ಇಂದು ಜಯಂತಿ
ಮೌಶಿಜೀ ಎಂದೇ ಜನಮಾನಸದಲ್ಲಿ ಗುರುತಿಸಿಕೊಂಡಿದ್ದ ಲಕ್ಷ್ಮೀಬಾಯಿ ಕೇಳ್ಕರ್‌ ಅವರು ರಾಷ್ಟ್ರ ಸೇವಿಕಾ ಸಮಿತಿಯನ್ನು ಸ್ಥಾಪಿಸಿದವರು. ಹೆಣ್ಣುಮಕ್ಕಳಿಗೆ ಸಂಸ್ಕಾರ, ಸಂಸ್ಕೃತಿ, ಮೌಲ್ಯ ಹಾಗೂ ರಾಷ್ಟ್ರೀಯತೆ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ರಾಷ್ಟ್ರ ಸೇವಿಕಾ ಸಮಿತಿಯನ್ನು ಸ್ಥಾಪಿಸಿದವರು. ಇಂದು ಹಿಂದೂ ರಾಷ್ಟ್ರದ ಬೆಳವಣಿಗೆಗಾಗಿ ಹಗಲಿರುಳು ಶ್ರಮಿಸಿದ ಲಕ್ಷ್ಮೀಬಾಯಿ ಕೇಳ್ಕರ್ ಅವರನ್ನು ಅವರ 119 ನೇ ಜನ್ಮ ದಿನಾಚರಣೆಯಂದು ರಾಷ್ಟ್ರವು ಸ್ಮರಿಸುತ್ತದೆ.


ಪರಿಚಯ
ಲಕ್ಷ್ಮಿಬಾಯಿ ಕೇಳ್ಕರ್‌ ಅವರು ಜುಲೈ 6, 1905ರಂದು ನಾಗಪುರದಲ್ಲಿ ಜನಿಸಿದರು. ಇವರ ಹುಟ್ಟಿದ ಹೆಸರು ಕಮಲ್.‌ ಮದುವೆಯ ನಂತರ ಕಮಲ್ ಅವರನ್ನು ಲಕ್ಷ್ಮೀ ಎಂದು ಮರುನಾಮಕರಣ ಮಾಡಲಾಯಿತು.  ಇವರ ತಂದೆ ಸರ್ಕಾರಿ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ತಾಯಿಯ ಪ್ರಭಾವದಿಂದ ಲಕ್ಷ್ಮೀಬಾಯಿ ಕೇಳ್ಕರ್‌ ಅವರು ಧೈರ್ಯ, ದೇಶ ಪ್ರೇಮವನ್ನು ಅಳವಡಿಸಿಕೊಂಡಿದ್ದರು. ಬಾಲ್ಯದಿಂದಲೂ ದೇಶ ಭಕ್ತಿಗೀತೆ, ಹಿಂದೂ ನಾಯಕ ನಾಯಕಿಯರ ವೀರಕಥೆ, ಪೌರಾಣಿಕ ಕಥೆಗಳ ಬಗ್ಗೆ ತಿಳಿದುಕೊಂಡಿದ್ದರು. ಸೀತೆ ಮತ್ತು ಸಾವಿತ್ರಿಯ ಜೀವನವನ್ನು ಅನುಸರಿಸುವಂತೆ ಗಾಂಧೀಜಿ ಮಹಿಳೆಯರಿಗೆ ನೀಡಿದ ಸಲಹೆಯಿಂದ ಪ್ರಭಾವಿತರಾದ ಅವರು ರಾಮಾಯಣ ಮತ್ತು ಮಹಾಭಾರತವನ್ನು ಅಧ್ಯಯನ ಮಾಡಿದರು.
ಲಕ್ಷ್ಮೀಬಾಯಿ ಕೇಳ್ಕರ್ ಅವರು ಆರಂಭಿಕ ಶಿಕ್ಷಣವನ್ನು ವಾರ್ಧಾದ ಮಿಷನರಿ ಶಾಲೆಯಲ್ಲಿ ಕಲಿತರು. ಈ ಶಾಲೆಯಲ್ಲಿ ಹಿಂದೂಗಳ ಪ್ರಾರ್ಥನೆ ಇಲ್ಲದ ಕಾರಣ ಅರ್ಧಕ್ಕೆ ತೊರೆದರು. ಹಲವು ವರ್ಷಗಳ ನಂತರ ವಾರ್ಧಾದಲ್ಲಿ ಬಾಲಕಿಯರ ಹಿಂದೂ ಶಾಲೆಗೆ ಸೇರಿಕೊಂಡರು. ಆದರೆ ಮುಂದೆ ಕಾರಣಾಂತರಗಳಿಂದ ಔಪಚಾರಿಕ ಶಿಕ್ಷಣವನ್ನು ತೊರೆದರೂ ಓದುವ ಹವ್ಯಾಸವನ್ನು ತಪ್ಪಿಸಲಿಲ್ಲ. ಭಾರತೀಯ ಪ್ರಾಚೀನತೆ, ಭಾರತದ ಇತಿಹಾಸ, ಭೌಗೋಳಿಕ ಜ್ಞಾನ, ಆಡಳಿತ ಶಾಸ್ತ್ರದ ಬಗ್ಗೆ ಸ್ವ ಅಧ್ಯಯನ ನಡೆಸಿದರು.


ಲಕ್ಷ್ಮೀಬಾಯಿ ಕೇಳ್ಕರ್‌ ಅವರು ಗೋ ರಕ್ಷಣೆಯ ಚಟುವಟಿಕೆಗಳಲ್ಲಿ ಭಾಗಿಯಾದರು. ಗೋ ಹತ್ಯೆಯ ವಿರುದ್ಧ ಲಕ್ಷ್ಮೀಬಾಯಿ ಹೋರಾಡಿದರು. ಇವರು ಕುಟುಂಬದ ಜೊತೆ ಪ್ಲೇಗ್‌ ರೋಗಿಗಳ ಸೇವೆಗಳಲ್ಲಿ ತೊಡಗಿಕೊಂಡರು. ಜಾತಿಯನ್ನು ಲೆಕ್ಕಿಸಿದೆ ರೋಗದಿಂದ ಬಲಿಯಾದ ವ್ಯಕ್ತಿಗಳ ಅಂತ್ಯಕ್ರಿಯೆಯನ್ನು ಸಹ ಅವರು ನೆರವೇರಿಸಿದ್ದರು.


ಆರ್‌ ಎಸ್‌ ಎಸ್‌ ನೊಂದಿಗೆ ಒಡನಾಟ
ಲಕ್ಷ್ಮೀಬಾಯಿ ಕೇಳ್ಕರ್ ಅವರಿಗೆ ವಾರ್ಧಾದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಾಕೆಗೆ ಹೋಗುತ್ತಿದ್ದ ತಮ್ಮ ಮಕ್ಕಳ ಮೂಲಕ ಸಂಘದ ಪರಿಚಯವಾಗುತ್ತದೆ. ಅಲ್ಲಿನ ಸೇವಾ ಮನೋಭಾವ, ಪರಸ್ಪರ ಪ್ರೀತಿಯನ್ನು ಕಂಡು ಕೇಳ್ಕರ್‌ ಅವರಿಗೆ ಸಂಘದ ಬಗ್ಗೆ ಮತ್ತಷ್ಟು ಕುತೂಹಲ ಹೆಚ್ಚಾಯಿತು. ಅವರಲ್ಲಿ ಈ ಸಂಘಟನಾ ಕಾರ್ಯವನ್ನು ಹೆಣ್ಣುಮಕ್ಕಳು ಯಾಕೆ ಮಾಡಬಾರದು ಎಂಬ ಪ್ರಶ್ನೆ ಕಾಡತೊಡಗಿತು. ಹೀಗಾಗಿ ಒಂದು ದಿನ ನಾಗಪುರದಲ್ಲಿ ಡಾ. ಕೇಶವ ಬಲಿರಾಮ್ ಹೆಡಗೇವಾರ್‌ ಅವರನ್ನು ಭೇಟಿ ಮಾಡಿದರು. ಅವರೊಂದಿಗೆ ಲಕ್ಷ್ಮೀಬಾಯಿ ಅವರು ಸಂಘಟನೆ ಕುರಿತು ಚರ್ಚೆ ನಡೆಸಿದರು. ನಂತರ ಡಾಕ್ಟರ್‌ ಜೀ ಅವರ ಪ್ರೇರಣೆ ಹಾಗೂ ಮಾರ್ಗದರ್ಶನದಿಂದ ಲಕ್ಷ್ಮಿಬಾಯಿ ಕೇಳ್ಕರ್‌ ಅವರು 1936ರ ವಿಜಯದಶಮಿ ದಿನದಂದು ವಾರ್ಧಾದಲ್ಲಿ ಹೆಣ್ಣುಮಕ್ಕಳಿಗಾಗಿ ರಾಷ್ಟ್ರ ಸೇವಿಕಾ ಸಮಿತಿಯನ್ನು ಸ್ಥಾಪಿಸಿದರು. ಭಾರತದಲ್ಲಿ ಹೆಣ್ಣುಮಕ್ಕಳ ಪರಿಸ್ಥಿತಿ, ಮನೋಭಾವ, ಅಗತ್ಯಗಳನ್ನು ಮನದಲ್ಲಿಟ್ಟುಕೊಂಡು ಲಕ್ಷ್ಮೀಬಾಯಿ ಕೇಳ್ಕರ್‌ ಅವರು ರಾಷ್ಟ್ರ ಸೇವಿಕಾ ಸಮಿತಿಯ ರೂಪುರೇಶೆಯನ್ನು ರಚಿಸಿದರು.

ಹೆಣ್ಣಮಕ್ಕಳಿಗೆ ಸೇವೆ, ಸಂಸ್ಕಾರ, ಶಿಕ್ಷಣ, ಸ್ವಾವಲಂಬನೆಯ ಕುರಿತು ತಿಳಿಸಿಕೊಡುವ ಕಾರ್ಯದ ಗುಣಮಟ್ಟಕ್ಕೆ ಸಮಿತಿಯಲ್ಲಿ ಹೆಚ್ಚಿನ ಒತ್ತು ಕೊಡಬೇಕೆಂದು ಬಯಸಿದ್ದರು. ಹೀಗಾಗಿ ಶಾರೀರಿಕ ಅಭ್ಯಾಸಗಳನ್ನು ಲಕ್ಷ್ಮೀಬಾಯಿಯವರು ಸಂಘದ ಸ್ವಯಂಸೇವಕರಿಂದ ಕಲಿತು ಇತರ ಸೇವಿಕೆಯರಿಗೆ ಕಲಿಸಿದರು. “ಎರಡೂ ಸಂಸ್ಥೆಗಳ ಹಿತದೃಷ್ಟಿಯಿಂದ ಸಂಘ ಮತ್ತು ಸಮಿತಿ ಸ್ವತಂತ್ರವಾಗಿ ಕಾರ್ಯನಿರ್ವಹಿಸಬೇಕು. ಅದು ಒಂದೇ ದಿಕ್ಕಿನಲ್ಲಿ ಹೋಗುವ ಸಮಾನಾಂತರ ರೇಖೆಗಳಂತೆ ನಡೆಯಬೇಕು” ಎಂದು ಡಾ.ಹೆಡಗೇವಾರ್‌ ಅವರು ಹೇಳಿದ್ದರು.

ಲಕ್ಷ್ಮೀಬಾಯಿ ಕೇಲ್ಕ‌ರ್ ಅವರು ಭಾರತದ ಭವ್ಯವಾದ ಗತಕಾಲದ ಬಗ್ಗೆ ಮಹಿಳೆಯರಿಗೆ ಸ್ಫೂರ್ತಿ ನೀಡುವುದು ಮತ್ತು ರಾಷ್ಟ್ರೀಯತೆಯ ಮೌಲ್ಯಗಳ ಬಗ್ಗೆ ಹೆಮ್ಮೆಪಡುವಂತೆ ಮಾಡುವುದು ಮಹಿಳೆಯರ ಶ್ರೇಯೋಭಿವೃದ್ಧಿಗೆ ಇರುವ ಮೊದಲ ಹೆಜ್ಜೆ ಎಂದು ಅರಿತುಕೊಂಡರು. ಏಕೆಂದರೆ ಮಹಿಳೆಯರು ವಿದೇಶಿಗರ ಬಂಧನದಲ್ಲಿ ವಿಶ್ವಾಸದ ಕೊರತೆಯನ್ನು ಅನುಭವಿಸುತ್ತಿದ್ದರು ಮತ್ತು ತಮ್ಮ ಮೌಲ್ಯಗಳು ಮತ್ತು ಆದರ್ಶಗಳು ಪಾಶ್ಚಿಮಾತ್ಯ ಸಿದ್ಧಾಂತಗಳಿಗಿಂತೆ ಕೀಳು ಎಂದು ಭಾವಿಸಿದ್ದರು. ಅವರು ತಮ್ಮ ಸಮರ್ಪಿತ ಕಾರ್ಯಕರ್ತರೊಂದಿಗೆ ಮನೆ ಮನೆಗೆ ತೆರಳಿ ದೇಶ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವಂತೆ ಕೇಳಿಕೊಂಡರು.

ಅವರು 1945ರಲ್ಲೇ ಶೈಕ್ಷಣಿಕ ಕ್ಷೇತ್ರಕ್ಕೆ ಪ್ರವೇಶಿಸುವ ಅಗತ್ಯವನ್ನು ಮನಗಂಡಿದ್ದರು. ಅದೇ ವರ್ಷ ಕೇಳ್ಕರ್‌ ಅವರು ಅಖಿಲ ಭಾರತೀಯ ಸಮ್ಮೇಳನದಲ್ಲಿ ಭಾಗಿಯಾಗಿದ್ದರು. ಕೆಲವು ಶಿಶು ಮಂದಿರಗಳನ್ನು ತೆರೆಯಲಾಯಿತು. 1953ರಲ್ಲಿ ಗೃಹಿಣಿಯರಿಗಾಗಿ ವಿದ್ಯಾಲಯವನ್ನು ಬಾಂಬೆಯಲ್ಲಿ ತೆರೆಯಲಾಯಿತು. ಈ ಮೂಲಕ ಹೆಣ್ಣುಮಕ್ಕಳಿಗೆ ಶಿಕ್ಷಣ, ರಾಮಾಯಣ ಪ್ರವಚನ, ಸಂಸ್ಕಾರದ ಬಗ್ಗೆ ತಿಳಿಸಲಾಯಿತು. ಅಖಿಲ ಭಾರತೀಯ ಸ್ಥಾನಮಾನವನ್ನು ನೀಡಲು 1983ರಲ್ಲಿ ಭಾರತೀಯ ಶ್ರೀವಿದ್ಯಾ ನಿಕೇತನ ಎಂಬ ಹೊಸ ಟ್ರಸ್ಟ್ ಅನ್ನು ನೋಂದಾಯಿಸಲಾಯಿತು. ಪ್ರಸ್ತುತ ರಾಷ್ಟ್ರ ಸೇವಿಕಾ ಸಮಿತಿಯು ಭಾರತದಲ್ಲಿ ಮಾತ್ರವಲ್ಲದೇ ವಿದೇಶದಲ್ಲೂ ಹಿಂದೂ ಸೇವಿಕಾ ಸಮಿತಿಯ ಹೆಸರಲ್ಲಿ ಕಾರ್ಯನಿರ್ವಹಿಸುತ್ತಿದೆ.

ಲಕ್ಷ್ಮೀಬಾಯಿ ಕೇಲ್ಕ‌ರ್ ಅವರು 1945ರಲ್ಲೇ ಶೈಕ್ಷಣಿಕ ಕ್ಷೇತ್ರಕ್ಕೆ ಪ್ರವೇಶಿಸುವ ಅಗತ್ಯವನ್ನು ಮನಗಂಡಿದ್ದರು. ಅದೇ ವರ್ಷ ಕೇಳ್ಕರ್‌ ಅವರು ಅಖಿಲ ಭಾರತೀಯ ಸಮ್ಮೇಳನದಲ್ಲಿ ಭಾಗಿಯಾಗಿದ್ದರು.‌ಆರಂಭದಲ್ಲಿ ಕೆಲವು ಶಿಶು ಮಂದಿರಗಳನ್ನು ತೆರೆಯಲಾಯಿತು. ಮಹಿಳೆಯರ ಸ್ವಾಭಾವಿಕ ಪ್ರತಿಭೆಯನ್ನು ಅಭಿವೃದ್ಧಿಪಡಿಸಲು 1953 ಗೃಹಿಣಿ ವಿದ್ಯಾಲಯವನ್ನು, ವೃತ್ತಿಪರ ಕೋರ್ಸ್‌ಗಳು, ತರಬೇತಿ ಕಾರ್ಯಕ್ರಮಗಳು ಮತ್ತು ಅಲ್ಪಾವಧಿಯ ಕೋರ್ಸ್‌ಗಳನ್ನು ಸ್ಥಾಪಿಸಿದರು. ಭಾರತದ ವೈಭವಯುತ ಸಂಸ್ಕೃತಿಯ ಆಧಾರದ ಮೇಲೆ ಮಹಿಳಾ ಶಿಕ್ಷಣವನ್ನು ಮರುಸಂಘಟಿಸಲು 1983ರಲ್ಲಿ ಭಾರತೀಯ ಶ್ರೀವಿದ್ಯಾ ನಿಕೇತನವನ್ನು ಸ್ಥಾಪಿಸಿದರು. ಅವರು ಮಹಿಳೆಯರ ಸಂಗೀತ ಕೌಶಲ ಮತ್ತು ಭಕ್ತಿಯನ್ನು ಪ್ರೋತ್ಸಾಹಿಸಲು ಭಜನಾ ಮಂಡಳಿಗಳನ್ನು ರಚಿಸಿದರು. ರಾಣಿ ಲಕ್ಷ್ಮೀಬಾಯಿ ಮತ್ತು ಜೀಜಾಮಾತೆಯಂತಹ ಮಹಾನ್ ಮಹಿಳೆಯರ ಸಾಧನೆಗಳನ್ನು ಕಾವ್ಯ ರೂಪದಲ್ಲಿ ರಚಿಸುವಂತೆ ಪ್ರೇರೇಪಿಸಿದರು.

ಲಕ್ಷ್ಮೀಬಾಯಿ ಅವರು ಪ್ರದರ್ಶಿನಿಗಳನ್ನು ಆಯೋಜಿಸಿ ಶಿವಾಜಿಯ ಹೋರಾಟ, ಸ್ವಾಮಿ ವಿವೇಕಾನಂದರ ಘೋಷಣೆಯಂತಹ ಸ್ಪೂರ್ತಿದಾಯಕ ವಿಷಯಗಳನ್ನು ತಮ್ಮ ವರ್ಣಚಿತ್ರಗಳ ಮೂಲಕ ಚಿತ್ರಿಸಿ ಸಾಮಾಜಿಕ ಪುನರುಜ್ಜಿವನ ಮತ್ತು ಜನಸಾಮಾನ್ಯರ ಉನ್ನತಿಗೆ ಕೊಡುಗೆ ನೀಡಲು ಕಲಾವಿದರನ್ನು ಆಹ್ವಾನಿಸಿದರು. ಅವರು ಮಹಾನ್ ಮಹಿಳಾ ನಾಯಕರ ಶತಮಾನೋತ್ಸವಗಳನ್ನು ಆಚರಿಸಿದರು ಮತ್ತು ಪ್ರತಿ ಸಭೆಯಲ್ಲಿ ವಂದೇ ಮಾತರಂ ಅನ್ನು ನಿರೂಪಿಸುವ ಮೂಲಕ ಮಾತೃಭೂಮಿಯನ್ನು ಗೌರವಿಸುವ ಸಂಪ್ರದಾಯವನ್ನು ಪ್ರಾರಂಭಿಸಿದರು. ಅವರು ನಾಗುರದಲ್ಲಿ ದೇವಿ ಅಹಲ್ಯಾ ಮಂದಿರ, ವಾರ್ಧಾದಲ್ಲಿ ಅಷ್ಟಭುಜ ದೇವಾಲಯ ಮತ್ತು ಇತರ ಅನೇಕ ದೇವಿ ದೇವಾಲಯಗಳನ್ನು ನಿರ್ಮಿಸಿದರು.

ಪ್ರಸ್ತುತ ರಾಷ್ಟ್ರ ಸೇವಿಕಾ ಸಮಿತಿಯು ಭಾರತದಲ್ಲಿ ಮಾತ್ರವಲ್ಲದೇ ವಿದೇಶದಲ್ಲೂ ಹಿಂದೂ ಸೇವಿಕಾ ಸಮಿತಿಯ ಹೆಸರಲ್ಲಿ ಕಾರ್ಯನಿರ್ವಹಿಸುತ್ತಿದೆ.


ಲಕ್ಷ್ಮಿಬಾಯಿ ಕೇಳ್ಕರ್‌ ಅವರು ಅನಾರೋಗ್ಯದಿಂದ ನವೆಂಬರ್‌ 27, 1978 ರಂದು ನಿಧನರಾದರು.

Leave a Reply

Your email address will not be published.

This site uses Akismet to reduce spam. Learn how your comment data is processed.