಲ್ಲಿ ಸಮಿತಿಯ ಬೆಂಗಳೂರು ದಕ್ಷಿಣ ವಿಭಾಗದ 350 ಸ್ವಯಂಸೇವಿಕೆಯರು ಪೂರ್ಣ ಗಣವೇಷದೊಂದಿಗೆ ಉತ್ಸಾಹದಿಂದ ಭಾಗವಹಿಸಿದ್ದರು.
ಕರ್ನಾಟಕ ಹೊಯ್ಸಳ ಪ್ರಾಂತದ ಕಾರ್ಯವಾಹಿಕರಾದ ವಸಂತಾ ಸ್ವಾಮಿ, ಪ್ರಾಂತ ಸಂಪರ್ಕ ಪ್ರಮುಖ್ ಉದಯಾ ಭಟ್, ಪ್ರಾಂತ ಸಹ ಶಾರೀರಿಕ್ ಪ್ರಮುಖ್ ವಿಜಯಲಕ್ಷ್ಮಿ, ಪ್ರಾಂತ ತರುಣಿ ಪ್ರಮುಖ್ ಸುಮಂಗಲ ಬಾಪಟ್, ಪ್ರಾಂತ ಕಾರ್ಯಕಾರಿಣಿ ಸದಸ್ಯರಾದ ಮಾ. ಸುಧಾಮೂರ್ತಿ, ಮಾ. ಶಾರದಾ ವಿ ಮೂರ್ತಿ, ಬೆಂಗಳೂರು ಸಂಭಾಗ ಕಾರ್ಯವಾಹಿಕಾ ಜಯಾ ಭಟ್, ಬೆಂಗಳೂರು ದಕ್ಷಿಣ ವಿಭಾಗ ಕಾರ್ಯವಾಹಿಕಾ ಶ್ರೀಮತಿ ಛಾಯಾ ರಂಗನಾಥ್ ಉಪಸ್ಥಿತರಿದ್ದರು.
ಚಂದಾಪುರದ ಸುತ್ತಮುತ್ತಲಿನ ನಿವಾಸಿಗಳ ಸಂಪೂರ್ಣ ಸಹಕಾರದಿಂದ ಪಥಸಂಚಲನ ಅತ್ಯಂತ ಯಶಸ್ವಿಯಾಗಿ ನೆರವೇರಿತು. ಸಂಚಲನ ಸಾಗುವ ಮಾರ್ಗದಲ್ಲಿ ಸಾರ್ವಜನಿಕರು ತಮ್ಮ ಮನೆಯ ಮುಂದೆ ರಂಗೋಲಿ ಹಾಕಿ ಧ್ವಜಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಪಥಸಂಚಲನವನ್ನು ಸ್ವಾಗತಿಸಿದರು. ಪುಟ್ಟ ಪುಟ್ಟ ಮಕ್ಕಳಿಗೆ ಮಹಾನ್ ಸ್ವಾತಂತ್ರ್ಯ ಹೋರಾಟಗಾರರ ವೇಷಗಳನ್ನು ಹಾಕಿ ನಿಲ್ಲಿಸಲಾಗಿತ್ತು. ಇದು ಸ್ವಯಂಸೇವಿಕೆಯರಿಗೆ ಸ್ಫೂರ್ತಿಯನ್ನು ತುಂಬಿತ್ತು.