ಕಾಸರಗೋಡು, ಡಿ.8: ಶ್ರೀಮದ್‌ ಜಗದ್ಗುರು ಶಂಕರಾಚಾರ್ಯ ಸಂಸ್ಥಾನ ಎಡನೀರು ಮಠದ ಪೂಜ್ಯ ಶಂಕರಾಚಾರ್ಯ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮಿಗಳು ಕಾಸರಗೋಡಿನ ಧರ್ಮಜಾಗರಣ ಗತಿವಿಧಿಯ ವತಿಯಿಂದ ಆಯೋಜಿಸಲಾದ ‘ಸಾಮರಸ್ಯದ ನಡಿಗೆ’ ಕಾರ್ಯಕ್ರಮದ ಭಾಗವಾಗಿ ಪಾದಯಾತ್ರೆಯ ಮೂಲಕ ಎಣ್ಮಕಜೆ ಪಂಚಾಯತ್‌ನ ವಾಣೀನಗರ ಕುತ್ತಾಜೆಯ ದಲಿತ ಕಾಲನಿಯ 28 ಮನೆಗಳನ್ನು ಸಂದರ್ಶಿಸಿ ಮನೆಮಂದಿಗೆ ಅನುಗ್ರಹ ಮಂತ್ರಾಕ್ಷತೆ ನೀಡಿ ಹರಸಿದರು.

ಈ ಸಂದರ್ಭದಲ್ಲಿ ಆಶೀರ್ವಚನ ನೀಡಿದ ಎಡನೀರು ಶ್ರೀಗಳು ಬಡ ದೀನ, ದಲಿತರ ಮನೆಗೆ ಪಾದಯಾತ್ರೆ ಮಾಡಿ ಹಿಂದೂ ಸಾಮರಸ್ಯತೆಯ ಏಕತೆಗಾಗಿ ಎಲ್ಲರೂ ನಮ್ಮವರೆಂದು ಬೆರೆಯುವುದು ಇಂದಿನ ಕಾಲಘಟ್ಟದ ಅನಿವಾರ್ಯ. ಈ ಮೂಲಕ ಸನಾತನ ಧರ್ಮ ಛಿದ್ರವಾಗದೆ ಕಾಪಾಡಲು ಸಾಧ್ಯ ಎಂದು  ತಿಳಿಸಿದರು.

Leave a Reply

Your email address will not be published.

This site uses Akismet to reduce spam. Learn how your comment data is processed.