
BhARATA Bharati
ಜನವರಿ 28ರಂದು ಶಿವಮೊಗ್ಗದಲ್ಲಿ ಭಾರತ-ಭಾರತಿ ಪುಸ್ತಕ ಬಿಡುಗಡೆ :

70ರ ದಶಕದಲ್ಲಿ ಮಕ್ಕಳ ಸಾಹಿತ್ಯದಲ್ಲಿ ದಾಖಲೆಯನ್ನೇ ನಿರ್ಮಿಸಿದ್ದ ‘ಭಾರತ-ಭಾರತಿ ಪುಸ್ತಕ ಸಂಪದ’ ಮಾಲೆಯ ಹೊಸ 50 ಪುಸ್ತಕಗಳ ಬಿಡುಗಡೆ ಕಾರ್ಯಕ್ರಮ 2014ರ ಜನವರಿ 28ರಂದು ಶಿವಮೊಗ್ಗದಲ್ಲಿ ನಡೆಯಲಿದೆ.
ಕಾಶ್ಮೀರದಿಂದ ಕನ್ಯಾಕುಮಾರಿವರೆಗಿನ ನೂರಾರು ಮಹಾಪುರುಷರ ಹಾಗೂ ಇತಿಹಾಸದಲ್ಲಡಗಿದ ಬೆಳಕು ಕಾಣದ ಅನೇಕ ಮಂದಿ ಮಹನೀಯರ ಜೀವನ ಚರಿತ್ರೆಯ ಸಂಕಲನವೇ ‘ಭಾರತ-ಭಾರತಿ ಪುಸ್ತಕ ಸಂಪದ’ ಮಾಲೆ. ಈಗಾಗಲೇ 510 ಮಹಾಪುರುಷರ ಜೀವನದ ಮೇಲೆ ಬೆಳಕು ಚೆಲ್ಲಿದ ಹೆಮ್ಮೆ ‘ಭಾರತ-ಭಾರತಿ ಪುಸ್ತಕ ಸಂಪದ’ ಮಾಲೆಯದ್ದು. ಬದುಕಲು ಕಲಿಸುವ ಈ ಅವಿಸ್ಮರಣೀಯ ಕಾರ್ಯಕ್ಕೆ 50 ಹೆಜ್ಜೆಗಳು ಸೇರಲಿವೆ.
ಹೆಚ್ಚಿನ ಮಾಹಿತಿಯನ್ನು ಲಗತ್ತಿಸಲಾಗಿದೆ.