ಪ್ರಾಥಮಿಕ ಶಾಲಾ ಶಿಕ್ಷಣ ವರ್ಗ ಉದ್ಘಾಟನ ಸಮಾರಂಭ

Prathamika-shikshana-varga3

ಬೆಂಗಳೂರು ಜೂನ್  ೨೦: ಸಂಸ್ಕೃತವನ್ನು ಸಂಸ್ಕೃತ ಮಾಧ್ಯಮದಲ್ಲಿಯೆ ಪಾಠ ಮಾಡಲು ಬೇಕಾಗುವ ಕೌಶಲ್ಯವನ್ನು ವೃದ್ಧಿಸುವ ತರಬೇತಿ ವರ್ಗವು ಇಂದಿನಿಂದ ಎರಡು ದಿನಗಳವರೆಗೆ ಸಂಸ್ಕೃತ ಭಾರತಿ, ಅಕ್ಷರಂನಲ್ಲಿ ಪ್ರಾರಂಭವಾಗಿದೆ. ನಗರದ ಬೇರೆ ಬೇರೆ ಶಾಲೆಗಳಿಂದ ಒಟ್ಟು ೫೦ ಶಿಕ್ಷಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಕಾರ್ಯಕ್ರಮದ ಉದ್ಘಾಟನ ಸಮಾರಂಭಕ್ಕೆ ಶ್ರೀಮಾನ್ ಎಸ್.ಆರ್.ಮನಹಳ್ಳಿ (ನಿರ್ದೆಶಕ:DSERT) ಅವರು ಮುಖ್ಯ ಅಥಿತಿಯಾಗಿ ಆಗಮಿಸಿದ್ದರು. ಸಮಾರಂಭವನ್ನು ಉದ್ದೇಶಿಸಿ ಮತನಾಡಿದ ಅವರು ಹೇಗೆ ಹಾಲು-ನೀರು ಬೇರ್ಪಡಿಸಲು ಅಸಾಧ್ಯವೊ ಹಾಗೆಯೇ ಅನ್ಯಭಾಷೆಗಳೊಂದಿಗೆ ಬೆರೆತಿರುವ ಸಂಸ್ಕೃತವನ್ನು ಬೇರ್ಪಡಿಸಲು ಅಸಾಧ್ಯ, ಆದರೆ ಹಂಸ ಪಕ್ಷಿಗೆ ಹೊಲಿಸ್ಪಡುವ ಪಂಡಿತರಿಗೆ ಮಾತ್ರ ಅದು ಸಾಧ್ಯ ಎಂದು ಅಭಿಪ್ರಾಯಪಟ್ಟರು. ಭಾರತದಲ್ಲಿ ಒಟ್ಟು ೨೬೦೦ ಭಾಷೆಗಳಿದ್ದೂ ನಾವೆಲ್ಲ ಒಂದೇ, ಇಂಥಾ ವೈವಿಧ್ಯತೆಯನ್ನು ಹೊಂದಿರುವ ಎಕೈಕ ದೇಶ ಪ್ರಪಂಚದಲ್ಲಿ ಭಾರತವೊಂದೇ ಎಂದು ತಿಳಿಸಿದರು.

ಸಮಾರಂಭದಲ್ಲಿ ಆಡನ್ ವಿದ್ಯಾಸಂಸ್ಥೆಯ ಸಂಸ್ಥಾಪಕಾಧ್ಯಕ್ಷ ಶ್ರೀಮಾನ್ ಎನ್. ರಾಮಣ್ಣ ಹಾಗು ಸಂಸ್ಕೃಭಾರತಿಯ ಪ್ರಾಂತಸಂಘಟನ ಮಂತ್ರಿ ಶ್ರೀಮಾನ್ ನಾಗರಾಜರವರು ಉಪಸ್ಥಿತರಿದ್ದರು.

Prathamika-shikshana-varga2

 

Leave a Reply

Your email address will not be published.

This site uses Akismet to reduce spam. Learn how your comment data is processed.