ರಾಷ್ಟ್ರೀಯ ಸ್ವಯಂಸೇವಕ ಸಂಘದಿಂದ ಪ್ರೇರಿತರಾಗಿ ಸಾಮಾಜಿಕ ಜೀವನದ ವಿವಿಧ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಚಾರಕರ ವರ್ಗ ಅಕ್ಟೋಬರ್ 31ರಿಂದ ನವೆಂಬರ್ 4 2024 ರವರೆಗೆ ದೀಪಾವಳಿಯ ಶುಭ ಸಂದರ್ಭದಲ್ಲಿ ಗ್ವಾಲಿಯರ್, ಮಧ್ಯಪ್ರದೇಶದಲ್ಲಿ ಆಯೋಜನೆ ಮಾಡಲಾಗುತ್ತಿದೆ. ಈ ವರ್ಗದಲ್ಲಿ ದೇಶದಾದ್ಯಂತವಿರುವ 31 ವಿವಿಧ ಕ್ಷೇತ್ರಗಳಿಂದ ಒಟ್ಟು 554 ಪ್ರಚಾರಕರು ಭಾಗವಹಿಸಲಿದ್ದಾರೆ. ಈ ವರ್ಗದ ಸ್ವರೂಪ ಪ್ರಶಿಕ್ಷಣಾತ್ಮಕ ರೀತಿಯಲ್ಲಿರಲಿದೆ.
ಈ ಅಖಿಲ ಭಾರತೀಯ ವರ್ಗವು 4-5 ವರ್ಷಗಳಿಗೊಮ್ಮೆ ಆಯೋಜಿಸಲಾಗುವುದು. ವರ್ಗದಲ್ಲಿ ಆರ್ ಎಸ್ ಎಸ್ ಸರಸಂಘಚಾಲಕ ಡಾ. ಮೋಹನ್ ಭಾಗವತ್, ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಅವರು ಸೇರಿದಂತೆ ಸಂಘದ ಎಲ್ಲಾ ಸಹಸರಕಾರ್ಯವಾಹರು ಮತ್ತು ಇತರ ಪ್ರಮುಖ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ. ವರ್ಗದಲ್ಲಿ ಅಪೇಕ್ಷಿತರಾಗಿರುವ ಎಲ್ಲಾ ಕಾರ್ಯಕರ್ತರು ಸಾಮಾಜಿಕ ಜೀವನದ ವಿವಿಧ ಕ್ಷೇತ್ರಗಳಲ್ಲಿ ರಾಷ್ಟ್ರೀಯತೆಯ ಭಾವನೆಯೊಂದಿಗೆ ಸಮಾಜದ ಹಿತಕ್ಕಾಗಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದರಲ್ಲಿ ಕಾರ್ಮಿಕರ, ರೈತರ, ವಿದ್ಯಾರ್ಥಿಗಳ ಮತ್ತು ಸಾಮಾಜಿಕ, ಧಾರ್ಮಿಕ, ಆರ್ಥಿಕ ಹಾಗೂ ಗ್ರಾಮೀಣ, ವನವಾಸಿ, ನಗರ ಮುಂತಾದ ಕ್ಷೇತ್ರಗಳ ಕಾರ್ಯದ ಬಗ್ಗೆ ಚರ್ಚೆ ನಡೆಸುತ್ತೇವೆ.
ಈ ವರ್ಗದಲ್ಲಿ ವ್ಯಕ್ತಿಗತ ಕುಶಲಕ್ಷೇಮ, ವ್ಯಕ್ತಿಗತ ವಿಕಾಸ, ಸ್ವಾಧ್ಯಾಯದ ಜೊತೆಗೆ ಸಾಮಾಜಿಕ ಜೀವನಕ್ಕೆ ಅವಶ್ಯಕವಾದ ಕಾರ್ಯಗಳ ಬಗ್ಗೆ ಚರ್ಚೆ ಮತ್ತು ಪರಸ್ಪರ ಅನುಭವಗಳನ್ನು ಹಂಚಿಕೊಳ್ಳಲಾಗುತ್ತದೆ. ಎಲ್ಲರೂ ತಮ್ಮ ಕಾರ್ಯ ಅಥವಾ ಅನುಭವಗಳನ್ನು ಹಂಚಿಕೊಂಡು ವಿವರವಾದ ಚರ್ಚೆ ನಡೆಸುತ್ತಾರೆ. ರಾಷ್ಟ್ರೀಯ ಮತ್ತು ಸಾಮಾಜಿಕ ಕಾರ್ಯಗಳೊಂದಿಗೆ ಸಂಬಂಧಿಸಿದ ವಿಷಯಗಳು, ವಿಶೇಷ ಚೇತನರು, ಯುವ ಮತ್ತು ಮಹಿಳಾ ಸಬಲೀಕರಣ, ಸ್ವಾವಲಂಬಿ, ಸುರಕ್ಷೆ, ಜೈವಿಕ ಕೃಷಿ, ಜಲ ನಿರ್ವಹಣೆ, ಪರಿಸರ ಸಂರಕ್ಷಣೆ, ಘುಮಂತು ಕಾರ್ಯ, ವ್ಯಸನ ಮುಕ್ತಿಯಂತಹ ಇತರೆ ಅನೇಕ ವಿಷಯಗಳಿಗೆ ಸಂಬಂಧಿಸಿ ನಿರಂತರ ಸಕ್ರಿಯರಾಗಿರುವ ಎಲ್ಲಾ ಕಾರ್ಯಕರ್ತರು ಈ ವರ್ಗದಲ್ಲಿ ಮಂಥನ ನಡೆಸಲಿದ್ದಾರೆ.
– ಶ್ರೀ ಸುನಿಲ್ ಅಂಬೇಕರ್
ಅಖಿಲ ಭಾರತೀಯ ಪ್ರಚಾರ ಪ್ರಮುಖ್
ರಾಷ್ಟ್ರೀಯ ಸ್ವಯಂಸೇವಕ ಸಂಘ