ಪ್ರಪಂಚದ ಸ್ಥಳೀಯ ಜನರ ಹಕ್ಕುಗಳ ಕುರಿತು ಜಾಗೃತಿ ಮೂಡಿಸಲು ಮತ್ತು ರಕ್ಷಿಸಲು ಪ್ರತಿ ವರ್ಷ ಆಗಸ್ಟ್ 9 ರಂದು ಅಂತರಾಷ್ಟ್ರೀಯ ಸ್ಥಳೀಯ ಜನರ ದಿನವನ್ನು ಆಚರಿಸಲಾಗುತ್ತದೆ. ಈ ದಿನವು ಪರಿಸರ ಸಂರಕ್ಷಣೆಯಂತಹ ಪ್ರಪಂಚದ ಸಮಸ್ಯೆಗಳನ್ನು ಸುಧಾರಿಸಲು ಸ್ಥಳೀಯ ಜನರು ಮಾಡುವ ಸಾಧನೆಗಳು ಮತ್ತು ಕೊಡುಗೆಗಳನ್ನು ಗುರುತಿಸುತ್ತದೆ. ಈ ದಿನವನ್ನು ವಿಶ್ವ ಬುಡಕಟ್ಟು ದಿನ ಎಂದೂ ಕರೆಯಲಾಗುತ್ತದೆ. ಈ ದಿನ ಜಾಗತಿಕವಾಗಿ ಗುರುತಿಸಿಕೊಂಡಿರುವ ಪರಿಸರ ಸಂಬಂಧಿತ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಸ್ಥಳೀಯ ಸಮುದಾಯಗಳು ಮಾಡಿದ ಗಮನಾರ್ಹ ಸಾಧನೆಗಳು ಮತ್ತು ಅಮೂಲ್ಯ ಕೊಡುಗೆಗಳನ್ನು ಗುರುತಿಸಲು ಒಂದು ವೇದಿಕೆಯಾಗಿದೆ. ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಕ್ಷೇತ್ರಗಳಲ್ಲಿ ಸ್ಥಳೀಯ ಜನರ ಭಾಗವಹಿಸುವಿಕೆಯನ್ನು ಹೆಚ್ಚುಗೊಳಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಈ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಈ ವರ್ಷ ಅಂತರಾಷ್ಟ್ರೀಯ ಸ್ಥಳೀಯ ಜನರ ದಿನದ ಥೀಮ್‌ ‘Protecting the Rights of Indigenous Peoples in Voluntary Isolation and Initial Contact.’


ಇತಿಹಾಸ
ಆಗಸ್ಟ್‌ 9, 1982ರಂದು ಜಿನೀವಾದಲ್ಲಿ ನಡೆದ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮಾನವ ಹಕ್ಕುಗಳ ಉತ್ತೇಜನ ಮತ್ತು ರಕ್ಷಣೆಯ ಉಪ ಆಯೋಗದ ಸ್ಥಳೀಯ ಜನಸಂಖ್ಯೆ ಮೊದಲ ಕಾರ್ಯತಂಡವನ್ನು ರಚಿಸಲಾಗಿತ್ತು. ಈ ಕಾರ್ಯತಂಡ ಸ್ಥಳೀಯ ಜನ ಸಮುದಾಯಗಳ ಶಿಕ್ಷಣ, ಸಂಸ್ಕೃತಿ, ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿ, ಪರಿಸರ ಹಾಗೂ ಆರೋಗ್ಯ ಸೇರಿದಂತೆ ಮುಂತಾದ ವಿಷಯಗಳ ಬಗ್ಗೆ ಕೆಲಸ ಮಾಡುವ ಗುರಿಯನ್ನು ಹೊಂದಿದೆ.

ಡಿ. 23, 1994 ರಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಸ್ಥಳೀಯ ಜನಸಂಖ್ಯೆಯ ಯುಎನ್ ಕಾರ್ಯಕಾರಿ ಮಂಡಳಿಯ ಉದ್ಘಾಟನಾ ಅಧಿವೇಶನವನ್ನು ಗುರುತಿಸಿ ವಾರ್ಷಿಕವಾಗಿ ಆಗಸ್ಟ್ 9 ರಂದು ಅಂತರರಾಷ್ಟ್ರೀಯ ಸ್ಥಳೀಯ ಜನರ ದಿನವನ್ನು ಆಚರಿಸಲು ನಿರ್ಧರಿಸಿತು. ಅಂದಿನಿಂದ ವಿಶ್ವದಾದ್ಯಂತ ಪ್ರತಿ ವರ್ಷ ಆಗಸ್ಟ್ 9 ರಂದು ಅಂತರಾಷ್ಟ್ರೀಯ ಸ್ಥಳೀಯ ಜನರ ದಿನವನ್ನಾಗಿ ಆಚರಿಸಿಕೊಂಡು ಬರಲಾಗಿದೆ.


ಈ ಆಚರಣೆಯು ವಿಶ್ವಾದ್ಯಂತ ಸ್ಥಳೀಯ ಸಮುದಾಯಗಳು ಎದುರಿಸುತ್ತಿರುವ ಅಸಮಾನತೆ ಹೋಗಲಾಡಿಸುವ ಉದ್ದೇಶವನ್ನು ಹೊಂದಿದೆ. ಅವರ ಹಕ್ಕುಗಳು ಮತ್ತು ಯೋಗಕ್ಷೇಮದ ಬಗ್ಗೆ ಗಮನ ಹರಿಸುವ ತುರ್ತು ಅಗತ್ಯತೆಯನ್ನು ಹೊಂದಿದೆ. ಇದಲ್ಲದೆ ಅವರು ಅನೇಕ ಭಾಷೆಗಳನ್ನು ಸಂರಕ್ಷಿಸುವುದು ಮತ್ತು ವೈವಿಧ್ಯಮಯ ಸಂಸ್ಕೃತಿಗಳನ್ನು ಪ್ರತಿನಿಧಿಸುವುದು ಅವುಗಳನ್ನು ಜಾಗತಿಕ ಪರಂಪರೆಯ ಅನಿವಾರ್ಯ ಭಾಗವನ್ನಾಗಿ ಮಾಡಲಾಗುತ್ತದೆ.

ಯುಎನ್ ವರದಿಗಳ ಪ್ರಕಾರ, ಜಾಗತಿಕವಾಗಿ ಸರಿಸುಮಾರು 476 ಮಿಲಿಯನ್ ಸ್ಥಳೀಯ ಜನರು 90 ದೇಶಗಳಲ್ಲಿ ವಾಸಿಸುತ್ತಿದ್ದಾರೆ.ವಿಶ್ವದ ಜನಸಂಖ್ಯೆಯ ಸುಮಾರು 6% ರಷ್ಟಿದ್ದು, 5,000 ಕ್ಕಿಂತ ಹೆಚ್ಚು ವಿಭಿನ್ನ ಸಂಸ್ಕೃತಿ ಹಾಗೂ 7,000 ಭಾಷೆಗಳನ್ನು ಒಳಗೊಂಡಿದ್ದಾರೆ.


ಮಹತ್ವ
• ವಿಶ್ವದ ಸಾಂಸ್ಕೃತಿಕ ಮತ್ತು ಜೈವಿಕ ಭೂದೃಶ್ಯದ ವೈವಿಧ್ಯತೆಯನ್ನು ಉಳಿಸಿಕೊಳ್ಳುವಲ್ಲಿ ಸ್ಥಾನೀಯ ಜನರ ಮಹತ್ವದ ಕೊಡುಗೆಯನ್ನು ಎತ್ತಿ ಹಿಡಿಯಲಾಗಿದೆ.
• ಈ ಆಚರಣೆಯು ಸಾಂಸ್ಕೃತಿಕ, ಐತಿಹಾಸಿಕ ಮತ್ತು ವೈಜ್ಞಾನಿಕ ಮಹತ್ವವನ್ನು ಹೊಂದಿದೆ. ಸ್ಥಳೀಯ ಮತ್ತು ಬುಡಕಟ್ಟು ಸಂಸ್ಕೃತಿಗಳು ಮಾನವೀಯತೆಯ ಮೌಲ್ಯದ ಬಗ್ಗೆ ಈ ದಿನ ತಿಳಿಸಲಾಗುತ್ತದೆ.
• ಸ್ಥಳೀಯ ಜನರು ಸಂಗ್ರಹಿಸಿದ ಜ್ಞಾನವನ್ನು ಗುರುತಿಸುವುದು ಸಾಂಸ್ಕೃತಿಕ ಸಮೃದ್ಧಿಗೆ ಮಾತ್ರವಲ್ಲದೆ ವೈಜ್ಞಾನಿಕ ಪ್ರಗತಿಗೂ ಕೊಡುಗೆ ನೀಡಲು ಸಹಾಯಕವಾಗಿದೆ.
• ಪ್ರಾಚೀನ ಸಂಸ್ಕೃತಿಗಳು ಶತಮಾನಗಳಿಂದ ಬದುಕುಳಿಯುವ ತಂತ್ರಗಳನ್ನು ಅಭಿವೃದ್ಧಿಪಡಿಸಿವೆ. ಮಾನವ ಪರಂಪರೆಯ ವೈವಿಧ್ಯಮಯ ರಚನೆಯನ್ನು ಎತ್ತಿಹಿಡಿಯಲು ಸ್ಥಳೀಯ ಭಾಷೆಗಳು, ಆಧ್ಯಾತ್ಮಿಕ ಅಭ್ಯಾಸಗಳು ಮತ್ತು ತತ್ವಶಾಸ್ತ್ರಗಳನ್ನು ಸಂರಕ್ಷಿಸುವುದು ಅತ್ಯಗತ್ಯ.
• ಸ್ಥಳೀಯ ಸಮುದಾಯಗಳಲ್ಲಿ ಏಕತೆಯನ್ನು ಬೆಳೆಸುವ ಮತ್ತು ವ್ಯಾಪಕ ಜನಸಂಖ್ಯೆಯಲ್ಲಿ ಪ್ರಜ್ಞೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ.

Leave a Reply

Your email address will not be published.

This site uses Akismet to reduce spam. Learn how your comment data is processed.