ಇಂದು ಪುಣ್ಯಸ್ಮರಣೆ


ಬಟುಕೇಶ್ವರ್‌ ದತ್ ಅವರು ಭಾರತೀಯ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು. ಅವರು 1929ರ ಅಸೆಂಬ್ಲಿ ಬಾಂಬ್ ದಾಳಿ ಪ್ರಕರಣದಲ್ಲಿ ಭಗತ್ ಸಿಂಗ್‌ನ ಸಹವರ್ತಿಯಾಗಿದ್ದರು. ಇಂದು ಅವರ ಪುಣ್ಯಸ್ಮರಣೆ.


ಪರಿಚಯ
ಬಟುಕೇಶ್ವರ್‌ ದತ್‌ ಅವರು ನವೆಂಬರ್‌ 18, 1910 ರಂದು ಪುರಬಾ ಬರ್ಧಮಾನ್‌ ಜಿಲ್ಲೆಯ ಖಂದಘೋಷ್‌ ಗ್ರಾಮದಲ್ಲಿ ಜನಿಸಿದರು. ಇವರು ಆರಂಭಿಕ ಶಿಕ್ಷಣವನ್ನು ಕಾನ್ಪೋರ್‌ ದಲ್ಲಿ ಮುಗಿಸಿದರು. ನಂತರ ಕಾನ್ಪೋರ್‌ ನ ಪಂಡಿತ್‌ ಪೃಥಿನಾಥ್‌ ಹೈಸ್ಕೂಲ್‌ ನಿಂದ ಪದವಿ ಪಡೆದರು. ಅವರು 1924ರಲ್ಲಿ ಕಾನ್ಪೋರ್‌ ನಲ್ಲಿ ಭೇಟಿಯಾದ ಚಂದ್ರಶೇಖರ್‌ ಆಜಾದ್‌ ಮತ್ತು ಭಗತ್‌ ಸಿಂಗ್‌ ಅವರಂತಹ ಸ್ವಾತಂತ್ರ್ಯ ಹೋರಾಟಗಾರರೊಂದಿಗೆ ನಿಕಟ ಸಹವರ್ತಿಯಾಗಿದ್ದರು. ಬಟುಕೇಶ್ವರ್‌ ದತ್‌ ಅವರು ಹಿಂದೂಸ್ತಾನ್‌ ಸೋಷಿಯಲಿಸ್ಟ್‌ ರಿಪಬ್ಲಿಕನ್‌ ಅಸೋಸಿಯೇಷನ್‌ (HSRA)ಗಾಗಿ ಕೆಲಸ ಮಾಡುವಾಗ ಅವರು ಬಾಂಬ್‌ ತಯಾರಿಕೆಯ ಬಗ್ಗೆ ಕಲಿತರು. 1928ರಲ್ಲಿ ಹೆಚ್‌ ಎಸ್‌ ಆರ್‌ ಎ ಅನ್ನು ನವದೆಹಲಿಯ ಫಿರೋಜ್ ಷಾ ಕೋಟ್ಲಾದಲ್ಲಿ ಚಂದ್ರಶೇಖರ್ ಆಜಾದ್, ಅಶ್ಫಾಕುಲ್ಲಾ ಖಾನ್, ಭಗತ್ ಸಿಂಗ್, ಸುಖದೇವ್ ಥಾಪರ್ ಮತ್ತು ಜೋಗೇಶ್ ಚಂದ್ರ ಚಟರ್ಜಿ ಸ್ಥಾಪಿಸಿದರು.


ಅಸ್ಲೆಂಬಿ ಮೇಲೆ ಬಾಂಬ್‌ ಎಸೆತ
ಕ್ರಾಂತಿಕಾರಿಗಳ ಉದಯವನ್ನು ನಿಗ್ರಹಿಸಲು ಬ್ರಿಟಿಷ್‌ ಸರ್ಕಾರವು ಭಾರತದ ರಕ್ಷಣಾ ಕಾಯಿದೆಯನ್ನು ಜಾರಿಗೆ ತರಲು ನಿರ್ಧರಿಸಿತು. ಇದೃ ಸಂದರ್ಭದಲ್ಲಿ ಭಗತ್ ಸಿಂಗ್ ಸೆಂಟ್ರಲ್‌ ಲೆಜಿಸ್ಲೇಟಿವ್‌ ಅಸೆಂಬ್ಲಿಯೊಳಗೆ ಬಾಂಬ್‌ ಸ್ಪೋಟಿಸುವ ಯೋಜನೆಯನ್ನು ಹೆಚ್‌ ಎಸ್‌ ಆರ್‌ ಎ ಪ್ರಸ್ತಾಪಿಸಿದರು. ಭಗತ್ ಸಿಂಗ್‌ ಯುಎಸ್‌ ಎಸ್‌ ಆರ್‌ ಗೆ ಪ್ರಯಾಣಿಸುವಾಗ ಬಟುಕೇಶ್ವರ ದತ್‌ ಮತ್ತು ಸುಖದೇವ್‌ ಥಾಪರ್‌ ಬಾಂಬ್‌ ಇಡುತ್ತಾರೆ ಎಂದು ಹೇಳಲಾಗಿತ್ತು. ಏಪ್ರಿಲ್‌ 8, 1929ರಂದು ಭಗತ್ ಸಿಂಗ್‌ ಮತ್ತು ಬಟುಕೇಶ್ವರ ದತ್‌ ವಿಸಿಟರ್ಸ್‌ ಗ್ಯಾಲರಿಯಿಂದ ಧಾವಿಸಿ ಅಸೆಂಬ್ಲಿಯೊಳಗೆ ಎರಡು ಬಾಂಬ್‌ ಗಳನ್ನು ಎಸೆದರು. ಲಾಲಾ ಲಜಪತ್‌ ರಾಯ್‌ ಅವರ ಮರಣವನ್ನು ವಿರೋಧಿಸಲು ಈ ನಿರ್ಧಾರ ಮಾಡಲಾಗಿತ್ತು. ಈ ಕೃತ್ಯವೆಸಗಿರುವ ಭಗತ್‌ ಸಿಂಗ್‌ ಮತ್ತು ಬಟುಕೇಶ್ವರ ದತ್‌ ಅವರನ್ನು ಬಂಧಿಸಲಾಯಿತು.
ಭಗತ್‌ ಸಿಂಗ್‌ ಮತ್ತು ಸುಖದೇವ್‌ ಥಾಪರ್‌ ಜೊತೆಗೆ ಸೆಂಟ್ರಲ್‌ ಅಸೆಂಬ್ಲಿ ಬಾಂಬ್‌ ಪ್ರಕರಣದಲ್ಲಿ ದತ್ ಅವರನ್ನು ವಿಚಾರಣೆಗೆ ಒಳಪಡಿಸಲಾಯಿತು. ನಂತರ ದೆಹಲಿಯ ನ್ಯಾಯಾಧೀಶರು ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ 307 ಮತ್ತು ಸ್ಫೋಟಕ ವಸ್ತುಗಳ ಕಾಯಿದೆಯ ಸೆಕ್ಷನ್‌ 4ರ ಅಡಿಯಲ್ಲಿ ಶಿಕ್ಷೆಗೆ ಗುರಿಯಾದರು. ಅವರನ್ನು ಸೆಲ್ಯುಲಾರ್‌ ಜೈಲಿಗೆ ಸ್ಥಳಾಂತರಿಸಲಾಯಿತು.
ಬಟುಕೇಶ್ವರ್‌ ದತ್‌ ಅವರು ಜೈಲಿನಿಂದ ಬಿಡುಗಡೆಗೊಂಡ ನಂತರ ಕ್ಷಯರೋಗಕ್ಕೆ ತುತ್ತಾದರು. ಆವರಿಗೆ ಅನಾರೋಗ್ಯವಿದ್ದರೂ ಸಹ ಮಹಾತ್ಮಾ ಗಾಂಧಿಯವರ ಕ್ವಿಟ್‌ ಇಂಡಿಯಾ ಚಳವಳಿಯಲ್ಲಿ ಭಾಗವಹಿಸಿದ್ದರು. ಈ ಕಾರಣಕ್ಕಾಗಿ ಅವರು ಮತ್ತೆ ನಾಲ್ಕು ವರ್ಷಗಳ ಕಾಲ ಜೈಲು ಸೇರಬೇಕಾಯಿತು.
ಬಟುಕೇಶ್ವರ್‌ ದತ್‌ ಅವರು ಅನಾರೋಗ್ಯದಿಂದ ಜುಲೈ 20 1965ರಲ್ಲಿ ನಿಧನರಾದರು.

Leave a Reply

Your email address will not be published.

This site uses Akismet to reduce spam. Learn how your comment data is processed.