ಹರಿಯಾಣ ,ಫೆ. 23, 2024: ಭಾರತೀಯ ಚಿತ್ರ ಸಾಧನ ಆಯೋಜಿಸಿರುವ ಮೂರು ದಿನಗಳ ರಾಷ್ಟ್ರೀಯ ಕಿರುಚಿತ್ರ ಮತ್ತು ಸಾಕ್ಷ್ಯಚಿತ್ರ ಉತ್ಸವವು ಹರಿಯಾಣ ರಾಜ್ಯದ ಪಂಚಕುಲದ ರೆಡ್ ಬಿಷಪ್ ಬ್ಯಾಂಕ್ವೆಟ್ ಸಭಾಂಗಣದಲ್ಲಿ ಉದ್ಘಾಟನೆಗೊಂಡಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಭಾರತೀಯ ಚಿತ್ರ ಸಾಧನದ ಮುಖ್ಯಸ್ಥ ಪ್ರೊ ಬಿ.ಕೆ ಕುತಿಯಾಲ ಭಾರತೀಯ ಚಿತ್ರ ಸಾಧನದ ಉದ್ದೇಶ ದೇಶ ,ಸಮಾಜ ಹಾಗೂ ಜ್ಞಾನದ ವಿಚಾರವಾಗಿ ಚಿತ್ರ ರಚಿಸುವ ಉದಯೋನ್ಮುಖ ಚಿತ್ರ ತಯಾರಕರನ್ನು ತಯಾರು ಮಾಡುವುದು. ಚಿತ್ರ ಭಾರತಿ ಚಿತ್ರೋತ್ಸವದ ಮೊದಲ ಆವೃತ್ತಿಯು ಇಂದೋರ್ ನಲ್ಲಿ 2016 ರಲ್ಲಿ ಪ್ರಾರಂಭವಾಗಿ, ಪ್ರತಿ 2 ವರ್ಷಕೊಮ್ಮೆ ನಡೆದು ಇದು 5ನೇ ಆವೃತ್ತಿಯಾಗಿದೆ.
ಕಾರ್ಯಕ್ರಮಕ್ಕೆ ಮುಖ್ಯ ಅಥಿತಿಯಾಗಿ ಆಗಮಿಸಿದ್ದ ಖ್ಯಾತ ನಿರ್ದೇಶಕ ವಿವೇಕ್ ರಂಜನ್ ಅಗ್ನಿಹೋತ್ರಿ ಯವರು ಮಾತಾಡಿ ಚಿತ್ರರಂಗದಲ್ಲಿ ಸಂಶೋಧನೆಯ ಕೊರತೆದ್ದು ಇದರ ವಿಚಾರವಾಗಿ ತರಬೇತಿಯ ಅವಶ್ಯಕತೆ ಬಹಳ ಇದೆ ಇದಕ್ಕಾಗಿ ತಮ್ಮ ಸಮಯ ಕೊಡಲು ಸಿದ್ಧನಿದ್ದೇನೆ ಹಾಗೂ ಸೊಸೈಟಿ ವತಿಯಿಂದ ಚಿತ್ರ ನಿರ್ಮಾಣ ಮಾಡಲು ಆಯ್ಕೆ ಮಾಡುವ ಯುವ ನಿರ್ಮಾಪಕರಿಗೆ I Am Buddha ಫೌಂಡೇಶನ್ ವತಿಯಿಂದ ತಲಾ 1 ಲಕ್ಷ ರೂ ಗಳ ಸಹಾಯ ಧನ ನೀಡುವುದಾಗಿ ಹೇಳಿದರು.
ಮುಖ್ಯ ಅತಿಥಿ ಗಳಾಗಿ ಆಗಮಿಸಿದ್ದ ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಕಟ್ಟರ್ ಮಾತನಾಡಿ ಪಂಚಾಕುಲದಲ್ಲಿ ಚಿತ್ರನಗರಿ ನಿರ್ಮಾಣ ಮಾಡಲು ಅನುದಾನ ನೀಡುವುದಾಗಿ ಘೋಷಿಸಿದರು