ಬೆಂಗಳೂರು: ವಿಶ್ವ ಹಿಂದೂ ಪರಿಷತ್ತಿನ ಕೇಂದ್ರದ ಸೂಚನೆಯಂತೆ, ಎಲ್ಲಾ ರಾಜ್ಯಗಳಲ್ಲೂ ಸಂತ ಮಾರ್ಗದರ್ಶಕ ಮಂಡಳಿಯ ಸಮಾವೇಶಗಳು ನಡೆಯುತ್ತಿದ್ದು, ನಮ್ಮ ರಾಜ್ಯದಲ್ಲಿ ದಿನಾಂಕ: 23.11.2024 ರಂದು ಬೆಂಗಳೂರಿನ ವಿ.ವಿ.ಪುರಂ ನಲ್ಲಿರುವ ವಾಸವಿ ವಿದ್ಯಾನಿಕೇತನ ಸಭಾಂಗಣದಲ್ಲಿ ಸಂತ ಮಾರ್ಗದರ್ಶಕ ಮಂಡಳಿಯ ಸಮಾವೇಶ ನಡೆಯಿತು. ಸಮಾವೇಶ ತೆಗೆದುಕೊಂಡ ನಿರ್ಣಯಗಳನ್ನು ಸಂತ ಸಮೂಹವು ಪೂಜ್ಯ ಪೇಜಾವರ ಶ್ರೀಗಳು ಉಡುಪಿ ಹಾಗೂ ವಿಶ್ವ ಹಿಂದೂ ಪರಿಷದ್ ಅಂತಾರಾಷ್ಟ್ರೀಯ ಅಧ್ಯಕ್ಷ ಅಲೋಕ್ ಕುಮಾರ್ ರವರು ಕರ್ನಾಟಕ ರಾಜ್ಯದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ರವರನ್ನು ರಾಜಭವನದಲ್ಲಿ ಭೇಟಿ ಮಾಡಿ ಮನವಿಯನ್ನು ಸಲ್ಲಿಸಿದರು.
ಸಂತ ಮಾರ್ಗದರ್ಶಕ ಮಂಡಳಿಯ ಸಮಾವೇಶದ ನಿರ್ಣಯಗಳು
- ವಕ್ಪ್ ಹೆಸರಿನಲ್ಲಿ ಇಸ್ಲಾಮೀಕರಣ ಮಾಡುತ್ತಿರುವುದನ್ನು ಖಂಡಿಸಿ, ಇದನ್ನು ತಡೆಯಲು ಹೋರಾಟದ ಯೋಜನೆ:
ಅ) ವಕ್ಪ್ ಹೆಸರಿನಲ್ಲಿ ಹಿಂದುಗಳ, ಹಿಂದೂ ದೇವಸ್ಥಾನ, ಸಂಸ್ಥೆಗಳ, ರೈತರ ಜಮೀನನ್ನು ಕಬಳಿಸಿರುವುದನ್ನು ಸಂಪೂರ್ಣವಾಗಿ ಹಿಂಪಡೆಯುವ ತನಕ ಇಡೀ ಹಿಂದೂ ಸಮಾಜವನ್ನು ಸೇರಿಸಿ ಹೋರಾಟ ಮಾಡುವುದು.
ಆ) ಕರ್ನಾಟಕದಲ್ಲಿ ವಕ್ಪ್ ಹಗರಣ ನಡೆಸಿ ಹಿಂದೂಗಳ ಭೂಮಿಗಳನ್ನು ಕಬಳಿಸಿ ಹಿಂದೂ ಸಮಾಜಕ್ಕೆ ಕಿರುಕುಳ ಕೊಟ್ಟು ರಾಜ್ಯದಲ್ಲಿ ಸಾಮರಸ್ಯ ಕೆಡಲು ಕಾರಣರಾದ ಎಲ್ಲಾ ತರಹದ ಅಧಿಕಾರಿಗಳು, ಆದೇಶ ಕೊಟ್ಟ ರಾಜಕಾರಣಿಗಳು ಮತ್ತು ಮಂತ್ರಿಗಳನ್ನು ಉನ್ನತ ತನಿಖೆಗೆ ಒಳಪಡಿಸಿ ಕಾನೂನನ್ನು ಉಲ್ಲಂಘಿಸಿರುವವರಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಸರಕಾರಕ್ಕೆ ಒತ್ತಾಯಿಸುವುದು.
ಇ) ವಕ್ಪ್ ಹೆಸರಿನಲ್ಲಿ ಭೂಕಬಳಿಕೆ ಪ್ರಕರಣಗಳಲ್ಲಿ ಹಿಂದೂಗಳು ಫಿರ್ಯಾದಿದಾರರಾಗಿದ್ದರೆ ಅವರಿಗೆ ಕೊಟ್ಟ ನೋಟೀಸನ್ನು ರಾಜ್ಯ ಸರ್ಕಾರ ಕೂಡಲೇ ಹಿಂಪಡೆಯಬೇಕು ಮತ್ತು ಭೂಮಿಯನ್ನು ವಾಪಸ್ಸು ಕೊಡಬೇಕು.
ಈ) ಇತ್ತೀಚೆಗೆ ರಾಜ್ಯ ಸರ್ಕಾರವು 2750 ಎಕರೆ ಸರ್ಕಾರೀ ಭೂಮಿಯನ್ನು ಖಬರ್ಸ್ಥಾನದ ಹೆಸರಿನಲ್ಲಿ ವಕ್ಫ್ ಗೆ ಹಸ್ತಾಂತರಿಸಲು ಆದೇಶ ನೀಡಿದೆ. ಸರ್ಕಾರಿ ಜಮೀನು ಲಭ್ಯವಿಲ್ಲದಿದ್ದಲ್ಲಿ ಖಾಸಗಿ ಜಮೀನನ್ನು ಖರೀದಿಸಿ ಕೊಡಬೇಕೆಂದು ಆದೇಶದಲ್ಲಿ ತಿಳಿಸಲಾಗಿದ್ದು, ಕಂದಾಯ ಇಲಾಖೆಯವರು ಈಗಾಗಲೇ ಕಾರ್ಯಪ್ರವೃತ್ತರಾಗಿದ್ದಾರೆ. ಈ ಆದೇಶವನ್ನು ತಕ್ಷಣ ರದ್ದುಗೊಳಿಸಬೇಕು.
ಉ) ಕೇಂದ್ರ ಸರಕಾರವು ವಕ್ಪ್ ಕಾಯ್ದೆಗೆ ತಿದ್ದುಪಡಿ ತರಲು ಉದ್ಧೇಶಿಸಿರುವ ತಿದ್ದುಪಡಿ ಮಸೂದೆಯನ್ನು ಈ ಸಂತ ಸಮಾವೇಶವು ಸಂಪೂರ್ಣವಾಗಿ ಬೆಂಬಲಿಸುವುದು.
ಹಿಂದೂ ಸಮಾಜಕ್ಕೆ ಕರೆ :
ಇಸ್ಲಾಮೀಕರಣ ತಡೆಯುವಲ್ಲಿ ಹಿಂದೂಗಳು ಜಾತಿಭೇದ, ಬಡವ-ಶ್ರೀಮಂತ ಎಂಬ ಭೇದವಿಲ್ಲದೆ ಸಮಸ್ತ ಹಿಂದೂಗಳು ಸಕ್ರಿಯವಾಗಿ ಭಾಗಿಯಾಗಬೇಕು. ಅದಕ್ಕಾಗಿ ಕರ್ನಾಟಕದ ಪ್ರತೀ ನಗರ ಮತ್ತು ಪ್ರತೀ ಗ್ರಾಮದಲ್ಲೂ ಇಸ್ಲಾಮೀಕರಣದ ವಿರುದ್ಧ ಹೋರಾಟ ನಡೆಸಲು ತಯಾರಿರುವ ಸ್ಥಳೀಯ ಹಿಂದೂ ಸಂಘಟನೆ ಕಾರ್ಯಕರ್ತರನ್ನು ಸಂಪರ್ಕಿಸಿ ಒಗ್ಗಟ್ಟಿನಿಂದ ಹೋರಾಟಕ್ಕೆ ಬೆಂಬಲಿಸುವಂತೆ ಸಂತ ಸಮಾವೇಶವು ಸಮಸ್ತ ಹಿಂದೂ ಸಮಾಜ ಬಾಂಧವರಿಗೆ ಕರೆ ನೀಡುತ್ತಿದೆ.
2. ದೇವಸ್ಥಾನಗಳನ್ನು ಸರ್ಕಾರದ ನಿಯಂತ್ರಣದಿಂದ ಮುಕ್ತಿಗೊಳಿಸುವ ಬಗ್ಗೆ ನಿರ್ಣಯ:
1)ಸರ್ಕಾರವು ದೇವಸ್ಥಾನಗಳ ಆಡಳಿತ ಮಂಡಳಿಗಳಿಗೆ ತಾನೇ ನೇಮಕಾತಿ ಮಾಡುವುದನ್ನು ನಿಲ್ಲಿಸಿ, ಹಿಂದೂ ಸಮಾಜದಿಂದಲೇ ನೇಮಕಗೊಳ್ಳುವ ವ್ಯವಸ್ಥೆ ಜಾರಿಗೆ ತರಬೇಕು.
2)ದೇವಸ್ಥಾನದ ಚರ, ಸ್ಥಿರ, ಆಸ್ತಿಗಳ ಮೇಲೆ ಸರಕಾರಕ್ಕೆ ಯಾವುದೇ ನಿಯಂತ್ರಣ ಮತ್ತು ಅಧಿಕಾರ ಇರಬಾರದು.
ಅದರ ವಿಲೇವಾರಿಗೆ, ವಿನಿಯೋಗಕ್ಕೆ ಸರಕಾರವು ಆದೇಶ ಕೊಡುವಂತಿಲ್ಲ.
3)ದೇವಸ್ಥಾನದ ಎಲ್ಲಾ ಪಹಣಿ ಪತ್ರಗಳಲ್ಲಿ ದೇವಸ್ಥಾನದ ಸಮಸ್ತ ಭೂಮಿಯನ್ನು ದೇವರ ಹೆಸರಿಗೆ (ದೇವಸ್ಥಾನದ ಟ್ರಸ್ಟ್, ಕಮಿಟಿ, ಇತ್ಯಾದಿ. . . . . ) ಏಕ ಆದೇಶದಲ್ಲಿ ನೋಂದಾಯಿಸಬೇಕು.
4)ದೇವಸ್ಥಾನದ ಭೂಮಿಯನ್ನು ಎಲ್ಲೆಲ್ಲಿ ಈಗಾಗಲೇ ಪರಭಾರೆ ಮಾಡಿದ್ದಲ್ಲಿ ಅಥವಾ ಸರಕಾರ ಉಪಯೋಗಿಸಿದ್ದಲ್ಲಿ, ಅದನ್ನು ಆಯಾ ದೇವಸ್ಥಾನಕ್ಕೆ ವಾಪಸ್ಸು ಬಿಟ್ಟುಕೊಟ್ಟು ದೇವಸ್ಥಾನದ ಹೆಸರಿಗೆ ಪಹಣಿ ಮಾಡಿಸಬೇಕು.
3 . ಲವ್ ಜೆಹಾದ್ ಮತ್ತು ಮತಾಂತರ ತಡೆಯುವ ಬಗ್ಗೆ ನಿರ್ಣಯ:
ರಾಜ್ಯದಲ್ಲಿ ಮತಾಂತರ ನಿಷೇಧ ಕಾಯ್ದೆ ಇದ್ದರೂ ನಿರಂತರ ಮತಾಂತರ ನಡೆಯುತ್ತಿದ್ದು ಇದನ್ನು ನಡೆಸುತ್ತಿರುವ ಮತಾಂತರಿಗಳನ್ನು ಗುರುತಿಸಿ ಅವರನ್ನು ಉಗ್ರವಾಗಿ ಶಿಕ್ಷಿಸಬೇಕು. ಹಲವಾರು ಹಿಂದೂ ಯುವತಿಯರು, ಮಹಿಳೆಯರು ಕಣ್ಮರೆಯಾಗುತ್ತಿದ್ದು ಇವರಲ್ಲಿ ಹಲವರು ಲವ್ ಜಿಹಾದ್ಗೆ ಸಿಲುಕಿದವರಿದ್ದು, ಪೊಲೀಸ್ ಇಲಾಖೆಯು ನಾಪತ್ತೆ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ಪ್ರತೀ ನಾಪತ್ತೆ ಪ್ರಕರಣದಲ್ಲಿಯೂ ಲವ್ ಜಿಹಾದ್ ಇರುವುದರಿಂದ ಹಿಂದೂ ಯುವತಿಯರನ್ನು ಸಂರಕ್ಷಿಸುವಂತೆ ಈ ಸಂತ ಸಮಾವೇಶವು ರಾಜ್ಯ ಸರಕಾರವನ್ನು ಒತ್ತಾಯಿಸುತ್ತದೆ.