ಇಂದು ಪುಣ್ಯಸ್ಮರಣೆ

ಜೈವೀರ್ ಅಗರ್ವಾಲ್ ಅವರು ಒಬ್ಬ ಭಾರತೀಯ ನೇತ್ರಜ್ಞ. ಡಾ.ಅಗರ್ವಾಲ್ಸ್ ಕಣ್ಣಿನ ಆಸ್ಪತ್ರೆಯ ಸಂಸ್ಥಾಪಕರು. ಜೈವೀರ್‌ ಅಗರ್ವಾಲ್‌ ಅವರು ಬಡರೋಗಿಗಳ ಬದುಕಿಗೆ ಬೆಳಕಾದವರು. ಆಗಿನ ಭಾರತದ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಮುನ್ನುಡಿಯೊಂದಿಗೆ ಪುಸ್ತಕವನ್ನು ಬರೆದ ಏಕೈಕ ನೇತ್ರಶಾಸ್ತ್ರಜ್ಞರಾಗಿದ್ದರು. ಇಂದು ಅವರ ಪುಣ್ಯತಿಥಿ.


ಪರಿಚಯ
ಜೈವೀರ್ ಅಗರ್ವಾಲ್ ಅವರು ಸೆಪ್ಟೆಂಬರ್ 24, 1930 ರಂದು ಚೆನ್ನೈನಲ್ಲಿ ಜನಿಸಿದರು. ಇವರು ತಂದೆಯ ಮಾರ್ಗದರ್ಶನದಿಂದಲೇ ತಮ್ಮ ಜೀವನವನ್ನು ನಡೆಸಿದರು. ಜೈವೀರ್‌ ಅಗರ್ವಾಲ್‌ ಅವರು ಆರಂಭಿಕ ಶಿಕ್ಷಣವನ್ನು ಚೆನ್ನೈನಲ್ಲಿ ಮುಗಿಸಿದರು. ಜೈಪುರದ ಎಸ್ಎಂಎಸ್ ವೈದ್ಯಕೀಯ ಕಾಲೇಜಿನಲ್ಲಿ ವೈದ್ಯಕೀಯ ಶಿಕ್ಷಣವನ್ನು ಪಡೆದರು. ಅವರು ವಿದ್ಯಾರ್ಥಿಯಾಗಿದ್ದಾಗಲೇ ಪ್ರಸಿದ್ಧ ನೇತ್ರತಜ್ಞೆಯಾದ ಡಾ.ತಾಹಿರಾ ಅವರು ಭೇಟಿಯಾದರು. ನಂತರ ತಾಹಿರಾ ಅವರೇ ಜೈವೀರ್‌ ಅಗರ್ವಾಲ್‌ ಅವರಿಗೆ ಸಂಗಾತಿಯಾದರು. ಮದುವೆಯಾದ ನಂತರ ಒಬ್ಬರು ಒಂದೇ ಸಂಸ್ಥೆಯನ್ನು ನಡೆಸಿ ಬಡ ಅಂಧರಿಗೆ ದಾರಿದೀಪವಾದವರು.


ತಮ್ಮ ವೈದ್ಯಕೀಯ ವೃತ್ತಿಯನ್ನು ಪ್ರಾರಂಭಿಸಿದ ಸ್ವಲ್ಪ ಸಮಯದ ನಂತರ ಅವರೇ ಸ್ವಂತ ಒಂದು ಕ್ಲಿನಿಕ್‌ ಆರಂಭಿಸಿದ್ದರು. ಈ ವೇಳೆ ಅವರ ಬಳಿ ಯಾವುದೇ ಉಪಕರಣಗಳಿಲ್ಲದೆ ಸಾಕಷ್ಟು ಕಷ್ಟದ ಪರಿಸ್ಥಿತಿ ಬಂದಿತ್ತು. ಅವರು ರೋಗಿಗಳ ಬಳಿ ಹೆಚ್ಚು ಹಣ ಪಡೆಯದೆ ಬಂದ ಆದಾಯದಲ್ಲಿ ಶಸ್ತ್ರಚಿಕಿತ್ಸೆಗೆ ಬೇಕಾದ ವಸ್ತುಗಳನ್ನ ಖರೀದಿಸಿದ್ದರು. ಡಾ. ಜೆ. ಅಗರ್ವಾಲ್, ನೇತ್ರವಿಜ್ಞಾನ ಕ್ಷೇತ್ರದಲ್ಲಿ ಡೊಯೆನ್, ಚೆನ್ನೈ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಅನೇಕ ನೇತ್ರ ಚಿಕಿತ್ಸೆ ಶಿಬಿರಗಳನ್ನು ನಡೆಸಿದರು. ಅಷ್ಟೇ ಅಲ್ಲದೆ ಹಳ್ಳಿಗಳಲ್ಲಿ ಇದ್ದ ಲಕ್ಷಾಂತರ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದರು. ಕಾರ್ನಿಯಲ್ ಕುರುಡುತನದ ಚಿಕಿತ್ಸೆಗಾಗಿ ನೇತ್ರದಾನ ಅಭಿಯಾನ ಮತ್ತು ದೋಷಯುಕ್ತ ದೃಷ್ಟಿಗಾಗಿ ಶಾಲಾ ಮಕ್ಕಳ ತಪಾಸಣೆಗೆ ನೇತೃತ್ವ ವಹಿಸಿದ್ದರು. ಕಾರ್ನಿಯಲ್ ಕುರುಡುತನದ ಚಿಕಿತ್ಸೆಗಾಗಿ ನೇತ್ರದಾನ ಅಭಿಯಾನ ಹಾಗೂ ದೋಷಯುಕ್ತ ದೃಷ್ಟಿಗಾಗಿ ಶಾಲಾ ಮಕ್ಕಳ ಕಣ್ಣಿನ ತಪಾಸಣೆಗೆ ನೇತೃತ್ವ ವಹಿಸಿದ್ದರು.


ಡಾ. ಜೈವೀರ್‌ ಅಗರ್ವಾಲ್ ಅವರು 1992 ರಲ್ಲಿ ಅಖಿಲ ಭಾರತ ನೇತ್ರಶಾಸ್ತ್ರದ ಸೊಸೈಟಿಯ ಅಧ್ಯಕ್ಷರಾಗಿದ್ದರು. ಅವರು ತಮಿಳುನಾಡು ನೇತ್ರವಿಜ್ಞಾನ ಸಂಘ ಮತ್ತು ಮದ್ರಾಸ್ ಸಿಟಿ ನೇತ್ರವಿಜ್ಞಾನ ಸಂಘದ ಅಧ್ಯಕ್ಷರೂ ಆಗಿದ್ದರು. ಡಾ. ಜೈವೀರ್‌ ಅಗರ್ವಾಲ್ ಅವರು ಡಾ. ಅಗರ್ವಾಲ್ಸ್ ನೇತ್ರಾಲಯ ಆಸ್ಪತ್ರೆಯನ್ನು ಆರಂಭಿಸಿದರು. ಆಂಧ್ರಪ್ರದೇಶದ 8 ನೆಲ್ಲೂರು, ತಿರುಪತಿ, ರಾಜಮಂಡ್ರಿ ಮತ್ತು ವಿಶಾಖಪಟ್ಟಣಂ, ಜೈಪುರ, ಕೇರಳದಲ್ಲಿ ಎರಡು ಶಾಖೆಗಳು, ತಿರುವನಂತಪುರಂ ಮತ್ತು ಕೊಟ್ಟಾಯಂ, ಕೋಲ್ಕತ್ತಾದಲ್ಲಿ ಎರಡು ಶಾಖೆಗಳು, ಕರ್ನಾಟಕದ ಉಳಿದ ಭಾಗಗಳಲ್ಲಿ ಮೂರು ಶಾಖೆಗಳು (ಹುಬ್ಬಳ್ಳಿ ಮತ್ತು ಮೈಸೂರು), ಒಡಿಶಾದಲ್ಲಿ ಎರಡು ಶಾಖೆಗಳನ್ನು ಆರಂಭಿಸಿದರು.


ಪ್ರಶಸ್ತಿ
ಡಾ. ಜೈವೀರ್‌ ಅಗರ್ವಾಲ್‌ ಅವರ ಸಾಧನೆಗೆ ಅನೇಕ ಪ್ರಶಸ್ತಿಗಳು ಸಂದಿವೆ. 2006 ರಲ್ಲಿ ಆಗಿನ ಭಾರತದ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರಿಂದ ವೈದ್ಯಕೀಯ ಕ್ಷೇತ್ರದಲ್ಲಿ ಪದ್ಮಭೂಷಣ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದಾರೆ.
ಡಾ.ಜೈವೀರ್‌ ಅಗರ್ವಾಲ್‌ ಅವರು ನವೆಂಬರ್ 16, 2009 ತಮ್ಮ 79ನೇ ವಯಸ್ಸಿನಲ್ಲಿ ನಿಧನರಾದರು.

Leave a Reply

Your email address will not be published.

This site uses Akismet to reduce spam. Learn how your comment data is processed.