ಇಂದು ಪುಣ್ಯಸ್ಮರಣೆ

ಬಿರ್ಸಾ ಮುಂಡಾ ಅವರು ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ. ಇವರು ಬುಡಕಟ್ಟು ಸಂಸ್ಕೃತಿಯ ಪುನರುಜ್ಜೀವನಕ್ಕಾಗಿ ಹೋರಾಡಿದವರು. ಸ್ಥಳೀಯ ಸಮುದಾಯಗಳಿಗೆ ಇವರು ನೀಡಿರುವ ಕೊಡುಗೆ ಅಪಾರ. ಅವರು ತಮ್ಮ ಇಡೀ ಜೀವನವನ್ನ ಬುಡಕಟ್ಟು ಜನಾಂಗದ ಏಳಿಗೆಗಾಗಿ ಶ್ರಮಿಸಿದವರು. ಇಂದು ಅವರ ಪುಣ್ಯಸ್ಮರಣೆ.


ಪರಿಚಯ
ಬಿರ್ಸಾ ಮುಂಡಾ ಅವರು ನವೆಂಬರ್‌ 15, 1875 ರಂದು ಬಂಗಾಳ ಪ್ರೆಸಿಡೆನ್ಸಿಯ ರಾಂಚಿ ಜಿಲ್ಲೆಯ ಉಲಿಹಾಟು ಗ್ರಾಮದಲ್ಲಿ ಜನಿಸಿದವರು. ಅವರು ಗುರುವಾರ ಹುಟ್ಟಿದ್ದರಿಂದ ಬಿರ್ಸಾ ಎಂಬ ಹೆಸರು ಇಡಲಾಗಿತು. ಇವರ ತಂದೆ ಸುಗಣ ಮುಂಡ ಹಾಗೂ ತಾಯಿ ಕರ್ಮಿ ಹತು. ಬಿರ್ಸಾ ಮುಂಡಾ ಇದ್ದ ಸುತ್ತಮುತ್ತ ಆಗ ಕ್ರೈಸ್ತ ಮಿಷನರಿಗಳು ಬಹಳ ಇದ್ದರು. ಆ ಪ್ರದೇಶದ ಬಹಳ ಮಂದಿಯನ್ನು ಕ್ರೈಸ್ತ ಮತಕ್ಕೆ ಮತಾಂತರ ಮಾಡಲಾಗಿತ್ತು. ಬಡವರಾಗಿದ್ದ ಬಿರ್ಸಾ ಮುಂಡಾರನ್ನು ಜರ್ಮನ್ ಮಿಷನರಿ ಶಾಲೆಗೆ ಸೇರಿಸಲಾಯಿತು. ಆದರೆ ಅಲ್ಲಿ ಅವರನ್ನು ಕ್ರೈಸ್ತ ಮತಕ್ಕೆ ಮತಾಂತರ ಮಾಡಲು ಹೇಳಲಾಯಿತು. ಓದುವ ಆಸೆಗೆ ಬಿರ್ಸಾ ಕ್ರೈಸ್ತ ಮತವಪ್ಪಿದರು. ನಂತರ ಬಿರ್ಸಾ ಮುಂಡಾ ಹೆಸರು ಬಿರ್ಸಾ ಡೇವಿಡ್‌ ಎಂದು ಬದಲಾಯಿತು.


ಸ್ವಲ್ಪ ದಿನಗಳ ಕಾಲ ಬಿರ್ಸಾ ಮುಂಡಾ ಅವರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸುವ ಉದ್ದೇಶದಿಂದ ಜರ್ಮನ್ ಮಿಷನರಿ ಶಾಲೆಯನ್ನು ತ್ಯಜಿಸಿದರು. ನಂತರ ಕುಟುಂಬದವರೆಲ್ಲರೂ ಕ್ರೈಸ್ತ ಮತ ತ್ಯಜಿಸಿ ಮತ್ತೆ ಮಾತೃ ಧರ್ಮಕ್ಕೆ ವಾಪಸ್‌ ಆದರು. ಬಿರ್ಸಾ ಮುಂಡಾ ಅವರು ಆದಿವಾಸಿಗಳನ್ನು ಒಗ್ಗೂಡಿಸುವ ಸಲುವಾಗಿ ತಮ್ಮದೇಯಾದ ಒಂದು ಮತ ಸ್ಥಾಪಿಸಿದ್ದರು. ಈ ಮೂಲಕ ಮುಂಡಾರವರು ಬುಡಕಟ್ಟು ಸಂಸ್ಕೃತಿ, ಧರ್ಮವನ್ನು ರೂಢಿಸಿಕೊಳ್ಳುವಂತೆ ಜನರಿಗೆ ಬೋಧಿಸುತ್ತಿದ್ದರು. ಕ್ರೈಸ್ತ ಮತ ತ್ಯಜಿಸುವಂತೆ ತಮ್ಮ ಬುಡಕಟ್ಟು ಜನರಿಗೆ ಕರೆ ನೀಡುತ್ತಿದ್ದರು. ಜೊತೆಗೆ ಆದಿವಾಸಿಗಳಿಗೆ ಜಾರಿಗೆ ತಂದಿದ್ದ ಜೀತ ವ್ಯವಸ್ಥೆಯನ್ನು ಕೊನೆಗೊಳಿಸಿದರು.

ಹೋರಾಟ
ಬಿರ್ಸಾ ಮುಂಡಾ ಅವರು ಮತಾಂತರ ವಿರುದ್ಧ ಹೋರಾಟ ನಡೆಸಿದ್ದಲ್ಲದೆ, ಬ್ರಿಟಿಷರ ವಿರುದ್ಧ ಹೋರಾಡಲು ಒಂದು ಗೆರಿಲ್ಲಾ ಸೇನೆಯನ್ನು ಕಟ್ಟಿದರು. ನಂತರ ಸೇನೆಯು ಪೊಲೀಸ್‌ ಠಾಣೆಗಳ ಮೇಲೆ ದಾಳಿ ನಡಸಿದರು. ಈ ವೇಳೆ ಬ್ರಿಟಿಷರ ಪರ ಇದ್ದ ವ್ಯಾಪಾರಿಗಳ ಮನೆಗಳನ್ನು ಧ್ವಂಸ ಮಾಡಿದ್ದರು. ಬಿರ್ಸಾ ಮುಂಡಾ ನೇತೃತ್ವದಲ್ಲಿ ಎದ್ದ ಹೋರಾಟವನ್ನು ಅಡಗಿಸಲು ಬ್ರಿಟಿಷರು ಆಗಿನ ಕಾಲಕ್ಕೆ 500 ಬಹುಮಾನ ಘೋಷಿಸಿದ್ದರು. 150 ಮಂದಿ ಇದ್ದ ಸೇನೆಯನ್ನು ಬ್ರಿಟಿಷರು ನಿಯೋಜಿಸುತ್ತಾರೆ. ಈ ಸೇನೆ ಬುಡಕಟ್ಟು ಜನರನ್ನು ಹಿಂಸೆ ಮಾಡಿದ್ದರ ಹಲವರನ್ನು ಕೊಲ್ಲುತ್ತದೆ. ಕೆಲ ವರ್ಷಗಳ ಬಳಿಕ ಬ್ರಿಟಿಷರು ಬಿರ್ಸಾ ಮುಂಡಾರನ್ನು ಬಂಧಿಸುವಲ್ಲಿ ಯಶಸ್ವಿಯಾಗುತ್ತಾರೆ.
ಹೋರಾಟವಿಲ್ಲದೆ ಬ್ರಿಟಿಷರ ಆಳ್ವಿಕೆಯನ್ನು ಒಪ್ಪಿಕೊಳ್ಳಲು ಬುಡಕಟ್ಟು ಜನಾಂಗದವರು ಸಿದ್ಧರಿಲ್ಲ ಎಂಬುದನ್ನು ಹೋರಾಟದ ಮೂಲಕ ಬ್ರಿಟಿಷರಿಗೆ ಹಾಗೂ ಜಗತ್ತಿಗೆ ತೋರಿಸಿದರು . ಅವರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆಯೂ ಅರಿವು ಮೂಡಿಸಿದರು. ಇದರಲ್ಲಿ ಭೂ ಪರಭಾರೆ, ಭೂಮಾಲೀಕರಿಂದ ಶೋಷಣೆ ಮತ್ತು ಧಾರ್ಮಿಕ ಹಸ್ತಕ್ಷೇಪ ಸೇರಿವೆ. ಹೋರಾಟದ ಪರಿಣಾಮವಾಗಿ ಬುಡಕಟ್ಟು ಜನರ ಜೀವನವನ್ನು ಸುಧಾರಿಸಲು ಬ್ರಿಟಿಷ್ ಸರ್ಕಾರವು ಕೆಲವು ಸುಧಾರಣೆಗಳನ್ನು ಪರಿಚಯಿಸಿತು.


1908 ರ ಚೋಟಾನಾಗ್‌ಪುರ ಟೆನೆನ್ಸಿ ಆ್ಯಕ್ಟ್ ಮತ್ತು 1908 ರ ಚೋಟಾನಾಗ್‌ಪುರ ಭೂ ಸ್ವಾಧೀನ ಕಾಯಿದೆ ಜಾರಿಗೆ ತಂದಿದ್ದರು. ಮುಂಡಾ ದಂಗೆಯು ಭಾರತದಲ್ಲಿನ ಇತರ ಬುಡಕಟ್ಟು ಚಳುವಳಿಗಳಿಗೆ ಸ್ಫೂರ್ತಿ ನೀಡಿತು. ಇದು 1855-57 ರ ಸಂತಾಲ್ ಹೋರಾಟ ಮತ್ತು 1857-58 ರ ಭಿಲ್ ಹೋರಾಟವನ್ನು ಒಳಗೊಂಡಿತ್ತು. ಈ ಚಳುವಳಿಗಳು ಬ್ರಿಟಿಷ್ ಆಳ್ವಿಕೆಯನ್ನು ದುರ್ಬಲಗೊಳಿಸಲು ಸಹಾಯ ಮಾಡಿತು.


ಬಿರ್ಸಾ ಮುಂಡಾ ಜೂನ್‌ 9 , 1900 ರಂದು ತಮ್ಮ 24ನೇ ವಯಸ್ಸಿನಲ್ಲಿ ರಾಂಚಿಯಲ್ಲಿ ನಿಧನರಾದರು.

Leave a Reply

Your email address will not be published.

This site uses Akismet to reduce spam. Learn how your comment data is processed.