ಇತ್ತೀಚಿನ ದಿನಗಳಲ್ಲಿ ಅರವಳಿಕೆ ನೀಡದೆ ವೈದ್ಯರು ಯಾವುದೇ ಶಸ್ತ್ರಚಿಕಿತ್ಸೆ ಕೂಡ ಮಾಡಲಾಗುದಿಲ್ಲ. ಹೀಗಿರುವಾಗ ಆರೋಗ್ಯ ಸೇವೆಗಳಲ್ಲಿ ಅನಸ್ತೇಶಿಯಾ ಕುರಿತಾಗಿ ಜನರಿಗೆ ಜಾಗೃತಿ ಮೂಡಿಸುವ ಸಲುವಾಗಿ ಪ್ರತಿ ವರ್ಷ ಅಕ್ಟೋಬರ್‌ 16ರಂದು ವಿಶ್ವ ಅನಸ್ತೇಶಿಯಾ ದಿನವೆಂದು ಆಚರಿಸಲಾಗುತ್ತದೆ. ಅರಿವಳಿಕೆ ತಜ್ಞರ ಗೌರವಾರ್ಥವಾಗಿಯೂ ಈ ದಿನವನ್ನು ಆಚರಿಸಲಾಗುತ್ತದೆ. ಶಸ್ತ್ರಚಿಕಿತ್ಸೆಯನ್ನು ಸುಲಭಗೊಳಿಸುವಲ್ಲಿ ಅನಸ್ತೇಶಿಯಾ ತಜ್ಞರು ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತಾರೆ. ಅವರ ಪ್ರಾಮುಖ್ಯತೆಯನ್ನೂ ಈ ದಿನ ನೆನಪಿಸಿಕೊಳ್ಳಲಾಗುತ್ತದೆ.


ಇತಿಹಾಸ
ಅಮೇರಿಕಾದ ದಂತವೈದ್ಯ ವಿಲಿಯಮ್ ಟಿ ಜಿ ಮಾರ್ಟನ್‌ ಅವರು ತಮ್ಮ ಹಲವು ವರ್ಷಗಳ ಸಂಶೋಧನೆಯ ಫಲವಾಗಿ ಈಥರ್‌ ಎಂಬ ಅರಿವಳಿಕೆಯನ್ನು ಕಂಡುಹಿಡಿದರು. ಅಕ್ಟೋಬರ್ 16, 1846ರಲ್ಲಿ  ಗಿಲ್ಬರ್ಟ್ ಅಬಾಟ್ ಎಂಬ ರೋಗಿಗೆ ಶಸ್ತ್ರಚಿಕಿತ್ಸೆ ಮಾಡುವಾಗ ಮೊದಲು ಈಥರ್‌ ಎಂಬ ಅರಿವಳಿಕೆಯನ್ನು ನೀಡಿದರು. ಶಸ್ತ್ರಚಿಕಿತ್ಸೆ ಯಶಸ್ವಿಯಾಯಿತು. ಈ ದಿನದಂದು ಈಥರ್ ಅನ್ನು ಅರಿವಳಿಕೆಯಾಗಿ ಹೇಗೆ ಬಳಸಬಹುದು ಎಂಬುದನ್ನು ಯಶಸ್ವಿಯಾಗಿ ಪ್ರದರ್ಶಿಸಲಾಯಿತು. ಆದ್ದರಿಂದ ಅನೇಕ ದೇಶಗಳಲ್ಲಿ ಈ ದಿನವನ್ನು ಈಥರ್ ಡೇ ಎಂದೂ ಕರೆಯುತ್ತಾರೆ. ವೈದ್ಯಕೀಯ ಕ್ಷೇತ್ರದಲ್ಲಿನ ಈ ಮಹಾನ್ ಸಾಧನೆಯನ್ನು ಸ್ಮರಿಸುವುದಕ್ಕಾಗಿ ಈ ದಿನವನ್ನು  ಮೀಸಲಿಡಲಾಗಿದೆ.


1960 ರಲ್ಲಿ, ವರ್ಲ್ಡ್ ಫೆಡರೇಶನ್ ಆಫ್ ಸೊಸೈಟೀಸ್ ಆಫ್ ಅನಸ್ತೇಶಿಯಾಲಜಿಸ್ಟ್ಸ್(ಡಬ್ಲ್ಯುಎಫ್ಎಸ್ಎ) ಅರಿವಳಿಕೆಯ ಪರಿಚಯದ ನೆನಪಿಗಾಗಿ ಮತ್ತು ಆಧುನಿಕ ಔಷಧದಲ್ಲಿ ಅರಿವಳಿಕೆಯ ಪ್ರಾಮುಖ್ಯತೆಯ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ವಿಶ್ವ ಅರಿವಳಿಕೆ ದಿನವನ್ನಾಗಿ ಆಚರಿಸಲಾಗುತ್ತದೆ. ಸುಮಾರು 150 ದೇಶಗಳ ಅರಿವಳಿಕೆ ತಜ್ಞರನ್ನು ಪ್ರತಿನಿಧಿಸುವ ಸುಮಾರು 134 ಸೊಸೈಟಿಗಳು ಆಚರಣೆಯಲ್ಲಿ ಭಾಗವಹಿಸುತ್ತವೆ.


ಮಹತ್ವ
• ವೈದ್ಯಕೀಯ ವಿಶೇಷತೆಯ ಪ್ರಾಮುಖ್ಯತೆಯನ್ನು ಗುರುತಿಸುವುದರಿಂದ ರೋಗಿಗಳ ಸುರಕ್ಷತೆಯಲ್ಲಿ ವಹಿಸುವ ನಿರ್ಣಾಯಕ ಪಾತ್ರದ ಬಗ್ಗೆ ಜಾಗೃತಿ ಮೂಡಿಸಲು ಈ ದಿನ ಸೂಕ್ತವಾಗಿದೆ.
• ಆರೋಗ್ಯ ರಕ್ಷಣೆಯಲ್ಲಿ ಅರಿವಳಿಕೆ ಕುರಿತು ಸಾರ್ವಜನಿಕರಿಗೆ ತಿಳಿದುಕೊಳ್ಳಲು ಈ ದಿನ ಸಹಾಯಕವಾಗಿದೆ.
• ವಿಶ್ವ ಅರಿವಳಿಕೆ ದಿನವು ವಿಶ್ವಾದ್ಯಂತ ಅರಿವಳಿಕೆ ವೃತ್ತಿಪರರಲ್ಲಿ ಏಕತೆಯ ಭಾವವನ್ನು ಬೆಳೆಸುತ್ತದೆ. ಇದು ರೋಗಿಗಳ ಆರೈಕೆಯನ್ನು ಮತ್ತಷ್ಟು ಹೆಚ್ಚಿಸಲು ಸಹಯೋಗ ಮತ್ತು ಮಾಹಿತಿ ಹಂಚಿಕೆಕೊಳ್ಳಲು ಪ್ರೋತ್ಸಾಹಿಸಲಾಗುತ್ತದೆ.

ಅರಿವಳಿಕೆಯ ಪ್ರಯೋಜನಗಳು
• ನೋವು ನಿವಾರಣೆ: ಅರಿವಳಿಕೆಯು ಶಸ್ತ್ರಚಿಕಿತ್ಸೆ ಮತ್ತು ಇತರ ವೈದ್ಯಕೀಯ ಕಾರ್ಯವಿಧಾನಗಳ ಸಮಯದಲ್ಲಿ ನೋವು ಮತ್ತು ಅಸ್ವಸ್ಥತೆಯನ್ನು ನಿವಾರಿಸುತ್ತದೆ. ಇದು ರೋಗಿಗಳಿಗೆ ತೊಂದರೆಯಾಗದಂತೆ ಚಿಕಿತ್ಸೆಗೆ ಒಳಗಾಗಲು ಅನುವು ಮಾಡಿಕೊಡುತ್ತದೆ.
• ಮರೆಗುಳಿತನ: ಅರಿವಳಿಕೆಯು ರೋಗಿಗಳಿಗೆ ವೈದ್ಯರು ಮಾಡುವ ಶಸ್ತ್ರಚಿಕಿತ್ಸೆಯ ಕಾರ್ಯವಿಧಾನವನ್ನು ಮರೆತುಬಿಡುವಂತೆ ಮಾಡುತ್ತದೆ.
• ತೊಡಕುಗಳ ಅಪಾಯವನ್ನು ಕಡಿಮೆ ಮಾಡುತ್ತದೆ: ಅರಿವಳಿಕೆಯು ಶಸ್ತ್ರಚಿಕಿತ್ಸೆಯ ಸಮಯದಲ್ಲಿ ರಕ್ತಸ್ರಾವ, ಸೋಂಕು ಮತ್ತು ಹೃದಯ ಸ್ತಂಭನದಂತಹ ತೊಡಕುಗಳ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
• ಸುಧಾರಿತ ರೋಗಿಯ ಫಲಿತಾಂಶಗಳು: ಅರಿವಳಿಕೆಯು ತೊಡಕುಗಳ ಅಪಾಯವನ್ನು ಕಡಿಮೆ ಮಾಡುವ ಮೂಲಕ ರೋಗಿಯ ಫಲಿತಾಂಶಗಳನ್ನು ಸುಧಾರಿಸಲು ಸಹಾಯ ಮಾಡುತ್ತದೆ.


ಅರಿವಳಿಕೆಯಿಂದ ದೇಹದ ಉಷ್ಣತೆ ಕಡಿಮೆಯಾಗುವುದು, ಮೂತ್ರ ವಿಸರ್ಜನೆಯಲ್ಲಿ ತೊಂದರೆ, ಆಯಾಸ, ತಲೆನೋವು, ಗಂಟಲು ಕೆರೆತ, ವಾಂತಿಯಂತಹ ಅಡ್ಡ ಪರಿಣಾಮಗಳೂ ಇವೆ.

ಆಗುವ ಪರಿಣಾಮ

Leave a Reply

Your email address will not be published.

This site uses Akismet to reduce spam. Learn how your comment data is processed.