
ಶಿವಮೊಗ್ಗ: ಭಾರತೀಯ ಮಜ್ದೂರ್ ಸಂಘದ ಅಖಿಲ ಭಾರತೀಯ ಉಪಾಧ್ಯಕ್ಷರಾಗಿದ್ದ ಜ್ಯೇಷ್ಠ ಕಾರ್ಯಕರ್ತ ಶ್ರೀ ಡಿ. ಕೆ. ಸದಾಶಿವ್ (82) ವಿಧಿವಶರಾಗಿದ್ದಾರೆ.
ಗಣ್ಯರಿಂದ ಶ್ರದ್ಧಾಂಜಲಿ ಸಮರ್ಪಣೆ:
ಅಗಲಿದ ಹಿರಿಯರಿಗೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ, ಕ್ಷೇತ್ರೀಯ ಕಾರ್ಯಕಾರಿಣಿ ಸದಸ್ಯ ವಿ.ನಾಗರಾಜ ಸಂತಾಪ ಸೂಚಿಸಿದ್ದಾರೆ.
ಶ್ರೀ ಸದಾಶಿವರ ನಿಧನ ದುಃಖದಾಯಿ. ಒಬ್ಬ ನಿಷ್ಠಾವಂತ ಕಾರ್ಯಕರ್ತರ ಜೀವನಯಾತ್ರೆಯ ಅಂತ್ಯವಾಯಿತು. ಓದು, ವಿಚಾರ ವಿಮರ್ಶೆ, ಹಾಸ್ಯ, ನಗೆ, ಪರಿಶ್ರಮ, ಹಿರಿಯರಲ್ಲಿ ಶ್ರದ್ಧೆ ಅವರ ವ್ಯಕ್ತಿತ್ವದ ಕುರುಹುಗಳು. ದೇವರು ಅವರ ಆತ್ಮಕ್ಕೆ ಸದ್ಗತಿ ನೀಡಲಿ.
ॐ ಶಾಂತಿಃ॥-ದತ್ತಾತ್ರೇಯ ಹೊಸಬಾಳೆ, ಸರಕಾರ್ಯವಾಹ, ಆರೆಸ್ಸೆಸ್
ಶ್ರೀ ಸದಾಶಿವ ಅವರು ಸದಾ ನಗು ನಗುತ್ತಾ ಕಾರ್ಯಪ್ರವರ್ತರಾಗಿದ್ದ
ನಿಷ್ಠಾವಂತ ಕಾರ್ಯಕರ್ತರು.
ಕ್ಲಿಷ್ಟವಾದ ಕಾರ್ಮಿಕ ವಿಚಾರಗಳನ್ನು ಸರಳವಾಗಿ ವಿವರಿಸುತ್ತಿದ್ದವರು.ಬೈಠಕ್ ಗಳಲ್ಲಿ ಅವರು ತಮ್ಮ ಹಾಸ್ಯಪ್ರವೃತ್ತಿಯಿಂದ ಲವಲವಿಕೆಯನ್ನು ಉಂಟು ಮಾಡುತ್ತಿದ್ದರು.
ಅವರಿಗೆ ನನ್ನ ನಮನ ಮತ್ತು
ಶ್ರದ್ಧಾಂಜಲಿಗಳುವಿ ನಾಗರಾಜ್
ಕ್ಷೇತ್ರೀಯ ಕಾರ್ಯಕಾರಿಣಿ ಸದಸ್ಯ