ಅಮೇರಿಕಾ: ಖ್ಯಾತ ವಿದ್ವಾಂಸ, ಹಿಂದೂ ಸ್ವಯಂಸೇವಕ ಸಂಘದ ಹಿರಿಯ ಕಾರ್ಯಕರ್ತ, ಅಮೇರಿಕಾ ಕ್ಷೇತ್ರದ ಸಂಘಚಾಲಕರಾಗಿದ್ದ ಪದ್ಮವಿಭೂಷಣ ಪ್ರೊ.ವೇದ ಪ್ರಕಾಶ್ ನಂದ ಅವರು ವಿಧಿವಶರಾಗಿದ್ದಾರೆ.
ಆರ್ ಎಸ್ ಎಸ್ ಸಂತಾಪ: ಪ್ರೊ.ವೇದ ಪ್ರಕಾಶ್ ಅವರ ಅಗಲಿಕೆಗೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಡಾ. ಮೋಹನ್ ಭಾಗವತ್, ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಅವರು ಸಂತಾಪ ಸಲ್ಲಿಸಿದ್ದಾರೆ.
“ಅಮೆರಿಕದ ಡೆನ್ವರ್ ನಲ್ಲಿ ವಿಧಿವಶರಾದ ಪ್ರೊಫೆಸರ್ ವೇದ್ ಪ್ರಕಾಶ್ ನಂದಾ ಅವರ ನಿಧನಕ್ಕೆ ನಾವು ತೀವ್ರ ಸಂತಾಪ ಸೂಚಿಸುತ್ತೇವೆ. ಇದರಿಂದಾಗಿ ಸಂಘದ ನಿಷ್ಠಾವಂತ ಸ್ವಯಂಸೇವಕ ಮತ್ತು ಶ್ರೇಷ್ಠ ಮಾನವೀಯ ಗುಣಗಳನ್ನು ಹೊಂದಿದ್ದ ವ್ಯಕ್ತಿಯ ಜೀವನದ ಪಯಣವು ಕೊನೆಗೊಂಡಿದೆ. ಪ್ರೊ. ನಂದ ಅವರು ದೆಹಲಿಯಲ್ಲಿ ಆರಂಭಿಕ ವರ್ಷಗಳಲ್ಲಿ ವಿದ್ಯಾರ್ಥಿ ಕಾರ್ಯಕರ್ತರಾಗಿ ಮತ್ತು ನಂತರ ಕಾನೂನು ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿದವರು. ತಮ್ಮ ವಿದ್ಯಾರ್ಥಿಗಳು ಮತ್ತು ಸಮಕಾಲೀನರಿಗೆ ದೆಹಲಿಯಲ್ಲಿ ವಿದ್ಯಾರ್ಥಿಯಾಗಿದ್ದಾಗಿನಿಂದ ಯುನೈಟೆಡ್ ಸ್ಟೇಟ್ಸ್ ನಲ್ಲಿ ಸಾಮಾಜಿಕ ಜೀವನದಲ್ಲಿ ನಡೆಸುತ್ತಿದ್ದವರೆಗೂ ಹಲವು ಪೀಳಿಗೆಗಳ ಯುವಮನಸ್ಸುಗಳಿಗೆ ಸ್ಫೂರ್ತಿಯಾಗಿದ್ದಾರೆ. ಕಾನೂನು ಅಧ್ಯಯನಗಳು, ಅಂತರರಾಷ್ಟ್ರೀಯ ಕಾನೂನು, ಶಿಕ್ಷಣ ಮತ್ತು ಸಾರ್ವಜನಿಕ ನೀತಿಗಳ ಬಗ್ಗೆ ಅವರಲ್ಲಿದ್ದ ಗಮನಾರ್ಹ ಸ್ಪಷ್ಟತೆ ಅವರನ್ನು ಖಂಡಗಳಾದ್ಯಂತ ನೀತಿ ನಿರೂಪಕರಿಗೆ ಗುರುವನ್ನಾಗಿ ಮಾಡಿತು . ಅವರಲ್ಲಿ ಕೆಲವರು ಸುಪ್ರೀಂ ಕೋರ್ಟ್ ಗಳು ಮತ್ತು ಹಲವಾರು ದೇಶಗಳಲ್ಲಿ ಉನ್ನತ ಹುದ್ದೆಗಳನ್ನು ಮುನ್ನಡೆಸಿದರು. ಅವರು ಭಾರತದ ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿ ಪದ್ಮಭೂಷಣ ಸೇರಿದಂತೆ ಹಲವಾರು ಅಂತರರಾಷ್ಟ್ರೀಯ ಗೌರವಗಳಿಗೆ ಭಾಜನರಾಗಿದ್ದರು.”
ಆರ್ ಎಸ್ ಎಸ್ ಎಕ್ಸ್ ಖಾತೆಯ ಪೋಸ್ಟ್:
https://x.com/RSSorg/status/1742114889924309309?s=20
“ಪ್ರೊ. ನಂದಾ ಅವರು ಎಬಿವಿಪಿಯ ಶೈಶವಾವಸ್ಥೆಯ ಸಮಯದಲ್ಲಿ ಅದರ ಪ್ರಧಾನ ಕಾರ್ಯದರ್ಶಿ ಮತ್ತು ಅಧ್ಯಕ್ಷರಾಗಿದ್ದರು. ಅಮೆರಿಕದಲ್ಲಿ ಹಿಂದೂ ಸ್ವಯಂಸೇವಕ ಸಂಘದ ವಲಯ ಸಂಘಚಾಲಕರಾಗಿ ಅವರ ಕೊಡುಗೆಗಳನ್ನು ಯಾವಾಗಲೂ ಪೂಜ್ಯಭಾವದಿಂದ ಸ್ಮರಿಸಲಾಗುತ್ತದೆ. ಜೀವನದುದ್ದಕ್ಕೂ ಸಭ್ಯತೆ ಮತ್ತು ವಿನಮ್ರತೆಯನ್ನೊಳಗೊಂಡ, ಯಾರಿಗೂ ತೊಂದರೆಯನ್ನುಂಟು ಮಾಡದ ವ್ಯಕ್ತಿತ್ವ ಅವರದಾಗಿತ್ತು . ಅವರು ಸಂಸ್ಕೃತಿ ಮತ್ತು ನ್ಯಾಯದ ವಿಷಯಗಳ ಬಗ್ಗೆ ಸಮಾನವಾಗಿ ಕಾಳಜಿ ವಹಿಸಿದ್ದರು.”
“ಅವರ ನಿಧನಕ್ಕೆ ನಾವು ಸಂತಾಪ ಸೂಚಿಸುತ್ತಿದ್ದೇವೆ. ಈ ದುಃಖದ ಸಮಯದಲ್ಲಿ ಅವರ ಕುಟುಂಬಕ್ಕೆ ಶಕ್ತಿಯನ್ನು ನೀಡುವಂತೆ ಮತ್ತು ಅಗಲಿದ ಆತ್ಮಕ್ಕೆ ಸದ್ಗತಿಯನ್ನು ನೀಡಲಿ ಎಂದು ಪ್ರಾರ್ಥಿಸುತ್ತೇವೆ.
ಶಾಂತಿ: ಶಾಂತಿ: ಶಾಂತಿ:”
ಡಾ. ಮೋಹನ್ ಭಾಗವತ್,
ಸರಸಂಘಚಾಲಕ
ದತ್ತಾತ್ರೇಯ ಹೊಸಬಾಳೆ
ಸರಕಾರ್ಯವಾಹ
ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್.ಎಸ್.ಎಸ್.)