
ಬೆಂಗಳೂರು ಅಕ್ಟೋಬರ್ 02, 2016: ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಪ್ರಚಾರಕ ಕಾ.ಶ್ರೀ ನಾಗರಾಜ ಅವರು ಬರೆದಿರುವ ‘ರಾಷ್ಟ್ರೀಯ ಪುನರುತ್ಥಾನ, ಬಿಳಲು-ಹೊಳಹು‘ (RSS in Nutshell) ಪುಸ್ತಕದ ಲೋಕಾರ್ಪಣ ಕಾರ್ಯಕ್ರಮವು ಇಂದು ಅಕ್ಟೋಬರ್ 02, 2016 ಬೆಳಗ್ಗೆ 11.00ಗಂಟೆಗೆ ಚಾಮರಾಜಪೇಟೆಯಲ್ಲಿರುವ ಆರೆಸ್ಸೆಸ್ ಕೇಂದ್ರಕಚೇರಿ ‘ಕೇಶವಕೃಪಾ’ದಲ್ಲಿ ನಡೆಯಿತು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಕ್ಷೇತ್ರೀಯ ಕಾರ್ಯಕಾರಣಿ ಸದಸ್ಯ ಡಾ.ಕಲ್ಲಡ್ಕ ಪ್ರಭಾಕರ ಭಟ್, ದೂರದರ್ಶನದ ಹೆಚ್ಚುವರಿ ಮಹಾನಿರ್ದೇಶಕ ಡಾ. ಮಹೇಶ ಜೋಶಿ,ಅವರು ಪುಸ್ತಕ ಲೋಕಾರ್ಪಣೆಗೈದರು. ದೂರದರ್ಶನ ಚಂದನ ವಾಹಿನಿಯ ‘ಥಟ್ ಅಂತ ಹೇಳಿ’ ಖ್ಯಾತಿಯ ಡಾ.ನಾ.ಸೋಮೇಶ್ವರ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.