ಪಿಇಎಸ್ ವಿಶ್ವವಿದ್ಯಾಲಯ, ಬೆಂಗಳೂರು – 09/11/2025
- ಸಂಘ ಆರಂಭವಾಗಿದ್ದು 1925ರಲ್ಲಿ. ಸಂಘವನ್ನು ಆರಂಭಿಸಿದ ಡಾ. ಹೆಡಗೇವಾರರು ಬ್ರಿಟಿಷರ ವಿರುದ್ಧವೇ ಹೋರಾಡಿದವರು.
- ಸಂಘ ನೋಂದಾವಣೆ ಯಾಕೆ ಮಾಡಿಲ್ಲ ಎಂದು ಕೇಳುವುದಾದರೆ; ಹಾಗಾದರೆ ನಾವು ಬ್ರಿಟಿಷ್ ಸರ್ಕಾರದಲ್ಲಿ ನೋಂದಣಿ ಆಗಬೇಕಿತ್ತೇ? ನೋಂದಾವಣೆಯಾಗದ ಬಹಳಷ್ಟು ವಿಷಯಗಳು ಸಮಾಜದಲ್ಲಿವೆ. ಹಿಂದೂ ಧರ್ಮವೂ ನೋಂದಾವಣೆಗೊಂಡಿಲ್ಲ.
- ಸ್ವಾತಂತ್ರ್ಯದ ನಂತರ ಸರ್ಕಾರವು ಸಂಘವನ್ನು ‘ವ್ಯಕ್ತಿಗಳ ಸಂಘಟನೆ’ ಎಂದು ಗುರುತಿಸಿದೆ. ಆದಾಯ ತೆರಿಗೆ ಇಲಾಖೆಯು ಗುರುದಕ್ಷಿಣೆ ಹಣಕ್ಕೆ ಆದಾಯ ತೆರಿಗೆ ವಿನಾಯಿತಿ ನೀಡಿದೆ. ಮೂರು ಬಾರಿ ಸರ್ಕಾರವು ಸಂಘವನ್ನು ನಿಷೇಧಿಸಿದೆ ಎಂದರೆ ಸರ್ಕಾರವೂ ಸಂಘವನ್ನು ಗುರುತಿಸಿದೆ ಎಂದಲ್ಲವೇ?!
- ನಮ್ಮ ಧ್ಯೇಯವು ಸಂಘಟಿತವಾಗಿರುವ, ಭದ್ರವಾಗಿರುವ ಸಮಾಜದ ನಿರ್ಮಾಣ.
- ಸಂಘದಲ್ಲಿ ಬ್ರಾಹ್ಮಣ, ಶೈವ, ಶಾಕ್ತ, ಮುಸ್ಲಿಂ, ಕ್ರೈಸ್ತರೆಂದು ಯಾವ ಜಾತಿ ಧರ್ಮವೂ ಇಲ್ಲ. ಸಂಘದಲ್ಲಿರುವ ಪ್ರತಿಯೊಬ್ಬನೂ ಹಿಂದೂ ಆಗಿರುತ್ತಾನೆ. ಎಲ್ಲರೂ ಭಾರತಮಾತೆಯ ಪುತ್ರರಾಗಿ ತಮ್ಮ ತಮ್ಮ ವಿಶೇಷತೆಗಳನ್ನು ಬಿಂಬಿಸಬಹುದು.
- ಸಂಘವು ಯಾರಿಗಾಗಿ ಏನನ್ನೂ ಮಾಡುವುದಿಲ್ಲ, ಇಲ್ಲಿರುವ ಪ್ರತಿಯೊಬ್ಬನೂ ರಾಷ್ಟ್ರಕ್ಕಾಗಿ ಅವನ ಕರ್ತವ್ಯಗಳನ್ನು ನಿಭಾಯಿಸುತ್ತಾನೆ.
- ಸ್ವತಃ ಪರರ ಸಹಾಯಕ್ಕಾಗಿ ನಿಂತವನಿಗೆ ದೇವರೇ ಸಹಾಯ ಮಾಡುತ್ತಾನೆ.
- ಸಂಘಕ್ಕೆ ಬರುವುದು ಮತ್ತು ತಮ್ಮಿಂದಾಗುವುದನ್ನು ನೀಡುವುದಷ್ಟೇ ಕಾರ್ಯ. ಸಂಘ ಏನನ್ನೂ ನೀಡುವುದಿಲ್ಲ, ಆದರೆ ಎಲ್ಲವನ್ನೂ ಕೇಳುತ್ತದೆ.
- ನಾವು ಎಲ್ಲವನ್ನೂ ಬದಲಾಯಿಸಬಹುದು, ಭಾರತ ಹಿಂದೂ ದೇಶ ಎಂಬುದೊಂದನ್ನು ಬಿಟ್ಟು.
- GenZ ಪೀಳಿಗೆ ಸಿನೆಮಾ ಮತ್ತು ಕ್ರಿಕೆಟ್ ಕಡೆಗೆ ಹೆಚ್ಚು ಆಕರ್ಷಕವಾಗಿದೆ.
- ಈ ಭೂಮಿಯಲ್ಲಿ ಅತ್ಯಂತ ಅಸ್ಥಿರವಾದ ವಿಷಯವೆಂದರೆ ಜೀವನ.
- ಸಂಘಟನೆ ಸ್ವಾವಲಂಬಿಯಾಗಲು ಆರ್ಥಿಕ ಸ್ವಾವಲಂಬನೆ ಮುಖ್ಯ.
- ತ್ರಿವರ್ಣ ಧ್ವಜಕ್ಕೆ ಸಂಘವು ಎಂದಿಗೂ ಗೌರವ ನೀಡಿದೆ. ಆಗಸ್ಟ್ 15 ಹಾಗೂ ಜನವರಿ 26ರಂದು ದೇಶದ ಎಲ್ಲ ಸಂಘ ಕಾರ್ಯಾಲಯಗಳ ಮೇಲೆ ತ್ರಿವರ್ಣ ಧ್ವಜವನ್ನು ಹಾರಿಸಲಾಗುತ್ತದೆ. ಭಗವಾ ವರ್ಸಸ್ ತಿರಂಗ ಎಂಬ ಭಾವನೆ ಸರಿಯಲ್ಲ. ಎರಡೂ ಒಂದೇ ತೆರನಾದ ಮಹತ್ವವನ್ನು ಹೊಂದಿದೆ.
- ಮಹಿಳೆಯರಿಗಾಗಿ ಸಂಘದ ಕಾರ್ಯ 1936ರಲ್ಲಿ ಆರಂಭವಾಯಿತು. ದೇಶದಾದ್ಯಂತ 10000ಕ್ಕೂ ಹೆಚ್ಚು ಶಾಖೆಗಳಿವೆ. 50ಕ್ಕೂ ಹೆಚ್ಚು ಪ್ರಚಾರಿಕೆಯರಿದ್ದಾರೆ.
- ಸಂಘವು ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಬೇಕಾಗಿಲ್ಲ. ಕೆಲವರು ಶಾಂತಿಭಂಗ ಮಾಡುವ ಪ್ರಯತ್ನದಲ್ಲಿರುತ್ತಾರೆ. ಉತ್ತಮ ಪ್ರಶ್ನೆಗಳಿಗೆ ಸ್ಪಂದಿಸುತ್ತಾ ಉಳಿದಂತೆ ನಮ್ಮ ಕಾರ್ಯದಲ್ಲಿರುವುದೇ ಸರಿ.
- ಸಂಘವು ಸಮಾಜವನ್ನು ಒಗ್ಗೂಡಿಸುವ ಕೆಲಸವನ್ನು ಮಾಡುತ್ತಿದೆ. ನಾವು ಉತ್ತಮ ನೀತಿಗಳನ್ನು ಬೆಂಬಲಿಸುತ್ತೇವೆ. ವ್ಯಕ್ತಿ ಅಥವಾ ಪಕ್ಷವನ್ನಲ್ಲ.
- ನಮಗೆ ಒಂದು ಪಕ್ಷದ ಮೇಲೆ ನಮಗೆ ವಿಶೇಷ ಪ್ರೀತಿ ಇಲ್ಲ. ಸಂಘದ ಪಕ್ಷ ಎನ್ನುವುದು ಯಾವುದೂ ಇಲ್ಲ, ಎಲ್ಲ ಪಕ್ಷಗಳೂ ನಮ್ಮವೆ.
- ನಾವು ರಾಷ್ಟ್ರನೀತಿಯನ್ನು ಬೆಂಬಲಿಸುತ್ತೇವೆಯೇ ವಿನಃ ರಾಜನೀತಿಯನ್ನಲ್ಲ.
- ಸಂಘವು ಯಾರನ್ನೂ ಬಿಡದೆ ಇಡೀ ಸಮಾಜವನ್ನು ಸಂಘಟಿಸಲು ಬಯಸುತ್ತದೆ.
- ಪ್ರತಿಯೊಬ್ಬ ವ್ಯಕ್ತಿಯೂ ಸಂಘದಲ್ಲಿ ಮುಖ್ಯನಾಗಿರುತ್ತಾನೆ. ಯಾರೂ ಅನಿವಾರ್ಯವಲ್ಲ. ಎಲ್ಲರೂ ತಮ್ಮ ಕೆಲಸವನ್ನು ಗೌರವಯುತವಾಗಿ ಮಾಡುತ್ತಾರೆ. ಒಟ್ಟಾಗಿ ನಾವು ಯಶಸ್ಸನ್ನು ಸಾಧಿಸುತ್ತೇವೆ.
- ಸಂಘ ಸಮಾಜದ ನಿರ್ಮಾಣ ಮಾಡುತ್ತದೆ. ಮುಂದಿನದ್ದನ್ನು ಸಮಾಜವೇ ನೋಡಿಕೊಳ್ಳುತ್ತದೆ.
- ಭಾರತ ಪಾಕಿಸ್ತಾನದೊಂದಿಗೆ ಯಾವಾಗಲೂ ಶಾಂತಿಯನ್ನೇ ಹೊಂದಿದೆ. ಯುದ್ಧ ಹೆಚ್ಚಾದಂತೆ ಹಾನಿಯೂ ಹೆಚ್ಚು. ಮುಂದೊಮ್ಮೆ ಪಾಕಿಸ್ತಾನಕ್ಕೆ ಎಲ್ಲವೂ ಅರ್ಥವಾಗಲಿದೆ.
- ನಮ್ಮ ಮಾರ್ಗ ಸಾಮೂಹಿಕ ಉತ್ಪಾದನೆಯಲ್ಲ (Mass production), ಸಾಮೂಹಿಕ ಸಮುದಾಯದ ಉತ್ಪಾದನೆ (Production of Mass).
- ಇದು ಅತ್ಯುತ್ತಮವಾದವರ ಬದುಕುಳಿಯುವಿಕೆ ಅಲ್ಲ. ಇತರರ ಬದುಕುಳಿಯುವಿಕೆಯನ್ನು ಅತ್ಯುತ್ತಮವಾಗಿಸುವುದು.
- ಕೃಷಿ, ವ್ಯಾಪಾರ ಮತ್ತು ವಾಣಿಜ್ಯ ಪರಸ್ಪರ ಸಂಬಂಧ ಹೊಂದಿವೆ.
- ನಮ್ಮ ಗಡಿಗಳನ್ನು ನಾವು ಸಂಪೂರ್ಣವಾಗಿ ರಕ್ಷಿಸಬೇಕು.
- ಸಮಾಜದ ಏಕತೆ ಮತ್ತು ಗುಣಮಟ್ಟವು ಮೂಲಭೂತ ಅಂಶವಾಗಿದೆ.
- ಚೀನಾ ಜೊತೆಗೆ ಭಾರತ ಸರ್ಕಾರ ಕೆಲವು ಭಿನ್ನಾಭಿಪ್ರಾಯಗಳನ್ನು ಹೊಂದಿದೆ. ಇದೆಲ್ಲ ಸಂಕೀರ್ಣತೆಗಳ ನಡುವೆ ನಾವು ಸದೃಢವಾಗಿರಬೇಕು.
- ಶತಮಾನದೊಳಗೆ 3 ಖಂಡಗಳು ಸಂಪೂರ್ಣ ಮತಾಂತರಗೊಂಡವು. ಆದರೆ 500 ವರ್ಷಗಳಿಂದ, ಬೇರೆ ಬೇರೆಯವರ ಅಧಿಕಾರಕ್ಕೊಳಗಾದರೂ ನಾವು ಇನ್ನೂ ಹಿಂದೂಸ್ತಾನಿಗಳಾಗಿದ್ದೇವೆ.
- ಜಾತಿ ವ್ಯವಸ್ಥೆ ವ್ಯವಸ್ಥೆಯಾಗಿ ಉಳಿದಿಲ್ಲ. ಅದೊಂದು ಗೊಂದಲವಾಗಿದೆ.
- ಹಿಂದೂ ಒಂದು ಏಕರೂಪದ ಸಮಾಜ. ನಾವು ಎಲ್ಲಾ ರೀತಿಯ ಹಿಂದೂಗಳನ್ನು ನಮ್ಮ ಸ್ನೇಹಿತರ ವಲಯದಲ್ಲಿ ಸೇರಿಸಿಕೊಳ್ಳಬೇಕು.
- ದೇವಸ್ಥಾನ, ನೀರು ಮತ್ತು ಸ್ಮಶಾನ ಎಲ್ಲೆಡೆಯೂ ಸಮಾನತೆಯಿರುವಂತೆ ಮಾಡಬೇಕು.
- ಯೋಗಿ ಅರವಿಂದರು, ಸುಭಾಷರು ಉದ್ಯೋಗದಲ್ಲಿ ಬೇರೆ ಆಯ್ಕೆಗಳಿದ್ದರೂ ರಾಷ್ಟ್ರಕ್ಕಾಗಿ ಸೇವೆ ಮಾಡುವ ಇಚ್ಛೆಯಿಂದ ಅದೆಲ್ಲವನ್ನೂ ತ್ಯಜಿಸಿದವರು.
- ಬೇರೆಯವರ ಕೆಲಸದ ಮೇಲೆ ಹೆಚ್ಚಿನ ಗಮನ ಕೊಡುವ ಅಗತ್ಯವಿಲ್ಲ, ನಾವು ಮಾಡಬೇಕಾದ ಕೆಲಸಗಳ ಬಗ್ಗೆ ಗಮನ ಹರಿಸಬೇಕಿದೆ.
- ನಾವು ಯಾರನ್ನೂ ಮತಾಂತರಗೊಳಿಸಲು ಅಥವಾ ವಿಭಜಿಸಲು ಬಯಸುವುದಿಲ್ಲ.
- ನಾವು ಮಾಡಬೇಕಾದ ಮೊದಲ ಕೆಲಸವೆಂದರೆ ನಮ್ಮನ್ನು ನಾವು ವಸಾಹತುಶಾಹಿ ಮಾನಸಿಕತೆಯಿಂದ ಮುಕ್ತಗೊಳಿಸಿಕೊಳ್ಳುವುದು.
- ಹಿಂದುತ್ವ ಹೊರಗಿಡುತ್ತದೆ, ಹಿಂದೂಯಿಸಂ ಒಳಗೊಳ್ಳುತ್ತದೆ ಎಂಬುದು ತಾರ್ಕಿಕವಲ್ಲ. ‘ಇಸಂ’ ಯಾವತ್ತೂ ಒಳಗೊಳ್ಳುವುದಿಲ್ಲ. ಹಿಂದುತ್ವ ಎಂದಿಗೂ ಹೊರಗಿಡುವುದಿಲ್ಲ
- ಎಲ್ಲ ರೀತಿಯ ವಿವಿಧತೆಯನ್ನೂ ಗೌರವಿಸುವ, ಸ್ವೀಕರಿಸುವ ಮೂಲಕ ಏಕತೆಯನ್ನು ಸಾಧಿಸುವ ಸ್ವಭಾವದ ಹೆಸರೇ ಹಿಂದೂ.
- ಭೂಮಿತಾಯಿ ಹಾಗೂ ಭಾರತ ಮಾತೆ ಎನ್ನುವುದು ವಸಾಹತು ಸೃಷ್ಟಿ ಅಲ್ಲ. ಅದು ಶುದ್ಧ ಸನಾತನ ಮೌಲ್ಯ.
- ಮೊದಲು ನಾವ್ಯಾರು ಎಂಬುದನ್ನು ಅರಿತಾಗ ಮಾತ್ರ ಭಾರತವನ್ನು ಅರಿಯಬಹುದು.
- ಹಿಂದೂ ಎಂಬುದು ಎಲ್ಲಾ ವೈವಿಧ್ಯಗಳನ್ನು ಗೌರವಿಸುವ ಗುಣದ ಹೆಸರು. ‘ಇಸಂ’ ಎಂಬುದು ಹಲವು ಸಂಘರ್ಷಗಳ ಮಾರ್ಗವಾಗಿದೆ.
- ಧರ್ಮ ಮತ್ತು ಸಂಸ್ಕೃತಿ ಪ್ರಭಾವಶಾಲಿಯಾಗಿರುವ ಸಾಧನ.
- ಜಾತ್ಯಾತೀತ ಪದವು ರಾಜ್ಯಕ್ಕೆ ಸಂಬಂಧಿಸಿದೆ, ಏಕೆಂದರೆ ರಾಜ್ಯಕ್ಕೆ ಎಲ್ಲಾ ಧರ್ಮಗಳು ಭೌತಿಕವಾಗಿವೆ. ನೈಜ ಹಿಂದೂಗಳನ್ನು ಸರಿಪಡಿಸಬೇಕಾದ ಅಗತ್ಯವಿಲ್ಲ. ಹಿಂದೂಗಳು ಎಂದಿಗೂ ಜಾತ್ಯಾತೀತ ಆಡಳಿತವನ್ನೇ ಬೆಂಬಲಿಸುತ್ತಾರೆ.
- ಹಿಂದೂರಾಷ್ಟ್ರಕ್ಕೆ ಪ್ರಚಾರದ ಅಗತ್ಯವಿಲ್ಲ. ಅದು ತಮಿಳುನಾಡಿನಲ್ಲಿಯೂ ಬೇಕಿಲ್ಲ.
- ಆರ್ಕ್ಟಿಕ್‌ನಿಂದ ಅಂಟಾರ್ಕ್ಟಿಕ್‌ವರೆಗೆ, ಪಶ್ಚಿಮದಿಂದ ಪೂರ್ವದವರೆಗೆ ಇಡೀ ಭೂಮಿಯಲ್ಲಿ ನಮಗೆ ಎಲ್ಲ ಮತಗಳು ಸಮಾನ ಎಂದು ಯಾರು ಹೇಳುತ್ತಾರೋ ಅವರೆಲ್ಲರೂ ಹಿಂದೂಗಳೇ ಆಗಿರುತ್ತಾರೆ.
- ತಂತ್ರಜ್ಞಾನ ನಮ್ಮನ್ನು ಕೊಲ್ಲುತ್ತಿಲ್ಲ. ತಂತ್ರಜ್ಞಾನ ಬಳಸುವ ನಾವೇ ಅದರ ಬಗ್ಗೆ ಜಾಗೃತರಾಗಿರಬೇಕು. ಹಸಿದ ಮನುಷ್ಯನನ್ನು ತಿನ್ನುವುದರಿಂದ ತಡೆಯಲು ಸಾಧ್ಯವಿಲ್ಲ.
- ನಾಳೆ ಬರುವ ಭವಿಷ್ಯವನ್ನು ತಡೆಯಲು ಸಾಧ್ಯವಿಲ್ಲ ಎಂಬುದನ್ನಿರಿತು ನಾವು ನವೀಕರಣಗಳಿಗೆ ಸಿದ್ಧರಾಗಬೇಕು.
- “ನಮ್ಮ ಸಾವಿಗೆ ಪ್ರಮುಖ ಕಾರಣ ನಮ್ಮ ಹುಟ್ಟೇ ಆಗಿರುತ್ತದೆ” ಎಂಬ ಪ್ರಸಿದ್ಧ ಮಾತಿದೆ.
- ಸ್ವಚ್ಛತೆ ಹಾಗೂ ಸಂಘ ಯಾವಾಗಲೂ ಜೊತೆಯಾಗಿಯೇ ಸಾಗುತ್ತದೆ.
- ಮಕ್ಕಳು ನಮ್ಮೊಂದಿಗೆ ತೆರೆದುಕೊಳ್ಳಬೇಕೇ ವಿನಃ ಮುದುಡಿಕೊಳ್ಳಬಾರದು. ಅವರಿಗೆ ಮೌಲ್ಯಗಳನ್ನು ಹೇಳಬೇಕು, ವಿಷಯಗಳ ಬಗ್ಗೆ ಮಾಹಿತಿ ನೀಡಬೇಕು.
- ಮಕ್ಕಳೊಂದಿಗೆ ಪ್ರೀತಿಯಿಂದ ನಡೆದುಕೊಳ್ಳಬೇಕು, ಕೋಪದಿಂದಲ್ಲ. ಪ್ರೀತಿಯಿಂದ ಕಲಿಸಿದ ಶಿಸ್ತು ಸರಿಯಾಗಿ ಕಾರ್ಯರೂಪಕ್ಕೆ ಬರುತ್ತದೆ.
- ಸಾರ್ವಜನಿಕ ನಡವಳಿಕೆಯಿಂದ ನೀತಿಯಲ್ಲಿ ಬದಲಾವಣೆಗಳಾಗುತ್ತವೆ.
- ಸೌರಶಕ್ತಿಯ ಬಳಕೆ ಹೆಚ್ಚಾಗಬೇಕು. ಹಸಿರು ವಿಮಾನ ನಿಲ್ದಾಣಕ್ಕೆ ಕೊಚ್ಚಿ ವಿಮಾನ ನಿಲ್ದಾಣ ಅತ್ಯುತ್ತಮ ಉದಾಹರಣೆಯಾಗಿದೆ.
- ಹಸಿರು ಆರ್ಥಿಕತೆಗೆ ಶಿಕ್ಷಣ, ಸಕ್ರಿಯಗೊಳಿಸುವಿಕೆ ಮತ್ತು ಸರ್ಕಾರದ ನಿರ್ಧಾರಗಳು ಅವಶ್ಯಕ.
- ದೇಹ ವ್ಯತ್ಯಾಸವನ್ನು ಹೊರತುಪಡಿಸಿ ಪುರುಷ ಮತ್ತು ಸ್ತ್ರೀಯರಲ್ಲಿ ಬೌದ್ಧಿಕವಾಗಿ ಯಾವ ವ್ಯತ್ಯಾಸವೂ ಇಲ್ಲ.
- ಮಹಿಳೆಯನ್ನು ಜಗಜ್ಜನನಿಯಂತೆ ಪೂಜಿಸೋಣ, ಅದರೊಂದಿಗೆ ಆಕೆಯನ್ನು ಜಾಗೃತಗೊಳಿಸೋಣ.
- ಮಹಿಳೆಯರಿಗೆ ಸಮಾನತೆ ಸಿಗುವ ತನಕ ಸಬಲೀಕರಣ ಆಗುವುದಿಲ್ಲ.
- ಮಹಿಳೆಯರಿಂದಾಗಿ ಪುರುಷರು ಉನ್ನತಿ ಪಡೆಯುತ್ತಾರೆ.
- ತಾಯಿಯೇ ಮೊದಲ ಗುರು, ತಾಯಿಯೇ ಮಾನವತೆಯ ಕರ್ತೃ.
- ನ್ಯಾಯಾಂಗವು ಸಂವಿಧಾನದ ಬಹುಮುಖ್ಯ ಅಂಗ, ತಾನೇ ಮುಕ್ತವಾಗಿ ಯೋಚಿಸುವಲ್ಲಿ ಹೆಜ್ಜೆಯಿಡಬೇಕಿದೆ.
- ಸನ್ಯಾಸಿ ಸಮಾಜವನ್ನು ನಡೆಸುವುದಿಲ್ಲ. ಸಮಾಜವು ಗೃಹಸ್ಥದಿಂದ ನಡೆಸಲ್ಪಡುತ್ತದೆ.
- ನಾವು ನಮ್ಮಲ್ಲಿ ಪ್ರತಿನಿಧಿಗಳನ್ನು ಕಾಣುತ್ತೇವೆ. ನಾವು ಏನನ್ನು ಅಳವಡಿಸುಕೊಳ್ಳುತ್ತೇವೆಯೋ ಅದೇ ಅವರಾಗಿರುತ್ತಾರೆ.
- ವ್ಯವಸ್ಥೆ ಯಾವಾಗಲೂ ಇರುತ್ತದೆ. ವ್ಯಕ್ತಿ ಇದನ್ನು ಭ್ರಷ್ಟಗೊಳಿಸುತ್ತಾನೆ.
- ರಾಜಕೀಯದಲ್ಲಿ ಪ್ರಾಮಾಣಿಕತೆ ಮತ್ತು ಗುಣಮಟ್ಟ ಅಗತ್ಯ.
- ಕಲಾಜಗತ್ತು ಸಂಘಟಿತವಾಗಿರಬೇಕು.
- ಕಲೆಯನ್ನು ಬೆಳೆಸಲು ವೀಕ್ಷಕರಿರಬೇಕು.
- ಫಿನ್ ಲ್ಯಾಂಡ್ ದೇಶದ ಶಿಕ್ಷಣ ವ್ಯವಸ್ಥೆ ಭಾರತೀಯ ಗುರುಕುಲ ಪದ್ಧತಿಯನ್ನಾಧರಿಸಿದೆ.
- ನಿಜವಾದ ಮತ್ತು ಉತ್ತಮ ಶಿಕ್ಷಣ ನಮ್ಮ ಗುರಿಯಾಗಿರಬೇಕು.
- ಮುಂದಿನ ತಲೆಮಾರಿಗೆ ಬೇಕಾದಂತಹ ಯೋಜನೆಗಳನ್ನು ಮಾಡುವವರ ಅಗತ್ಯವಿದೆ.
- ಹಿಂದೂ ಪೀಳಿಗೆಗೆ ನಾವು ಏನಾಗಿದ್ದೇವೆ ಎಂಬುದರ ಬಗ್ಗೆ ಮಾತ್ರವಲ್ಲದೆ ಅವರು ಏನಾಗಿದ್ದರು ಎಂಬುದರ ಬಗ್ಗೆಯೂ ಶಿಕ್ಷಣ ನೀಡಬೇಕು. (ದಾಖಲೆಯೊಂದಿಗೆ ನಮ್ಮ ಇತಿಹಾಸವನ್ನು ಹೇಳಬೇಕು).
- ಜನರ ನಡುವಿನ ಸಂವಹನ ಹೆಚ್ಚಾಗಬೇಕು.
- ಜಗತ್ತು ಭಾರತದ ಬಗ್ಗೆ ತಿಳಿದುಕೊಳ್ಳಬೇಕು. ಜಗತ್ತು ಭಾರತದಿಂದ ಕಲಿಯಬೇಕು.
- ಭಾರತ ತನ್ನ ಗಡಿಯನ್ನು ಕಳೆದುಕೊಳ್ಳದೆ ಚೀನಾದೊಂದಿಗೆ ಶಾಂತಿಯುತ ವ್ಯವಹಾರ ನಡೆಸಬೇಕು.
- ನಾವು ಸೇವೆಯ ಮೂಲಕ ಜೀವನವನ್ನು ಅರ್ಥಪೂರ್ಣಗೊಳಿಸಲು ಪ್ರಯತ್ನಿಸಬೇಕು.
- ಶ್ರೇಷ್ಠತೆ, ಪ್ರಾಮಾಣಿಕತೆ, ಕರ್ತವ್ಯಪ್ರಜ್ಞೆ ನಿಜವಾದ ರಾಷ್ಟ್ರೀಯ ಆದಾಯವನ್ನು ತರುತ್ತದೆ.
- ಸಂಘ ಅನಂತ.
**********************************************************************************
ವಿಶ್ವ ಸಂವಾದ ಕೇಂದ್ರ ಕರ್ನಾಟಕ
09.11.2025



















