ABVP Protest at Mangalore

ಮಂಗಳೂರು: ಸೌಜನ್ಯ ಪ್ರಕರಣವನ್ನು ಸಿಬಿಐಗೆ ಒಪ್ಪಿಸಲು ಹಾಗೂ ಅಕ್ಷತಾ ಸಾವಿನ ಬಗ್ಗೆ ಸಿಓಡಿ ತನಿಖೆಗೆ ಆಗ್ರಹಿಸಿ ನಗದರ ಬಸವೇಶ್ವರ ವೃತ್ತದಲ್ಲಿ ಎಬಿವಿಪಿ ನಡೆಸುತ್ತಿರುವ ಪ್ರತಿಭಟನೆ 2ನೇ ದಿನಕ್ಕೆ ಕಾಲಿಟ್ಟಿದೆ.

ABVP Protest at Mangalore
ABVP Protest at Mangalore

ಈ ಸಂದರ್ಭದಲ್ಲಿ ಮಾತನಾಡಿದ ಎಬಿವಿಪಿ ಜಿಲ್ಲಾ ಸಹ ಸಂಚಾಲಕ ಯತೀಶ್ ಕುಮಾರ್. ಪಿ. ‘ಈ ಪ್ರಕರಣವನ್ನು ಆದಷ್ಟು ಬೇಗ ಸರಕಾರ ಸಿಬಿಐ ಮತ್ತು ಸಿಓಡಿಗೆ ವಹಿಸಬೇಕು. ಇವತ್ತು ಸರ್ಕಾರ ದಿಲ್ಲಿಗೊಂದು ಕಾನೂನು ನಮಗೊಂದು ಕಾನೂನು ರೀತಿಯಲ್ಲಿ ವರ್ತಿಸುತ್ತದೆ. ಅಲ್ಲಿಯ ಪ್ರಕರಣವನ್ನು ಅಷ್ಟು ಬೇಗ ಇತ್ಯರ್ಥ್ಯ ಪಡಿಸಲು ಸಾಧ್ಯವಾದರೆ ನಮ್ಮಲ್ಲಿ ಯಾಕೆ ಸಾಧ್ಯವಿಲ್ಲ? ಮತ್ತು ಈ ವಿಷಯದಲ್ಲಿ ಪ್ರತಿಯೊಬ್ಬ ಜನತೆಯು ಬೀದಿಗಿಳಿದು ಆ ಎರಡು ಹೋರಾಟ ಮಾಡಿ ಅವರ     ಕುಟುಂಬಕ್ಕೆ ಮತ್ತು ಮುಂದೆ ಈ ರೀತಿ ನಡೆಯದ ಹಾಗೆ ಮಾಡುವ ಕರ್ತವ್ಯ ನಮ್ಮ ಮುಂದಿದೆ’ ಎಂದು ಹೇಳಿದರು.

ನಗರ ಸಂಘಟನಾ ಕಾರ್ಯದರ್ಶಿ ಮಹಿಪಾಲ್. ಬಿ. ಕೆ. ಮಾತನಾಡಿ ‘ಭಾರತದ ಸಂಸ್ಕೃತಿಯಲ್ಲಿ ದುರ್ಗೆಯನ್ನು ಭಾರತ ಮಾತೆಎಂದು ಪೂಜಿಸುತ್ತೇವೆ. ಅಂತಹ ಗೌರವವನ್ನು ಸ್ತ್ರೀಯರಿಗೆ ಭಾರತ ಸಮಾಜ ನೀಡುತ್ತದೆ. ಆದರೆ ಇಂದು ಭಾರತದಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ಶೋಷಣೆ ಖಂಡನೀಯವಾಗಿದೆ. ಇದರ ವಿರುದ್ಧ ಸಮಾಜ ಹಾಗೂ ಸರ್ಕಾರ ಎಚ್ಚೆತ್ತುಕೊಳ್ಳಬೇಕು. ಸೌಜನ್ಯ ಪ್ರಕರಣವನ್ನು ಮುಂದಿಟ್ಟುಕೊಂಡು ಎಸ್‌ಎಫ್‌ಐ, ಡಿವೈಎಫ್‌ಐ, ಸಂಘಟನೆಗಳು ರಾಜಕೀಯ ಮಾಡುತ್ತಿದೆ. ದಕ್ಷಿಣ ಕನ್ನಡದಲ್ಲಿ ಕನಿಷ್ಠ 1600 ವಿದ್ಯಾರ್ಥಿನಿಯರು ನಾಪತ್ತೆಯಾಗಿದ್ದಾರೆ. ಇದರ ಬಗ್ಗೆ ಇವರು ಯಾಕೆ ಮಾತನಾಡುವುದಿಲ್ಲ. ಕೇರಳದ ಪೂನ್ನಾನಿಯಲ್ಲಿ ಅದೇಷ್ಟು ಯುವತಿಯರನ್ನು ಮತಾಂತರ, ವೇಶ್ಯಾವಾಟಿಕೆಗೆ ತಳ್ಳುತ್ತಿರುವ ಸಮಯದಲ್ಲಿ ಇವರು ಯಾಕೆ ಮಾತನಾಡುತ್ತಿಲ್ಲ. ಅದೇಷ್ಟು ಪ್ರಕರಣಗಳು ನಡೆವಾಗ ಸುಮ್ಮನಿದ್ದ ಈ ಸಂಘಟನೆಗಳು ಈಗ ಮಾತ್ರ ಸೌಜನ್ಯ ಪ್ರಕರಣವನ್ನು ಮುಂದಿಟ್ಟುಕೊಂಡು ತನ್ನ ಲಾಭ ಬೇಯಿಸುತ್ತಿದೆ’ಎಂದು ಆರೋಪಿಸಿದರು.

ಪ್ರತಿಭಟನೆಯಲ್ಲಿ ವಿದ್ಯಾರ್ಥಿಗಳು ಮಾನವ ಸರಪಳಿ ಮತ್ತು ಕೈಗೆ ಕಪ್ಪು ಪಟ್ಟಿಯನ್ನು ಧರಿಸುವ ಮೂಲಕ ಪ್ರತಿಭಟಿಸಿದರು.

ಪ್ರತಿಭಟನೆಯ ನೇತೃತ್ವವನ್ನು ನಗರ ಕಾರ್ಯದರ್ಶಿ ಚೇತನ್ ಪಡೀಲ್., ಜಿಲ್ಲಾ ವಿದ್ಯಾರ್ಥಿನಿ ಪ್ರಮುಖ ಶುಭ, ನಗರ ಸಹಕಾರ್ಯದರ್ಶಿ ಅನುಷ್ಕ, ಆಗ್ನೇಯ ಚಕ್ರವರ್ತಿ, ನಿತೀನ್, ಜಯರಾಜ್, ಪ್ರಿತಿಕಾ, ಸ್ವಾತಿ, ಮೇಘನಾ, ದೀಪಕ್ ವಹಿಸಿದ್ದರು.

ಪ್ರತಿಭಟನೆ ಮುಂದುವರಿದ ಭಾಗವಾಗಿ ಶುಕ್ರವಾರದಂದು ನಗರದ ಬೊಂದೇಲ್ ಬಳಿಯ ಮಹಿಳಾ ಪಾಲಿಟೆಕ್ನಿಕ್ ಬಳಿ ಬೆಳಗ್ಗೆ ೧೧.೦೦ ಗಂಟೆಗೆ ಪ್ರತಿಭಟನೆ ಮುಂದುವರಿಯಲಿದೆ.

Source: http://news13.in/2013/10/53278/

Leave a Reply

Your email address will not be published.

This site uses Akismet to reduce spam. Learn how your comment data is processed.