ಇಂದು ಜಯಂತಿ

ಲೋಕಮಾನ್ಯ ತಿಲಕ್‌ ಎಂದೇ ಜನಪ್ರಿಯರಾಗಿದ್ದ ಬಾಲಗಂಗಾಧರ ತಿಲಕ್‌ ಅವರು ಭಾರತೀಯ ರಾಷ್ಟ್ರೀಯತಾವಾದಿ, ಶಿಕ್ಷಕ ಮತ್ತು ಸ್ವಾತಂತ್ರ್ಯಹೋರಾಟಗಾರರು. ಭಾರತೀಯರ ಪ್ರಜ್ಞೆಯಲ್ಲಿ ಸಂಪೂರ್ಣ ಸ್ವರಾಜ್ಯದ ಕಿಚ್ಚು ಹಚ್ಚಿದ ತಿಲಕರು ತಮ್ಮ ಕಾರ್ಯವೈಖರಿಗಳ ಮೂಲಕ ಸಂಘಟಿತ ಸಮಾಜವನ್ನು ರಾಷ್ಟ್ರದ ಹಿತಕ್ಕಾಗಿ ಶ್ರಮಿಸುವಂತೆ ಮಾಡುವಲ್ಲಿ ಯಶಸ್ವಿಯಾದರು. ತಿಲಕರು ಭಾರತದ ಇತಿಹಾಸ, ಸಂಸ್ಕೃತ, ಹಿಂದೂ ಧರ್ಮ, ಗಣಿತ ಹಾಗೂ ಖಗೋಳ ಶಾಸ್ತ್ರಗಳ ಆಳವಾದ ಅಭ್ಯಾಸ ಮಾಡಿದ್ದರು. ಇಂದು ಅವರ ಜಯಂತಿ.


ಪರಿಚಯ
ಬಾಲಗಂಗಾಧರ ತಿಲಕ್‌ ಅವರು ಜುಲೈ 23, 1856 ರಂದು ಮಹಾರಾಷ್ಟ್ರದ ರತ್ನಗಿರಿಯಲ್ಲಿ ಜನಿಸಿದರು. ತಂದೆ ಗಂಗಾಧರ ತಿಲಕ್ ಅವರು ಶಾಲಾ ಶಿಕ್ಷಕರಾಗಿದ್ದರು. ಬಾಲಗಂಗಾಧರ್‌ ತಿಲಕ್‌ ಅವರು ಹದಿನಾರನೇ ವಯಸ್ಸಿನಲ್ಲಿ ಇರುವಾಗಲೇ ತಂದೆ ನಿಧನರಾದರು.  ಅವರು 1877ರಲ್ಲಿ ಪುಣೆಯ ಡೆಕ್ಕನ್‌ ಕಾಲೇಜಿನಿಂದ ಗಣಿತಶಾಸ್ತ್ರದಲ್ಲಿ ಬಿಎಸ್ಸಿ ಪದವಿ ಪಡೆದರು. 1879ರಲ್ಲಿ ಅವರು ಸರ್ಕಾರಿ ಕಾನೂನು ಕಾಲೇಜಿನಲ್ಲಿ ಎಲ್‌ ಎಲ್‌ ಬಿ ಪದವಿಯನ್ನುಪಡೆದರು.ಪದವಿ ಪಡೆದ ನಂತರ ತಿಲಕ್ ಅವರು ಪುಣೆಯ ಖಾಸಗಿ ಶಾಲೆಯಲ್ಲಿ ಗಣಿತವನ್ನು ಕಲಿಸಲು ಪ್ರಾರಂಭಿಸಿದರು. ಅವರು1880ರಲ್ಲಿ ಗೋಪಾಲ್‌ ಗಣೇಶ್‌ ಅಗರ್ಕರ್‌, ಮಹದೇವ್ ಬಲ್ಲಾಳ್ ನಾಮಜೋಶಿ ಮತ್ತು ವಿಷ್ಣುಶಾಸ್ತ್ರಿ ಚಿಪ್ಳೂಂಕರ್ ಸೇರಿದಂತೆ ಕೆಲವು ಕಾಲೇಜು ಸ್ನೇಹಿತರೊಂದಿಗೆ ಮಾಧ್ಯಮಿಕ ಶಿಕ್ಷಣಕ್ಕಾಗಿ ನ್ಯೂ ಇಂಗ್ಲಿಷ್ ಶಾಲೆಯನ್ನು ಸ್ಥಾಪಿಸಿದರು. ಇದ್ದರಿಂದ ಯುವಕರಿಗೆ ಶಿಕ್ಷಣದ ಗುಣಮಟ್ಟವನ್ನು ಸುಧಾರಿಸುವುದು ಮುಖ್ಯ ಉದ್ದೇಶವಾಗಿತ್ತು. ನಂತರ ಅವರು 1884ರಲ್ಲಿ ಡೆಕ್ಕನ್ ಎಜುಕೇಶನ್ ಸೊಸೈಟಿಯನ್ನು ಸ್ಥಾಪಿಸಿದರು. 1885ರಲ್ಲಿ ಫರ್ಗುಸನ್ ಪೋಸ್ಟ್-ಸೆಕೆಂಡರಿ ಕಾಲೇಜನ್ನು ಸ್ಥಾಪಿಸಲಾಯಿತು.ಈ ಕಾಲೇಜಿನಲ್ಲಿ ತಿಲಕ್‌ ಅವರು ಗಣಿತ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದರು. 1890ರಲ್ಲಿ ತಿಲಕ್‌ ಅವರು ಡೆಕ್ಕನ್‌ ಎಜುಕೇಶನ್‌ ಸೂಸೈಟಿಯನ್ನು ತೊರೆದರು.

ರಾಜಕೀಯ ಜೀವನ
ತಿಲಕರು 1890ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ ಸೇರಿದರು.1896ರಲ್ಲಿ ಬಾಂಬೆಯಿಂದ ಪುಣೆಗೆ ಪ್ಲೇಗ್‌ ರೋಗ ಭೀಕರವಾಗಿ ಹರಡಿತ್ತು. ಸಾಂಕ್ರಾಮಿಕ ರೋಗವನ್ನು ಹೋಗಲಾಡಿಸಲು ಕಟ್ಟುನಿಟ್ಟಿನ ಕ್ರಮವನ್ನು ಕೈಗೊಂಡರು. ನಂತರ ಬಾಲಗಂಗಾಧರ ತಿಲಕರು ಕೇಸರಿ ಮತ್ತು ಮರಾಠ ಎಂಬ ಪತ್ರಿಕೆಯನ್ನು ಸ್ಥಾಪಿಸಿದರು. ಬ್ರಿಟಿಷರ ವಿರುದ್ಧ ಪತ್ರಿಕೆಯಲ್ಲಿ ಕಟುವಾಗಿ ಟೀಕಿಸುತ್ತಿದ್ದರು.

ಜೂನ್ 22,1897 ರಂದು ಕಮಿಷನರ್ ರಾಂಡ್ ಮತ್ತು ಇನ್ನೊಬ್ಬ ಬ್ರಿಟಿಷ್ ಅಧಿಕಾರಿ ಲೆಫ್ಟಿನೆಂಟ್ ಆಯರ್ಸ್ಟ್ ಅವರನ್ನು ಚಾಪೇಕರ್‌ ಸಹೋದರರು ಸೇರಿದಂತೆ ಅವರ ಸಹಚರರು ಗುಂಡಿಕ್ಕಿ ಕೊಂದರು.
ಬಾಲಗಂಗಾಧರ ತಿಲಕ್‌ ಅವರನ್ನು ಕೊಲೆಗೆ ಪ್ರಚೋದನೆ ನೀಡಿರುವ ಆರೋಪದಡಿ 18 ತಿಂಗಳು ಮುಂಬೈ ಜೈಲಿಗೆ ಕಳುಹಿಸಲಾಯಿತು.  ಜೈಲಿನಿಂದ ಹೊರಗೆ ಬಂದ ನಂತರ ಅವರು ರಾಷ್ಟ್ರೀಯ ನಾಯಕರಾಗಿ ಗುರುತಿಸಿಕೊಂಡರು. ಅವರು “ಸ್ವರಾಜ್ಯ ನನ್ನ ಜನ್ಮಸಿದ್ಧ ಹಕ್ಕು. ನಾನು ಅದನ್ನು ಹೊಂದುತ್ತೇನೆ” ಎಂದು ಹೇಳಿದ್ದರು. 1905ರಲ್ಲಿ ಬಂಗಾಳ ವಿಭಜನೆ ನಂತರ ತಿಲಕರು ಸ್ವದೇಶಿ ಚಳವಳಿ ಮತ್ತು ಬಹಿಷ್ಕಾರ ಚಳವಳಿಯನ್ನು ಪ್ರೋತ್ಸಾಹಿಸಿದರು. ಈ ಆಂದೋಲನದ ಮೂಲಕ ವಿದೇಶಿ ವಸ್ತುಗಳನ್ನು ಬಹಿಷ್ಕರಿಸಲಾಯಿತು. ಸ್ವದೇಶಿ ಮತ್ತು ಬಹಿಷ್ಕಾರ ಚಳವಳಿಗಳು ಒಂದೇ ನಾಣ್ಯದ ಎರಡು ಮುಖಗಳು ಇದ್ದಂತೆ ಎಂದು ತಿಲಕರು ಹೇಳಿದರು.


ಆಲ್‌ ಇಂಡಿಯಾ ಹೋಮ್‌ ರೂಲ್‌ ಲೀಗ್‌
ಬಾಲಗಂಗಾಧರ ತಿಲಕರು 1916-18ರಲ್ಲಿ ಜಿಎಸ್‌ ಖಾಪರ್ಡೆ ಮತ್ತು ಅನ್ನಿ ಬೆಸೆಂಟ್‌ ಅವರೊಂದಿಗೆ ಆಲ್‌ ಇಂಡಿಯಾ ಹೋಮ್‌ ರೂಲ್‌ ಲೀಗ್‌ ಅನ್ನು ಸ್ಥಾಪಿಸಿದರು. ಲೀಗ್‌ಗೆ ರೈತರ ಬೆಂಬಲಕ್ಕಾಗಿ ತಿಲಕರು ಹಳ್ಳಿ ಹಳ್ಳಿಗೆ ಪ್ರವಾಸ ಕೈಗೊಂಡಿದ್ದರು.ಇದ್ದರಿಂದ 1916ರಲ್ಲಿ ಲೀಗ್ 1400 ಸದಸ್ಯರನ್ನು ಹೊಂದಿದೆ. ವರ್ಷದಿಂದ ವರ್ಷಕ್ಕೆ ಲೀಗ್ ನ ಸದಸ್ಯತ್ವ ಏರಿಕೆಯಾಗುತ್ತಿದ್ದಂತೆ ತಿಲಕರು ಹೋಮ್ ರೂಲ್ ಲೀಗ್ ಅನ್ನು ಮಹಾರಾಷ್ಟ್ರ, ಕೇಂದ್ರ ಪ್ರಾಂತ ಮತ್ತು ಕರ್ನಾಟಕ ಮತ್ತು ಬೇರಾರ್‌ ಪ್ರದೇಶದಲ್ಲಿ ಪ್ರಾರಂಭಿಸಿದರು.


ಸಾಮಾಜಿಕ ಕೊಡುಗೆ
ಇವರು ಸಾಮಾಜಿಕ ಸುಧಾರಣೆಯನ್ನು ಕೈಗೊಂಡರು. ಮಹಿಳೆಯರ ಹಕ್ಕು ಮತ್ತು ಅಸ್ಪೃಶ್ಯತೆ ವಿರುದ್ಧ ಹೋರಾಡಿದರು.ಪುಣೆಯಲ್ಲಿ ಮೊದಲ ಬಾರಿಗೆ ಬಾಲಕಿಯರ ಪ್ರೌಢಶಾಲೆಯನ್ನು ಸ್ಥಾಪಿಸಿದರು. ತಿಲಕ್‌ ಅವರು ಹಿಂದಿ ಭಾಷೆಯು ಭಾರತದ ರಾಷ್ಟ್ರಭಾಷೆಯಾಗಬೇಕು ಎಂದು ಮೊದಲು ಸೂಚಿಸಿದರು. 1895ರಲ್ಲಿ ಮರಾಠ ಸಾಮ್ರಾಜ್ಯದ ಸಂಸ್ಥಾಪಕ ಶಿವಾಜಿಯ ಜನ್ಮದಿನವಾದ ” ಶಿವ ಜಯಂತಿ ” ಆಚರಣೆಗಾಗಿ ತಿಲಕರು ಶ್ರೀ ಶಿವಾಜಿ ನಿಧಿ ಸಮಿತಿಯನ್ನು ಸ್ಥಾಪಿಸಿದರು.ಗಣೇಶ ಚತುರ್ಥಿ ಆಚರಣೆಯನ್ನು ಜಾರಿಗೆ ತಂದರು. ಈ ಎರಡು ಸಾರ್ವಜನಿಕ ಉತ್ಸವಗಳ ಮೂಲಕ ಜನಸಾಮಾನ್ಯರಲ್ಲಿ ಸ್ವಾತೂ


ಸಾಹಿತ್ಯ
ಬಾಲಗಂಗಾಧರ ತಿಲಕ್‌ ಅವರು ಸಾಹಿತ್ಯದ ಕಡೆ ಹೆಚ್ಚು ಒಲವು ತೋರಿದ್ದರು. 1903ರಲ್ಲಿ ತಿಲಕರು ದಿ ಆರ್ಕ್ಟಿಕ್ ಹೋಮ್ ಇನ್ ವೇದಾಸ್ ಎಂಬ ಪುಸ್ತಕವನ್ನು ಬರೆದಿದ್ದರು. ತಿಲಕರು “ಗೀತಾರಹಸ್ಯ ಅಥವಾ ಜೀವನಧರ್ಮ ಯೋಗ” ಎಂಬ ಪ್ರಸಿದ್ಧ ಕೃತಿಯನ್ನು ರಚಿಸಿದರು.


ಬಾಲಗಂಗಾಧರ ತಿಲಕ್‌ ಅವರು ಆಗಸ್ಟ್ 1, 1920 ರಂದು 64 ವಯಸ್ಸಿನಲ್ಲಿ ನಿಧನರಾದರು.

Leave a Reply

Your email address will not be published.

This site uses Akismet to reduce spam. Learn how your comment data is processed.