ಭಾರತೀಯ ಇತಿಹಾಸ ಸಂಕಲನ ಸಮಿತಿ, ಕರ್ನಾಟಕ ಉತ್ತರ ಪ್ರಾಂತ ಸ್ವರಾಜ್ಯ 75 ನಿಮಿತ್ತ ಉಪನ್ಯಾಸಕರಿಗೆ ಕಾರ್ಯಕ್ರಮ ಮತ್ತು ಉತ್ತರ ಪ್ರಾಂತ ಬೈಠಕ್ ಬೀದರ್ ನಗರದ ವಿದ್ಯಾರಣ್ಯ ಪ್ರೌಢಶಾಲೆಯ ಅವರಣದಲ್ಲಿ 30.05.2022, ಸೋಮವಾರದಂದು ನಡೆಯಿತು.
ಸ್ವರಾಜ್ಯ 75 ಕಾರ್ಯಕ್ರಮದಲ್ಲಿ ಒಟ್ಟು 56 ಉಪನ್ಯಾಸಕರು ಮತ್ತು 15 ಕಾರ್ಯಕರ್ತರು ಉಪಸ್ಥಿತರಿದ್ದರು. ಡಾ. ಹೇಮಂತ್ ಮಜುಂದಾರ್, ಸಂಪರ್ಕ ಪ್ರಮುಖ್-ಅಖಿಲ ಭಾರತೀಯ ಇತಿಹಾಸ ಸಂಕಲನ ಯೋಜನ, ದೆಹಲಿ ಅವರು ಮುಖ್ಯ ಭಾಷಣ ಮಾಡಿದರು. ಶ್ರೀಶೈಲ ಬಿರಾದಾರ್, ಉಪಾಧ್ಯಕ್ಷರು, ಭಾ.ಇ.ಸಂ.ಸ, ಕರ್ನಾಟಕ, ಇವರಿಂದ ದಿಕ್ಸೂಚಿ ಭಾಷಣ ಮಾಡಿದರು.
ಡಾ. ಅನುರಾಧ ರಾಜಹಂಸ, ಮಹಿಳಾ ಪ್ರಮುಖ್-ಅಖಿಲ ಭಾರತೀಯ ಇತಿಹಾಸ ಸಂಕಲನ ಯೋಜನ, ದೆಹಲಿ ಇವರು ಇತಿಹಾಸ ಸಂಕಲನದಲ್ಲಿ ಮಹಿಳೆಯರ ಸಾಧನೆ, ಜವಾಬ್ದಾರಿ ಕುರಿತು ಮಾತನಾಡಿದರು. ಡಾ. ಶಿವಕುಮಾರ್ ಉಪೆ, ಸಂಚಾಲಕರು, ಭಾ.ಇ.ಸಂ.ಸ, ಕರ್ನಾಟಕ ಉತ್ತರ ಪ್ರಾಂತ ಇವರು ಅಧ್ಯಯನ ಮತ್ತು ಸಂಶೋಧನೆಯಿಂದ ನೈಜ ಇತಿಹಾಸವನ್ನು ಬೆಳಕಿಗೆ ತರುವಲ್ಲಿ ಉಪನ್ಯಾಸಕರ ಪಾತ್ರದ ಬಗ್ಗೆ ಮನವರಿಕೆ ಮಾಡಿದರು. ಡಾ. ಬಸವರಾಜ ಅಕ್ಕಿ, ಧಾರವಾಡ ಜಿಲ್ಲಾ ಸಂಚಾಲಕರು, ಕಲಬುರ್ಗಿ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾದ ಪ್ರತಿಭಾ ಚಾಮ, ಶ್ರೀ ಯೋಗೀಶ್, ಕಲಬುರ್ಗಿ ವಿಶ್ವವಿದ್ಯಾಲಯದ ಕೌನ್ಸೆಲಿಂಗ್ ಸದಸ್ಯರು, ಡಿ ಬಿ ಕಂಬಾರ್ ಮಹಿಳಾ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರು, ರಾಷ್ಟ್ರೀಯ ಸ್ವಯಂಸೇವಕ ಸಂಘದ ಜಿಲ್ಲಾ ಬೌದ್ಧಿಕ್ ಪ್ರಮುಖರಾದ ಹನುಮಂತರಾವ್ ಪಾಟೀಲ್ ಅವರು ಉಪಸ್ಥಿತರಿದ್ದರು.
ಬೈಠಕ್ ನಲ್ಲಿ ಧಾರವಾಡ, ಬಳ್ಳಾರಿ, ರಾಯಚೂರು, ಕಲಬುರ್ಗಿ ಮತ್ತು ಬೀದರ್ ಜಿಲ್ಲೆಗಳ ಸಮಿತಿ ಮತ್ತು ಕಾರ್ಯಕರ್ತರ ಘೋಷಣೆ ಮಾಡಲಾಯಿತು.