ಇಂದು ಪುಣ್ಯಸ್ಮರಣೆ

ನಮ್ಮ ದೇಶ ಗುಲಾಮಗಿರಿಯಲ್ಲಿದ್ದ ಕಾಲ, ಮುಸಲ್ಮಾನರ ದುರಾಡಳಿತದಲ್ಲಿ ದೌರ್ಜನ್ಯಗಳು, ಮನೆಗಳ ಲೂಟಿ, ದೇವಸ್ಥಾನಗಳ ಮೇಲೆ ದಾಳಿ, ವಿಗ್ರಹ ಧ್ಚಂಸ ಹೀಗೆ ಇತ್ಯಾದಿಗಳು ನಡೆಯುವ ಸಂದರ್ಭದಲ್ಲಿ ತನ್ನ ಮಗ ಶಿವಾಜಿಯನ್ನು ರಾಷ್ಟ್ರರಕ್ಷಣೆಗೆ, ಹಿಂದೂ ಸಾಮ್ರಾಜ್ಯ ನಿರ್ಮಾಣಕ್ಕೆ ಪ್ರೇರಣಾಸ್ವರೂಪಿಯಾದವರು ವೀರಮಾತೆ ಜೀಜಾಬಾಯಿ. ಇಂದು ಇಡೀ ಮಾತೃವರ್ಗಕ್ಕೆ ಆದರ್ಶವಾಗುವ ಮಾತೆ ಜೀಜಾಬಾಯಿ ಅವರ ಪುಣ್ಯಸ್ಮರಣೆ.


ಪರಿಚಯ
ಜೀಜಾಬಾಯಿ ಅವರು ಜನವರಿ 12, 1598ರಂದು ಮಹಾರಾಷ್ಟ್ರದ ಬುಲ್ಧಾನ್‌ ಜಿಲ್ಲೆಯ ಸಿಂಧಖೇಡ್‌ ಎಂಬಲ್ಲಿ ಜನಿಸಿದರು. ತಂದೆ ಲಖೋಜಿ ರಾವ್ ಜಾಧವ್, ತಾಯಿ ಮಾಳಸಾಬಾಯಿ. ಬಾಲ್ಯದಲ್ಲಿಯೇ ಜೀಜಾಬಾಯಿ ಅವರು ತಂದೆಯ ಜೊತೆಗೂಡಿ ರಾಜ್ಯಶಾಸ್ತ್ರದ ಬಗ್ಗೆ ಅಧ್ಯಯನ ಮಾಡಿದರು. ತಾಯಿಯಿಂದ ಭಕ್ತಿ, ಭಾವ, ಎಲ್ಲಾ ಸಂಸ್ಕಾರಗಳನ್ನು ಕಲಿತಿದ್ದರು. ಜೀಜಾಬಾಯಿ ಚಿಕ್ಕ ವಯಸ್ಸಿನಲ್ಲಿಯೇ ಮಾಲೋಜಿ ಶಿಲೇದಾರ್ ಅವರ ಮಗ ಶಹಾಜಿ ಭೋಂಸ್ಲೆ ಅವರನ್ನು ವಿವಾಹವಾದರು. ಅವರ ಪತಿ ಕೂಡ ನಿಜಾಮ್ ಷಾಗೆ ಸೇವೆ ಸಲ್ಲಿಸಿದರು. ಅವರಿಗೆ ಆರು ಜನ ಹೆಣ್ಣುಮಕ್ಕಳು ಮತ್ತು ಇಬ್ಬರು ಗಂಡು ಮಕ್ಕಳು ಸೇರಿದಂತೆ ಎಂಟು ಮಕ್ಕಳಿದ್ದರು. ಅವರಲ್ಲಿ ಒಬ್ಬರು ಶಿವಾಜಿ. ಜೀಜಾಬಾಯಿ ತನ್ನ ಪ್ರೇರಣಾದಾಯಿ ಮಾತುಗಳಿಂದಲೇ ಮಗ ಶಿವಾಜಿಯ ವ್ಯಕ್ತಿತ್ವವನ್ನು ರೂಪಿಸಿದರು.


ಜನತೆಯ ಮೇಲೆ ನಡೆಯುವ ದಬ್ಬಾಳಿಕೆಯನ್ನು ಪ್ರತ್ಯಕ್ಷವಾಗಿ ಕಂಡ ಜೀಜಾಬಾಯಿ ಅವರು ಈ ನಾಡಿನ ಜನರ ಸ್ವಾತಂತ್ರ್ಯಕ್ಕಾಗಿ, ಭಾರತೀಯ ಸ್ವರಾಜ್ಯಕ್ಕಾಗಿ ಹೋರಾಡಲು ತನ್ನ ಮಗ ಶಿವಾಜಿಯನ್ನು ತಯಾರು ಮಾಡಿದರು. ಅದಕ್ಕಾಗಿ ರಾಜನೀತಿಯನ್ನು ಸಹ ಕಲಿಸಿದರು. ಶಿವಾಜಿಯು ಮರಾಠಾ ವಂಶದ ಸ್ವತಂತ್ರ ಆಡಳಿತಗಾರನಾಗುತ್ತಿದ್ದಂತೆ ಜೀಜಾಬಾಯಿಯ ಪ್ರಾರ್ಥನೆಗಳಿಗೆ ಉತ್ತರ ದೊರೆಯಿತು. ಅವರ ಸಲಹೆಗಾರರಾಗಿ ಸೇವೆ ಸಲ್ಲಿಸಿದ ಅವರು ಅವರ ಸಾಧನೆಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಬಾಲ್ಯದ ಸಂಸ್ಕಾರಗಳ ಬಲದಲ್ಲಿ ಛತ್ರಪತಿ ಶಿವಾಜಿ ಸಾವಿರಾರು ವರ್ಷಗಳ ಗುಲಾಮಗಿರಿಯನ್ನು ಮುರಿದು ಹಾಕಿ ಹಿಂದವೀ ಸ್ವರಾಜ್ಯವನ್ನು ಸ್ಥಾಪಿಸಿದರು. ಪುತ್ರನ ಕರ್ತೃತ್ವದ ಮೇಲೆ ಕಾಲಕ್ಕೆ ತಕ್ಕಂತೆ ಮಾತೆಯ ಪ್ರೋತ್ಸಾಹ ಮಾರ್ಗದರ್ಶನ ನೀಡುತ್ತ ಅವನು ಸಿಂಹಾಸನ ಏರುವವರೆಗೂ ಜೀಜಾಬಾಯಿ ಜೊತೆಗಿದ್ದರು.


ಜೀಜಾಬಾಯಿ ಅವರು ಜೂನ್ 17, 1674 ರಂದು ಅವರು ಸ್ವತಂತ್ರ ಹಿಂದವೀ ಸ್ವರಾಜ್ಯದಲ್ಲಿ ಕೊನೆಯುಸಿರೆಳೆದರು.

Leave a Reply

Your email address will not be published.

This site uses Akismet to reduce spam. Learn how your comment data is processed.