ಬೆಂಗಳೂರು: ಅಬಲಾಶ್ರಮದ ಸಂಸ್ಥಾಪಕರ ದಿನಾಚರಣೆ ಕಾರ್ಯಕ್ರಮ ಬಸವನಗುಡಿಯ ಡಿವಿಜಿ ರಸ್ತೆಯಲ್ಲಿರುವ ‘ಅಬಲಾಶ್ರಮ’ದ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಖ್ಯಾತ ಲೇಖಕಿ ಡಾ. ವಿಜಯ ಸುಬ್ಬರಾಜ್ ಮುಖ್ಯ ಅತಿಥಿಯಾಗಿ ಭಾಗವಹಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಬಲಾಶ್ರಮದ ಅಧ್ಯಕ್ಷೆ ಡಾ. ವಿಜಯಲಕ್ಷ್ಮಿ ದೇಶಮಾನೆ ವಹಿಸಿದ್ದರು. ವೇದಿಕೆಯಲ್ಲಿ ಅಬಲಾಶ್ರಮದ ನೂತನ ಆಡಳಿತ ಮಂಡಳಿಯ ಮಾರ್ಗದರ್ಶಿ ಬಿವಿ ಶೇಷ, ಗೌರವ ಕಾರ್ಯದರ್ಶಿ ಡಾ. ಭಾರತೀಶ ರಾವ್ ಆರ್ ಎಸ್, ಉಪಾಧ್ಯಕ್ಷರಾದ ಕೆ.ಜಿ.ಸುಬ್ಬರಾಜ್, ಡಾ. ಗೀತಾ ಕೃಷ್ಣಮೂರ್ತಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಭಾರತದ ಮೊದಲ ಅಂಧ ಚಾರ್ಟೆಡ್ ಅಕೌಂಟೆಂಟ್ ರಜನಿ ಗೋಪಾಲಕೃಷ್ಣ, ಸಹನಾ ಚಾರಿಟೇಬಲ್ ಟ್ರಸ್ಟ್ ಫಾರ್ ಡಿಸೇಬಲ್ಡ್ ಸಂಸ್ಥಾಪಕಿ ಶ್ರೀಮತಿ ಲಕ್ಷ್ಮೀ ಶಂಕರ ಹೆಬ್ಬಾರ್ ಎಂಬ ಇಬ್ಬರು ಸಾಧಕಿಯರನ್ನು ಸನ್ಮಾನಿಸಲಾಯಿತು. 26 ಮಂದಿ ಪ್ರಪ್ರಥಮ ಸಾಧಕಿಯರ ಯಶೋಗಾಥೆಯನ್ನು ಒಳಗೊಂಡ ‘ಸಾಧನಾ ಸಂಚಯ’ ಕೃತಿಯನ್ನು ಬಿಡುಗಡೆಗೊಳಿಸಲಾಯಿತು.
ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಹಸರಕಾರ್ಯವಾಹ ಮುಕುಂದ ಸಿ ಆರ್, ಕ್ಷೇತ್ರೀಯ ಕಾರ್ಯವಾಹ ನಾ. ತಿಪ್ಪೇಸ್ವಾಮಿ, ಬೆಂಗಳೂರು ಮಹಾನಗರ ಸಂಘಚಾಲಕ ಮಿಲಿಂದ್ ಗೋಖಲೆ ಉಪಸ್ಥಿತರಿದ್ದರು.
ಕಾರ್ಯಕ್ರಮದ ನಿಮಿತ್ತ ಕಾರ್ಯಕ್ರಮದ ಪೂರ್ವದಲ್ಲಿ ಆಯೋಜಿಸಲಾದ ಪ್ರಬಂಧ ಮತ್ತು ನೃತ್ಯ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು.