ತುಮಕೂರು October 13: ಮಹಿಳಾ ಸುರಕ್ಷತೆಯ ಸವಾಲುಗಳು ಕೇವಲ ಭಾರತದ ಸಮಸ್ಯೆ ಮಾತ್ರ ಅಲ್ಲ ವಿಶ್ವದ ಸಮಸ್ಯೆ. ಪಿತೃ ಪ್ರಧಾನ ಸಮಾಜ ಪ್ರಾರಂಭವಾದಗಿನಿಂದ ಈ ಸಮಸ್ಯೆ ಪ್ರಾರಂಭವಾಗಿದೆ. ಭಾರತದಲ್ಲಿ ಪ್ರಾರಂಭದಲ್ಲಿ ಮಾತೃ ಪ್ರಧಾನ ಕುಟುಂಬ ವ್ಯವಸ್ಥೆ ಇತ್ತು. ಆದರೆ ಪಾಶ್ಚ್ಯಾತ್ಯ ಸಂಸ್ಕೃತಿ ಪ್ರಭಾವದ ಪರಿಣಾಮದಿಂದ ನಮ್ಮ ಮೌಲ್ಯ ಹಾಳಾಯಿತು. ಒಂದು ವಿದ್ಯಾರ್ಥಿ ಸಂಘಟನೆಯಾಗಿ ಮಹಿಳಾ ಸುರಕ್ಷತೆಯ ಬಗ್ಗೆ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿರುವುದು ಅಭಾವಿಪದ ಸಾಮಾಜಿಕ ಬದ್ಧತೆಯನ್ನು ತೋರಿಸುತ್ತದೆ ಎಂದು ತುಮಕೂರು ವಿವಿ ಕುಲಪತಿ ಪ್ರೊ| ಎ. ಎಚ್ ರಾಜಾಸಾಬ್ ಅವರು ಹೇಳಿದರು.

1

ಅವರು ಅಭಾವಿಪದಿಂದ ದಿನಾಂಕ 11 ಅಕ್ಟೋಬರ್ 2014 ರಂದು ಸಿದ್ದಗಂಗಾ ಪದವಿ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಿದ ಜಿಲ್ಲಾ ಮಟ್ಟದ ’ಮಹಿಳಾ ಸುರಕ್ಷತೆಯ ಸವಾಲುಗಳು ಮತ್ತು ಪರಿಹಾರಗಳು’ ಎಂಬ ವಿಚಾರ ಸಂಕಿರಣವನ್ನು ಉದ್ಧೇಶಿಸಿ ಮಾತನಾಡುತ್ತಿದ್ದರು.

’ಇತ್ತೀಚಿನ ದಿನಗಳಲ್ಲಿ ಮಹಿಳಾ ದೌರ್ಜನ್ಯ ಪ್ರಕರಣಗಳು ಜಾಸ್ತಿಯಾದಂತೆ ಕಾಣುತ್ತಿದೆ. ಮಹಿಳೆಯರು ಜಾಗೃತರಾಗಿರುವುದರಿಂದ  ಇಂದು ಪ್ರಕರಣಗಳು ದಾಖಲಾಗುವುದು ಮತ್ತು ಸುದ್ಧಿಯಾಗುವುದು ಸಾಧ್ಯವಾಗಿದೆ. ಆದರೆ ಮಾಧ್ಯಮಗಳು ಒಂದೇ ವಿಷಯವನ್ನು ದಿನಪೂರ್ತಿ ಅಗತ್ಯಕ್ಕಿಂತ ಹೆಚ್ಚು ವೈಭವಿಕರಿಸಿ ಪ್ರಚಾರ ಮಾಡುವುದರಿಂದ ಸಮಾಜದ ಮೇಲೆ ಕೆಟ್ಟ ಪ್ರಭಾವ ಬೀರುತ್ತದೆ. ಮೊದಲೇ ಕುಗ್ಗಿರುವ ಮಹಿಳೆ ಮತ್ತಷ್ಟು ಮಾನಸಿಕ ಹಿಂಸೆ ಅನುಭವಿಸುತ್ತಾರೆ. ದೆಹಲಿಯ ನಿರ್ಭಯ ಪ್ರಕರಣದಲ್ಲಿ ಒಬ್ಬ ಅಪರಾಧಿ ಮೇಲೆ ಅಪ್ರಾಪ್ತ ಅನ್ನುವ ಕಾರಣಕ್ಕೆ ಕಠಿಣ ಶಿಕ್ಷೆಯಾಗಿಲ್ಲ. ಅತ್ಯಾಚಾರದ ಪ್ರಕರಣಗಳಲ್ಲಿ ಭಾಗಿಯಾಗುವ ಅಪ್ರಾಪ್ತರಿಗೂ ಕಠಿಣ ಶಿಕ್ಷೆಯಾಗಬೇಕು’ ಎಂದರು. ತಮ್ಮ ಪ್ರವಾಸದ ಸಂದರ್ಭದಲ್ಲಿ ಗಮನಿಸಿದ ಆಫ್ರಿಕಾದಲ್ಲಿರುವ ಮಹಿಳೆಯರಿಗೆ ಸಂಬಂಧಿಸಿದಂತೆ ಕ್ರೂರ ಆಚರಣೆಯನ್ನು ಸಭೆಯ ಮುಂದೆ ತೆರೆದಿಟ್ಟರು. ಜಪಾನ್ ಮತ್ತು ಚೀನಾದಲ್ಲಿ ಮಹಿಳೆಯರ ಸೌಂದರ‍್ಯ ಚೆನ್ನಾಗಿರಬೇಕೆಂದು ಚಿಕ್ಕಂದಿನಲ್ಲಿ ಕಾಲುಗಳನ್ನು ಬಿಗಿಯಾಗಿ ಕಟ್ಟಿರುತ್ತಾರೆ. ಉಗಾಂಡದಲ್ಲಿ ಸೌಂದರ್ಯ ವರ್ಧನೆಯ ಹೆಸರಿನಲ್ಲಿ ಕೆಟ್ಟ ಆಚರಣೆಗಳು ಜಾರಿಯಲ್ಲಿವೆ ಎಂದರು. ಇಡಿ ವಿಶ್ವದಲ್ಲಿ ಯಾವುದೇ ಒಂದು ಸತ್ಯ ಎಲ್ಲಾ ಸಂದರ್ಭ ಮತ್ತು ಎಲ್ಲಾ ಸ್ಥಳಗಳಲ್ಲಿ ಅನ್ವಯಿಸುವುದಿಲ್ಲ. ಆದರೆ ಸ್ತ್ರೀ ದೌರ್ಜನ್ಯ ಎಲ್ಲಾ ಕಡೆಗಳಲ್ಲು ಸಮಾನವಾಗಿದೆ ಎಂಬ ಒಬ್ಬ ಕವಿಯ ವಾಣಿಯನ್ನು ನೆನಪಿಸಿಕೊಂಡರು. ಇಂತಹ ಸಂದರ್ಭದಲ್ಲಿ ಒಂದು ವಿದ್ಯಾರ್ಥಿ ಸಂಘಟನೆಯಾಗಿ ಮಹಿಳಾ ಸುರಕ್ಷತೆಯ ಬಗ್ಗೆ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿರುವುದು ಅಭಾವಿಪದ ಸಾಮಾಜಿಕ ಬದ್ಧತೆಯನ್ನು ತೋರಿಸುತ್ತದೆ ಎಂದರು

ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಭಾವಿಪ ಸಂಚಾಲಿತ ’ಮಹಿಳಾ ಸುರಕ್ಷಾ ಕಾರ್ಯಪಡೆ’ (ಒSಏP)ಯ ರಾಜ್ಯ ಸಮಿತಿ ಸದಸ್ಯರಾದ ಶ್ರೀಮತಿ ಲತಾ ಭೈರಪ್ಪ ವಹಿಸಿದ್ದರು. ಅಭಾವಿಪ ರಾಜ್ಯ ಸಹಕಾರ್ಯದರ್ಶಿ ಕು. ಶ್ರೀದೇವಿ ಸೂಡಿಶೆಟ್ಟರ್ ಪ್ರಾಸ್ತಾವಿಕವಾಗಿ ಮಾತಾನಾಡಿದರು. ನಗರ ಕಾರ್ಯದರ್ಶಿ ಕು. ಕಾವ್ಯ ಸ್ವಾಗತಿಸಿ ನಗರ ಅಧ್ಯಕ್ಷರಾದ ವೇಣುಗೋಪಾಲ್ ರೆಡ್ಡಿ ವಂದಿಸಿದರು. ಶ್ರೀ ಸಿದ್ದಗಂಗಾ ಪದವಿ ಕಾಲೇಜಿನ ಪ್ರಾಂಶುಪಾಲರಾದ ಪ್ರೊ| ಮಲ್ಲೇಶಪ್ಪ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ವಿಶ್ವವಿದ್ಯಾಲಯ ಸ್ನಾತಕ್ಕೋತರ ಕೇಂದ್ರದ ಉಪನ್ಯಾಸಕ ಶ್ರೀ ರಮೇಶ್ ಸಾಲಿಯನ್, ಉದ್ಯಮಿ ಎನ್. ಎಸ್. ನಾಗೇಂದ್ರ ಪ್ರಸಾದ್ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ವಿಚಾರ ಗೋಷ್ಠಿಯಲ್ಲಿ ಮಾಜಿ ಸಂಸದೆ ಮತ್ತು ಹೆಸರಾಂತ ಪತ್ರಕರ್ತರಾದ ಶ್ರೀಮತಿ ತೇಜಶ್ವಿನಿ ರಮೇಶ್ ಮಾತನಾಡಿ  ’ಮಹಿಳಾ ಸುರಕ್ಷತೆ ಮತ್ತು ಮಾಧ್ಯಮ’, ಬೆಂಗಳೂರಿನ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದ ಸಂಶೋಧನಾ ಸಲಹೆಗಾರರಾದ ಶ್ರೀಮತಿ ಸುಮಿತ್ರಾ ಆಚಾರ್ಯರವರು ಮಹಿಳಾ ಸುರಕ್ಷತೆ ಮತ್ತು ಕಾನೂನು ಕುರಿತು ವಿಚಾರ ಮಂಡಿಸಿದರು. ತುಮಕೂರಿನ ವಕೀಲರು ಹಾಗೂ ಅಭಾವಿಪ ಸಂಚಾಲಿತ ’ಮಹಿಳಾ ಸುರಕ್ಷಾ ಕಾರ್ಯಪಡೆ’ (ಒSಏP)ಯ ತುಮಕೂರು ಜಿಲ್ಲಾ ಸಮಿತಿ ಸದಸ್ಯೆ ಶ್ರೀಮತಿ ನಿವೇದಿತಾ ಅಧ್ಯಕ್ಷತೆ ವಹಿಸಿದ್ದರು.

4

ಸಂವಾದ  ಮತ್ತು ಸಮಾರೋಪ ಅವಧಿಯಲ್ಲಿ ಅಭಾವಿಪ ನಗರ ಉಪಾಧ್ಯಕ್ಷರು ಹಾಗೂ ಆರ್ಯಭಾರತಿ ಪಾಲಿಟೆಕ್ನಿಕ್ ಕಾಲೇಜಿನ ವಸ್ತ್ರ ವಿನ್ಯಾಸ (ಂಆಈಖಿ) ಡಿಪ್ಲೋಮಾ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ಮಂಜುಳಾ ಸಂವಾದ ಕಾರ್ಯಕ್ರಮ ನಡೆಸಿಕೊಟ್ಟರು. ಅಭಾವಿಪ ಸಂಚಾಲಿತ ಮಹಿಳಾ ಸುರಕ್ಷಾ ಕಾರ್ಯಪಡೆಯ ತುಮಕೂರು ಜಿಲ್ಲಾ ಘಟಕವನ್ನು ಘೋಷಿಸಲಾಯಿತು. ಅಭಾವಿಪದ ಪ್ರಾಂತ ಉಪಾಧ್ಯಕ್ಷರು ಹಾಗೂ ಬೆಂಗಳೂರು ಸರಕಾರಿ ಕಲಾ ಕಾಲೇಜಿನ ರಾಜಕೀಯ ಶಾಸ್ತ್ರ ವಿಭಾಗದ ಉಪನ್ಯಾಸಕರಾದ ಶ್ರೀಮತಿ ವನಜಾ ಶ್ರೀರಾಮ್‌ರವರು ಸಮರೋಪ ಭಾಷಣ ನಡೆಸಿಕೊಟ್ಟರು.

ಕಾರ್ಯಕ್ರಮದಲ್ಲಿ ಅಭಾವಿಪದ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ವೆಂಕಟೇಶ್.ಕೆ. ಮುದೂರು, ಜಿಲ್ಲಾ ವಿದ್ಯಾರ್ಥಿನಿ ಪ್ರಮುಖ್ ಕು. ಪವಿತ್ರ, ಜಿಲ್ಲಾ ಸಂಚಾಲಕ್ ರವಿಕುಮಾರ್, ರಾಜ್ಯ ಸಹಕಾರ್ಯದರ್ಶಿ ಅಮರೇಶ್, ನಗರ ಸಂಘಟನಾ ಕಾರ್ಯದರ್ಶಿ ನವೀನ್ ಕುಮಾರ್, ಜಿಲ್ಲಾ ಸಹ ಪ್ರಮುಖ್ ಶ್ರೀನಿವಾಸ, ಜಿಲ್ಲಾ ಸಹ ಸಂಚಾಲಕ್ ತೇಜಮೂರ್ತಿ, ವಿದ್ಯಾರ್ಥಿನಿ ಮುಖಂಡರಾದ ಕು. ಧನಲಕ್ಷ್ಮೀ, ಕು. ನಳೀನಾ, ಕು. ಮೀನಾಕ್ಷಿ, ಕು. ಚೈತ್ರಾ, ಕು. ಮೇಕಲಾ, ಕು. ಪ್ರಿಯಾಂಕ, ಕು. ರಾಜೇಶ್ವರಿ, ಕು. ಅಮೂಲ್ಯ ಮುಂತಾದವರು ಉಪಸ್ಥಿತರಿದ್ದರು.

6

Leave a Reply

Your email address will not be published.

This site uses Akismet to reduce spam. Learn how your comment data is processed.