ಬೆಂಗಳೂರು: ಲಘು ಉದ್ಯೋಗ ಭಾರತಿ ಮತ್ತು ಐಎಂಎಸ್ ಫೌಂಡೇಷನ್ ಜಂಟಿ ಆಶ್ರಯದಲ್ಲಿ ಸಿರಿಧಾನ್ಯಗಳ ಬಳಕೆಯನ್ನು ಉತ್ತೇಜಿಸುವ ‘ಮಿಲ್ಲೆಟ್ಸ್ ಕಾರ್ಟ್’ ಸಂಗ್ರಾಹಕ (ಅಗ್ರಿಗೇಟರ್) ಇದರ ಲೋಕಾರ್ಪಣೆ ಕಾರ್ಯಕ್ರಮ ಮೇ 10 2024ರಂದು ಬನಶಂಕರಿಯಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಸಿಎಸ್ ಐಆರ್-ಎನ್ ಐಐಎಸ್ ಟಿ ನಿರ್ದೇಶಕ ಡಾ. ಸಿ. ಆನಂದ ರಾಮಕೃಷ್ಣನ್, ಕೊಡಗು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಅಶೋಕ್ ಎಸ್ ಆಲೂರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಡಾ. ಸಿ. ಆನಂದ ರಾಮಕೃಷ್ಣನ್ ಸಿರಿಧಾನ್ಯಗಳು ಉತ್ತಮ ಆರೋಗ್ಯಕ್ಕೆ ಪೂರಕವಾಗಿದ್ದು ಪ್ರಸ್ತುತ ಜಗತ್ತಿನಾದ್ಯಂತ ಹಲವು ರಾಷ್ಟ್ರಗಳಿಂದ ಬೇಡಿಕೆಯನ್ನು ಪಡೆದಿದೆ. ತನ್ನ ಪೌಷ್ಠಿಕಾಂಶ ಮೌಲ್ಯ ಮತ್ತು ಯಾವುದೇ ಆಹಾರ ಪದಾರ್ಥಗಳೊಂದಿಗಿನ ಇದರ ಸಂಯೋಜನೆ ಎಲ್ಲಾ ವಯೋಮಾನದವರಿಗೂ ಅತ್ಯಂತ ಸೂಕ್ತ ಆಯ್ಕೆ ಎಂದರು.
ಕಾರ್ಯಕ್ರಮದಲ್ಲಿ ಪ್ರೊ. ಅಶೋಕ್ ಎಸ್ ಆಲೂರು ಮಾತನಾಡಿ ಸಿರಿಧಾನ್ಯಗಳು ರೈತರಿಗೆ ಅತ್ಯಂತ ಉಪಕಾರಿ. ಹಾಗೆಯೇ ಇದು ಸುಸ್ಥಿರ ಕೃಷಿಯ ಭಾಗವಾಗಿದೆ. ಸಿರಿಧಾನ್ಯಗಳು (ಮಿಲ್ಲೆಟ್ಸ್) ಭವಿಷ್ಯದಲ್ಲಿ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಇರುವ ಅತ್ಯುತ್ತಮ ಆಯ್ಕೆ ಎಂದು ನುಡಿದರು.