ಬೆಂಗಳೂರು: ಮಂಥನ ಬೆಂಗಳೂರು ವತಿಯಿಂದ ಆಯೋಜಿಸಲಾದ ವಿಶ್ವ ಸಂವಾದ ಕೇಂದ್ರ ಕರ್ನಾಟಕ ಪ್ರಕಟಿಸಿರುವ ‘ಕಥನ-ಮಥನ : ನರೇಟಿವ್ ಗಳ ಒಳಹೊರಗು’ ಪುಸ್ತಕ ಬಿಡುಗಡೆ ಮತ್ತು ಸಂವಾದ ಕಾರ್ಯಕ್ರಮ ಶಂಕರಪುರದ ಉತ್ತುಂಗ ಸಭಾಂಗಣದಲ್ಲಿ ನಡೆಯಿತು. ವಿಶ್ಲೇಷಕ ರಾಕೇಶ್ ಶೆಟ್ಟಿ, ತುಮಕೂರು ವಿಶ್ವವಿದ್ಯಾಲಯದ ಪತ್ರಿಕೋದ್ಯಮದ ವಿಭಾಗದ ಮುಖ್ಯಸ್ಥ ಡಾ. ಸಿಬಂತಿ ಪದ್ಮನಾಭ, ಕಥನ ಮಥನ ಪುಸ್ತಕದ ಸಂಪಾದಕರಾದ ವಿನಾಯಕ ಭಟ್ಟ ಮೂರೂರು, ರಮೇಶ ದೊಡ್ಡಪುರ ಸಂವಾದದಲ್ಲಿ ಭಾಗವಹಿಸಿದರು.