ಗುವಾಹಟಿ, ಅಸ್ಸಾಂ: ಮೇ 5, 2015: ಗ್ರಾಮ ವಿಕಾಸದ ಧ್ಯೇಯದೊಂದಿಗೆ ಕಾಲ್ನಡಿಗೆಯ ಮೂಲಕ ದೇಶದಾದ್ಯಂತ ಸಂಚರಿಸುವ, ಆರೆಸ್ಸೆಸ್ ಮಾಜಿ ಅಖಿಲ ಭಾರತೀಯ ಸೇವಾ ಪ್ರಮುಖ್ ಸೀತಾರಾಮ ಕೆದಿಲಾಯ ನೇತೃತ್ವದ ’ಭಾರತ ಪರಿಕ್ರಮ ಯಾತ್ರೆ’ಯು ಇದೀಗ ಒಂದು ಸಾವಿರನೇ ದಿನಕ್ಕೆ ಪ್ರವೇಶಿಸಿದೆ. ಅಗಸ್ಟ್ 9, 2012 ರಂದು ಕನ್ಯಾಕುಮಾರಿಯಿಂದ ಆರಂಭಗೊಂಡ ಯಾತ್ರೆಯು ಕರ್ನಾಟಕ ಸೇರಿದಂತೆ 14ರಾಜ್ಯಗಳಲ್ಲಿ ಸಂಚರಿಸಿದ್ದು, ಇಂದು ಮೇ 5, 2015ರ ಮಂಗಳವಾರದಂದು ಅಸ್ಸಾಂ, ಗುವಾಹಟಿ ಬಳಿಯ ತೇಜಪುರಕ್ಕೆ ಪ್ರವೇಶಿಸಿದ್ದು ಯಾತ್ರೆಯ ಸಾವಿರನೇ ದಿನವನ್ನು ಪೂರೈಸಿದೆ. 67ರ ಹರೆಯದ ಸೀತಾರಾಮ ಕೆದಿಲಾಯರನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಮೋಹನ್ ಭಾಗವತ್ ಅಭಿನಂದಿಸಿದ್ದಾರೆ.
ಭಾರತ ಪರಿಕ್ರಮಕ್ಕೆ ಸರಸಂಘಚಾಲಕರ ಶುಭಹಾರೈಕೆ
“ಸ್ವದೇಶವನ್ನು ಆರಾಧ್ಯದೈವವೆಂದು ಭಾವಿಸಿ ಸಮಾಜ ನಿರೀಕ್ಷಣ ಹಾಗೂ ಸಮಾಜ ಜಾಗೃತಿ ಮಾಡುವ ಉದ್ದೇಶದ ಪರಿವ್ರಾಜಕ ಪರಂಪರೆಯು ಭಾರತದಲ್ಲಿ ಪ್ರಾಚೀನ ಕಾಲದಿಂದ ನಡೆದು ಬಂದಿದೆ. ಅದರಿಂದಲೇ ಪ್ರೇರಣೆ ಪಡೆದು ಸಂಘದ ಸೇವಾ ವಿಭಾಗದ ಹೊಣೆಯಿಂದ ಮುಕ್ತರಾದ ಬಳಿಕ ಶ್ರೀ ಸೀತಾರಾಮ ಕೆದಿಲಾಯರು ಭಾರತ ಪರಿಕ್ರಮದ ಸಂಕಲ್ಪ ತೊಟ್ಟರು. ಕನ್ಯಾಕುಮಾರಿಯಲ್ಲಿ ಶ್ರೀಪಾದ ಶಿಲೆಯ ದರ್ಶನದಿಂದ ಪ್ರಾರಂಭಿಸಿ ನಿತ್ಯವೂ ಕಾಲ್ನಡಿಗೆಯಿಂದ ಪಶ್ಚಿಮ ಘಟ್ಟ, ಪಶ್ಚಿಮ ಸಮುದ್ರ ಸೀಮೆ ಮತ್ತು ಕಾಶ್ಮೀರದವರೆಗಿನ ಪಶ್ಚಿಮ ಪ್ರದೇಶ ಗಡಿಯಿಂದ ಉತ್ತರ ಗಡಿಭಾಗದಲ್ಲಿ ಹಿಮಾಲಯದ ತರಾಯೀಯಲ್ಲಿರುವ ಗ್ರಾಮಗಳ ಮೂಲಕ ಹಾದು ಹೋಗಿ ಒಂದು ಸಹಸ್ರ ದಿನಗಳನ್ನು ಪೂರೈಸಿ ಈಗ ಅವರು ಪೂರ್ವದ ಅಸ್ಸಾಂ ಪ್ರದೇಶಕ್ಕೆ ಕಾಲಿಟ್ಟಿದ್ದಾರೆ. ಒಂದು ಸಹಸ್ರ ದಿನಗಳ ಈ ದುರ್ಗಮ ಯಾತ್ರೆಯು ತನ್ನ ನಿರ್ದಿಷ್ಟ ಉzಶಕ್ಕೆ ಅನುಸಾರವಾಗಿ ಪೂರ್ಣಗೊಳಿಸಲು ಪರಿಶ್ರಮ ಪಡುವುದು ಒಂದು ಅಭಿನಂದನೀಯ ಕಾರ್ಯವಾಗಿದೆ. ಈಗ ಅವರು ಭಾರತದ ಪೂರ್ವ ಮತ್ತು ನೈಋತ್ಯ ಪ್ರದೇಶಗಳಲ್ಲಿ ನಡೆಯುತ್ತ ಈ ಪ್ರದಕ್ಷಿಣೆಯನ್ನು ಯಶಸ್ವಿಯಾಗಿ ಪೂರೈಸುವುದರಲ್ಲಿ ಯಾರಿಗೂ ಅನುಮಾನಕ್ಕೆ ಕಾರಣವಿಲ್ಲ”.
“ಸೀತಾರಾಮರ ಈ ಪ್ರಯತ್ನವು ಕೇವಲ ಕಾಲ್ನಡಿಗೆಯಲ್ಲಿ ಸಾಗುವ ಮತ್ತೊಂದು ವಿಕ್ರಮ ಸಾಧಿಸುವ ಉzಶ ಹೊಂದಿಲ್ಲ. ‘ಆತ್ಮನೋ ಮೋಕ್ಷಾರ್ಥಂ ಜಗದ್ಧಿತಾಯ ಚ.’ ಈ ಯಾತ್ರೆಯಲ್ಲಿ ಅವರು ಗ್ರಾಮಸ್ಥರೊಂದಿಗೆ ಬೆರತುಕೊಂಡು ಭಾರತದ ಪುಣ್ಯ ಸನಾತನ ಮತ್ತು ನಿತ್ಯನೂತನ ಸಂಸ್ಕೃತಿಯ ಪ್ರಕಾರ ಇಂದಿನ ಪರಿಸ್ಥಿತಿಯಲ್ಲಿ ಗೋವು, ಗ್ರಾಮ ಮತ್ತು ಪ್ರಕೃತಿ ಆಧಾರಿತ ಜೀವನ ನಡೆಸುವ ಬಗೆ ಹೇಗೆಂದು ಇದರ ಉಪದೇಶ ನೀಡದೆ, ಅನೇಕ ಗ್ರಾಮಗಳಲ್ಲಿ ಆ ಸತ್ಯಾಧಾರಿತ ಹಾಗೂ ಸಾತ್ವಿಕ ಧರ್ಮ – ಜೀವನದ ಆಚರಣೆಗೆ ಚಾಲನೆಯನ್ನೂ ನೀಡಿದ್ದಾರೆ. ಭಾರತೀಯ ಸಮಾಜ ಮತ್ತು ಸ್ವನಿರ್ಮಿತ ಸಮಸ್ಯೆಗಳಿಗೆ ಸಿಲುಕಿರುವ ಮಾನವತೆಗೆ ಇದೊಂದು ಬಹು ಸಮಯೋಚಿತ ಮತ್ತು ಉಪಯುಕ್ತ ಕಾರ್ಯವಾಗಿದೆ. ಶ್ರೀ ಸೀತಾರಾಮಜಿಯವರು ಯಾತ್ರೆಯ ಉಳಿದ ಭಾಗವನ್ನು ದೃಢಸಂಕಲ್ಪದಿಂದ ಯಶಸ್ವಿಯಾಗಿ ಪೂರ್ಣಗೊಳಿಸುವರು ಎಂಬ ಶುಭಹಾರೈಕೆ ಮತ್ತು ವಿಶ್ವಾಸವಂತೂ ಇದೆ; ಅವರ ಈ ಯಾತ್ರೆಯಲ್ಲಿ ಸಹಯೋಗಿ ಮತ್ತು ಸಹಕಾರಿಗಳಾಗುತ್ತ ಯಾತ್ರೆಯ ಮಾರ್ಗದಲ್ಲಿನ ಎಲ್ಲ ಕಾರ್ಯಕರ್ತರು ಹಾಗೂ ಜನತೆ – ಸಮಾಜವು ಈ ಯಾತ್ರೆಯ ಬಹುಜನ ಹಿತಾಯದ ಸಂದೇಶವನ್ನು ಸ್ವಂತ ಆಚರಣೆಯಿಂದ ನೂರುಪಟ್ಟು ಪ್ರಚಾರ ಮತ್ತು ಪ್ರಸಾರ ಮಾಡುವುದು, ನಮ್ಮೆಲ್ಲರ ಕರ್ತವ್ಯವಾಗಿದೆ. ಈ ಕರ್ತವ್ಯವನ್ನು ನಿರ್ವಹಿಸುವ ಸುಬುದ್ಧಿ ಮತ್ತು ಶಕ್ತಿ ನಮಗೆಲ್ಲ ಪ್ರಾಪ್ತವಾಗಲೆಂದು ಪ್ರಾರ್ಥಿಸುತ್ತ ನಾನು ಶ್ರೀ ಸೀತಾರಾಮಜಿಯವರ ಯಾತ್ರೆಗೆ ಸಂಪೂರ್ಣ, ಸುಫಲ ಮತ್ತು ಸಫಲತೆಯ ಶುಭಹಾರೈಕೆಯನ್ನು ಮತ್ತೊಮ್ಮೆ ವ್ಯಕ್ತಪಡಿಸುವೆ.”
– ಮೋಹನ್ ಭಾಗವತ್
ಸರಸಂಘಚಾಲಕ, ರಾಷ್ಟ್ರೀಯ ಸ್ವಯಂಸೇವಕ ಸಂಘ
30-4-2015
Senior RSS functionaries congratulated Kedilaya on his successful completion of 1000 days of Bharat Parikrama Yatra.
- Sitrama Kedilaya at Mewar Village of Rajasthan during Bharat Parikrama Padayatra, recently
- 3 Friends Meet: Senior RSS Pracharaks Na Krishnappa, Sitaram Kedilaya and Mai Cha Jayadev in a discussion during Bharat Parikrama Yatra at Madanageri Village, near Karawar. ಭಾರತ ಪರಿಕ್ರಮ ಯಾತ್ರೆಯ 105ನೇ ದಿನವಾದ ನವೆಂಬರ್ 21ರಂದು ಕಾರವಾರ ಬಳಿಯ ಮಾದನಗೇರಿಯಲ್ಲಿ ಸೀತಾರಾಮ ಕೆದಿಲಾಯರನ್ನು ಭೇಟಿ ಮಾಡಿದ ಹಿರಿಯ ಆರೆಸ್ಸೆಸ್ ಪ್ರಚಾರಕರಾದ ನ ಕೃಷ್ಣಪ್ಪ ಮತ್ತು ಮೈ ಚ ಜಯದೇವ್
Elaborating on the yatra, Sitarama Kedilaya said that a span of about 10 kilo metres will be covered on a daily basis by foot, after which he will take rest in the village that falls in the vicinity. The primary task he has to undertake will be to get in touch with the youth and the prominent members of the village and discuss important issues like care of sick. This will include the handicapped, blind etc. Other activities like taking a round of the entire village and engaging in a collective session of prayer at the village temple. This will help create a bond of great depth with the people, which will help the villagers realize that villages were, once upon a time, a single encompassing family. However, this feeling has taken a back seat now, which has led to a whole lot of problems everywhere. This has now escalated to national and international levels. The feeling of unity, along with creation of family bonds, if brought back to villages will ensure restoration of harmony to a great extent. This could be instrumental in the rekindling of the concept of ‘Vasudha Eva Kudumbakam’. And then, the journey will resume to the next village.
67 year old Sitarama Kedilaya has been, for a long time, strictly adhered to having a single meal a day. During the course of the journey, he will have no possessions or belongings with him. When asked what inspired him to undertake the endeavor at this age, that too all alone, he replied, “What makes you feel that I am alone? I have the thoughts and ideas of as many as 121 crore people with me. After all the very deed is for an all encompassing nation.”
Sitaram Kedilaya has dedicated a slogan for the purpose. “Know Bharat, be Bharat and Make Bharat Vishwaguru”. The reason for the yatra is clear. The current trends that prevail are businesslike and commercial , where life is being seen only in terms of trade and profit. This unfortunately has given rise to poverty, unemployment and corruption everywhere. Another trend that prevails is that the world is now a battlefield, with life being nothing but constant strife. This thought stream has led to violence, terrorism and an existence hand with deadly weapons everywhere. This has led to deep turbulence and instability, with people all over the world making a mad scramble for any straw that will provide them with peace. And then this makes them realize that the road to solitude, ultimately happens to be Bharat. It is here that the relevance of the third and most important trend comes into being: “The world is a family and life is a revelation”.
Bharat has gifted this very concept to the entire world. This perception has no violence or strife. All it has is the message to live life filled with universal love, spirituality and compassion. Only this is required to pervade the entire world with harmony. The best place to initiate this is the villages. And so the endeavour is being undertaken for safeguarding villages, the country and the entire world.
www.samvada.org, the official website of RSS Karnataka for mass communication and media activities, has continuously published the updates of Bharat parikrama Yatra since its launch.