ಕೊರೋನಾ ಸವಾಲಿನ ನಂತರ ಆತ್ಮನಿರ್ಭರತೆ – ಸ್ವಾವಲಂಬನೆ – ಕೌಶಲ್ಯಾಭಿರುದ್ಧಿ ವಿಷಯಗಳನ್ನು ಸಮಾಜದ ಆಂದೋಲನವನ್ನಾಗಿ ಪರಿವರ್ತಿಸಲಾಗುವುದು.

ರಾಷ್ಟ್ರೀಯ ಸ್ವಯಂಸೇವಕ ಸಂಘ ಮತ್ತು ಅದರ ವಿವಿಧ ಸಂಘಟನೆಗಳ ಕಾರ್ಯಕರ್ತರ ಸಮನ್ವಯ ಬೈಠಕ್ ಜನವರಿ ೫ ರಿಂದ ೭ ರ ವರೆಗೆ ಮೂರು ದಿನಗಳ ಕಾಲ ಗಾಂಧಿನಗರದ ಕರ್ಣಾವತಿ ವಿಶ್ವವಿದ್ಯಾಲಯದಲ್ಲಿ ಪೂರ್ಣಗೊಂಡಿತು.
ಬೈಠಕ್ ನ ಕೊನೆಯ ದಿನದಂದು ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ  ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಹಸರಕಾರ್ಯವಾಹ ಡಾ. ಕೃಷ್ಣಗೋಪಾಲರವರು, ಕೊರೋನಾ ಆಪತ್ತಿನ ಸಮಯದಲ್ಲಿ ಇಡೀ ದೇಶದಲ್ಲಿ ವಿವಿಧ ಸಂಘಟನೆಗಳು ಸಮಯದ ಅವಶ್ಯಕತೆಗನುಗುಣವಾಗಿ ಅನೇಕ ವಿಧದ ಸೇವಾಕಾರ್ಯಗಳನ್ನು ಕೈಗೊಂಡಿವೆ. ಸಮನ್ವಯ ಸಭೆಯಲ್ಲಿ ಇದನ್ನು ಪ್ರಸ್ತಾಪಿಸಲಾಯಿತು.
ಕೊರೋನಾ ಕಾಲದಲ್ಲಿ ಶಾಲೆಗಳು ಮುಚ್ಚಿದ ಕಾರಣ ಅದು ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಮೇಲೆ ಪರಿಣಾಮ ಬೀರಿತು. ಇಂತಹ ಸಮಯದಲ್ಲಿ ವಿದ್ಯಾರ್ಥಿಗಳ ಶಿಕ್ವಣ ಮುಂದುವರಿಕೆಗೆ ಉಚಿತ ವ್ಯವಸ್ಥೆಯನ್ನು ಮಾಡಲಾಯಿತು. ದೇಶದಲ್ಲಿ ವಿದ್ಯಾರ್ಥಿ ಪರಿಷತ್ತಿನಿಂದ ಬಡಾವಣೆ ಪಾಠಶಾಲೆ ಮತ್ತು ಆನ್‌ಲೈನ್ ಮೂಲಕ ಸುಮಾರು ೧೦,೦೦೦ ಕೇಂದ್ರಗಳಲ್ಲಿ ವಿದ್ಯಾರ್ಥಿಗಳ ವಿದ್ಯಾಭ್ಯಾಸ ಮುಂದುವರೆಯಲು ವ್ಯವಸ್ಥೆ ಮಾಡಲಾಯಿತು. ಸಾವಿರಾರು ಶಿಕ್ಷಕರು ಹಲವಾರು ಕಡೆ ಶಕ್ತಿಮೀರಿ ಸಮಯ ಕೊಟ್ಟು, ಅನೇಕ ಕಾರ್ಯಕರ್ತರು ಸಣ್ಣ ಸಣ್ಣ ಸಮೂಹಗಳಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಣ ಕೊಡುವ ಕಾರ್ಯದಲ್ಲಿ ತೊಡಗಿಕೊಂಡರು. ಹೀಗೆ ಸಂಕಷ್ಟವನ್ನು ರಾಷ್ಟ್ರೀಯ ಸವಾಲನ್ನಾಗಿ ಪರಿಗಣಿಸಿ ಸಮಾಜದೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ಕೆಲಸ ಮಾಡಿದ್ದು ಅತ್ಯಂತ ಸಂತೋಷ ಕೊಡುವ ವಿಷಯ. ಈ ಸಂದರ್ಬದಲ್ಲಿ ದೇಶ ಮತ್ತು ಸಮಾಜದಲ್ಲಿ ಕಂಡುಬಂದ ಅಭೂತಪೂರ್ವ ಒಗ್ಗಟ್ಟು ವಿಶ್ವದಲ್ಲೇ ಒಂದು ಉದಾಹರಣೆಯಾಗಿ ಪರಿಣಮಿಸಿತು.
ಇಂದಿನ ಪರಿಸ್ಥಿತಿಯಲ್ಲಿ ದೇಶದ ಆತ್ಮನಿರ್ಭರತೆ ಹೆಚ್ಚಿಸಲು, ಕೊರೋನಾ ಸಂಕಟವನ್ನು ಸೋಲಿಸಿ ದೇಶದ ಆರ್ಥಿಕ ಅಭಿವೃದ್ಧಿಯ ವೇಗವನ್ನು ಹೆಚ್ಚಿಸಲು ನಮ್ಮ ಕಾರ್ಯಕರ್ತರು ಕೌಶಲ್ಯಾಭಿರುದ್ಧಿಯ ಅಭಿಯಾನದಲ್ಲಿ ತೊಡಗಿಕೊಳ್ಳುವರು. ಅಯೋಧ್ಯೆಯಲ್ಲಿ ಶ್ರೀರಾಮಮಂದಿರದ ನಿರ್ಮಾಣ ಕಾರ್ಯ ಮಹತ್ವದ ಹಂತಕ್ಕೆ ಬಂದಿದೆ. ದೇಶ ಮತ್ತು ವಿಶ್ವದಲ್ಲಿ ಮಂದಿರ ಕಾರ್ಯ ಶೀಘ್ರ ಪೂರ್ಣಗೊಳ್ಳುವಂತೆ ವಾತಾವರಣ ನಿರ್ಮಾಣವಾಗಿದೆ. ಇದಕ್ಕೋಸ್ಕರ ದೇಶದಾದ್ಯಂತ ಸಂಪರ್ಕ ಅಭಿಯಾನವನ್ನು ಹಮ್ಮಿಕೊಳ್ಳಲಾಗುವುದು. ಐದು ಲಕ್ಷ ಗ್ರಾಮ/ನಗರಗಳ ಹತ್ತು ಕೋಟಿಗೂ ಹೆಚ್ಚು ಮನೆಗಳನ್ನು ಸಂಪರ್ಕಿಸಿ ಮಂದಿರ ನಿರ್ಮಾಣ ಕಾರ್ಯದಲ್ಲಿ ಸಹಕಾರ ಸಹಯೋಗವನ್ನು ಕೋರಲಾಗುವುದು.

ಹೊಸ ಶಿಕ್ಷಣ ನೀತಿಯನ್ನು ಎಲ್ಲರೂ ಸ್ವಾಗತಿಸಿದ್ದಾರೆ. ಅದರಲ್ಲಿನ ಉತ್ತಮ ಅಂಶಗಳ ಉಚಿತ ಅನುಷ್ಠಾನಗೊಳಿಸುವಲ್ಲಿ ಸಹ ನಮ್ಮ ಕಾರ್ಯಕರ್ತರು ತೊಡಗಿಕೊಳ್ಳಲಿದ್ದಾರೆ ಎಂದು ಮತ್ತು ಸಭೆಯಲ್ಲಿ ಈ ಬಗ್ಗೆ ಚರ್ಚೆಗಳೂ ನಡೆದವೆಂದು ಡಾ. ಕೃಷ್ಣಗೋಪಾಲ್ ಅವರು ತಿಳಿಸಿದರು.

Leave a Reply

Your email address will not be published.

This site uses Akismet to reduce spam. Learn how your comment data is processed.