Bangalore, 4th September: The Akhil Bharatiya Vidyarthi Parishad (ABVP) and the Youth Against Corruption (YAC) have jointly protested and observed a national-level college bandh on Tuesday demanding the resignation of Prime Minister Manmohan Singh in the wake of the alleged coal block allocation controversy.

In Karnataka, the Bandh happened in 300 places, Total 2786 colleges were closed and supported the cause. 6,00,000 students participated in protests state wide.

 ಭ್ರಷ್ಟ ಯುಪಿಎ ಸರ್ಕಾರವನ್ನು ವಜಾ      ಗೊಳಿಸಲು ಆಗ್ರಹಿಸಿ ಮತ್ತು ಹಗರಣಗಳ ರೂವಾರಿ ಪ್ರಧಾನಮಂತ್ರಿ ಡಾ.ಮನಮೋಹನ್‌ಸಿಂಗ್ ರಾಜೀನಾಮೆ ನೀಡಲು ಆಗ್ರಹಿಸಿ ದೇಶಾದ್ಯಂತ ಕರೆಯ ಹಿನ್ನೆಲೆಯಲ್ಲಿ ರಾಜ್ಯದಲ್ಲಿ 300 ಸ್ಥಾನ, 2786 ಕ್ಕೂ ಹೆಚ್ಚು ಕಾಲೇಜ್ ಬಂದ್, ಸುಮಾರು6,೦೦,೦೦೦ ಕ್ಕೂ ಅಧಿಕ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಬಂದ್‌ಗೆ ಬೆಂಬಲ ನೀಡಿದ್ದಾರೆ.

ಸೈಲೆಂಟ್ ಪ್ರೈಮ್ ಮಿನಿಸ್ಟರ್ ಎಂ.ಎಂ.ಎಸ್ ರಾಜೀನಾಮೆಗೆ ಎನ್.ರವಿಕುಮಾರ್ ಆಗ್ರಹ

ಬೆಂಗಳೂರು : ಕಾಂಗ್ರೆಸ್ ನೇತೃತ್ವದ ಯು.ಪಿ.ಎ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಹಾಗೂ ಹಗರಣಗಳ ಸರದಾರ ಪ್ರಧಾನಿ ಡಾ.ಮನಮೋಹನ್‌ಸಿಂಗ್ ರಾಜೀನಾಮೆಗೆ ಆಗ್ರಹಿಸಿ ಂಃಗಿP ಮತ್ತು ಙಂಅ  ವತಿಯಿಂದ ಇಂದು  ರಾಜ್ಯಾದ್ಯಂತ ಯಶಸ್ವಿಯಾಗಿ  ಬೈಕ್‌ರ‍್ಯಾಲಿ, ಪ್ರತಿಕೃತಿ ದಹನ, ಮಾನವ ಸರಪಳಿ ರಚಿಸಿ ಪ್ರತಿಭಟನೆ ನಡೆಸಲಾಯಿತು. ರಾಜ್ಯದ ಮಂಗಳೂರು, ಶಿವಮೊಗ್ಗ, ಹುಬ್ಬಳ್ಳಿ, ಗುಲ್ಬರ್ಗಾ, ವಿಜಾಪುರ, ಬಾಗಲಕೋಟೆ, ದಾವಣಗೆರೆ, ಚಿಕ್ಕಮಗಳೂರು, ಕೊಪ್ಪಳ, ರಾಯಚೂರು, ಬಳ್ಳಾರಿ,  ಬೀದರ್, ದೊಡ್ಡಬಳ್ಳಾಪುರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ದಕ್ಷಿಣ ಜಿಲ್ಲೆ, ಸೇರಿದಂತೆ ಒಟ್ಟು ೩೦ ಜಿಲ್ಲೆಗಳಲ್ಲಿ, ೩೦೦ ಸ್ಥಾನಗಳಲ್ಲಿ  ಸುಮಾರು ೨,೭೮೬  ಕ್ಕೂ ಹೆಚ್ಚು ಕಾಲೇಜ್ ಬಂದ್ ಹಾಗೂ ಪ್ರತಿಭಟನೆಯಲ್ಲಿ ೬ ಕ್ಕೂ ಅಧಿಕ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದರು.

ಬೆಂಗಳೂರಿನಲ್ಲಿ ಸ್ವಾತಂತ್ರ್ಯ ಉದ್ಯಾನವನದಲ್ಲಿ ಪ್ರತಿಭಟನೆಯನ್ನು ಉದ್ದೇಶಿಸಿ ಎಬಿವಿಪಿ ಕ್ಷೇತ್ರಿಯ ಸಂಘಟನಾ ಕಾರ್ಯದರ್ಶಿ ಹಾಗೂ ಙಂಅ ರಾಷ್ಟ್ರೀಯ ಸಹ ಸಂಚಾಲಕ ಎನ್ ರವಿಕುಮಾರ್ ಮಾತನಾಡಿ ಕೇಂದ್ರ ಸರ್ಕಾರದ ಪಾಪದ ಕೊಡ ತುಂಬಿದೆ. ಸರ್ಕಾರ ಬಂದಾದ ನಂತರ ಒಂದು ಹಗರಣ ಅದರಲ್ಲೂ ಆನೆಗಾತ್ರದ ಹಗರಣ ಎಂದು ಪ್ರಸ್ತಾಪಿಸಿದ ಙಂಅ ರಾಷ್ಟ್ರೀಯ ಸಹ ಸಂಚಾಲಕ ಎನ್ ರವಿಕುಮಾರ್‌ರವರು ಕಲ್ಲಿದ್ದಲಿನ ಹಗರಣ ೧,೮೬,೦೦೦ ಕೋಟಿ, ೨ಜಿ ಹಗರಣ ೧,೭೬,೦೦೦ ಕೋಟಿ, ಕಾಮನ್‌ವೆಲ್ತ್‌ಗೇಮ್ಸ್ ಹಗರಣ ೮೦,೦೦೦ ಕೋಟಿ, ಇಂಧಿರಾಗಾಂಧಿ ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣ ಹಗರಣ ೮೮,೦೦೦ ಕೋಟಿ ಹೀಗೆ ಆಡಳಿತದುದ್ದಕ್ಕೂ UPಂ  ಸರ್ಕಾರ ಭ್ರಷ್ಟಾಚಾರದ ಮಹಾನ್ ಹಗರಣಗಳನ್ನೇ ಮಾಡುತ್ತಾ ಬಂದಿದೆ. ಹಾಗೂ ಅತ್ಯಂತ ಗಂಭೀರವಾದ ವಿಚಾರವೆಂದರೆ ಈ ಹಗರಣಗಳ ಬಗ್ಗೆ ಸಿಎಜಿ ವರದಿ ನೀಡಿರುವುದರಿಂದ ನೈತಿಕ ಹೊಣೆ ಹೊತ್ತು ನಮ್ಮ ದೇಶದ ಅರ್ಥವ್ಯವಸ್ಥೆಯನ್ನು ಹಾಳು ಮಾಡಿದ ಅಸಮರ್ಥ, ನಿಷ್ಕ್ರೀಯ ಸೈಲೆಂಟ್ ಪ್ರೈಮ್ ಮಿನಿಸ್ಟರ್ ಮನ್‌ಮೋಹನ್‌ಸಿಂಗ್ ಹಗರಣದಲ್ಲಿ ತೊಡಗಿದ್ದು ಕೂಡಲೇ ಸರ್ಕಾರವನ್ನು ವಜಾಗೊಳಿಸಬೇಕೆಂದು ಆಗ್ರಹಿಸಿದರು.

ಯುಪಿಎ ಸರ್ಕಾರವು ನಮ್ಮ ದೇಶದ ನೈಸರ್ಗಿಕ ಸಂಪತ್ತಾದ ಕಲ್ಲಿದ್ದಲು, ಎಣ್ಣೆ, ಗಣಿ, ಥೋರಿಯಂ, ಭೂಮಿ ಇವುಗಳೆಲ್ಲ ಲಕ್ಷ ಲಕ್ಷ ಕೋಟಿಗಳ ಹಗಲು ಲೂಟಿ ಮಾಡುತ್ತಿದೆ. ಯುಪಿಎ ಸರ್ಕಾರವು ಕೂಡ ಲೂಟಿ ಕೋರರ ಸರ್ಕಾರವೆಂದು ಆಕ್ರೋಶ ವ್ಯಕ್ತಪಡಿಸಿದರು. ದೇಶದ ವಿದ್ಯಾರ್ಥಿಗಳು ಇಂತಹ ಭ್ರಷ್ಟ ಸರ್ಕಾರವನ್ನು ಕೊನೆಗಾಣಿಸಲು ಸಮರ ಸಾರಬೇಕೆಂದು ಆಗ್ರಹಿಸಿದರು.

ಕೇಂದ್ರ ಸರ್ಕಾರವು ಮಾಡಿದ ಹಗರಣಗಳಿಗೆ ಕೊನೆ ಎಂದು?

–     ಕಲ್ಲಿದ್ದಲು ಹಗರಣ – ೧,೮೬,೦೦೦ ಕೋಟಿ

–     ವಿಮಾನ ನಿಲ್ದಾಣ ಹಗರಣ – ೮೮,೦೦೦ ಕೋಟಿ

–     ಟೆಟ್ರಾ ಟ್ರಕ್ ಹಗರಣ – ೭೫೦ ಕೋಟಿ

–     ೨ಉ ಸ್ಪೆಕ್ಟ್ರಂ ಹಗರಣ – ೧,೭೬,೦೦೦ ಕೋಟಿ

–     ಕಾಮನ್‌ವೆಲ್ತ್ ಗೇಮ್ಸ್ ಹಗರಣ – ೮೦,೦೦೦ ಕೋಟಿ

–     IPಐ – ೨೦:೨೦ ಕ್ರಿಕೆಟ್ ಹಗರಣ – ೭೫೨೦ ಕೋಟಿ

–     ಐIಅ ಗೃಹ ಸಾಲದ ಹಗರಣ – ೨೦,೦೦೦ ಕೋಟಿ

–     ವಿದೇಶಿ ಸ್ವಿಸ್ ಬ್ಯಾಂಕ್‌ನಲ್ಲಿನ ನಮ್ಮ ಕಪ್ಪು ಹಣ – ೪೦೦ ಲಕ್ಷ ಕೋಟಿ

–     ಆಹಾರ ಪಡಿತರ ವಿತರಣೆಯ ಹಗರಣ – ೫೦,೦೦೦ ಕೋಟಿ

 

ಙಂಅ ರಾಜ್ಯ ಸಹ ಸಂಚಾಲಕ ಡಾ.ಜಯಕೃಷ್ಣ ಮಾತನಾಡಿ ಹಗರಣಗಳಲ್ಲಿ ಮುಳುಗಿರುವ ಕೇಂದ್ರ ಸರ್ಕಾರವನ್ನು ಹಾಗೂ ಭಾರತವನ್ನು ಬಲಿಷ್ಟ, ಉತ್ಕೃಷ್ಟ, ಸಮರ್ಥ, ಸದೃಢ, ಸ್ವಾಭಿಮಾನಿ ರಾಷ್ಟ್ರವನ್ನಾಗಿ ಕಟ್ಟಲು ಆಗ್ರಹಿಸಿದರೆ ಕೇಂದ್ರ ಸರ್ಕಾರ ಯಾವುದಕ್ಕೂ ಪ್ರತಿಕ್ರಿಯಿಸದೆ ಮೌನ ವಹಿಸಿರುವುದು ಅತ್ಯಂತ ಖಂಡನೀಯವಾಗಿದೆ. ಸೋನಿಯಾಗಾಂಧಿ ಸೇರಿದಂತೆ ಸರ್ಕಾರದಲ್ಲಿರುವ ಹಾಗೂ ಸರ್ಕಾರದಲ್ಲಿ ಇಲ್ಲದಿರುವ ನೂರಾರು ಕಪ್ಪುಹಣದ ಶ್ರೀಮಂತರ ಹೆಸರನ್ನು ಬಹಿರಂಗಗೊಳಿಸಲು ಹಿಂದೇಟು ಹಾಕುತ್ತಿರುವ ಅತ್ಯಂತ ದುರ್ಬಲ ಪ್ರಧಾನಮಂತ್ರಿ ರಾಜೀನಾಮೆ ನೀಡಿ ಮನೆಗೆ ತೆರಳಬೇಕೆಂದು ಆಗ್ರಹಿಸಿದರು.

೧.         ಕಲ್ಲಿದ್ದಲು ಹಗರಣ – ೧.೮೬,೦೦೦ ಕೋಟಿ        : ಕಲ್ಲಿದ್ದಲು ಗಣಿಗಳನ್ನು ಸ್ಪರ್ಧಾತ್ಮಕ ಹರಾಜಿನ ಮೂಲಕ ಹಂಚಿಕೆ ಮಾಡದೆ ಅತ್ಯಂತ ಕಡಿಮೆ ಬೆಲೆಗಳಿಗೆ ಖಾಸಗಿ ಕಂಪೆನಿಗಳಲ್ಲಿ ಹಂಚಿದ ಪರಿಣಾಮವಾಗಿ ಕೇಂದ್ರ ಸರ್ಕಾರದ ಬೊಕ್ಕಸಕ್ಕೆ ೧.೮೬,೦೦೦ ಕೋಟಿ ಹಣ ಬರದಂತೆ ಮಾಡಲಾಗಿದೆ. ಇದರಿಂದ ಖಾಸಗಿ ಕಂಪೆನಿಗಳಿಗೆ, ಮಂತ್ರಿಗಳಿಗೆ ಅಗಾಧವಾಗಿ ಲಾಭವಾಗಿದೆ.

ಕಪ್ಪು ಬಂಗಾರ (ಃಟಚಿಛಿಞ ಉoಟಜ)ಎಂದು ಕರೆಯುವ ಕಲ್ಲಿದ್ದಲಿನ ಗಣಿ ಹಂಚಿಕೆಯಲ್ಲಿ ಟೆಂಡರ್ ನಿಯಮಾವಳಿಗಳನ್ನು ಗಾಳಿಗೆ ತೂರಿ ಕಲ್ಲಿದ್ದಲ್ಲು ಬ್ಲಾಕ್‌ಗಳನ್ನು ಹಂಚಿಕೆ ಮಾಡಿದ್ದರಿಂದ ದೇಶದ ಬೊಕ್ಕಸಕ್ಕೆ ಸುಮಾರು ೧ ಲಕ್ಷ ೮೬,೦೦೦ ಕೋಟಿ ನಷ್ಟ.

೧೯೯೩-೨೦೦೫ ರವರೆಗೆ ೧೨ ವರ್ಷದಲ್ಲಿ ಕೇವಲ ೭೦ ಕಲ್ಲಿದ್ದಲ್ಲು ಗಣಿಗಳನ್ನು ಹಂಚಿಕೆ ಮಾಡಲಾಗಿತ್ತು. ಆದರೆ ಪ್ರಧಾನಮಂತ್ರಿಯವರೇ ಕಲ್ಲಿದ್ದಲು ಸಚಿವಾಲಯದ ಉಸ್ತುವಾರಿಯಾಗಿದ್ದರು, ೨೦೦೬-೨೦೧೦ ರವರೆಗೆ ಕೇವಲ ೪ ವರ್ಷದಲ್ಲಿ ೧೪೨ ಬ್ಲಾಕ್‌ಗಳನ್ನು ಹಂಚಿಕೆ ಮಾಡಿದ್ದೇಕೆ?

ಕೇವಲ ಕೋಲ್-ಇಂಡಿಯಾ ಲಿಮಿಟೆಡ್ (ಅIಐ) sಸಿಮಿತವಾಗಿದ್ದ  ಹಂಚಿಕೆಯನ್ನು ಕಳಪೆ & ಹೊಸ ಕಂಪನಿಗಳಿಗೆ ಸ್ಪರ್ಧಾತ್ಮಕ ಮಾರುಕಟ್ಟೆ ಬೆಲೆಗೆ ಹಂಚಿಕೆ ಮಾಡದೆ ಕೇವಲ ಕಾಲ್ಪನಿಕ ಅಂದಾಜಿನ ಮೊತ್ತಕ್ಕೆ ಹಂಚಿಕೆ ಮಾಡಲಾಗಿದೆ.

ಇಲ್ಲಿಯವರೆಗೆ ಹಂಚಿಕೆ ಮಾಡಲಾಗಿರುವ ಕಲ್ಲಿದ್ದಲು ಬ್ಲಾಕ್‌ಗಳಲ್ಲಿ ಇನ್ನು ಉತ್ಖನನ(ಒiಟಿiಟಿg) ಮಾಡುತ್ತಿಲ್ಲವೇಕೆ?

ಈ ರೀತಿಯ ಪ್ರಾಕೃತಿಕ ಸಂಪನ್ಮೂಲಗಳ ಸಂರಕ್ಷಣೆಗೆ, ಸಮರ್ಪಕ & ಸದ್ಬಳಕೆಗಾಗಿ ಸಮಗ್ರವಾದ ನೀತಿಯನ್ನು ಜಾರಿಗೆ ತಂದಿಲ್ಲವೇಕೆ?

ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಹಗರಣದಲ್ಲಿ ೮೮,೦೦೦ ಸಾವಿರ ಕೋಟಿ ನಡೆದಿದೆ. ದೆಹಲಿಯಲ್ಲಿ ಖಾಸಗಿ ಸಹಭಾಗಿತ್ವದಡಿ ಉಒಖ ಕಂಪೆನಿಯೊಂದಿಗೆ ಸೇರಿ ಸರ್ಕಾರ ನಿರ್ಮಿಸಿರುವ ಇಂದಿರಾಗಾಂಧಿ ಅಂತರಾಷ್ಟೀಯ ವಿಮಾನ ನಿಲ್ದಾಣದಲ್ಲೂ ಸರ್ಕಾರಕ್ಕೆ ೮೮,೦೦೦ ಕೋಟಿ ರೂಪಾಯಿಗಳ ನಷ್ಟವುಂಟಾಗಿದೆ. ಇದರಿಂದ ಸಹಸ್ರಾರು ಕೋಟಿ ಹಣ ಮಂತ್ರಿಯ ಮನೆಯ ಪಾಲಾಗಿದೆ.

ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಅಭಿವೃದ್ಧಿ ಹೆಸರಿನಲ್ಲಿ ಹೊಸ ಕಂಪನಿಗಳಿಗೆ(ಉಒಖ) ಸರ್ಕಾರಿ ಭೂಮಿಯನ್ನು ಉಚಿತವಾಗಿ ನೀಡಲಾಗಿದೆ.

ಹೀಗೆ ಉಚಿತವಾಗಿ ಕಂಪನಿಗಳಿಗೆ ನೀಡಿರುವ ಜಮೀನಿಗಾಗಿ ಸಾಮಾನ್ಯ ಜನರಿಂದ ಇದರ ಅಭಿವೃದ್ಧಿಗಾಗಿ ೧೦೦ ಕೋಟಿ ರೂಪಾಯಿ ತೆರಿಗೆ ಸಂಗ್ರಹಿಸಿದ್ದೇಕೆ?

ಹೀಗೆ ಜಮೀನು ಪಡೆದಿರುವ ಕಂಪನಿಗಳು ೬೦ ವರ್ಷದವರೆಗೆ ಸರ್ಕಾರದ ಯಾವ ಅನುಮತಿಯಿಲ್ಲದೆ, ಯಾವುದೇರೀತಿಯ ವ್ಯಾಪಾರ-ವಾಣಿಜ್ಯ ಉದ್ದೇಶಕ್ಕೆ ಬಳಕೆಮಾಡಬಹುದು ಎಂದು ಅನುಮತಿ ನೀಡಿದ್ದೇಕೆ?

ಈ ರೀತಿಯ ಕಂಪನಿಗಳಿಗೆ ಅಂತರ್‌ರಾಷ್ಟ್ರೀಯ ವಿಮಾನನಿಲ್ದಾಣದ ಜಮೀನನ್ನು ಉಚಿತವಾಗಿ ನೀಡಿರುವುದರಿಂದ ಸರ್ಕಾರಕ್ಕೆ ೧ ಲಕ್ಷ ೬೪ ಸಾವಿರ ಕೋಟಿ ರೂಪಾಯಿಗು ಅಧಿಕ ನಷ್ಟವಾಗಿದೆ ಎಂದರು.

೨.         ವಿದ್ಯುತ್ ಹಗರಣ – ೨೯,೦೦೦ ಕೋಟಿ : ದೇಶದ ವಿದ್ಯುತ್ ಉತ್ಪಾದನಾ ಕ್ಷಮತೆ ಹೆಚ್ಚಿಸಲು ವಿದ್ಯುತ್ ಸಚಿವಾಲಯ ಪ್ರತ್ಯೇಕವಾಗಿ ೪ ಸಾವಿರ ಮೆಗಾವ್ಯಾಟ್ ಸಾಮರ್ಥ್ಯದ ೧೬ ಅಲ್ಟ್ರಾಮೆಗಾ ಪವರ್ ಯೋಜನೆಗಳನ್ನು ರೂಪಿಸಿತು. ಆದರೆ ನಿಯಮ ಮೀರಿ ಒಂದೇ ಕಂಪೆನಿಗೆ ಹಲವು ಯೋಜನೆಗಳನ್ನು ವಹಿಸಿದ್ದರಿಂದ ಕಾರ‍್ಯಾಭಾರದಿಂದ ವಿದ್ಯುತ್ ಉತ್ಪಾದನೆಯಲ್ಲೂ ಹಿನ್ನೆಡೆಯಾಗಿ ಸರ್ಕಾರದ ಬೊಕ್ಕಸಕ್ಕೆ ಹಾನಿಯಾಯಿತು. ಖಾಸಗಿ ಕಂಪೆನಿಗಳಿಗೆ ಲಾಭ ಒದಗಿಸುವ ಹುನ್ನಾರದಲ್ಲಿ ಸರ್ಕಾರಿ ಖಜಾನೆಗೆ ಆದ ಹಾನಿ ೨೯,೦೦೦ ಕೋಟಿ ರೂಪಾಯಿ. ಟಾಟಾ ಹಾಗೂ ರಿಲೈಯನ್ಸ್ ಕಂಪೆನಿಗಳಿಗೆ ಬಾರೀ……..ಲಾಭವಾಗಿದೆ.

೩.         ಟೆಟ್ರಾ ಟ್ರಕ್ ಹಗರಣ – ೭೫೦ ಕೋಟಿ : ಸೇನೆಗೆ ಭಾರತ್ ಅರ್ಥ್ ಮೂವರ‍್ಸ್ ಲಿಮಿಟೆಡ್, ಟಟ್ರಾ ವೆಕ್ಟ್ರಾ ಮೋಟಾರ‍್ಸ್ ಜೊತೆ ಸೇರಿಕೊಂಡು ೭೦೦೦ ಕಳಪೆ ಟ್ರಕ್‌ಗಳನ್ನು ತಯಾರಿಸಿಕೊಟ್ಟಿತ್ತು. ನಿವೃತ್ತ ಸೇನಾ ಮುಖ್ಯಸ್ಥ ಜನರಲ್ ವಿ.ಕೆ.ಸಿಂಗ್ ಅವರು ಸೇನಾ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡಾಗ ಟಟ್ರಾ ಅವರಿಗೆ ಲಂಚದ ಆಮಿಷ ಒಡ್ಡಿತ್ತು. ದೇಶದ ಭದ್ರತೆ, ಸುರಕ್ಷತೆಯಂತಹ ಅತಿ ಸೂಕ್ಷ್ಮವಿಷಯಗಳಲ್ಲಿಯೂ ಸಹ ಭ್ರಷ್ಟಾಚಾರದ ಕೀಳು ರಾಜಕೀಯ ಮಾಡುತ್ತಿದು, ಮುಂದೊಂದು ದಿನ ಹಣದ ದುರಾಸೆಗಾಗಿ ಸೇನೆಯ ರಹಸ್ಯಗಳನ್ನು ಮಾರಿದರು ಆಶ್ಚರ್ಯವಿಲ್ಲ.

೪.         ಕಾಮನ್‌ವೆಲ್ತ್ ಗೇಮ್ಸ್ ಹಗರಣ -೮೦,೦೦೦ ಕೋಟಿ: ೨೦೧೦ ರಲ್ಲಿ ಭಾರತವು ಅಂದು ಬ್ರಿಟಿಷರ ಆಡಳಿತಕ್ಕೊಳಪಟ್ಟಿದ್ದ ದೇಶಗಳಿಗೆ ಕಾಮನ್‌ವೆಲ್ತ್ ಕ್ರೀಡಾಕೂಟವನ್ನು ದೆಹಲಿಯಲ್ಲಿ ನೆಡೆಸಲಾಯಿತು. ಇದಕ್ಕೆ ಖರ್ಚಾದ ಹಣ ೮೦,೦೦೦ ಕೋಟಿ. ಆದರೆ ಕಾಮನ್‌ವೆಲ್ತ್ ಗೇಮ್ಸ್‌ಗೆ ಅಂದಾಜಿಸಿದ ಹಣ ೧,೯೦೦ ಕೋಟಿ ಇನ್ನು ೬೧,೦೦೦ ಕೋಟಿ ಹೆಚ್ಚಿನ ಹಣ ಖರ್ಚಾಗಲು ಹೇಗೆಸಾಧ್ಯ? ಹೀಗಾಗಿ ಇದು ಬರೀ ಕಾಮನ್‌ವೆಲ್ತ್ ಗೇಮ್ಸ್(ಅWಉ) ಕಾಂಗ್ರೇಸ್‌ನ ವೆಲ್ತ್ ಗೇಮ್ ಆದದ್ದು, ಸಾಮಾನ್ಯ ಜನರ ತೆರಿಗೆ ಹಣದ ಹಗಲು ದರೋಡೆಯಲ್ಲವೇ?

೫.         IPಐ ೨೦:೨೦ ಕ್ರಿಕೆಟ್ ಹಗರಣ – ೭,೫೨೦ ಕೋಟಿ : ಕಾಮನ್‌ವೆಲ್ತ್ ಗೇಮ್ಸ್‌ನಂತೆಯೇ IPಐ ಕ್ರಿಕೆಟ್‌ನಲ್ಲಿಯೂ ಹಗರಣದ ನಡೆದಿದೆ. ೨೦ ಸಾವಿರ ಟಿಕೆಟ್‌ಗಳನ್ನು ಬ್ಲಾಕ್‌ನಲ್ಲಿ ಮಾರಾಟ ಮಾಡಲಾಗಿದೆ. ಜಾಹೀರಾತುಗಳನ್ನು ತಮಗೆ ಬೇಕಾದವರಿಗೆ ಮಾರಾಟ ಮಾಡಿದ್ದಾರೆ. ಇದರಲ್ಲಿನ ಹಗರಣ ೭,೫೨೦ ಕೋಟಿ ಎಂದು ಹೇಳಲಾಗಿದೆ.

ಪ್ರತಿಭಟನೆಯಲ್ಲಿ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಸುಬ್ಬರಾಮ್, ಬಾಲಾಜಿ, ರಾಜ್ಯ ಸಹ ಕಾರ್ಯದರ್ಶಿ ಪುಷ್ಪಾ, ಮಹಾನಗರ ಕಾರ್ಯದರ್ಶಿ ಪ್ರೇಮ್, ವಿದ್ಯಾರ್ಥಿ ನಾಯಕರಾದ ಬಾಲಾಜಿ, ಕೌಶಿಕ್, ರಘು, ಸುಮಾ, ವೇದಾ, ವೀಣಾ, ವಾಗ್ದೇವಿ ಸೇರಿದಂತೆ ಸುಮಾರು ೧೦೦೦ ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

 

Leave a Reply

Your email address will not be published.

This site uses Akismet to reduce spam. Learn how your comment data is processed.