Dattatreya Hosabale speaks on UNDERSTANDING INDIA

ಎಬಿವಿಪಿಯ Think India ವತಿಯಿಂದ IndGENIUS

ಉತ್ತಿಷ್ಠ ಭಾರತ ಯುವ ಸಾಧಕರ ಸಮಾಗಮ

Dattatreya Hosabale speaks on UNDERSTANDING INDIA
Dattatreya Hosabale speaks on UNDERSTANDING INDIA

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನ ಮತ್ತೊಂದು ಆಯಾಮವಾದ ಥಿಂಕ್ ಇಂಡಿಯಾ

ದೇಶದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಾದ IISc, IIM, IIMB, IIT, National Law School ಸೇರಿದಂತೆ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಓದುತ್ತಿರುವ  ವಿದ್ಯಾರ್ಥಿಗಳಿಗಾಗಿ ಕಳೆದ ೨೦೦೭ ರಿಂದ ಕಾರ‍್ಯನಿರ್ವಹಿಸುತ್ತಿದೆ. ದೇಶದ ಅಭಿವೃದ್ಧಿಯಲ್ಲಿ ಯುವಕರ ಪಾತ್ರ, ದೇಶದ ಕುರಿತು ಹೊಸ ಯೋಜನೆ, ಚಿಂತನೆ, ಚರ್ಚೆ ಸೇರಿದಂತೆ ಯುವ ಸಮ್ಮೇಳನಗಳನ್ನು, ವಿಚಾರ ಸಂಕಿರಣಗಳನ್ನು ಆಯೋಜಿಸುತ್ತಾ ಬಂದಿದೆ.

ಈ ವರ್ಷ “Ind Genius ಉತ್ತಿಷ್ಠ ಭಾರತ ಕಾರ್ಯಕ್ರಮ ೨೦೧೪ ಮಾರ್ಚ್ ೧೪ ರಿಂದ ೧೬ ರ ವರೆಗೆ ಮೂರು ದಿನಗಳ ಕಾಲ ನಗರದ ಜಿಗಣಿಯ ಸ್ವಾಮಿ ವಿವೇಕಾನಂದ ಯೋಗ ಅನುಸಂದಾನ ವಿಶವ್ವಿದ್ಯಾಲಯದಲ್ಲಿ (S-VYASA) ಯಶಸ್ವಿಯಾಗಿ ನಡೆಯಿತು.

ಉದ್ಘಾಟನಾ ಸಮಾರಂಭ :

ಕಾರ್ಯಕ್ರಮದ ಉದ್ಘಾಟನೆಯನ್ನುDRDO (Defense Research and Development Organization) ನ ಮಾಜಿ ನಿರ್ದೇಶಕರಾದ ಡಾ.ವಿ.ಕೆ.ಸಾರಸ್ವತ ನೇರವೇರಿಸಿ ಮಾತನಾಡಿದ ಅವರು ದೇಶದ ಸರ್ವತೋಮುಖ ಬೆಳವಣಿಗೆಗೆ ಹಾಗೂ ದೇಶದ ಅಭಿವೃದ್ಧಿಯಲ್ಲಿ ಯುವಶಕ್ತಿಯ ಪಾತ್ರ ಅತ್ಯಂತ ಮಹತ್ವದ್ದು, ದೇಶದ ಹಲವು ಸಮಸ್ಯೆಗೆ ಉತ್ತರವಾಗಿ ಯುವಶಕ್ತಿಯು ಕ್ರಿಯಾಶೀಲವಾಗಿ ನಿಲ್ಲಬೇಕು, ಅಲ್ಲದೆ ಯುರೋಪ್, ಚೀನಾದಂತಹ ರಾಷ್ಟಗಳ ಎದುರು ನಮ್ಮ ರಾಷ್ಟ್ರ ಎದ್ದು ನಿಲ್ಲಬೇಕಾದಲ್ಲಿ ಯುವಕರ ಚಿಂತನೆ ಹಾಗೂ ಶಕ್ತಿಯ ಮೌಲ್ಯವಧನೆ ಅತ್ಯಂತ ಅವ್ಯಶಕವಾಗಿದೆ. ಆಧುನಿಕ ಭಾರತದ ನಿರ್ಮಾಣವು ದೇಶದ ಕೌಶಲ್ಯಯುತ ಯುವಶಕ್ತಿಯಿಂದ ಮಾತ್ರ ಸಾಧ್ಯ ಎಂದು ಹೇಳಿದರು.

ಮಾಜಿ ರಾಷ್ಟ್ರಪತಿ ಡಾ|| ಎ.ಪಿ.ಜಿ.ಅಬ್ದುಲ್ ಕಲಾಂರ ಕನಸಿನ ಭಾರತ ೨೦೨೦ ರ ವಿಷನ್ ಸಾಕಾರಕ್ಕಾಗಿ ಉತ್ತಮ ಜೀವನ ಮೌಲ್ಯ ಹಾಗೂ ಚಿಂತನೆ ಹೊಂದಿದಲ್ಲಿ ೨೦೨೦ರ ಸುಮಾರಿಗೆ ದೇಶದಲ್ಲಿ ಶೇ.೬೪% ಉದ್ಯೋಗಿಗಳಾಗಿ ದೇಶದ ಆರ್ಥಿಕ ವ್ಯವಸ್ಥೆ ಹಾಗೂ ರೂಪಾಯಿ ಮೌಲ್ಯ ಬಲವಧನೆಗಾಗಿ ಯುವಕರು ಶ್ರಮಿಸಲಿದ್ದಾರೆ. ಗುಣಮಟ್ಟದ ಶಿಕ್ಷಣದ ಕೊರತೆ, ಅಪೌಷ್ಠಿಕ ಆಹಾರ, ರೂಪಾಯಿ ಮೌಲ್ಯ ಕುಸಿತ,  ದೇಶದ ಉದ್ಯಮದ ಉತ್ಪಾದನೆಯಲ್ಲಿ ಕುಸಿತ ಮುಂತಾದ ಹಲವು ಸಮಸ್ಯೆಗಳಗೆ ಉತ್ತರ ದೊರಯಬೇಕಾದಲ್ಲಿ ದೇಶದ ಪ್ರತಿಯೊಬ್ಬರು ಜೊತೆಗೂಡಿ ದೇಶದ ಸಾಮಾಜಿಕ ಹಾಗೂ ಅರ್ಥಿಕ ಶ್ರೇಯೋಭಿವೃದ್ಧಿಗೆ ಒತ್ತು ನೀಡಿ ದುಡಿಯಬೇಕಾಗಿದೆ. ಶೈಕ್ಷಣಿಕ, ಅರ್ಥಿಕ, ಕೃಷಿ, ಉದ್ಯಮದಲ್ಲಿ ಬಲವಾದ ಚಿಂತನೆ ಹಾಗೂ ಜವಬ್ದಾರಿಯನ್ನು ಹೊಂದಿರುವ ಯುವ ನೇತೃತ್ವ ನೀಡಬಲ್ಲಂತಹ ಚಿಂತನೆ ಯುವಕರಲ್ಲಿ ನೀಡಬೇಕು. ಪರಿಸರ ಸಂರಕ್ಷಣೆ ಜಾಗತಿಕ ಉತ್ಪಾದನೆಯಲ್ಲಿ ಯಶಸ್ಸನ್ನು ಸಾಧಿಸಬೇಕಾದಲ್ಲಿ ಹಲವು ಸಂಶೋಧನೆ ಹಾಗೂ ಸಂಸ್ಕೃತಿ ಅಧಾರಿತವಾಗಿ ಸಾಮಾಜಿಕ, ಅರ್ಥಿಕ, ಕಾನೂನು ಮೌಲ್ಯದ ಬಲವಧನಗೆ ಯುವಶಕ್ತಿ ಒತ್ತು ನೀಡಬೇಕೆಂದು ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ವಿಶೇಷ ಉಪಸ್ಥಿತಿಯಿದ್ದ ಎಬಿವಿಪಿ ರಾಷ್ಟ್ರಿಯ ಸಂಘಟನಾ ಕಾರ್ಯದರ್ಶಿಯಾದ ಸುನಿಲ್ ಅಂಬೇಕರ್‌ರವರು ಮಾತನಾಡಿ ಬಲಿಷ್ಠ ಹಾಗೂ ಯಶಸ್ವಿ ಭವಿಷ್ಯದ ಭಾರತಕ್ಕಾಗಿ ಸಂಸ್ಕೃತಿ ಆಧಾರವಾದ, ಮೌಲ್ಯಯುತ ಚಿಂತನೆಯನ್ನು ಯುವಶಕ್ತಿ ಮೈಗೊಡಿಸಿಕೊಳ್ಳಬೇಕು ಹಾಗಾದಲ್ಲಿ ಮಾತ್ರ ಸಕಾರಾತ್ಮಕ ಚಿಂತನೆ ಉದ್ಯಮಶೀಲತೆಯಿಂದ  ದೇಶ ಮತ್ತೊಮ್ಮೆ ವಿಶ್ವಗುರುವಾಗಲಿದೆ ಎಂದು ನುಡಿದರು.

ಯುವ ಸಾಧಕರಿಂದ ಮಾರ್ಗದರ್ಶನ

೧.    ಸೂಪರ್ ೩೦ ಆನಂದಕುಮಾರ್ : ಬಿಹಾರದ ವಿವಿಧೆಡೆ ಆರ್ಥಿಕವಾಗಿ ಬಡತನ ಎದುರಿಸುತ್ತಿರುವ ೩೦ ವಿದ್ಯಾರ್ಥಿಗಳನ್ನು ಆಯ್ಕೆಮಾಡಿ ಅವರಿಗೆ ಉಚಿತ ಊಟ, ವಸತಿ ಹಾಗೂ ಶಿಕ್ಷಣ,ಶುಲ್ಕ ಹಾಗೂ ಪರೀಕ್ಷೆಗೆ ಸಜ್ಜುಗೊಳಿಸಿ ತರಬೇತಿ ನೀಡಿ ಪ್ರತಿವರ್ಷವೂ ವಿದ್ಯಾರ್ಥಿಗಳನ್ನು ಐ.ಐ.ಟಿ. ಸೇರ್ಪಡೆ ಮಾಡುವಲ್ಲಿ ಯಶಸ್ಸನ್ನು ಕಂಡಿರುವುದರ ಜೊತೆಗೆ ಆ ವಿದ್ಯಾರ್ಥಿಗಳಿಗೆ ನೌಕರಿಯು ಪ್ರಾಪ್ತಮಾಡಿದ್ದಾರೆ ಈ ರೀತಿ ಪ್ರತಿಭಾವಂತ ಬಡ ವಿದ್ಯಾರ್ಥಿಗಳನ್ನು ಐಐಟಿ ಸಂಸ್ಥೆಗೆ ಸೇರ್ಪಡೆ ಮಾಡಿ ಅವರಿಗೆ ಉಚಿತ ವಸತಿ, ಶಿಕ್ಷಣ ನೀಡಿ ಯುವ ಜನಾಂಗಕ್ಕೆ ಮಾದರಿಯಾಗಿದ್ದಾರೆ. ಇವರು ಕೂಡ ಈ ಸಂದರ್ಭದಲ್ಲಿ ಮಾತನಾಡಿ ಸಮಯ ಮೀಸಲು ಇಟ್ಟು ಶಿಕ್ಷಣವು ಎಲ್ಲ ವರ್ಗದ ವಿದ್ಯಾರ್ಥಿಗಳಿಗೆ ನೀಡಲು ಸಜ್ಜಾಗಬೇಕೆಂದರು ಹಾಗೂ ದೇಶದ ಬದಲಾವಣೆ ಶಿಕ್ಷಣದಿಂದ ಮಾತ್ರ ಸಾಧ್ಯ ಎಂದು ಹೇಳಿದರು.

೨.    ರೂಪಾ ಅಯ್ಯರ್ – ನಟಿ, ನಿರ್ದೇಶಕಿ, ಸಾಮಾಜಿಕ ಕಾರ್ಯಕರ್ತೆ, ಅಂಕಣಕಾರ  : ಅತ್ಯಂತ ಬಡತನದಲ್ಲೇ ಬೆಳೆದು ಉತ್ತಮ ಯುವ ನೃತ್ಯಗಾರ್ತಿಯಾಗಿ, ನಿರ್ದೇಶಕಿಯಾಗಿ, ಅಂಕಣಕಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅಲ್ಲದೇ ಸಾಮಾಜಿಕ ಕ್ಷೇತ್ರದಲ್ಲೂ ಕೂಡ ಹಲವಾರು ಸೇವಾ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ. ನಮ್ಮ ಮನೆ ಎಂದು ಅನಾಥ ಮಕ್ಕಳಿಗಾಗಿ ಹಾಗೂ ವಯೋವೃದ್ಧರಿಗಾಗಿ ಆಶ್ರಯ ನೀಡಿ, ಅನಾಥ ಮಕ್ಕಳಿಗೆ ಶಿಕ್ಷಣ ನೀಡುವುದರ ಜೊತೆಗೆ  ಅವರ ಆರೈಕೆ, ಆಹಾರ, ವಸತಿ ನೀಡುತ್ತಿದ್ದಾರೆ. ಅಲ್ಲದೇ ಎಚ್.ಐ.ವಿ ಪೀಡಿತ ಮಕ್ಕಳಿಗೂ ಕೂಡ ಶಿಕ್ಷಣದ ಜೊತೆಗೆ ಅವರನ್ನು ಆರೈಕೆ ಮಾಡುತ್ತಿದ್ದಾರೆ. ಇವರು ಕೂಡ ಈ ಸಂದರ್ಭದಲ್ಲಿ ಮಾತನಾಡಿ ಯುವಕರು ಸಮಾಜದಲ್ಲಿರುವ ಸಮಸ್ಯೆ ಹಾಗೂ ಬಡಜನರ ಏಳಿಗೆಗೆ ಶ್ರಮಿಸಬೇಕೆಂದು ಕರೆ ನೀಡಿದರು.

೩.    ಶ್ರೀ ಸುಹಾಸ್ ಗೋಪಿನಾಥ : ಅತಿ ಕಿರಿಯ ಸಿ.ಇ.ಒ  : ಅತಿ ಚಿಕ್ಕ ವಯಸ್ಸಿನಲ್ಲೇ ಗ್ಲೋಬಲ್ ಇಂಕ್ ಕಂಪೆನಿಯ ಸಿ.ಇ.ಒ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.ಯುವಕರನ್ನು ಉದ್ದೇಶಿಸಿ ಮಾತನಾಡುತ್ತ ತನ್ನ ಜೀವನದ ಉದಾಹರಣೆಯನ್ನು ಹೇಳಿ ಮನೆಯ ಕಡೆ ಎಷ್ಟೇ ಕಷ್ಟವಿದ್ದರೂ ತಮ್ಮ ಕನಸನ್ನು ಈಡೇರಿಸಿಕೊಳ್ಳಲು ಪಟ್ಟಂತಹ ಕಷ್ಟಗಳನ್ನು ವಿವರಿಸಿ ಯುವಕರು ಸಹ ತಮ್ಮ ಗುರಿಯನ್ನು ತಲುಪಲು ಎಷ್ಟೇ ಸವಾಲುಗಳಿದ್ದರೂ ದೃತಿಗೇಡದೇ ಮುನ್ನುಗ್ಗಿ ಸಾಧಿಸಿ ತೋರಿಸಬೇಕು.

೪.    ಗೌರವಾನ್ವಿತ ಕ್ಯಾ ಬಾನಾ ಸಿಂಗ್ : ಪರಮವೀರ ಚಕ್ರ ಪುರಸ್ಕೃತ : ಸಿಯಾಚಿನ್ ಗಡಿಪ್ರದೇಶವನ್ನು ಪಾಕಿಸ್ತಾನವು ಆಕ್ರಮಿಸಿಕೊಂಡಿದ್ದ ಸಮಯದಲ್ಲಿ ತನ್ನ ಗುಂಪನ್ನು ಅತಿ ಕಠಿಣ ದುರ್ಗಮ ಪ್ರದೇಶದಲ್ಲಿ ನಿಭಾಯಿಸಿ ೬೫೦೦ ಮೀಟರ್ ಎತ್ತರದಲ್ಲಿದ್ದ ನುಸುಳುಕೋರರನ್ನು ಹೊಡೆದಟ್ಟಿ ಸಿಯಾಚಿನ್ ಪ್ರದೇಶವನ್ನು ವಶಪಡಿಸಿಕೊಂಡ ಧೀರ ಯೋಧ ಬಾನಾಸಿಂಗ್ ಅವರು. ಆಕ್ರಮಿಸಿಕೊಂಡಂತಹ ಶಿಖರವನ್ನು ಬಾನಾ ಟಾಪ್ ಎಂದು ಮರುನಾಮಕರಣಿಸಲಾಯಿತು. ಈ ಸಂದರ್ಭದಲ್ಲಿ ಅವರು ಮಾತನಾಡಿ ಈ ಘಟನೆಯನ್ನು ವರ್ಣಿಸುತ್ತ ಓದಿನ ಜೊತೆಗೆ ದೇಶಸೇವೆ ಮಾಡಲು ಯುವಕರು ಪಣತೊಡಬೇಕೆಂದು ಹೇಳಿದರು.

೫.    ಪದ್ಮಶ್ರೀ ಪುರಸ್ಕೃತ ಮಿಲಿಂದ್ ಕಾಂಬಳೆ : ಡಿಐಸಿಸಿಐ ಸಂಸ್ಥಾಪಕರು : ದೀನ-ದಲಿತರು ಕೂಡ ಉದ್ಯಮಶೀಲರಾಗಿ ಸಮಾಜದ ಮುಖ್ಯವಾಹಿನಿಗೆ ಬರಬೇಕೆಂಬ ಆಸೆಯಿಂದ ಡಿಕ್ಕಿಯನ್ನು ಸ್ಥಾಪಿಸಿದವರು. ಈ ಸಂದರ್ಭದಲ್ಲಿ ಮಾತನಾಡುತ್ತ ಎಲ್ಲ ಯುವಕರು ತಮ್ಮಲ್ಲಿರುವ ಉದ್ಯಮಶೀಲತೆಯನ್ನು ಹೊರತಂದು ಭಾರತದ ಮತ್ತು ಸಮಾಜದ ಏಳಿಗೆಗಾಗಿ ಶ್ರಮಿಸಬೇಕೆಂದು ಕರೆ ನೀಡಿದರು.

೬.    ಶ್ರೀ ವೆಂಕಟೇಶ ಮೂರ್ತಿ : ಯೂತ್ ಫಾರ್ ಸೇವಾ ಸಂಚಾಲಕರು : ಯುವಕರು ಸಮಾಜ ಸೇವೆಯಲ್ಲಿ ತೊಡಗಬೇಕೆಂಬ ಆಸೆಯಿಂದ ಯೂತ್ ಫಾರ್ ಸೇವಾ ಸಂಸ್ಥೆಯನ್ನು ಪ್ರಾರಂಭಿಸಿದ ಇವರು ಈ ಸಂಸ್ಥೆಗೆ ಮುಖ್ಯ ಪ್ರೇರಣೆಯಾಗಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡುತ್ತ ದೇಶದ ಯುವಕರು ತಮ್ಮ ಬಿಡುವಿನ ಸಮಯದಲ್ಲಿ ದೇಶಕ್ಕೆ ಮತ್ತು ಸಮಾಜಕ್ಕೆ ಕೈಲಾದ ಸಹಾಯವನ್ನು ಮಾಡಿದರೆ ದೇಶವನ್ನು ಅಭಿವೃದ್ಧಿಪಥ ದತ್ತ ಸಾಗಲು ಸಾಧ್ಯವೆಂದರು.

ವಿಜ್ಞಾನಿಗಳ ಸಮಾಗಮ

೧.    ಡಾ.ಸತೀಶ್ ರೆಡ್ಡಿ : ನಿರ್ದೇಶಕರು ಆರ್.ಸಿ.ಐ : ((Research centre Imarat) ) : ಪ್ರಸ್ತುತ ಆರ್.ಸಿ.ಐ ನಿರ್ದೇಶಕರಾಗಿರುವ ಇವರು ಅದರ ಪ್ರಾರಂಭದ ದಿನದಿಂದಲೂ ಸಂಸ್ಥೆಯ  ಒಡನಾಡ ಹೊಂದಿದ್ದಾರೆ. ಡಿ.ಆರ್.ಡಿ.ಒ ೧೯೮೬ ರಲ್ಲಿ ಸೇರಿದ ಇವರು ಪ್ರಮುಖ ಸಂಚಾರಣಾ ತಜ್ಞರಾಗಿ ಹಾಗೂ ವಿವಿಧ ಮುಖ್ಯ ತಂತ್ರಜ್ಞಾನಗಳಾದ ಮಿಸೈಲ್ ಸಿಸ್ಟಮ್ (ಅಗ್ನಿ ಮತ್ತು ಪೃಥ್ವಿ ಶ್ರೇಣಿ) ಹಾಗೂ ಬೆಲೆಸ್ಟಿಕ್ ಮಿಸೈಲ್ ಶೀಲ್ಡ್‌ನ್ನು ತಯಾರಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿ ಯುವಕರು ವಿಜ್ಞಾನ ಮತ್ತು ತಂತ್ರಜ್ಞಾನದ ಕಡೆಗೆ ಒತ್ತನ್ನು ನೀಡಿ ದೇಶದ ರಕ್ಷಣೆಯ ಬೆನ್ನೆಲುಬಾದ ಡಿ.ಆರ್.ಡಿ.ಒ ದಂತಹ ಸಂಶೋಧನಾ ಕೇಂದ್ರಗಳಿಗೆ ಸೇರಿ ತಮ್ಮ ಸೇವೆಯನ್ನು ದೇಶಕ್ಕಾಗಿ ಸಲ್ಲಿಸಬೇಕೆಂದು ಕರೆ ನೀಡಿದರು.

೨.    ಡಾ.ಎಸ್.ವಿ.ಕೈಲಾಸ್ : ವಿಜ್ಞಾನಿಗಳು, IISc, ಬೆಂಗಳೂರು : ಪ್ರಸ್ತುತ ಟ್ರೈಬೋಲಾಜಿ ಮತ್ತು ಮೆಟಲ್ ಪಾರ್ಮಿಗ್ ಮೇಲೆ ಸಂಶೋಧನೆ ನಡೆಸುತ್ತಿರುವ ಇವರು ಜೈವಿಕ ಪರಿಸರ ಸ್ನೇಹಿ ಇಂಧನ, ಪ್ರೀಕ್ಷನ್ ಸ್ಟೀರ್ ವೆಲ್ಡಿಂಗ್ ಮತ್ತು ಮೆಟಲ್ ಪಾರ್ಮಿಂಗ್ ಮೇಲೆ ಆಸಕ್ತಿಯನ್ನು ಹೊಂದಿದ್ದಾರೆ. ೧೦೦ ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧವನ್ನು ಮಂಡಿಸಿದ್ದಾರೆ. ೧೯ ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಪಿ.ಎಚ್.ಡಿ. ಪದವಿ ಪಡೆಯಲು ಮಾರ್ಗದರ್ಶನ ನೀಡಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡುತ್ತ ದೇಶದಲ್ಲಿ ಮಾಹಿತಿ, ತಂತ್ರಜ್ಞಾನ, ವಿಜ್ಞಾನ ಮತ್ತು ಅಧ್ಯಾತ್ಮಿಕತೆ ಜೊತೆಗೆ ಸಾಗುವ ಅನಿವಾರ್ಯತೆಯನ್ನು ಮತ್ತು ಅದರ ಪ್ರಸ್ತುತತೆಯನ್ನು ವರ್ಣಿಸಿದರು.

ಖ್ಯಾತ ಚಿಂತಕರಿಂದ ವಿಶೇಷ ಭಾಷಣ

೧.Understanding India – ದತಾತ್ರೇಯ ಹೊಸಬಾಳೆ,

(ರಾಷ್ಟ್ರೀಯ ಸ್ವಯಂಸೇವಕ ಸಂಘದ ರಾಷ್ಟ್ರೀಯ ಸಹ ಸರಕಾರ‍್ಯವಾಹ)

ಭಾರತವನ್ನು ವರ್ಣಿಸುಬಹುದೇ ಹೊರತು ಸಂಪೂರ್ಣವಾಗಿ ದೇಶವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ, ಕೆಲವರಿಗೆ ಭಾರತವು ವಿಶಾಲವಾದ ಭೂ – ಪ್ರದೇಶ, ಕೆಲವರಿಗೆ ಭಾರತವು ಒಂದು ಪ್ರಯಾಣ. ಕೆಲವರಿಗೆ ಭಾರತವು ಗೊಂದಲ, ಭ್ರಷ್ಟಾಚಾರ ಮತ್ತು ಅನನ್ವಯ. ಭಾರತ ಮಾತ್ರ ೧೬ ಮತ್ತು ೨೧ನೇ ಶತಮಾನದ ಎರಡರಲ್ಲೂ ವಿಶಿಷ್ಠವಾದ ಜೀವನ ಪದ್ಧತಿಯಿಂದ ಬುದಕಿರುವ ಏಕಮಾತ್ರ ರಾಷ್ಟ್ರವಾಗಿ ಹೊರಹೊಮ್ಮಿದೆ. ಭಾರತವನ್ನು ಅರ್ಥಮಾಡಿಕೊಳ್ಳುವ ನಮ್ಮ ಯತ್ನದಲ್ಲಿ ಭಾರತದ ಸಾಮರ್ಥ್ಯ ಮತ್ತು ದೌರ್ಬಲ್ಯ ಹಾಗೂ ಅವಕಾಶಗಳು, ದೇಶದ ಮೇಲೆ ಇರುವ ಬೆದರಿಕೆಗಳನ್ನು ಸರಿಯಾಗಿ ಅರ್ಥೈಸಿಕೊಳ್ಳಬೇಕು. ೧೦,೦೦೦ ಸಾವಿರ ವರ್ಷಗಳ ಭವ್ಯ ಇತಿಹಾಸವಿರುವ ನಮ್ಮ ದೇಶದ ಬಗ್ಗೆ ಹೆಮ್ಮೆ ಪಡೆಬೇಕಾದ ನಾವು ಈ ದಿನದ ಪ್ರಾಶಸ್ತ್ಯಗಳಿಂದಾಗಿ ಅಂಜುತ್ತಿದ್ದೇವೆ, ವಿಪರ್ಯಾಸವೆಂದರೆ ಪ್ರಪಂಚದಲ್ಲಿರುವ ಅನಿವಾಸಿ ಭಾರತೀಯರು ಅವರ ಪೂರ್ವಜರ ಮೂಲದ ಬಗ್ಗೆ ಹೆಮ್ಮೆ ಪಡುತ್ತಿದ್ದಾರೆ. ಮನೆಯಲ್ಲಿ ಜಾತಿಪದ್ಧತಿಯನ್ನು ಪಾಲಿಸುವ ಒಬ್ಬ ಭಾರತೀಯ ಕುಂಭಮೇಳದಲ್ಲಿ ಈ ಜಾತಿಯನ್ನು ಮರೆತು ಒಗ್ಗೂಡುತ್ತಾರೆ ಇದು ಭಾರತದಂತಹ ದೇಶದಲ್ಲಿ ಮಾತ್ರ ಸಾಧ್ಯ.

ದೇಶವು ಅಗ್ರಗಣ್ಯ, ಅನನ್ಯತೆಯ ಪ್ರತೀಕವಾದ “ವಿವಿಧತೆ ಮತ್ತು ಏಕತೆ’ ಬೆಳೆಸುವಲ್ಲಿ ಇಂತಹ ಯಾತ್ರೆಗಳು  ಮತ್ತು ಮೇಳಗಳಿಂದ ಮಾತ್ರ ಸಾಧ್ಯ ಎಂದು ಹೇಳಿದರು.

ಜಿ-೭ ರಾಷ್ಟ್ರಗಳು ನಿಧಾನವಾಗಿ ಪ್ರಪಂಚದ ಆರ್ಥಿಕತೆಯ ಮೇಲೆ ಹಿಡಿತವನ್ನು ಕಳೆದುಕೊಳ್ಳುತ್ತಿವೆ. ಜಿ-೭ ರಾಷ್ಟ್ರಗಳ ಒಟ್ಟು ದೇಶಿಯ ಉತ್ಪಾದನೆ ೧೯೯೦ ರಲ್ಲಿ ೫೦.೯% ನಿಂದ ೨೦೧೨ ರಲ್ಲಿ ೩೬.೨೫% ಕುಸಿದಿದೆ. ಆದರೆ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳು ಮಧ್ಯಭೂಮಿಕೆಯನ್ನು ಆಕ್ರಮಿಸುತ್ತ ಒಟ್ಟು ದೇಶಿಯ ಉತ್ಪಾದನೆಯಲ್ಲಿ ೧೯೯೦ ರಲ್ಲಿ ೩೫.೦೭% ರಿಂದ ೨೦೧೨ ರಲ್ಲಿ ೫೭.೮೭% ರಷ್ಟು ವೃದ್ಧಿಸಿದೆ. ಭಾರತವು ಮರು ಉದಯೋನ್ಮುಖ ರಾಷ್ಟ್ರವಾಗಿದೆಯೇ ಹೊರತು ಉದಯೋನ್ಮುಖ ರಾಷ್ಟ್ರವಲ್ಲ. ೧೮೨೦ ರಲ್ಲಿ ವಿಶ್ವದ ಒಟ್ಟು ದೇಶಿಯ ಉತ್ಪಾದನೆಯಲ್ಲಿ ಭಾರತವು ಶೇ.೫೦ ರಷ್ಟು ಪಾಲನ್ನು ಹೊಂದಿತ್ತು. ಮರು ಉದಯೋನ್ಮುಖ ರಾಷ್ಟ್ರವಾದ್ದರಿಂದ ಭಾರತಕ್ಕೆ ನಾಗರೀಕರ ಮೇಲಷ್ಟೇ ಅಲ್ಲ, ಪ್ರಪಂಚದ ಮೇಲೂ ಜವಬ್ದಾರಿ ಹೆಚ್ಚಿದೆ ಎಂದರು ಹಾಗೂ ದೇಶದ ಆರ್ಥಿಕ ಪ್ರಗತಿಗೆ ಹಾಗೂ ಉದ್ಯಮಶೀಲತೆಗೆ ಹೆಚ್ಚು ಒತ್ತು ನೀಡಬೇಕೆಂದರು.

ದೇಶದ ರಾಜಕೀಯ ಸ್ಥಿತಿಗತಿ ಮತ್ತು ದೇಶದ ಭದ್ರತೆ ಕುರಿತು ಖ್ಯಾತ ಚಿಂತಕ ಹಾಗೂ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮಾಧ್ಯಮ ವಕ್ತಾರರಾದ ರಾಮ ಮಾಧವ್, ಮಾನವ ಸಂಪನ್ಮೂಲದಿಂದ ನಾವಿನ್ಯತೆ ಮತ್ತು ಉದ್ಯಮಶೀಲತೆ ಕುರಿತು ಐ.ಐ.ಟಿ ಮದ್ರಾಸ್‌ನ ಡೀನ್ ಪ್ರೊ.ಎಲ್.ಎಸ್.ಗಣೇಶ ಅವರು ಮಾತನಾಡಿದರು.

ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದಿರುವ ಯುವ ಪ್ರತಿಭೆಗಳಿಗೆ ಸನ್ಮಾನಿಸಲಾಯಿತು.

೧.    ಕುನ್ವರ್‌ಸಿಂಗ್ ರಾವತ್ : ಇತ್ತೀಚೆಗೆ ಉತ್ತರಖಂಡದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದ ಸಂದರ್ಭದಲ್ಲಿ ದೊಡ್ಡ ಮರಗಳನ್ನು ಉರುಳಿಸಿ ಸುಮಾರು ೧೫೦೦ ಕ್ಕೂ ಹೆಚ್ಚು ಜನರನ್ನು ಕಾಪಾಡಿದ ವಿದ್ಯಾರ್ಥಿ.

೨.    ಅಹಮ್ಮದ್ : ಜೆ.ಎನ್.ಯು ದೆಹಲಿ :  ರಾಷ್ಟ್ರಪತಿಗಳಿಂದ ಚಿನ್ನದ ಪದಕ ಪುರಸ್ಕೃತರು : ಪಠ್ಯ ಮತ್ತು ಪಠ್ಯೇತರ ವಿಷಯದಲ್ಲಿ  ದೇಶದಲ್ಲೇ ಅತ್ಯುತ್ತಮ ವಿದ್ಯಾರ್ಥಿಗೆ ನೀಡುವ ಈ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

೩.    ಶುಭಂ ಶರ್ಮಾ : ರಾಜಸ್ಥಾನ : ರಾಷ್ಟ್ರೀಯ ಖಿiಞತಿಚಿಟಿಜo ಚಾಂಪಿಯನ್ ಕ್ರೀಡಾಪಟು.

೪.    ಕುಲದೀಪ್ ; ಹರಿಯಾಣ : ಇವರು ರಾಷ್ಟ್ರೀಯ ಕಿಕ್‌ಬಾಕ್ಸಿಂಗ್‌ನಲ್ಲಿ ಚಾಂಪಿಯನ್ ಕ್ರೀಡಾಪಟು ೨೦೧೦ ರಿಂದ ೨೦೧೨. ಮತ್ತು ಬ್ರಾಂಚ್ ಪದಕ ವಿಜೇತ, ಅಂತರಾಷ್ಟ್ರೀಯ ಕಿಕ್‌ಬಾಕ್ಸಿಂಗ್ ೨೦೧೨ ಇಟಲಿ.

೫.    ಕು.ಸಾಯಿ ಗೌತಮಿ : ಗುಂಟೂರು ಆಂದ್ರಪ್ರದೇಶ : ರಾಷ್ಟ್ರೀಯ ಪುರಸ್ಕೃತ ಕುಚುಪುಡಿ ನೃತ್ಯಗಾರ್ತಿ.

೬.    ಚಿರಂಜೀವಿ ಭಟ್ : ಬೆಂಗಳೂರು : ಅತಿ ಕಿರಿಯ ಅಂಕಣಕಾರ ಮತ್ತು ಸಂಪಾದಕ.

೭.    ಕು.ಮುನ್ನಾವತಿ ಕುಮಾರಿ : ರಾಂಚಿ ಜಾರ್ಖಂಡ್ : ಸಂಸ್ಕೃತದಲ್ಲಿ ಚಿನ್ನದ ಪದಕ ವಿಜೇತರು.

೮.    ಕು.ಶ್ರೇಯಾ ಧೀನಕರ : ಬೆಂಗಳೂರು : ಅತಿ ಕಿರಿಯ ಮಹಿಳಾ ಪೈಲಟ್.

೯.    ಕು.ಆಸ್ಮಿತಾ ಮಹಾಜನ್ : ದೆಹಲಿ : ಎನ್.ಸಿ.ಸಿ. ಪಟು, ಙಇP ಕಾರ್ಯಕ್ರಮದಲ್ಲಿ ದೇಶವನ್ನು ನೇಪಾಳದಲ್ಲಿ ಪ್ರತಿನಿಧಿಸಿದ್ದಾರೆ.

ಹೀಗೆ ಕ್ರೀಡೆ, ಶಿಕ್ಷಣ, ಮಾಧ್ಯಮ, ಕಲೆ, ಸಾಹಿತ್ಯ, ನೃತ್ಯ, ಎನ್.ಸಿ.ಸಿ, ಸಿನಿಮಾ ಕ್ಷೇತ್ರ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ವಿದ್ಯಾರ್ಥಿಗಳಿಗೆ ಈ ಸಂದರ್ಭದಲ್ಲಿ ಗೌರವಿಸಿ ಸನ್ಮಾನಿಸಲಾಯಿತು. ಹಾಗೂ ಈ ಸಂದರ್ಭದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

೫ ಸುಧಾರಣಾ ಕ್ರಮಗಳ ಕುರಿತು ಚರ್ಚೆ ನಡೆಯಿತು.

೧.    ನ್ಯಾಯಾಂಗ ವ್ಯವಸ್ಥೆಯಲ್ಲಿ ಸುಧಾರಣೆ

೨.    ಆಡಳಿತ ವ್ಯವಸ್ಥೆಯಲ್ಲಿ ಸುಧಾರಣೆ

೩.    ಪೋಲಿಸ್ ವ್ಯವಸ್ಥೆಯಲ್ಲಿ ಸುಧಾರಣೆ

೪.    ಚುನಾವಣಾ ವ್ಯವಸ್ಥೆಯಲ್ಲಿ ಸುಧಾರಣೆ

೫.    ಶಿಕ್ಷಣ ವ್ಯವಸ್ಥೆಯಲ್ಲಿ ಸುಧಾರಣೆ

ಒಟ್ಟು ಮೂರು ದಿನಗಳ ಕಾಲ ನಡೆದ ಕಾರ್ಯಕ್ರಮದಲ್ಲಿ ದೇಶದ ಪ್ರತಿಷ್ಟಿತ ವಿಶ್ವವಿದ್ಯಾಲಯಗಳಿಂದ, ಶಿಕ್ಷಣ ಸಂಸ್ಥೆಗಳಿಂದ ಆಯ್ದ ಸುಮಾರು ವಿದ್ಯಾರ್ಥಿಗಳು, ಅಧ್ಯಾಪಕರು, ಚಿಂತಕರು ಸೇರಿದಂತೆ ಸುಮಾರು ೫೫೦ ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಸ್ವಾಮಿ ವಿವೇಕಾನಂದ ಅನುಸಂಧಾನ ವಿ.ವಿ.ಯ ಕುಲಪತಿ ಡಾ.ಎಚ್.ಆರ್.ನಾಗೇಂದ್ರ, ಎಬಿವಿಪಿಯ ರಾಷ್ಟ್ರೀಯ ಅಧ್ಯಕ್ಷರಾದ ಪ್ರೊ.ಮುರುಳಿ ಮನೋಹರ್, ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿಗಳಾದ ಶ್ರೀ ಸುನೀಲ್ ಅಂಬೇಕರ್, ಸಹ ಸಂಘಟನಾ ಕಾರ್ಯದರ್ಶಿಗಳಾದ ಶ್ರೀ ಕೆ.ಎನ್.ರಘುನಂದನ್, ಕರ್ನಾಟಕ ಮತ್ತು ಕೇರಳ ಪ್ರಾಂತದ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿಗಳಾದ ಶ್ರೀ ಎನ್ ರವಿಕುಮಾರ್, ಅಖಿಲ ಭಾರತ ಶಿಕ್ಷಣ ಸಂಸ್ಥೆಗಳ ಪ್ರಮುಖರು ಹಾಗೂ ಥಿಂಕ್ ಇಂಡಿಯಾ ಕಾರ್ಯಕ್ರಮದ ಉಸ್ತುವಾರಿ ಶ್ರೀ ನಾಗರಾಜ ರೆಡ್ಡಿ, ಕಾರ್ಯಕ್ರಮದ ಸಂಚಾಲಕ ಡಾ.ಶ್ರೀವತ್ಸ ಕೋಲತ್ಯಾರ್, ಸಂಚಾಲಕ ಆಶೀಶ್ ಚವ್ಹಾಣ್, ಕಾರ್ಯಕ್ರಮದ ಸಂಘಟಕರಾದ ನರೇಶ್ ದೀಕ್ಷೀತ್, ವೀರೇಶ್ ಜಿ.ಎಂ., ಸ್ವಾಗತ ಸಮಿತಿಯ ಅಧ್ಯಕ್ಷರಾದ ಡಾ.ಹೇಮಾ ರೆಡ್ಡಿ, ಕಾರ್ಯದರ್ಶಿ ಶ್ರೀಮತಿ ಗಾಯತ್ರಿ ಗೋಪಿನಾಥ್, ರಾಜ್ಯ ಎಬಿವಿಪಿ ಅಧ್ಯಕ್ಷರಾದ ಡಾ.ರಾಮಚಂದ್ರ ಶೆಟ್ಟಿ, ರಾಜ್ಯ ಕಾರ್ಯದರ್ಶಿ ಸುನೀಲ್‌ಕುಮಾರ್ ಅವರು ವಿಶೇಷ ಉಪಸ್ಥಿತರಿದ್ದರು.

Anad, Roopa Aiyer Cap Bana Sing Delegate 2 Delegate Dr S V Kailas Dr Sateesh Reddy Dr V K Sarswat DRDO Dr Vaidyanathan Inguration Prog Milind Kamble Prof LS Ganesh Ram Madhav Roopa Iyer Smt Manan Chaturvedi Suhas Gopinath Velidictory Venkatesh Murthy

 

Leave a Reply

Your email address will not be published.

This site uses Akismet to reduce spam. Learn how your comment data is processed.