Banashankari, Bengaluru January 18: RSS unit of Banashankari zone in Bengaluru organised ‘BALA SANCHALAN’, a special route-mach by young RSS swayamsevaks who are school students studying in classes 7, 8 and 9 in different local schools.
The event was organised as a part of Birth Centenary celebrations of Yadava Rao Joshi, who pioneered RSS activities in Karnataka. Nearly 580 young swayamsevaks participated in this event. Hareesh Rao, RSS Bengaluru Mahanagar Sah-Sharirik Pramukh addressed the swayamsevaks during the occasion. Swayamsevaks performed different physical exercises including Yogasana, Pyramid, Surya Namaskar etc.
ಬನಶಂಕರಿ Jan 18: ರಾಷ್ಟ್ರೀಯ ಸ್ವಯಂಸೇವಕ ಸಂಘದ ಬೆಂಗಳೂರಿನ ಬನಶಂಕರಿ ಭಾಗದ ಬಾಲಕರ ಸಂಚಲನ ಭಾನುವಾರ ವಿದ್ಯಾಪೀಠ ನಗರದಲ್ಲಿ ನಡೆಯಿತು. ಯಾಧವರಾವ್ ಜೋಷಿ ಅವರ ಜನ್ಮ ಶತಮಾನೋತ್ಸವದ ಅಂಗವಾಗಿ ನಡೆದ ಬಾಲಕರ ಸಂಚಲನದಲ್ಲಿ ಬನಶಂಕರಿ ಭಾಗದ 580 ಬಾಲಕರು ಗಣವೇಷದಲ್ಲಿ ಪಾಲ್ಗೊಂಡಿದ್ದರು.
ಸಂಚಲನದ ನಂತರ ನಡೆದ ಕಾರ್ಯಕ್ರಮದಲ್ಲಿ ಬಾಲಕರಿಂದ ನೀಯುದ್ಧ, ದಂಡ ವ್ಯಾಯಾಮ, ದಂಡ ಪ್ರದರ್ಶನ, ಪಿರಮಿಟ್, ಸಾಮೂಹಿಕ ಆಟಗಳು, ಸಮತ, ಸಾಮೂಹಿಕ ಸೂರ್ಯನಮಸ್ಕಾರ, ಸಾಮೂಹಿಕ ಉಪವಿಷ್ಟ ವ್ಯಾಯಾಮ ಸೇರಿದಂತೆ 9 ವಿವಿಧ ಶಾರೀರಿಕ ಪ್ರದರ್ಶನಗಳು ನಡೆದವು.
ನಂತರ ಬಾಲಕರನ್ನು ಉದ್ದೇಶಿಸಿ ಮಾತನಾಡಿದ ಬೆಂಗಳೂರು ಮಹಾನಗರ ಸಹ ಶಾರೀರಿಕ ಪ್ರಮುಖರಾದ ಶ್ರೀ ಹರೀಶ್, ಸಂಘ ಬಾಲಕರಿಂದ ತರುಣ-ವೃದ್ಧರವರೆಗೆ ಎಲ್ಲರನ್ನೂ ದೇಶಕಾರ್ಯದಲ್ಲಿ ಮುಂದಡಿ ಇಡಲು ಸ್ಪೂರ್ತಿ, ಉತ್ಸಾಹಗಳನ್ನು ನೀಡುತ್ತದೆ. ಬಾಲಕರಿಗೆ ಸೂಕ್ತ ರೀತಿಯ ರಾಷ್ಟ್ರಭಕ್ತಿಯ ಶಿಕ್ಷಣ ನೀಡುವ ಮೂಲಕ ಮುಂದಿನ ಸಮಾಜದ ಮೆಟ್ಟಿಲುಗಳನ್ನ ನಿರ್ಮಾಣ ಮಾಡಬೇಕು ಎಂಬುದು ಯಾಧವ ರಾವ್ ಜೋಷಿ ಅವರ ಚಿಂತನೆಯಾಗಿತ್ತು. ಅಂತಹ ಕೆಲಸ ಸಂಘದಿಂದ ಆಗುತ್ತಿದೆ ಎಂದರು.
ಬಾಲಕರು ಸಂಘಸ್ಥಾನಕ್ಕೆ ಬಂದು ಹತ್ತಾರು ಉತ್ತಮ ವಿಷಯಗಳನ್ನು ಕಲಿಯುತ್ತಾರೆ. ಈ ಮೂಲಕ ದೇಶಕ್ಕೂ, ಸಮಾಜಕ್ಕೂ, ಸಂಘಕ್ಕೂ ಹಾಗೂ ಅವರಿಗೂ ವೈಯಕ್ತಿಕವಾಗಿ ಹಲವಾರು ರೀತಿಯಲ್ಲಿ ಸಹಕಾರಿಯಾಗುತ್ತದೆ ಎಂದರು.
ವೇದಿಕೆಯಲ್ಲಿ ಬನಶಂಕರಿ ಭಾಗದ ಸಹ ಸಂಘಚಾಲಕರಾದ ಶ್ರೀಯುತ ಶ್ರೀಧರ ಮೂರ್ತಿಯವರು ಉಪಸ್ಥಿತರಿದ್ದರು. ಭಾಗ ಕಾರ್ಯವಾಹರಾದ ಶ್ರೀ ದೇವಾನಂದ ಅವರು ಪರಿಚಯಿಸಿ, ವಂದಿಸಿರು.