ಬೆಂಗಳೂರು   ಫೆಬ್ರವರಿ 23: ಪ್ರತಿ ವರ್ಷದಂತೆ ಈ ವರ್ಷವೂ ಗೋವಿಂದರಾಜನಗರದಲ್ಲಿ ರಾಷ್ಟೋತ್ಥಾನ ರಕ್ತ ನಿಧಿ ,ಯಾದವ ಸೇವಾ ಸಮಿತಿಯ ಮತ್ತು ನಚಿಕೇತ ಮನೋವಿಕಾಸ ಕೇಂದ್ರ ಇವರ ಸಂಯುಕ್ತ ಆಶ್ರಯದಲ್ಲಿ  ರಾಷ್ಟ್ರೀಯ ಸ್ವಯಂಸೇವಕ ಸಂಘದ ಎರಡನೇ ಸರಸಂಘಚಾಲಕರಾಗಿದ್ದ  ಶ್ರೀ ಗುರೂಜಿ ಯವರ ಜನ್ಮದಿನ ಹಾಗೂ ಶ್ರೀ ಯಾದವರಾವ್ ಜೋಷಿಯವರ ಜನ್ಮ ಶತಾಬ್ದಿ ಯ ಪ್ರಯುಕ್ತ ಗೋವಿಂದರಾಜನಗರದ ರಾಷ್ಟ್ರೀಯ ಸ್ವಯಂಸೇವಕ ಸಂಘದ  ಘಟಕವು ದಿನಾಂಕ 23-2-2014 ರಂದು ನಚಿಕೆತ ಮನೋ ವಿಕಾಸ ಕೇಂದ್ರದಲ್ಲಿ ರಕ್ತದಾನ ಶಿಬಿರವನ್ನು ಆಯೋಜಿಸಿತ್ತು.
IMG_20140223_110634
ಖ್ಯಾತ ದಂತ ವೈದ್ಯೆ ಶ್ರೀಮತಿ ಗಿರಿಜ ಅವರು ಕಾರ್ಯಕ್ರಮ ಉದ್ಘಾಟಿಸಿ, ಕಾರ್ಯಕ್ರಮಕ್ಕೆ ಬಂದ ದಾನಿಗಳಿಗೆ ರಕ್ತದಾನದ ಮಹತ್ವವನ್ನು ತಿಳಿಸಿಕೊಟ್ಟರು.
ವಿಜಯನಗರ ಭಾಗದ ವ್ಯವಸ್ತಾ ಪ್ರಮುಖರಾದ ಶ್ರೀ ಸುಬ್ರಮಣ್ಯ ರವರು ಸಂಘದಲ್ಲಿ ಸೇವಾಕಾರ್ಯ, ಪ.ಪೂ. ಶ್ರೀ ಗುರೂಜಿ ಹಾಗೂ ಶ್ರೀ ಯಾದವರಾವ್ ಜೋಷಿಯವರ ಬಗ್ಗೆ ತಿಳಿಸಿದರು. ರಕ್ತನಿಧಿಯ ಕಾರ್ಯಕರ್ತರಾದ ಶ್ರೀ ಈಶ್ವರ್ ರವರು ರಾಷ್ಟೋತ್ಥಾನ ರಕ್ತ ನಿಧಿ ಬಗ್ಗೆ ಮತ್ತು ರಕ್ತದಾನದಿಂದ ದಾನಿಗೆ ಆಗುವ ಉಪಯೋಗಗಳ ಬಗ್ಗೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಗೋವಿಂದರಾಜನಗರದ ಮಾನ್ಯ ಸಂಘಚಾಲಕರಾದ ಶ್ಶ್ರೀನಾಥ ರವರು, ನಚಿಕೇತ ಮನೋವಿಕಾಸ ಕೇಂದ್ರದ ಕಾರ್ಯದರ್ಶಿಗಳಾದ  ನರಸಿಂಹ ಶೈಣೈ ಹಾಗು ಸಂಘದ ಮತ್ತು ಪರಿವಾರದ ಸ್ಥಳೀಯ ಕಾರ್ಯಕರ್ತು ಉಪಸ್ಥಿತರಿದ್ದರು,  ಸತ್ಯಪ್ರಕಾಶ ರವರು ಕಾರ್ಯಕ್ರಮದ ನಿರೂಪಣೆ ಮಾಡಿದರು. ಶಿಬಿರದಲ್ಲಿಒಟ್ಟು 85 ಯುನಿಟ್ ರಕ್ತ ಸಂಗ್ರಹಣೆ ಯಾಯಿತು.
IMG_20140223_092621 IMG_20140223_092707 IMG_20140223_094222

Leave a Reply

Your email address will not be published.

This site uses Akismet to reduce spam. Learn how your comment data is processed.