ಬೆಂಗಳೂರು, ಅಕ್ಟೋಬರ್ 31, 2026: ರಾಜ್ಯದ ಪ್ರತಿಷ್ಠಿತ ಶೈಕ್ಷಣಿಕ ಮತ್ತು ಸಾಮಾಜಿಕ ಸಂಸ್ಥೆಯಾದ ರಾಷ್ಟ್ರೋತ್ಥಾನ ಪರಿಷತ್ ನ ಮುಂದಿನ 5 ವರ್ಷಗಳ ಅವಧಿಗೆ (2026-2031) ಹೊಸ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿಯನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಕೆಂಪೇಗೌಡ ನಗರದ ರಾಷ್ಟ್ರೋತ್ಥಾನ ರಕ್ತಕೇಂದ್ರದಲ್ಲಿ ನಡೆದ ಸರ್ವಸದಸ್ಯರ ಸಭೆಯಲ್ಲಿ ಎಂ. ಪಿ. ಕುಮಾರ್ ಅವರನ್ನು ಮುಂದಿನ ಅವಧಿಗೆ ಅಧ್ಯಕ್ಷರನ್ನಾಗಿ ಪುನರಾಯ್ಕೆ ಮಾಡಲಾಯಿತು.

ರಾಷ್ಟ್ರೋತ್ಥಾನ ಪರಿಷತ್ ನ ಮುಂದಿನ 5 ವರ್ಷಗಳ ಅವಧಿಗೆ (2026-2031) ಆಯ್ಕೆಯಾದ ಆಡಳಿತ ಮಂಡಳಿಯ ವಿವರ

- ಅಧ್ಯಕ್ಷರು – ಎಂ. ಪಿ. ಕುಮಾರ್
- ಉಪಾಧ್ಯಕ್ಷರುಗಳು – ಬಿ. ಎಸ್. ರವಿಕುಮಾರ್, ಗಜಾನನ ಲೋಂಢೆ, ಗಾಯತ್ರೀ ಗೋಪಿನಾಥ್
- ಪ್ರಧಾನ ಕಾರ್ಯದರ್ಶಿ – ನಾ. ದಿನೇಶ್ ಹೆಗ್ಡೆ
- ಖಜಾಂಚಿ – ಕೆ. ಎಸ್. ನಾರಾಯಣ
- ಕಾರ್ಯದರ್ಶಿಗಳು – ಎಚ್. ಜಯಣ್ಣ, ಆಶಾ ಅಶೋಕ್
- ಸದಸ್ಯರುಗಳು – ಬಿ. ಬಸವನಗೌಡ, ರಾಜೇಶ್ ಪದ್ಮಾರ್, ಮಹೇಶ್ ಕಾರಂತ್, ಡಾ. ರೋಹಿಣಾಕ್ಷ ಶಿರ್ಲಾಲು, ದಿವಾಕರ ಹೆಗಡೆ, ಡಾ| ಎಚ್. ಎನ್. ಶೈಲಾ, ಎಚ್. ಎಂ. ಗುರುಬಸವರಾಜಯ್ಯ
- ವಿಶೇಷ ಆಹ್ವಾನಿತ ಸದಸ್ಯರುಗಳು – ಗಣಪತಿ ಹೆಗಡೆ, ಹೊ.ರಾ.ರಾಜಾರಾಂ
